ಬ್ರೇಕಿಂಗ್ ನ್ಯೂಸ್
31-08-21 02:19 pm Headline Karnataka News Network ಕ್ರೈಂ
ಬೆಂಗಳೂರು, ಆ.31 :ಮೈತುಂಬಾ ಚಿನ್ನಾಭರಣ ಹಾಕ್ಕೊಂಡು ಓಡಾಡುತ್ತಾ ತಾನೊಬ್ಬ ಹೈಪ್ರೊಫೈಲ್ ಸಿರಿವಂತ ಎನ್ನುವ ರೀತಿ ಪೋಸು ನೀಡುತ್ತಿದ್ದ ಶೋಕಿಲಾಲನೊಬ್ಬನ ಅಸಲಿ ಬಣ್ಣ ಹೊರಬಿದ್ದಿದೆ. ಕುತ್ತಿಗೆ, ಕೈಯಲ್ಲಿ ಕೇಜಿಗಟ್ಟಲೆ ಚಿನ್ನದ ಆಭರಣ ಹಾಕ್ಕೊಂಡು ತಿರುಗಾಡುತ್ತಿದ್ದ ವ್ಯಕ್ತಿ ಫುಲ್ ಟೈಮ್ ಕೆಲಸ ಮನೆ ಕಳ್ಳತನ ಅನ್ನೋದು ತಿಳಿಯುತ್ತಿದ್ದಂತೆ ಆತನನ್ನು ದಿನವೂ ನೋಡುತ್ತಿದ್ದ ಪೊಲೀಸರಿಗೇ ಶಾಕ್ ಆಗಿದೆ.
ಆತನ ಹೆಸರು ಸಲೀಂ ಶೇಖ್ ಅಲಿಯಾಸ್ ಶೋಕಿ ಸಲೀಂ ಎಂದು. ಬೆಂಗಳೂರು ನಗರದಲ್ಲಿ ನಂಬರ್ ವನ್ ಮನೆಗಳ್ಳರ ಪೈಕಿ ಈತನೂ ಒಬ್ಬ. ಸ್ಥಳೀಯರ ನಡುವೆ ಗೋಲ್ಡ್ ಮ್ಯಾನ್ ಅಂತಲೇ ಹೆಸರಾಗಿದ್ದ ಸಲೀಮ, ತನ್ನ ಶೋಕಿ ಜೀವನದಿಂದಾಗಿ ಶೋಕಿವಾಲಾ ಅನ್ನೋ ಅಡ್ಡ ಹೆಸರನ್ನೂ ಕಟ್ಟಿಕೊಂಡಿದ್ದ.
ಕಳೆದ ನಾಲ್ಕಾರು ವರ್ಷಗಳಲ್ಲಿ ಹೆಚ್ಚುತ್ತಿದ್ದ ಮನೆ ಕಳ್ಳತನ ಪ್ರಕರಣ ಪೊಲೀಸರಿಗೆ ಸವಾಲಾಗಿತ್ತು. ಕೈಗೇ ಸಿಗದೆ ಯಾಮಾರಿಸಿಕೊಂಡು ಸರಣಿಯಾಗಿ ಕಳ್ಳತನ ಮಾಡುತ್ತಿದ್ದ ಪ್ರಕರಣವನ್ನು ಬಸವನಗುಡಿ ಪೊಲೀಸರು ಭೇದಿಸಿದ್ದು, ಸರಗಳ್ಳ ಶೋಕಿಲಾಲ ಸಲೀಂ ಮತ್ತು ಆತನ ಇನ್ನಿಬ್ಬರು ಸಹಚರರನ್ನು ಬಂಧಿಸಿದ್ದಾರೆ. ಆರೋಪಿಗಳಿಂದ ಮೂರು ಕೇಜಿ ತೂಕದ ಚಿನ್ನದ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್, ಫಿಂಗರ್ ಪ್ರಿಂಟ್ ಸುಳಿವೊಂದನ್ನು ಆಧರಿಸಿ ಪೊಲೀಸರು ಈತನನ್ನು ಬಂಧಿಸಿದ್ದಾರೆ ಎಂದು ತಿಳಿಸಿದ್ದಾರೆ.
ವಿಮಾನದಲ್ಲೇ ಒಡಾಡುತ್ತಿದ್ದ ಶೋಕಿವಾಲ !
ಶೋಕಿ ಸಲೀಂ ಅಲಿಯಾಸ್ ಸಲೀಂ ಶೇಖ್ ಮೂಲತಃ ಮುಂಬೈ ನಿವಾಸಿ. ಐಷಾರಾಮಿ ಜೀವನಕ್ಕಾಗಿಯೇ ಕಳ್ಳತನವನ್ನು ತನ್ನ ಫುಲ್ ಟೈಮ್ ಕಸುಬಾಗಿ ಆಯ್ಕೆ ಮಾಡಿಕೊಂಡಿದ್ದ. ಕದ್ದ ಆಭರಣಗಳ ಪೈಕಿ ತನಗಿಷ್ಟ ಬಂದ ಆಭರಣವನ್ನು ಕುತ್ತಿಗೆ ಮತ್ತು ಕೈಗಳಿಗೆ ಹಾಕ್ಕೊಂಡು ಫೋಸ್ ನೀಡುತ್ತಿದ್ದ. ವಿಚಿತ್ರ ಅಂದ್ರೆ, ಪ್ರತಿ ಬಾರಿ ಜೈಲಿಗೆ ಹೋಗಿ ಬರುತ್ತಿದ್ದ ಈತನ ಕತೆಕೇಳಿ ಮತ್ತೊಂದಷ್ಟು ಹಿಂಬಾಲಕರು ಸೇರಿಕೊಳ್ಳುತ್ತಿದ್ದರು. ಜೈಲಿನಲ್ಲಿ ಪರಿಚಯ ಆಗುತ್ತಿದ್ದ ಹುಡುಗರನ್ನೇ ಕಟ್ಟಿಕೊಂಡು ಬೇರೆ ಬೇರೆ ನಗರಗಳಲ್ಲಿ ಕಳ್ಳತನಕ್ಕೆ ಪ್ಲಾನ್ ಹಾಕುತ್ತಿದ್ದ. ಮುಂಬೈ, ಬೆಂಗಳೂರು, ಹೈದ್ರಾಬಾದ್ ಎಂದು ವಿಮಾನದಲ್ಲಿಯೇ ತಿರುಗಾಡುತ್ತಿದ್ದ ಸಲೀಂ ಶೇಖ್, ಅಲ್ಲಿಯೆಲ್ಲಾ ತನ್ನ ಸಹಚರರ ಮೂಲಕ ಕಳ್ಳತನ ಮಾಡಿಸುತ್ತಿದ್ದ. ಕಳವು ನಡೆಸುವುದಕ್ಕಾಗಿಯೇ ಈತ ವಿಮಾನದಲ್ಲಿ ಹೋಗಿ ಬರುತ್ತಿದ್ದ ಅಂದ್ರೆ ಈತನ ಶೋಕಿ ಎಷ್ಟಿರಬೇಕು ಹೇಳಿ.
ಮುಂಬೈನಿಂದ ವಿಮಾನದಲ್ಲಿ ಬರುತ್ತಿದ್ದ ಈ ಶೋಕಿಲಾಲ ಬೆಂಗಳೂರಿನಲ್ಲಿ ಕಳ್ಳತನ ಕೈಚಳಕ ತೋರುತ್ತಿದ್ದ. ಬಳಿಕ ಮತ್ತೊಂದು ವಿಮಾನದಲ್ಲಿ ಹೈದರಾಬಾದ್‌ಗೆ ಹೋಗಿ ಕದ್ದ ಮಾಲನ್ನು ವಿಲೇವಾರಿ ಮಾಡುತ್ತಿದ್ದ. ಬಂದ ಆದಾಯದಲ್ಲಿ ಇಡೀ ಕುಟುಂಬವನ್ನೇ ಹಳ್ಳಿಯಿಂದ ದಿಲ್ಲಿಗೆ ಕರಕೊಂಡು ಹೋಗಿ ಮೋಜು ಮಸ್ತಿ ಮಾಡುತ್ತಿದ್ದ. ಕೈಯಲ್ಲಿ ಅರ್ಧ ಕೇಜಿಯಷ್ಟು ಚಿನ್ನ, ಕುತ್ತಿಗೆಗೆ ಹಗ್ಗದಂತಿರುವ ಚಿನ್ನದ ಸರ ಧರಿಸಿಕೊಂಡು ಕೊಡುತ್ತಿದ್ದ ಪೋಸು ಆತ ಏನೋ ಹೈಪ್ರೊಫೈಲ್ ಉದ್ಯಮಿ ಆಗಿರಬೇಕು ಅನ್ನುವಂತಿತ್ತು.
ಶೋಕಿಲಾಲನ ಜಾತಕ ಬಯಲಾಗಿಸಿದ್ದು ಹೆಬ್ಬೆಟ್ಟು
ಬೆಂಗಳೂರಿನ ಮನೆಗಳ್ಳತನ ಪ್ರಕರಣದ ಪತ್ತೆಗೆ ಹೊರಟ ಬಸವನಗುಡಿ ಪೊಲೀಸರಿಗೆ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಬೆಂಗಳೂರಿನಲ್ಲಿರುವ ವೃತ್ತಿಪರ ಮನೆಗಳ್ಳರನ್ನೆಲ್ಲ ಪಟ್ಟಿ ಮಾಡಿಕೊಂಡು ಕಾರ್ಯಾಚರಣೆಗೆ ಇಳಿದಿದ್ದರು. ಆ ಲಿಸ್ಟ್ ನಲ್ಲಿ ಶೋಕಿಲಾಲ ಸಲೀಮನದ್ದೂ ಹೆಸರಿತ್ತು. ಅಷ್ಟೂ ಮಂದಿಯನ್ನು ಬರಹೇಳಿ ಫಿಂಗರ್ ಪ್ರಿಂಟ್ ತೆಗೆಸಿ, ಒಬ್ಬೊಬ್ಬರನ್ನೇ ಕರೆದು ಪೊಲೀಸರು ಟೆಕ್ನಿಕಲ್ ಸಾಕ್ಷ್ಯ ಕಲೆಹಾಕಿದ್ದರು. ವಿವಿಧ ಕಡೆಗಳಲ್ಲಿ ಕ್ರೈಂ ಆಗಿದ್ದ ನಂತರ ಸಾಮಾನ್ಯವಾಗಿ ಪೊಲೀಸರು ಆಯಾ ಭಾಗದ ಫಿಂಗರ್ ಪ್ರಿಂಟ್ ತೆಗೆದಿಡುತ್ತಾರೆ. ಆದರೆ, ಹೆಚ್ಚಿನ ಕಡೆಗಳಲ್ಲಿ ಇದನ್ನು ಮುಂದಿಟ್ಟು ಪೊಲೀಸರು ಅಪರಾಧ ಪತ್ತೆಗೆ ಮುಂದಾಗಲ್ಲ. ಯಾಕಂದ್ರೆ, ಅದು ದೊಡ್ಡ ತಲೆಬಿಸಿಯ ಕೆಲಸ ಅಂತಾ ಹಾಗೇ ಬಿಟ್ಟುಬಿಡುತ್ತಾರೆ.
ಆದರೆ, ಬಸವನಗುಡಿಯ ಕೆಲವು ಪೊಲೀಸರು ಮನೆ ಕಳ್ಳತನ ಸವಾಲಾಗಿ ಪರಿಣಮಿಸಿದಾಗ ಹೀಗೊಂದು ಟ್ರೈ ಮಾಡಿದ್ದರು. ಅದೇ ಸಂದರ್ಭದಲ್ಲಿ ಹಲವಾರು ಪ್ರಕರಣಗಳಲ್ಲಿ ಒಬ್ಬಾತನ ಫಿಂಗರ್ ಪ್ರಿಂಟ್ ಹೆಚ್ಚು ತಾಳೆಯಾಗಿದ್ದು ಕಂಡುಬಂದಿತ್ತು. ಆತನ ಹಿನ್ನೆಲೆ, ಮಾಡುತ್ತಿದ್ದ ಕೆಲಸದ ಬಗ್ಗೆ ಪತ್ತೆ ಮಾಡಿದಾಗ, ಶೋಕಿಲಾಲ ಸಲೀಂ ಶೇಖನ ಜಾತಕ ಹೊರಬಿದ್ದಿತ್ತು. ಸದ್ಯಕ್ಕೆ ಬೆಂಗಳೂರು ಒಂದರಲ್ಲೇ ಬರೋಬ್ಬರಿ ಹನ್ನೆರಡು ಪ್ರಕರಣಗಳಲ್ಲಿ ಸಲೀಂ ಕೈವಾಡ ಪತ್ತೆಯಾಗಿದ್ದು, ಇನ್ನಷ್ಟು ತನಿಖೆಗಾಗಿ ಆತನನ್ನು ವಿಚಾರಣೆ ನಡೆಸುತ್ತಿದ್ದಾರೆ.
ಆರೋಪಿಯಿಂದ 1.60 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣ, 18 ಕೇಜಿ ಬೆಳ್ಳಿ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕಳೆದ ನಾಲ್ಕಾರು ವರ್ಷಗಳಿಂದ ಪೊಲೀಸರ ಕೈಗೆ ಸಿಗದೇ ಚಳ್ಳೆ ಹಣ್ಣು ತಿನ್ನಿಸುತ್ತಿದ್ದ ಶೋಕಿ ಸಲೀಂ ಕಡೆಗೂ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಆದರೆ, ಮನೆ ಕಳ್ಳತನ ಪ್ರಕರಣಗಳಲ್ಲಿ ಎಷ್ಟಾದ್ರೂ ಒಂದು ತಿಂಗಳಲ್ಲಿ ಜಾಮೀನು ಸಿಗೋದ್ರಿಂದ ಅದನ್ನೇ ವೃತ್ತಿಯಾಗಿಸ್ಕೊಂಡವರು ಆರಾಮಾಗೇ ಇರುತ್ತಾರೆ ಅನ್ನೋದು ದುರಂತ ಸತ್ಯ.
No 1 thief Shoki Saleem arrested by Bengaluru police recover 3 Kgs gold and 18 kgs of silver.
25-11-24 05:51 pm
Bangalore Correspondent
ಮನೆಯೊಂದು ಮೂರು ಬಾಗಿಲು, ಗೆಲುವು ಕಸಿದ ಬಿಜೆಪಿ ಒಳಜಗ...
25-11-24 03:28 pm
Bjp, D K Shivakumar : ಚನ್ನಪಟ್ಟಣ ಗೆಲ್ಲಲು ಬಿಜೆಪ...
24-11-24 08:39 pm
CM Siddaramaiah, BJP, Congress ಆರ್. ಅಶೋಕ್ ಕಾ...
23-11-24 07:43 pm
B Y Vijayendra, DK Shivkumar: ವಿಜಯೇಂದ್ರಗೆ ತೀವ...
23-11-24 02:15 pm
23-11-24 11:07 pm
HK News Desk
ಬಿಜೆಪಿ ‘ಗ್ಯಾರಂಟಿ’ಗೆ ಕೈಹಿಡಿಯದ ಜಾರ್ಖಂಡ್ ಮತದಾರ,...
23-11-24 05:34 pm
ಮಹಾರಾಷ್ಟ್ರದಲ್ಲಿ ಕೇಸರಿ ಕಮಾಲ್ ; ನಿರೀಕ್ಷೆಗೂ ಮೀರಿ...
23-11-24 04:33 pm
ಭಾರೀ ವಿವಾದ ಸೃಷ್ಟಿಸಿದ್ದ 'ಎಮರ್ಜೆನ್ಸಿ' ಚಿತ್ರ ಬಿಡ...
18-11-24 03:54 pm
ಶ್ರದ್ಧಾ ವಾಳ್ಕರ್ ಹತ್ಯೆಗೆ ಸೇಡು ತೀರಿಸಲು ಬಿಷ್ಣೋಯಿ...
18-11-24 01:09 pm
25-11-24 11:14 pm
Mangalore Correspondent
Vithoba Rukumai temple case, Mangalore: ವಿಠೋಬ...
25-11-24 10:39 pm
Ullal Dargah, Mangalore: ಎಪ್ರಿಲ್ 24 ರಿಂದ ಮೇ...
25-11-24 02:44 pm
Kukke Subrahmanya Temple, Mangalore: ನ.27ರಿಂದ...
24-11-24 09:13 pm
Hariprasad, Mangalore, Congress: ಮಹಾರಾಷ್ಟ್ರದಲ...
24-11-24 05:16 pm
25-11-24 06:17 pm
HK News Desk
Honeytrap Bangalore, Crime, Udupi: ಪ್ರೊಫೆಸರ್...
24-11-24 04:33 pm
Rowdy sheeter Dawood, Mangalore Crime, Police...
23-11-24 10:49 am
ಟ್ರಾಯ್ ಕಂಪನಿ ಸೋಗಿನಲ್ಲಿ ಕರೆ ; ಅಮೆರಿಕಾದ ಸಾಫ್ಟ್...
22-11-24 10:47 pm
Mangalore crime, Sexual Harrasment, Police: ಮ...
22-11-24 09:37 pm