ಸ್ಕಾರ್ಪಿಯೋ ಕಾರಿನಿಂದ ಹೊರಗೆಸೆದಿದ್ದರು ಅರೆಬೆತ್ತಲೆ ಯುವತಿ ಶವ ! ಆಕೆ ಮೇಲಿಂದಲೇ ವಾಹನ ಹರಿದು ಶವ ಛಿದ್ರ!!

07-09-21 05:23 pm       Headline Karnataka News Network   ಕ್ರೈಂ

ಸ್ಕಾರ್ಪಿಯೋ ಕಾರಿನಿಂದ ಯುವತಿ ದೇಹವನ್ನ ಹೊರಗೆಸೆಯಲಾಗಿದೆ. ಇದೊಂದು ಅತ್ಯಾಚಾರ ಮತ್ತು ಕೊಲೆ ಪ್ರಕರಣ ಆಗಿರಬಹುದು ಎಂದು ಶಂಕಿಸಲಾಗಿದೆ.

ಚೆನ್ನೈ, ಸೆ. 07: ತಮಿಳುನಾಡಿನ ಕೊಯಮತ್ತೂರಿನಲ್ಲಿ ಮಂಗಳವಾರ ಬೆಳಗಿನ ಜಾವ ನಡೆದ ಭೀಕರ ಘಟನೆಯೊಂದರಲ್ಲಿ ಮಹಿಳೆಯೊಬ್ಬಳ ದೇಹವನ್ನು ಸ್ಕಾರ್ಪಿಯೋ ವಾಹನದಲ್ಲಿ ರಸ್ತೆಗೆ ಎಸೆಯಲಾಗಿದ್ದು ಆನಂತರ ಹಲವು ವಾಹನಗಳು ಆಕೆಯ ಮೇಲಿನಿಂದಲೇ ಚಲಿಸಿದ್ದರಿಂದ ಶವ ಅಪ್ಪಚ್ಚಿಯಾಗಿದೆ. 

ಸ್ಕಾರ್ಪಿಯೋ ಕಾರಿನಿಂದ ಯುವತಿ ದೇಹವನ್ನ ಹೊರಗೆಸೆಯಲಾಗಿದೆ. ಇದೊಂದು ಅತ್ಯಾಚಾರ ಮತ್ತು ಕೊಲೆ ಪ್ರಕರಣ ಆಗಿರಬಹುದು ಎಂದು ಶಂಕಿಸಲಾಗಿದೆ. ಕೊಯಮತ್ತೂರು ನಗರದ ಅವಿನಾಶಿ ರಸ್ತೆಯ ಚೆನ್ನೈ ಕ್ಯಾಂಪ್ ಬಳಿಯ ಚಿನ್ನಿಯಂ ಪಾಳ್ಯಂ ಚೆಕ್ ಪೋಸ್ಟ್ ಹತ್ತಿರ ಪೊಲೀಸರು ಈ ಮಹಿಳೆಯ ಮೃತದೇಹವನ್ನು ಕಂಡಿದ್ದಾರೆ. ಚಲಿಸುವ ಕಾರಿನಿಂದ ಎಸೆಯಲ್ಪಟ್ಟ ಈಕೆಯ ದೇಹದ ಮೇಲೆ ಹಿಂದಿನಿಂದ ಬಂದ ವಾಹನಗಳೂ ಹತ್ತಿಸಿಕೊಂಡು ಹೋಗಿವೆ. ಪರಿಣಾಮವಾಗಿ ಈಕೆಯ ತಲೆ ಮತ್ತು ಮುಖ ಅಪ್ಪಚ್ಚಿಯಾಗಿದೆ. ಹೀಗಾಗಿ, ಮಹಿಳೆಯ ಶವದ ಗುರುತು ಸಿಕ್ಕದಂತಾಗಿದೆ.

ರಸ್ತೆಯಲ್ಲಿ ಸಾಗುತ್ತಿದ್ದ ಕೆಲ ವಾಹನ ಸವಾರರು ಈ ಮೃತ ದೇಹ ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ಧಾರೆ. ಬಳಿಕ ಘಟನಾ ಸ್ಥಳಕ್ಕೆ ಬಂದ ಪೊಲೀಸರು ಮೊದಲು ಇದು ಅಪಘಾತ ಘಟನೆ ಇರಬಹುದು. ಮಹಿಳೆ ರಸ್ತೆ ದಾಟುವಾಗ ಅಪಘಾತವಾಗಿದ್ದಿರಬಹುದು ಎಂದು ಶಂಕಿಸಿದ್ದರು. ಆದರೆ, ರಸ್ತೆಯ ಸಿಸಿಟಿವಿಯಲ್ಲಿ ಘಟನೆಯ ದೃಶ್ಯ ಸೆರೆಯಾಗಿತ್ತು. ಅದನ್ನು ಪರಿಶೀಲಿಸಿದಾಗ, ಸ್ಕಾರ್ಪಿಯೋ ಕಾರಿನಿಂದ ಈಕೆಯ ಅರೆಬೆತ್ತಲೆ ಮೃತ ದೇಹವನ್ನು ಹೊರಗೆ ಎಸೆಯಲಾಗಿರುವುದು ಬೆಳಕಿಗೆ ಬಂದಿದೆ. ಈಕೆಯನ್ನ ಕಾರಿನಿಂದ ಹೊರಗೆ ಎಸೆಯುವಾಗ ಮಹಿಳೆ ಜೀವಂತವಾಗಿದ್ದಳಾ? ಅಥವಾ ಮೊದಲೇ ಕೊಲೆ ಮಾಡಿ ನಂತರ ಶವವನ್ನು ಎಸೆಯಲಾಗಿತ್ತಾ ಎಂಬುದು ಇನ್ನೂ ಗೊತ್ತಾಗಿಲ್ಲ.

ಸದ್ಯ ಪೊಲೀಸರು ಈ ಅಪರಿಚಿತ ಮಹಿಳೆಯ ಮೃತ ದೇಹವನ್ನು ಕೊಯಮತ್ತೂರು ಮೆಡಿಕಲ್ ಕಾಲೇಜು ಆಸ್ಪತ್ರೆಯ ಶವಾಗಾರಕ್ಕೆ ಕಳುಹಿಸಲಾಗಿದ್ದು ಅಲ್ಲಿ ಶವಪರೀಕ್ಷೆ ನಡೆಸಲಾಗಿದೆ. ಪೀಲಮೇಡು ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ಧಾರೆ. ಮೃತ ಮಹಿಳೆಯ ದೇಹ ಅರೆನಗ್ನ ಸ್ಥಿತಿಯಲ್ಲಿದ್ದರಿಂದ ಈಕೆಯನ್ನ ಕಾರಿನಲ್ಲಿ ರೇಪ್ ಮಾಡಿ ಕೊಲೆ ಮಾಡಲಾಯಿತಾ ಎಂಬ ಕೋನದಲ್ಲೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸದ್ಯಕ್ಕೆ ಎರಡು ವಿಶೇಷ ತಂಡಗಳನ್ನ ರಚಿಸಲಾಗಿದ್ದು, ಸ್ಕಾರ್ಪಿಯೋ ಕಾರನ್ನು ಪತ್ತೆ ಹಚ್ಚಲು ಪ್ರಯತ್ನಿಸಲಾಗುತ್ತಿದೆ.

An unidentified woman’s dead body was found on Avinashi Road near Chinniyampalayam on early Monday morning. The half-naked body was run over by a few vehicles before police could reach the spot and retrieve it. Police have registered a case under section 174 CrPC (suspicious death) and formed two special teams to identify the deceased and trace her family or relatives.