ಆಸ್ಕರ್ ಅಂತಿಮ ದರ್ಶನ ವೇಳೆ ಪಿಕ್ ಪಾಕೆಟ್ ; ಕಾಂಗ್ರೆಸ್ ಮುಖಂಡರ ಜೇಬಲ್ಲಿದ್ದ ಹಣದ ಗಂಟು ಮಾಯ !

15-09-21 01:04 pm       Mangaluru Correspondent   ಕ್ರೈಂ

ಮಲ್ಲಿಕಟ್ಟೆಯ ಕಾಂಗ್ರೆಸ್ ಕಚೇರಿಯಲ್ಲಿ ಆಸ್ಕರ್ ಪಾರ್ಥಿವ ಶರೀರವನ್ನು ಅಂತಿಮ ದರ್ಶನಕ್ಕಿಟ್ಟಿದ್ದ ವೇಳೆ ಕಳ್ಳರು ಪಿಕ್ ಪಾಕೆಟ್ ಮಾಡಿ 30 ಸಾವಿರ ಹಣವನ್ನು ಎಗರಿಸಿದ್ದಾರೆ.

ಮಂಗಳೂರು, ಸೆ.15: ನಗರದ ಮಲ್ಲಿಕಟ್ಟೆಯ ಕಾಂಗ್ರೆಸ್ ಕಚೇರಿಯಲ್ಲಿ ಆಸ್ಕರ್ ಪಾರ್ಥಿವ ಶರೀರವನ್ನು ಅಂತಿಮ ದರ್ಶನಕ್ಕಿಟ್ಟಿದ್ದ ವೇಳೆ ಕಳ್ಳರು ಪಿಕ್ ಪಾಕೆಟ್ ಮಾಡಿದ್ದಾರೆ. ಕಾಂಗ್ರೆಸ್ ಜಿಲ್ಲಾ ಮಟ್ಟದ ಮುಖಂಡರೊಬ್ಬರ ಪಾಕೆಟ್ ನಲ್ಲಿದ್ದ 30 ಸಾವಿರ ಹಣವನ್ನು ಎಗರಿಸಿದ್ದಾರೆ.

ಮಾಜಿ ಸಚಿವ ಆಸ್ಕರ್ ಫೆರ್ನಾಂಡಿಸ್ ಪಾರ್ಥಿವ ಶರೀರವನ್ನು ಮಂಗಳವಾರ ಮಧ್ಯಾಹ್ನ ಉಡುಪಿಯಿಂದ ತಂದು ಮಂಗಳೂರಿನ ಮಲ್ಲಿಕಟ್ಟೆಯ ಕಾಂಗ್ರೆಸ್ ಕಚೇರಿಯ ಮುಂಭಾಗದಲ್ಲಿ ಇರಿಸಲಾಗಿತ್ತು. ಸಾರ್ವಜನಿಕರು ಮತ್ತು ಅಭಿಮಾನಿಗಳ ಅಂತಿಮ ದರ್ಶನಕ್ಕಾಗಿ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿತ್ತು. ಇದೇ ವೇಳೆ, ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಧನಂಜಯ ಮಟ್ಟು ಅವರ ಪ್ಯಾಂಟ್ ಜೇಬಿನಲ್ಲಿದ್ದ ಹಣದ ಗಂಟನ್ನು ಯಾರೋ ಎಗರಿಸಿದ್ದಾರೆ.

ಜನರ ರಶ್ ನಡುವೆ ಯಾರೋ ಚಾಲಾಕಿತನ ತೋರಿಸಿದ್ದಾರೆ ಎನ್ನಲಾಗುತ್ತಿದೆ. ಆದರೆ, ಕಾಂಗ್ರೆಸ್ ಕಚೇರಿಯಲ್ಲಿ ಹೆಚ್ಚಿನವರು ಕಾರ್ಯಕರ್ತರೇ ಬಂದಿದ್ದು, ಈ ಪೈಕಿ ಯಾರು ಕಳ್ಳರಿದ್ದರು ಅನ್ನೋದ್ರ ಬಗ್ಗೆ ಕಚೇರಿ ಒಳಗಿದ್ದವರೇ ತಲೆಕೆಡಿಸಿಕೊಂಡಿದ್ದಾರೆ. ಧನಂಜಯ ಮಟ್ಟು ಅವರ ಪಾಕೆಟ್ ನಲ್ಲಿ ಹಣದ ಜೊತೆಗೆ ಇನ್ನಿತರ ದಾಖಲೆ ಪತ್ರಗಳು ಕೂಡ ಇದ್ದವು ಎನ್ನಲಾಗಿದ್ದು, ಹೀಗಾಗಿ ಕಳ್ಳನ ಕರಾಮತ್ತು ಬಗ್ಗೆ ತುಂಬ ಚಿಂತೆಗೆ ಒಳಗಾಗಿದ್ದಾರೆ.

ಮತ್ತೊಬ್ಬ ನಾಯಕರು ಹೇಳುವ ಪ್ರಕಾರ, ಇಬ್ಬರು ಹಣ ಕಳಕೊಂಡಿದ್ದಾರೆ ಎನ್ನಲಾಗುತ್ತಿದೆ. ಇನ್ನೊಬ್ಬ ಮುಖಂಡರ ಹತ್ತು ಸಾವಿರ ರೂ. ಕಳವಾಗಿದೆ ಎನ್ನುವ ಮಾಹಿತಿಯನ್ನು ನೀಡುತ್ತಿದ್ದಾರೆ. ಹೀಗಾಗಿ ಎಷ್ಟು ಮಂದಿ ಹಣ ಕಳಕೊಂಡಿದ್ದಾರೆ ಅನ್ನುವುದರ ಸರಿಯಾದ ವಿವರ ಸಿಗುತ್ತಿಲ್ಲ. ಈ ಬಗ್ಗೆ ಪೊಲೀಸ್ ದೂರನ್ನೂ ನೀಡಲಾಗಿಲ್ಲ. 

Many Congress leaders have lost money by pickpocket during paying last respect to Oscar Fernandes death in Mangalore. Oscar Fernandes, a former Union minister and a senior Congress leader, passed away at a private hospital in Mangaluru. He was 80. Fernandes, a sitting Rajya Sabha MP, was undergoing treatment at a private hospital in Mangaluru after he suffered a fall while exercising. He is survived by his wife Blossom Fernandes and two children.