ಉದನೆ ಗಣೇಶೋತ್ಸವ ಕಟ್ಟೆಗೆ ಕಲ್ಲು ಎತ್ತಿ ಹಾಕಿ ಹಾನಿ ; ಕಿಡಿಗೇಡಿ ಕೃತ್ಯದ ಬಗ್ಗೆ ಆಕ್ರೋಶ

11-09-21 02:03 pm       Mangaluru Correspondent   ಕ್ರೈಂ

ಉಪ್ಪಿನಂಗಡಿ ಸಮೀಪದ ಉದನೆ ಬಳಿ ನಿನ್ನೆ ಗಣೇಶೋತ್ಸವ ನಡೆಸಿದ್ದ ಗಣಪತಿ ಕಟ್ಟೆಯ ಮೇಲೆ ಕಿಡಿಗೇಡಿಗಳು ರಾತ್ರಿ ವೇಳೆ ಕಲ್ಲು ಎತ್ತಿ ಹಾಕಿ ಹಾನಿಗೈದ ಘಟನೆ ನಡೆದಿದೆ. 

ಪುತ್ತೂರು, ಸೆ.11: ಉಪ್ಪಿನಂಗಡಿ ಸಮೀಪದ ಉದನೆ ಬಳಿ ನಿನ್ನೆ ಗಣೇಶೋತ್ಸವ ನಡೆಸಿದ್ದ ಗಣಪತಿ ಕಟ್ಟೆಯ ಮೇಲೆ ಕಿಡಿಗೇಡಿಗಳು ರಾತ್ರಿ ವೇಳೆ ಕಲ್ಲು ಎತ್ತಿ ಹಾಕಿ ಹಾನಿಗೈದ ಘಟನೆ ನಡೆದಿದೆ. 


 
ಉದನೆಯ ಗಣಪತಿ ಕಟ್ಟೆಯನ್ನು ನಿನ್ನೆ ಚೌತಿ ಪ್ರಯುಕ್ತ ಸಿಂಗಾರ ಮಾಡಿ ಸರಳ ರೀತಿಯಲ್ಲಿ ಗಣಪತಿ ಪ್ರತಿಷ್ಠೆ ಮಾಡಲಾಗಿತ್ತು. ನಂತರ ಗಣಪತಿ ವಿಸರ್ಜನೆಯೂ ನಡೆದಿದ್ದು, ಕಟ್ಟೆಯನ್ನು ಸಿಂಗರಿಸಿ ಹಾಗೆಯೇ ಬಿಡಲಾಗಿತ್ತು. ಆದರೆ ರಾತ್ರಿ ವೇಳೆ ಯಾರೋ ಕಿಡಿಗೇಡಿಗಳು ಕಟ್ಟೆ ಮೇಲೆ ಕಲ್ಲು ಎತ್ತಿ ಹಾಕಿದ್ದಾರೆ. ಇದರಿಂದ ಕಟ್ಟೆಯ ಒಂದು ಭಾಗಕ್ಕೆ ಹಾನಿ ಉಂಟಾಗಿದ್ದು, ಸ್ಥಳೀಯರು ಗಮನಕ್ಕೆ ಬರುತ್ತಲೇ ಪೋಲಿಸರಿಗೆ‌ ದೂರು ನೀಡಿದ್ದಾರೆ. ನೆಲ್ಯಾಡಿ ಹೊರ ಠಾಣೆ ಪೋಲಿಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.

ಸ್ಥಳದಲ್ಲಿ ಕಟ್ಟೆಯ ಸಮೀಪ ಮನೆಗಳು ಇಲ್ಲವಾಗಿದ್ದು, ಹಾನಿ ಘಟನೆ ಯಾರ ಗಮನಕ್ಕೂ ಬಂದಿಲ್ಲ.

Ganesha idol destroyed by miscreants in Uppinangady. Nelyadi police have reached the spot and are now investigating the case. The incident took place last night.