ಬ್ರೇಕಿಂಗ್ ನ್ಯೂಸ್
07-10-21 08:29 pm Giridhar Shetty, Mangaluru Correspondent ಕ್ರೈಂ
ಮಂಗಳೂರು, ಅ.7: ಷೇರು ಮಾರುಕಟ್ಟೆಯಲ್ಲಿ ಹಣ ತೊಡಗಿಸಿ, ಡಬಲ್ ಮಾಡಿಕೊಡುತ್ತೀನಿ ಎಂದು ಲಕ್ಷಾಂತರ ರೂಪಾಯಿ ಪಡೆದು 50ಕ್ಕೂ ಹೆಚ್ಚು ಮಂದಿಗೆ ಮೋಸ ಎಸಗಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ. ಅಂದಾಜು 20 ಕೋಟಿಗೂ ಹೆಚ್ಚು ಮೋಸ ಎಸಗಿದ್ದಾನೆಂದು ಹೇಳಲಾಗುತ್ತಿದ್ದು, ಆರೋಪಿಯನ್ನು ಮಂಗಳೂರು ಪೊಲೀಸರು ದೆಹಲಿಯಲ್ಲಿ ಬಂಧಿಸಿದ್ದಾರೆ.
ಬೆಳ್ತಂಗಡಿ ತಾಲೂಕಿನ ಕೊಲ್ಪೆತ್ತಬೈಲು ನಿವಾಸಿ ಹರ್ಮನ್ ಜಾಯ್ಸನ್ ಲೋjayson loboಬೊ(34) ಎಂಬಾತ ಬಂಧಿತ ಆರೋಪಿ. 15 ದಿನಗಳ ಹಿಂದೆ ಜಾಯ್ಸನ್ ಲೋಬೊ ವಿರುದ್ಧ ನಗರದ ಬಂದರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಿದೇಶಕ್ಕೆ ಪಲಾಯನ ಮಾಡುತ್ತಿದ್ದಾನೆಂಬ ಮಾಹಿತಿ ತಿಳಿದ ಪೊಲೀಸರು ಲುಕ್ ಔಟ್ ನೋಟೀಸ್ ನೀಡಿದ್ದರು. ಪಾಸ್ ಪೋರ್ಟ್ ಮಾಹಿತಿ ಆಧರಿಸಿ, ಲುಕ್ ಔಟ್ ನೋಟೀಸ್ ನೀಡಿದ್ದರಿಂದ ದೆಹಲಿ ವಿಮಾನ ನಿಲ್ದಾಣದಲ್ಲಿ ವಿದೇಶಕ್ಕೆ ತೆರಳಲು ಯತ್ನಿಸುತ್ತಿದ್ದಾಗ ಸಿಕ್ಕಿಬಿದ್ದಿದ್ದಾನೆ. ಆನಂತರ, ಮಂಗಳೂರು ಪೊಲೀಸರು ದೆಹಲಿಗೆ ತೆರಳಿ ಆರೋಪಿಯನ್ನು ವಶಕ್ಕೆ ಪಡೆದು ಮಂಗಳೂರಿಗೆ ಕರೆತಂದಿದ್ದಾರೆ.
ಕಳೆದ ಮೂರು ವರ್ಷಗಳಿಂದ ಜೋಯ್ಸನ್ ಲೋಬೋ ಮಂಗಳೂರು ಸೇರಿ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಹಲವರನ್ನು ಹಣ ದ್ವಿಗುಣಗೊಳಿಸುವ ಬಗ್ಗೆ ನಂಬಿಸಿದ್ದಾನೆ. ಷೇರು ಮಾರ್ಕೆಟ್ ನಲ್ಲಿ ಹಣ ತೊಡಗಿಸಿದರೆ, ಒಂದೇ ವರ್ಷದಲ್ಲಿ ಡಬಲ್ ಆಗುವುದೆಂದು ನಂಬಿಸಿದ್ದ. ಈತನ ಮಾತು ಕೇಳಿ ಆರಂಭದಲ್ಲಿ 20ಕ್ಕೂ ಹೆಚ್ಚು ಮಂದಿ ಹಣ ತೊಡಗಿಸಿದ್ದರು. ಹೀಗೆ ಒಬ್ಬರಿಂದ ಇನ್ನೊಬ್ಬರಿಗೆ ಲಿಂಕ್ ಆಗಿ ಹಲವಾರು ಮಂದಿ ಹಣ ತೊಡಗಿಸಿದ್ದಾರೆ.
ಮಂಗಳೂರಿನ ಮಹಿಳೆಯೊಬ್ಬರು ಹೇಳುವ ಪ್ರಕಾರ, ಒಂದು ವರ್ಷದ ಹಿಂದೆ ಇನ್ನೊಬ್ಬರ ಮೂಲಕ ಜಾಯ್ಸನ್ ಲೋಬೊ ಪರಿಚಯ ಆಗಿತ್ತು. ಮೊದಲು 50 ಸಾವಿರ ಹಣ ಹೂಡಿಕೆ ಮಾಡಿದ್ದರು. ಮಹಿಳೆ ಹೆಸರಲ್ಲೇ ಡಿಮ್ಯಾಟ್ ಖಾತೆಯನ್ನೂ ತೆರೆದಿದ್ದು, ಇನ್ನೂ ಹೆಚ್ಚು ಹಣ ತೊಡಗಿಸುವಂತೆ ಹೇಳಿದ್ದ. ಆಬಳಿಕ, ನಿಮ್ಮದೇ ಹೆಸರಲ್ಲಿ ಖಾತೆ ಇದ್ದರೆ ವಹಿವಾಟಿಗೆ ತೊಂದರೆಯಾಗುತ್ತೆ ಎಂದು ತನ್ನದೇ ಖಾತೆಗೆ ಹಣವನ್ನೂ ಹಾಕಿಸಿದ್ದ. ಕೆಲವೊಮ್ಮೆ ಒಳ್ಳೆ ರಿಟರ್ನ್ ಕೂಡ ಕೊಡಿಸುತ್ತಿದ್ದ. ಹಣ ಬರುತ್ತಿದ್ದುದನ್ನು ನಂಬಿದ ಮಹಿಳೆ ಆನಂತರ ಬ್ಯಾಂಕ್ ಸಾಲ ಮಾಡಿ, ಹಣ ಹೂಡಿಕೆ ಮಾಡಿದ್ದರು. ಸ್ವಲ್ಪ ಸ್ವಲ್ಪ ಎನ್ನುತ್ತಾ ಬರೋಬ್ಬರಿ 32 ಲಕ್ಷ ಹಣ ಹೂಡಿಕೆ ಮಾಡಿದ್ದರು.
ಆದರೆ, ಕಳೆದ ಫೆಬ್ರವರಿ ತಿಂಗಳಲ್ಲಿ ಈತನ ವಹಿವಾಟು ಬಗ್ಗೆ ಸಂಶಯ ಬಂದಿತ್ತು. ಬೇರೆ ಕೆಲವರು ಕೂಡ ಲಕ್ಷಾಂತರ ರೂಪಾಯಿ ಹೂಡಿಕೆ ಮಾಡಿದ್ದು, ರಿಟರ್ನ್ ಬಂದಿಲ್ಲ ಎನ್ನುತ್ತಿದ್ದರು. ಆತನಲ್ಲಿ ಕೇಳಿದಾಗ, ಜಿರೋದಾ, ಏಂಜೆಲ್ ಬ್ರೋಕಿಂಗ್ ಮತ್ತು ಏಕ್ಸಿಸ್ ಬ್ಯಾಂಕಿನಲ್ಲಿ ಡಿಮ್ಯಾಟ್ ಖಾತೆ ಇರುವುದನ್ನು ಹೇಳಿದ್ದ. ಆನಂತರ, ಅಲ್ಲಿ ಚೆಕ್ ಮಾಡಿದಾಗ ಆತನ ಹೆಸರಲ್ಲಿ ಖಾತೆ ಇರಲಿಲ್ಲ. ಏಕ್ಸಿಸ್ ಬ್ಯಾಂಕಿನಲ್ಲಿ ಮಹಿಳೆಯ ಹೆಸರಲ್ಲಿ ಅಕೌಂಟ್ ತೆರೆದಿದ್ದರೂ, ಅದರ ಪಾಸ್ ವರ್ಡ್ ತಾನೇ ಪಡೆದು ವಹಿವಾಟು ನಡೆಸುವುದಾಗಿ ಹೇಳಿಕೊಂಡಿದ್ದ. ಅಲ್ಲಿ ಹೋಗಿ ಕೇಳಿದರೆ, ಅಕೌಂಟ್ ಚೆಕ್ ಮಾಡುವ ಆಪ್ಶನ್ ಇರಲಿಲ್ಲ. ಜಾಯ್ಸನ್ ಲೋಬೋ ತಾನೇ ಆನ್ಲೈನ್ ಷೇರು ವಹಿವಾಟು ಮಾಡುತ್ತಾ ಬೇರೆಯವರಿಗೆ ಖಾತೆ ಬಗ್ಗೆ ತಿಳಿಯದಂತೆ ನೋಡಿಕೊಂಡಿದ್ದ.
ಈ ಮಹಿಳೆಯ ಗೊತ್ತಿನ ಪ್ರಕಾರ, 60ಕ್ಕೂ ಹೆಚ್ಚು ಮಂದಿ ಆತನ ಮೂಲಕ 30 ಲಕ್ಷ, 40 ಲಕ್ಷ, 20 ಲಕ್ಷ ಎಂದು ಹೂಡಿಕೆ ಮಾಡಿದ್ದಾರೆ. ಅಂದಾಜು 20 ಕೋಟಿಗೂ ಹೆಚ್ಚು ಹಣವನ್ನು ಆತ ಪಡೆದು ಮೋಸ ಎಸಗಿದ್ದಾನೆ ಎನ್ನಲಾಗುತ್ತಿದೆ. ಕೊನೆಯ ಬಾರಿಗೆ, ಒಂದು ತಿಂಗಳ ಹಿಂದೆ ವ್ಯಕ್ತಿಯೊಬ್ಬರು ಜಾಯ್ಸನ್ ಲೋಬೊ ಮಾತು ಕೇಳಿ 50 ಲಕ್ಷ ಹೂಡಿಕೆ ಮಾಡಿದ್ದರು. ಆನಂತರ, 50 ಲಕ್ಷ ಹಣ ಕೈಗೆ ಸಿಗುತ್ತಲೇ ಲೋಬೊ ನಾಪತ್ತೆಯಾಗಿದ್ದ. ಇದರಿಂದ ಶಾಕ್ ಆಗಿದ್ದ ಆ ವ್ಯಕ್ತಿ ಬಂದರು ಠಾಣೆಯಲ್ಲಿ ಕೇಸು ದಾಖಲಿಸಿದ್ದರು. ಅದರಂತೆ, ಜಾಯ್ಸನ್ ಲೋಬೊನನ್ನು ಪೊಲೀಸರು ಬಂಧಿಸಿ ಕರೆತಂದಿದ್ದಾರೆ.
ಮೋಸ ಹೋದವರು ಕಂಪ್ಲೇಂಟ್ ಕೊಡಿ
ಪೊಲೀಸ್ ಕಮಿಷನರ್ ಶಶಿಕುಮಾರ್ ಹೇಳುವ ಪ್ರಕಾರ, ಇಡೀ ಪ್ರಕರಣವನ್ನು ಆರ್ಥಿಕ ಅಪರಾಧಗಳ ವಿಶೇಷ ಠಾಣೆಗೆ ವರ್ಗಾಯಿಸಲಾಗುವುದು ಎಂದಿದ್ದಾರೆ. ಅಲ್ಲದೆ, ಈತನಿಂದ ಮೋಸ ಹೋದವರು ಇಎನ್ ಪಿಸಿ ಠಾಣೆಯಲ್ಲಿ ಕೇಸು ದಾಖಲಿಸಿಕೊಳ್ಳಬಹುದು ಎಂದು ತಿಳಿಸಿದ್ದಾರೆ. ಸದ್ಯಕ್ಕೆ 20ಕ್ಕೂ ಹೆಚ್ಚು ಮಂದಿ ದೂರು ಕೊಡಲು ಮುಂದೆ ಬಂದಿದ್ದು, ಬಂದರು ಪೊಲೀಸರ ಮಾತು ಕೇಳಿ ಹಿಂದೆ ಮುಂದೆ ನೋಡುತ್ತಿದ್ದಾರೆ. ಎಲ್ಲರೂ ಕೇಸು ಕೊಡುತ್ತಾ ಹೋದರೆ ಕಷ್ಟವಾಗುತ್ತದೆ, ಒಂದು ಎಫ್ಐಆರ್ ಆಗಿದ್ಯಲ್ಲಾ.. ಆತನಿಂದ ಹಣ ರಿಟರ್ನ್ ಪಡೆಯೋದ್ರ ಬಗ್ಗೆ ಯೋಚಿಸಿ ಎಂದು ಬಂದರು ಪೊಲೀಸ್ ಒಬ್ಬರು ಉಚಿತ ಸಲಹೆ ಕೊಟ್ಟಿದ್ದಾರಂತೆ.
ಒಂದೇ ಎಫ್ಐಆರ್ ಎಂಬ ಸಬೂಬು ತಂತ್ರ
ಒಂದೇ ಎಫ್ಐಆರ್ ದಾಖಲಾದಲ್ಲಿ ಆರೋಪಿ ಸುಲಭದಲ್ಲಿ ಹೊರಗಡೆ ಬರುತ್ತಾನೆ. ಇಷ್ಟೂ ಮಂದಿಯಿಂದ ಕೋಟ್ಯಂತರ ರೂಪಾಯಿ ಹಣವನ್ನು ಪಡೆದಿರುವ ಜಾಯ್ಸನ್ ಲೋಬೊ ಬಿಟ್ ಕಾಯಿನ್ ಅಥವಾ ಇನ್ನಾವುದೋ ಕಡೆ ಹೂಡಿಕೆ ಮಾಡಿರುವ ಸಾಧ್ಯತೆಯಿದೆ. ಹಣ ಕಳಕೊಂಡವರು ಪ್ರತ್ಯೇಕವಾಗಿ ಎಫ್ಐಆರ್ ದಾಖಲಿಸಿ, ಆತನ ವಿರುದ್ಧ ಕಾನೂನು ಹೋರಾಟಕ್ಕಿಳಿಯಬಹುದು. ಅದರ ಮೂಲಕ ಆತನ ಆಸ್ತಿಯನ್ನು ಜಪ್ತಿ ಮಾಡಿಸಿ, ಹಣ ಹಿಂಪಡೆಯಲು ಸಾಧ್ಯವಿದೆ. ಹಣ ಕಳಕೊಂಡವರು ಆಯಾ ಭಾಗದಲ್ಲಿ ಕೇಸು ಮಾಡುವ ಅಗತ್ಯವೂ ಇಲ್ಲ. ಆರ್ಥಿಕ ಅಪರಾಧಗಳ ತನಿಖೆಗೆಂದೇ ಮಂಗಳೂರಿನ ಉರ್ವಾದಲ್ಲಿ ಇಎನ್ ಪಿಸಿ ಠಾಣೆ ಇರುವುದರಿಂದ 25 ಲಕ್ಷಕ್ಕಿಂತ ಹೆಚ್ಚಿನ ಮೊತ್ತದ ಯಾವುದೇ ರೀತಿಯ ಹಣಕಾಸು ಮೋಸ ಆಗಿದ್ದಲ್ಲಿ ಅಲ್ಲಿಯೇ ಕೇಸು ದಾಖಲಿಸಬೇಕಾಗುತ್ತದೆ. ಕಳೆದ ಬಾರಿ ಮಲೈಕಾ ಸೊಸೈಟಿ ಹಗರಣದಲ್ಲಿ ಮಂಗಳೂರಿನ ಪೊಲೀಸರು ಒಂದೇ ಎಫ್ಐಆರ್ ದಾಖಲಿಸಿ, ಆರೋಪಿಗೆ ಸಹಕಾರ ನೀಡಿದ್ದರು ಎಂಬ ಆರೋಪ ಕೇಳಿಬಂದಿತ್ತು.
ಡಿಮ್ಯಾಟ್ ಖಾತೆ ಬಗ್ಗೆ ಮಾಹಿತಿ ಕೊಡಬೇಡಿ
ಈ ಬಗ್ಗೆ ಜೆರೋದಾ ಷೇರು ಬ್ರೋಕಿಂಗ್ ಕಂಪನಿಯ ಮ್ಯಾನೇಜರ್ ಬಳಿ ಕೇಳಿದರೆ, ಆತನ ಮೊಬೈಲ್ ನಂಬರ್ ನೀಡಿದರೆ ಖಾತೆ ಇದೆಯಾ ಅನ್ನೋದ್ರ ಬಗ್ಗೆ ಚೆಕ್ ಮಾಡಬಹುದು. ಆದರೆ, ಯಾರು ಕೂಡ ತಮ್ಮ ಡಿಮ್ಯಾಟ್ ಖಾತೆ ಮಾಡಿ, ಅದರ ಪಾಸ್ ವರ್ಡ್ ಅನ್ನು ಇತರ ವ್ಯಕ್ತಿಗಳಿಗೆ ನೀಡಬಾರದು. ಅದರಿಂದ ಇದೇ ರೀತಿಯ ವಂಚನೆಗೆ ಕಾರಣವಾಗುತ್ತದೆ ಎಂದು ಹೇಳಿದ್ದಾರೆ. ಷೇರು ಮಾರುಕಟ್ಟೆಯಲ್ಲಿ ಏರಿಳಿತ ಸಾಮಾನ್ಯ. ಅದರ ಬಗ್ಗೆ ತಾವೇ ಖುದ್ದಾಗಿ ಪರಿಶೀಲಿಸಿ, ಹಣ ಹೂಡಿಕೆ ಮಾಡಬೇಕು ಎಂದು ಸಲಹೆ ನೀಡಿದ್ದಾರೆ.
A 34-year-old man was arrested by Bunder Police in connection with fraud in online share trading of almost 20 crores. The arrested has been identified as Herman Joyson Lobo from Beltangady. Herman was arrested by Delhi police at Delhi airport on October 3. Mangaluru police had earlier issued a lookout notice against Herman. Hence he was brought to Mangaluru.
26-11-24 06:56 pm
Bangalore Correspondent
MLA Gaviyappa, Congress: ಗ್ಯಾರಂಟಿ ಸ್ಕೀಂನಿಂದಾಗ...
26-11-24 06:11 pm
Davanagere News, Heart Attack: ಗಂಡ ಹೃದಯಾಘಾತಕ್...
26-11-24 11:52 am
ಜೆಡಿಎಸ್ ನಲ್ಲಿ ಭವಿಷ್ಯ ಇಲ್ಲ, ದೇವೇಗೌಡರಿಗೆ ಜನ ಗೌರ...
25-11-24 05:51 pm
ಮನೆಯೊಂದು ಮೂರು ಬಾಗಿಲು, ಗೆಲುವು ಕಸಿದ ಬಿಜೆಪಿ ಒಳಜಗ...
25-11-24 03:28 pm
23-11-24 11:07 pm
HK News Desk
ಬಿಜೆಪಿ ‘ಗ್ಯಾರಂಟಿ’ಗೆ ಕೈಹಿಡಿಯದ ಜಾರ್ಖಂಡ್ ಮತದಾರ,...
23-11-24 05:34 pm
ಮಹಾರಾಷ್ಟ್ರದಲ್ಲಿ ಕೇಸರಿ ಕಮಾಲ್ ; ನಿರೀಕ್ಷೆಗೂ ಮೀರಿ...
23-11-24 04:33 pm
ಭಾರೀ ವಿವಾದ ಸೃಷ್ಟಿಸಿದ್ದ 'ಎಮರ್ಜೆನ್ಸಿ' ಚಿತ್ರ ಬಿಡ...
18-11-24 03:54 pm
ಶ್ರದ್ಧಾ ವಾಳ್ಕರ್ ಹತ್ಯೆಗೆ ಸೇಡು ತೀರಿಸಲು ಬಿಷ್ಣೋಯಿ...
18-11-24 01:09 pm
26-11-24 05:37 pm
Mangaluru Correspondent
Mangalore Astra Group, lucky draw: ಕಾರು, ಫ್ಲಾ...
25-11-24 11:14 pm
Vithoba Rukumai temple case, Mangalore: ವಿಠೋಬ...
25-11-24 10:39 pm
Ullal Dargah, Mangalore: ಎಪ್ರಿಲ್ 24 ರಿಂದ ಮೇ...
25-11-24 02:44 pm
Kukke Subrahmanya Temple, Mangalore: ನ.27ರಿಂದ...
24-11-24 09:13 pm
26-11-24 03:10 pm
Mangalore Correspondent
ಹುಬ್ಬಳ್ಳಿ ದರೋಡೆ ಪ್ರಕರಣದಲ್ಲಿ ಮಂಗಳೂರು ನಂಟು ; ಉಳ...
25-11-24 06:17 pm
Honeytrap Bangalore, Crime, Udupi: ಪ್ರೊಫೆಸರ್...
24-11-24 04:33 pm
Rowdy sheeter Dawood, Mangalore Crime, Police...
23-11-24 10:49 am
ಟ್ರಾಯ್ ಕಂಪನಿ ಸೋಗಿನಲ್ಲಿ ಕರೆ ; ಅಮೆರಿಕಾದ ಸಾಫ್ಟ್...
22-11-24 10:47 pm