ಸ್ಕೇಟಿಂಗ್‌ ರಾಡ್ ನಲ್ಲಿ ಅಡಗಿಸಿಟ್ಟು ಚಿನ್ನ ಸಾಗಣೆ ; ಬಜ್ಪೆ ಏರ್‌ಪೋರ್ಟ್‌ನಲ್ಲಿ 16 ಲಕ್ಷ ವೌಲ್ಯದ ಚಿನ್ನ ವಶಕ್ಕೆ 

28-08-21 08:58 pm       Mangaluru Correspondent   ಕ್ರೈಂ

ಚಿನ್ನವನ್ನು ಸ್ಕೇಟಿಂಗ್ ಬೋರ್ಡ್ ಮತ್ತು ರಾಡ್ ಒಳಗೆ ಅಡಗಿಸಿಟ್ಟು ತರುತ್ತಿದ್ದ ವ್ಯಕ್ತಿಯನ್ನು ಬಜ್ಪೆ ವಿಮಾನ ನಿಲ್ದಾಣದಲ್ಲಿ ಕಸ್ಟಮ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಮಂಗಳೂರು, ಆ.28: ಚಿನ್ನವನ್ನು ಸ್ಕೇಟಿಂಗ್ ಬೋರ್ಡ್ ಮತ್ತು ರಾಡ್ ಒಳಗೆ ಅಡಗಿಸಿಟ್ಟು ತರುತ್ತಿದ್ದ ವ್ಯಕ್ತಿಯನ್ನು ಬಜ್ಪೆ ವಿಮಾನ ನಿಲ್ದಾಣದಲ್ಲಿ ಕಸ್ಟಮ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಕಾಸರಗೋಡು ಮುಳಿಯಾರ್ ನಿವಾಸಿ ಮುಹಮ್ಮದ್ ನವಾಝ್ ಎಂಬಾತ ಬಂಧಿತ. ದುಬೈನಿಂದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದಲ್ಲಿ ಮಂಗಳೂರಿಗೆ ಬಂದಿಳಿದಿದ್ದ. ತಪಾಸಣೆ ವೇಳೆ ಅಕ್ರಮವಾಗಿ ಚಿನ್ನ ಸಾಗಾಟ ಮಾಡುತ್ತಿರುವುದು ಪತ್ತೆಯಾಗಿದೆ. 

16,21,400 ರೂ. ಮೊತ್ತದ 335 ಗ್ರಾಂ ಚಿನ್ನವನ್ನು ವಶಕ್ಕೆ ಪಡೆಯಲಾಗಿದೆ. ಅನುಮಾನ ಬಾರದ ರೀತಿಯಲ್ಲಿ ಚಿನ್ನವನ್ನು ಸ್ಕೇಟಿಂಗ್ ಬೋರ್ಡ್ ಮತ್ತು ಅದರ ಚಕ್ರಕ್ಕೆ ಸಂಪರ್ಕ ಕಲ್ಪಿಸುವ ರಾಡ್ ಒಳಗೆ ಅಡಗಿಸಿಟ್ಟು ತರುತ್ತಿದ್ದ ಎಂದು ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ.

Customs officers of Mangalore International Airport seize 335 grams of illegal gold worth 16 lakhs