ಮರಿಕ್ಕಳ ಕಸಾಯಿಖಾನೆ ದರ್ಬಾರ್ ; ಗೋಸಾಗಾಟ ಪ್ರಕರಣದಲ್ಲಿ ಒಬ್ಬನ ಬಚಾವ್ ಮಾಡಿದ್ರಾ ಕೊಣಾಜೆ ಪೊಲೀಸರು ? 

18-09-21 01:33 pm       Mangaluru Correspondent   ಕ್ರೈಂ

ಎರಡು ಹಸುಗಳನ್ನ ಸಾಗಿಸುತ್ತಿದ್ದ ಪಿಕ್ ಅಪ್ ವಾಹನವನ್ನ ತಡೆದ ಕೊಣಾಜೆ ಪೊಲೀಸರು ಇಬ್ಬರು ಆರೋಪಿಗಳನ್ನ ವಶಕ್ಕೆ ಪಡೆದಿದ್ದರೂ, ಓರ್ವನ ವಿರುದ್ಧ ಮಾತ್ರ ಪ್ರಕರಣ ದಾಖಲಿಸಿದ್ದು ಬಜರಂಗದಳ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ. 

ಕೊಣಾಜೆ, ಸೆ.18: ಮುಡಿಪು ಜವಾಹರಲಾಲ್ ನವೋದಯ ವಿದ್ಯಾಲಯದ ಬಳಿಯ ಪೂಪಾಡಿ ಕ್ರಾಸ್ ನಲ್ಲಿ ಮರಿಕ್ಕಳ ಕಸಾಯಿಖಾನೆಗೆ ಎರಡು ಹಸುಗಳನ್ನ ಸಾಗಿಸುತ್ತಿದ್ದ ಪಿಕ್ ಅಪ್ ವಾಹನವನ್ನ ತಡೆದ ಕೊಣಾಜೆ ಪೊಲೀಸರು ಇಬ್ಬರು ಆರೋಪಿಗಳನ್ನ ವಶಕ್ಕೆ ಪಡೆದಿದ್ದರೂ, ಓರ್ವನ ವಿರುದ್ಧ ಮಾತ್ರ ಪ್ರಕರಣ ದಾಖಲಿಸಿದ್ದು ಬಜರಂಗದಳ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ. 

ಕೊಣಾಜೆ ಪೊಲೀಸರು ಬಜರಂಗದಳ ನೀಡಿದ್ದ ಮಾಹಿತಿಯಂತೆ ಪೂಪಾಡಿ ಕ್ರಾಸ್ ನಲ್ಲಿ ಸುಳ್ಳು ದಾಖಲೆ ಸೃಷ್ಟಿಸಿ‌ ಹಸುಗಳನ್ನ ಸಾಗಿಸುತ್ತಿದ್ದ ಪಿಕ್ ಅಪ್ ವಾಹನ ಸಮೇತ ಇಬ್ಬರು ಆರೋಪಿಗಳನ್ನ ವಶಕ್ಕೆ ಪಡೆದಿದ್ದರು. ಈ ಬಗ್ಗೆ ಠಾಣೆಗೆ ಫೋನ್ ಮಾಡಿ ವಿಚಾರಿಸಿದಾಗ,  ಪ್ರತಿಕ್ರಿಯಿಸಿದ ಪೊಲೀಸ್ ಸಿಬ್ಬಂದಿ, ಪಿಕ್ ಅಪ್ ವಾಹನ, ಹಸುಗಳನ್ನ ವಶಕ್ಕೆ ಪಡೆದಿದ್ದೇವೆ FIR ಇನ್ನೂ ಆಗಿಲ್ಲ. ಪಿಕ್ ಅಪ್ ನಲ್ಲಿ ಸಾಗಿಸುತ್ತಿದ್ದ ಹಸುಗಳನ್ನ ಸ್ಥಳೀಯ ಕೃಷಿಕರೋರ್ವರು ಹಾಲು ಉತ್ಪಾದಕ ಸಂಘದಿಂದ ಖರೀದಿಸಿದ್ದೆಂದು ಹೇಳುತ್ತಿದ್ದಾರೆ.  ಈ ಬಗ್ಗೆ ಪರಿಶೀಲನೆ ಮಾಡುತ್ತಿದ್ದೇವೆ ಎಂದಿದ್ದರು.  ಆದರೆ ಸಂಜೆ ವೇಳೆ, ಕೊಣಾಜೆ ಠಾಣೆಯಲ್ಲಿ ಕೊಳ್ನಾಡು ನಿವಾಸಿ ಅಬ್ದುಲ್ ರಝಾಕ್ ಎಂಬಾತನ ವಿರುದ್ಧ ಮಾತ್ರ ಪ್ರಕರಣ ದಾಖಲಾಗಿತ್ತು. 

ಪೊಲೀಸರು ಇಬ್ಬರನ್ನ ವಶಕ್ಕೆ ತೆಗೆದಿದ್ದು, ಮತ್ತೋರ್ವ ಆರೋಪಿಯನ್ನ ಪ್ರಕರಣದಿಂದ ಕೈ ಬಿಟ್ಟದ್ದೇಕೆಂದು ಬಜರಂಗದಳದ ಜಿಲ್ಲಾ ಗೋರಕ್ಷಾ ಪ್ರಮುಖರಾದ ಪವಿತ್ರ ಕೆರೆಬೈಲ್ ಪ್ರಶ್ನಿಸಿದ್ದಾರೆ. ಕಾಣದ ಕೈಗಳ ಪ್ರಭಾವದಿಂದ ಪೊಲೀಸರು ದನಕಳ್ಳತನದ ಆರೋಪಿಯನ್ನ ಕೇಸು ದಾಖಲಿಸದೆ ಬಿಟ್ಟದ್ದು ಅಕ್ಷಮ್ಯವಾಗಿದ್ದು ಇದನ್ನ ವಿಶ್ವಹಿಂದೂ ಪರಿಷತ್, ಬಜರಂಗದಳ ತೀವ್ರವಾಗಿ ಖಂಡಿಸುತ್ತದೆ. ಮಾತ್ರವಲ್ಲದೆ ಈ ವಿಚಾರವನ್ನ ನಗರ ಪೊಲೀಸ್ ಕಮಿಷನರ್ ಗಮನಕ್ಕೂ ತರುವುದಾಗಿ ಪವಿತ್ರ ಕೆರೆಬೈಲ್ ಹೇಳಿದ್ದಾರೆ. 

ಕರ್ನಾಟಕ - ಕೇರಳದ ಗಡಿಭಾಗವಾಗಿರುವ ಮರಿಕ್ಕಳದಲ್ಲಿ ಅಕ್ರಮ ಕಸಾಯಿಖಾನೆಯಿದ್ದು ನಿರಂತರವಾಗಿ ಗೋವುಗಳನ್ನ ಸುಳ್ಳು ದಾಖಲೆ ಸೃಷ್ಟಿಸಿ ಸಾಗಿಸುತ್ತಿರುವುದು ತಿಳಿದು ಬಂದಿದೆ. ಅದರ ಮಾಹಿತಿಯನ್ನೇ ಕೊಣಾಜೆ ಪೊಲೀಸರಿಗೆ ಮೊನ್ನೆ ನಮ್ಮ ಕಾರ್ಯಕರ್ತರು ನೀಡಿದ್ದು , ಪೊಲೀಸರು ವಶಕ್ಕೆ ಪಡೆದ ಆರೋಪಿಯನ್ನ ಬಿಟ್ಟು ಕಳಿಸಿದ್ದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ ಎಂದು ಪವಿತ್ರ ಕೆರೆಬೈಲ್ ಆರೋಪಿಸಿದ್ದಾರೆ.

ಮುಡಿಪು: ಮರೀಕಳದ ಅಕ್ರಮ ಕಸಾಯಿಖಾನೆಗೆ ಹಸುಗಳ ಸಾಗಣೆ - ಪೊಲೀಸರ ತಡೆ

Mangalore Pickup van held for cattle trafficking in Mudipu Case turns into controversy after Konaje Police have left the prime accused. The Bajrang dal members have alleged and condemned the act of Konaje Police.