ಬ್ರೇಕಿಂಗ್ ನ್ಯೂಸ್
11-09-21 05:01 pm Bangalore Correspondent ಕ್ರೈಂ
ಬೆಂಗಳೂರು, ಸೆ.11 : ಅಧಿಕ ಲಾಭದ ಆಮಿಷ ಒಡ್ಡಿ ಜನರಿಂದ ಲಕ್ಷಗಟ್ಟಲೆ ಹಣವನ್ನು ಹೂಡಿಕೆ ಮಾಡಿಸಿ ವಂಚಿಸುವ ಪ್ರಕರಣಗಳು ಬೆಳಕಿಗೆ ಬರುತ್ತಲೇ ಇರುತ್ತವೆ. ನಗರದಲ್ಲಿ ಮತ್ತೊಂದು ಬ್ಲೇಡ್ ಕಂಪನಿಯ ವಂಚನೆ ಪುರಾಣ ಹೊರ ಬಂದಿದೆ.
ತಿಲಕ್ನಗರದ ಸ್ವಾಗತ್ ರಸ್ತೆಯಲ್ಲಿ ಕಚೇರಿ ಹೊಂದಿರುವ ಇಕ್ರಾ (IQRA) ಕಂಪನಿಯಿಂದ ಹಲವರಿಗೆ ವಂಚನೆ ಆಗಿರುವ ಆರೋಪ ಕೇಳಿಬಂದಿದ್ದು 4 ಕೋಟಿಯಷ್ಟು ಹಣವನ್ನು ಲಪಟಾಯಿಸಿದೆ ಎಂದು ಸಾರ್ವಜನಿಕರು ದೂರು ನೀಡಿದ್ದಾರೆ. ತಿಲಕ್ ನಗರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಕಂಪನಿಯ ನಾಲ್ವರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಆರೋಪಿಗಳಾದ ಅಬ್ದುಲ್ ನಜೀಮ್ ಮೇಖ್ರಿ, ನಯೀಮ್ ಮೇಖ್ರಿ, ಹಿದಾಯತ್-ಉಲ್ಲಾ, ಅಲೀಂ ಮೇಖ್ರಿ ಅವರನ್ನ ಪೊಲೀಸರು ಬಂಧಿಸಿದ್ದಾರೆ. ಇವರ ವಿರುದ್ಧ ಬಡ್ಸ್ ಆ್ಯಕ್ಟ್-219ರ ಸೆಕ್ಷನ್ 21, ಕೆಪಿಐಡಿ ಕಾಯ್ದೆಯ ಸೆಕ್ಷನ್ 9 ಹಾಗೂ ಐಪಿಸಿ ಸೆಕ್ಷನ್ 506, 420 ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಸೈಯದ್ ಗುಲಾಬ್ ಎಂಬವರು ಈ ಬಗ್ಗೆ ದೂರು ಕೊಟ್ಟಿದ್ದರು. ಬಳಿಕ ತಿಲಕ್ ನಗರ ಠಾಣೆ ಪೊಲೀಸರು ಸಿಆರ್ಪಿಸಿ ಸೆಕ್ಷನ್ 91ರ ಅಡಿಯಲ್ಲಿ ಪಬ್ಲಿಕ್ ನೋಟಿಸ್ ಹೊರಡಿಸಿದರು. ಇಕ್ರಾ ಕಂಪನಿಯಲ್ಲಿ ಹೂಡಿಕೆ ಮಾಡಿ ವಂಚನೆಗೊಳಗಾದವರು ಠಾಣೆಗೆ ಬಂದು ಮಾಹಿತಿ ಕೊಡುವಂತೆ ನೋಟೀಸ್ನಲ್ಲಿ ಮನವಿ ಮಾಡಲಾಗಿತ್ತು. ಪೊಲೀಸ್ ಪ್ರಕಟಣೆ ಬಳಿಕ 24ಕ್ಕೂ ಹೆಚ್ಚು ಜನರು ದೂರು ನೀಡಲು ಬಂದಿದ್ದರು. ಸದ್ಯದ ಮಾಹಿತಿ ಪ್ರಕಾರ, 2020ರಿಂದ ಈವರೆಗೆ 40ಕ್ಕೂ ಹೆಚ್ಚು ಜನರು ಇಕ್ರಾ ಕಂಪನಿಗೆ ಹಣ ಹೂಡಿಕೆ ಮಾಡಿದ್ದರು. ಒಬ್ಬೊಬ್ಬರಿಂದ 4ರಿಂದ 10 ಲಕ್ಷದ ವರೆಗೂ ಹಣ ಪಡೆಯಲಾಗಿದೆ. ತಿಲಕ್ ನಗರದ ನಿವಾಸಿಯೊಬ್ಬರು 10 ಲಕ್ಷ ಹಣ ಕಳೆದುಕೊಂಡಿದ್ಧಾರೆ. ಮಹಾರಾಷ್ಟ್ರದ ನಾಗಪುರ ಮೂಲದ ಐದಾರು ಮಂದಿಗೆ ಲಕ್ಷಾಂತರ ರೂ. ವಂಚನೆಯಾಗಿರುವುದು ತಿಳಿದುಬಂದಿದೆ. ಪೊಲೀಸರು ಸದ್ಯ ನಾಲ್ವರು ಆರೋಪಿಗಳನ್ನ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ಧಾರೆ.
ವಂಚನೆ ಪ್ರಕರಣಗಳಲ್ಲಿ ಹೋರಾಡುವ ನನಗೇ ವಂಚನೆ !
ಚಿನ್ನ, ಬಿಟ್ ಕಾಯಿನ್ ಮೊದಲಾದೆಡೆ ಹೂಡಿಕೆ ಮಾಡುತ್ತೇವೆ ಎಂದು ನನ್ನನ್ನು ನಂಬಿಸಿದರು. ನಾನು ಬೇರೆಯವರಿಗಾದ ಅನ್ಯಾಯ, ವಂಚನೆ ಪ್ರಕರಣಗಳನ್ನ ಕಂಡು ಹೋರಾಟ ಮಾಡುತ್ತಿದ್ದೇನೆ. ನನ್ನ ಪರಿಚಯದವರಾದ್ದರಿಂದ ಇದರಲ್ಲಿ ಹೂಡಿಕೆ ಮಾಡಿದೆ. ಆದರೆ ಭರವಸೆ ಕೊಟ್ಟಂತೆ ರಿಟರ್ನ್ ಕೊಡಲಿಲ್ಲ. ಕೇಳಿದರೆ, ನಮ್ಮ ಅಕೌಂಟನ್ನ ಇಡಿಯವರು ಫ್ರೀಜ್ ಮಾಡಿದ್ಧಾರೆ ಎಂದು ಇಕ್ರಾ ಕಂಪನಿಯವರು ಹೇಳಿದ್ದರು. ನಾನು ಇಡಿಯಲ್ಲಿ ಹೋಗಿ ವಿಚಾರಿಸಿದೆ. ಇಕ್ರಾದ ಯಾವುದೇ ಅಕೌಂಟ್ ಫ್ರೀಜ್ ಆಗಿಲ್ಲವೆಂಬ ಮಾಹಿತಿ ಬಂತು. ಆಗ ಇಕ್ರಾ ಕಂಪನಿಯ ಮೋಸದ ಬಗ್ಗೆ ತಿಳಿಯಿತು. ನನ್ನಂತೆ ಇನ್ನೂ ಅನೇಕ ಜನರು ಮೋಸ ಹೋಗಿರುವುದು ನಂತರ ಗೊತ್ತಾಯಿತು ಎಂದು ದೂರುದಾರ ಸೈಯದ್ ಗುಲಾಬ್ ಹೇಳುತ್ತಾರೆ.
ವಿನಿವಿಂಕ್ನಿಂದ ಹಿಡಿದು ಐಎಂಎ ವರೆಗೆ ಹತ್ತಾರು ವಂಚನೆ ಕಂಪನಿಗಳು ಬೆಂಗಳೂರಿನಲ್ಲಿ ಅಧಿಕ ಬಡ್ಡಿ ಇನ್ನಿತರ ಆಸೆಗಳನ್ನು ತೋರಿಸಿ ಯಾಮಾರಿಸುತ್ತಲೇ ಇವೆ. ಆದರೆ, ಸಾಮಾನ್ಯ ಜನರು ಮೋಸ ಹೋಗುತ್ತಲೇ ಇದ್ದಾರೆ. ತಿಲಕ ನಗರ ಪೊಲೀಸರು ಕಳೆದ ವರ್ಷ ಟಿಫೋರ್ಪ್ ಟ್ರೇಡಿಂಗ್ ಕಂಪನಿ ವಂಚನೆ ಪ್ರಕರಣದಲ್ಲಿ ಮೂವರನ್ನ ಬಂಧಿಸಿದ್ದರು. ನಾಲ್ಕು ವರ್ಷದಲ್ಲಿ 2 ಸಾವಿರಕ್ಕೂ ಹೆಚ್ಚು ಜನರಿಂದ 77 ಕೋಟಿ ರೂ ಪಡೆದು ವಂಚನೆ ಎಸಗಿದ ಪ್ರಕರಣ ಅದಾಗಿತ್ತು
Iqra Wealth Management Ponzi Scam 4 held for Cheating.
26-07-25 02:00 pm
HK News Desk
IPS Officer Soumya Latha, Dharmasthala SIT:...
25-07-25 04:07 pm
Jeep Chikkamagaluru Accident: ನಿಯಂತ್ರಣ ತಪ್ಪಿ...
25-07-25 01:22 pm
ಪೊಲೀಸ್ ಠಾಣೆಯಲ್ಲೇ ಲ್ಯಾಂಡ್ ಡಿಲಿಂಗ್ ; ಜಾಗದ ವಿಚಾರ...
25-07-25 12:25 pm
Rameshwaram Cafe Pongal Worm: ರಾಮೇಶ್ವರ ಕೆಫೆಯ...
24-07-25 10:52 pm
26-07-25 03:31 pm
HK News Desk
ಹದಗೆಟ್ಟ ಸುರತ್ಕಲ್ - ಬಿ.ಸಿ. ರೋಡ್ ಹೆದ್ದಾರಿ ನಿರ...
25-07-25 04:40 pm
Mangalore MP Brijesh Chowta: ಮಂಗಳೂರಿನಲ್ಲಿ ಮೆರ...
24-07-25 09:06 pm
Supreme Court, Actor Darshan, Murder case: ನಟ...
24-07-25 07:54 pm
3,000 ಕೋಟಿ ಸಾಲ ವಂಚನೆ ಕೇಸ್ ; ಅನಿಲ್ ಅಂಬಾನಿ ಮೇಲ...
24-07-25 03:29 pm
26-07-25 10:41 pm
Mangalore Correspondent
Mangalore, Dharmasthala Case, SIT, whistle bl...
26-07-25 10:05 pm
ಧರ್ಮಸ್ಥಳ ಎಸ್ಐಟಿ ತಂಡದಿಂದ ಮತ್ತೊಬ್ಬರು ಹೊರಕ್ಕೆ ;...
26-07-25 08:20 pm
Mangalore Rajashree Jayaraj Poojary Death: ಬಹ...
26-07-25 04:38 pm
India’s Largest Job Fair ‘Alva’s Pragati 2025...
26-07-25 11:37 am
26-07-25 09:35 pm
HK News Desk
ಮನೆಗೆ ದಿನಸಿ ತರಲು ಹೋದ ಯುವತಿಗೆ ನಡು ರಸ್ತೆಯಲ್ಲೇ ತ...
24-07-25 10:38 pm
ದೇಶದಲ್ಲಿ ಅಲ್ ಖೈದಾ ಉಗ್ರವಾದಿ ಗುಂಪಿಗೆ ಯುವಜನರ ಸೇರ...
24-07-25 12:01 pm
Hyderabad, Udupi, Crime: ಹೈದರಾಬಾದಿನಲ್ಲಿ ರಿಯಲ್...
23-07-25 04:49 pm
ಟೆಲಿಗ್ರಾಮ್ ಆ್ಯಪ್ನಲ್ಲಿ ಹೂಡಿಕೆ ಮೇಲೆ ಕಮಿಷನ್ ; ಆ...
23-07-25 03:25 pm