ಬ್ರೇಕಿಂಗ್ ನ್ಯೂಸ್
08-10-21 10:31 am Manglore reporter ಕ್ರೈಂ
ಮಂಗಳೂರು, ಅ.8 : ವೈಷ್ಣವಿ ಕಾರ್ಗೋ ಸಂಸ್ಥೆಯ ಮಾಲೀಕ, ರಾಜೇಶ್ ಪ್ರಭು ಕೈಯಿಂದಲೇ ಹಾರಿದ್ದ ಪಿಸ್ತೂಲ್ ಗುಂಡಿನಿಂದಾಗಿ ತೀವ್ರ ಗಾಯಗೊಂಡು ಎರಡು ದಿನಗಳಿಂದ ಕೋಮಾ ಸ್ಥಿತಿಯಲ್ಲಿದ್ದ 16 ವರ್ಷದ ಮಗ ಸುಧೀಂದ್ರ ಚಿಕಿತ್ಸೆ ಫಲಕಾರಿಯಾಗದೆ ಸಾವು ಕಂಡಿದ್ದಾನೆ.
ಅ.5 ರಂದು ಸಂಜೆ ಮೋರ್ಗನ್ ಗೇಟ್ ನಲ್ಲಿರುವ ವೈಷ್ಣವಿ ಸಂಸ್ಥೆಯ ಕಚೇರಿಯ ಹೊರಗಡೆ ಘಟನೆ ನಡೆದಿತ್ತು. ಸಂಬಳ ಕೇಳಲು ಬಂದಿದ್ದ ಇಬ್ಬರು ನೌಕರರ ಮೇಲಿನ ಸಿಟ್ಟಿನಲ್ಲಿ ರಾಜೇಶ ಪ್ರಭು ತನ್ನ ಪಿಸ್ತೂಲ್ ತೆಗೆದು ಬೆದರಿಸುವ ಸಂದರ್ಭದಲ್ಲಿ ಗುಂಡು ಹಾರಿತ್ತು. ಈ ವೇಳೆ, ನೌಕರರ ಜೊತೆ ಜಟಾಪಟಿಯಲ್ಲಿ ತೊಡಗಿದ್ದ ಮಗ ಸುಧೀಂದ್ರನ ತಲೆಗೆ ಒಂದು ಗುಂಡು ತಗಲಿತ್ತು. ನೌಕರರ ಮೇಲೆ ಹಾರಿಸಿದ್ದ ಗುಂಡು ಮಗನ ಮೇಲೆ ಬಿದ್ದು ಎಡವಟ್ಟು ಆಗಿತ್ತು. ತನ್ನ ಪಾಲಿಗೆ ಎಲ್ಲವೂ ಆಗಿದ್ದ ಒಬ್ಬನೇ ಮಗನ ಜೀವಕ್ಕೇ ಸಂಚಕಾರ ತಂದಿತ್ತು.
ಗುಂಡು ಹತ್ತಿರದಿಂದ ಸಿಡಿದಿದ್ದ ಕಾರಣ ತಲೆಯಿಂದ ಮೆದುಳಿನ ಒಳಹೊಕ್ಕು ಕೆಲವೇ ಕ್ಷಣಗಳಲ್ಲಿ ಆಘಾತ ಎದುರಾಗಿತ್ತು. ಆದರೆ, ರಾಜೇಶ್ ಪ್ರಭು ಮಗನನ್ನು ಉಳಿಸಿಕೊಳ್ಳಲು ಬಹಳಷ್ಟು ಪ್ರಯತ್ನ ಪಟ್ಟಿದ್ದಾರೆ. ಆದರೆ, ವೈದ್ಯರು ಪಟ್ಟ ಹರಸಾಹಸ ಕೊನೆಗೂ ಫಲ ನೀಡಲಿಲ್ಲ. ಮರುದಿನವೇ ಮೆದುಳು ಡೆಡ್ ಆಗಿದೆ ಎಂದು ವೈದ್ಯರು ಹೇಳಿದ್ದರು. ಯಾಕಂದ್ರೆ, ಮೆದುಳಿಗೆ ಯಾವುದೇ ರೀತಿಯ ಹಾನಿ ಆದ್ರೂ ನಮ್ಮ ವೈದ್ಯಕೀಯ ಜಗತ್ತು ಅದನ್ನು ಶಸ್ತ್ರಚಿಕಿತ್ಸೆ ಮಾಡುವುದಾಗಲೀ, ಅಲ್ಲಿ ಆಗಿರುವ ಹಾನಿಯನ್ನು ನಿವಾರಿಸುವಷ್ಟರ ಮಟ್ಟಿಗೆ ಇನ್ನೂ ಬೆಳೆದಿಲ್ಲ. ಹೀಗಾಗಿ ಮೆದುಳು ತನ್ನ ಕೆಲಸ ನಿಲ್ಲಿಸಿದೆ, ದೇಹ ನಿಶ್ಚಲವಾಗಿದೆ ಎಂದೇ ಅರ್ಥ.
ಮೆದುಳು ನಿಷ್ಕ್ರಿಯ ಆಗಿದ್ದರಿಂದ ಹುಡುಗನ ದೇಹದ ಇತರ ಅಂಗಾಂಗಗಳನ್ನು ದಾನ ಮಾಡಲು ಕುಟುಂಬಸ್ಥರು ಮುಂದಾಗಿದ್ದರು. ಅದಕ್ಕೆ ಬೇಕಾದ ಪ್ರಕ್ರಿಯೆಯನ್ನು ಗುರುವಾರ ಮಾಡಲಾಗಿತ್ತು ಎನ್ನುವ ಮಾಹಿತಿಗಳಿದ್ದವು. ಆನಂತರ, ಇಂದು ನಸುಕಿನ ಜಾವ 5 ಗಂಟೆಗೆ ಸುಧೀಂದ್ರ ಮೃತಪಟ್ಟಿದ್ದಾಗಿ ವೈದ್ಯರು ಘೋಷಿಸಿದ್ದಾರೆ. ಇದನ್ನು ಪೊಲೀಸರು ಕೂಡ ದೃಢಪಡಿಸಿದ್ದಾರೆ.
ವೈಷ್ಣವಿ ಕಾರ್ಗೋ ಸಂಸ್ಥೆಯ ಮಾಲೀಕ ರಾಜೇಶ್ ಪ್ರಭುವಿಗೆ ಇಬ್ಬರು ಮಕ್ಕಳಿದ್ದರು. ಹೆಣ್ಮಗಳು ವೈಷ್ಣವಿ ಸಣ್ಣ ಪ್ರಾಯದಲ್ಲೇ ತೀರಿಕೊಂಡಿದ್ದಳು. ಇನ್ನೊಬ್ಬ ಹುಡುಗ ಸುಧೀಂದ್ರ ಈಗ, ಅಪ್ಪನ ಸಿಟ್ಟು ಮತ್ತು ಕ್ಷಣಕಾಲದ ಧಾವಂತಕ್ಕೆ ಬಲಿಯಾಗಿದ್ದಾನೆ. ಮಕ್ಕಳ ಹೆಸರಲ್ಲೇ ಉದ್ಯಮ ಸ್ಥಾಪಿಸಿ ಹೆಸರು ಮಾಡಿದ್ದ , ವೈಷ್ಣವಿ ಕಾರ್ಗೋ ಮತ್ತು ಸುಧೀಂದ್ರ ಲಾಜಿಸ್ಟಿಕ್ ಸಂಸ್ಥೆಯ ಮಾಲಕ ರಾಜೇಶ್ ಪ್ರಭು ಈಗ ಕೊಲೆ ಪ್ರಕರಣದಲ್ಲಿ ಜೈಲು ಸೇರುವಂತಾಗಿದೆ. ಪಾಂಡೇಶ್ವರ ಠಾಣೆಯಲ್ಲಿ ಕೊಲೆಯತ್ನ ಎಂದು ದಾಖಲಾಗಿದ್ದ ಪ್ರಕರಣ ಕೊಲೆ ಎಂದೇ ದಾಖಲಾಗಬೇಕಾಗುತ್ತದೆ. ಈಗಾಗಲೇ ರಾಜೇಶ್ ಪ್ರಭು ಅರೆಸ್ಟ್ ಆಗಿದ್ದು ಪೊಲೀಸರ ವಶದಲ್ಲಿದ್ದಾರೆ. ತನ್ನ ಪ್ರಾಣ ರಕ್ಷಣೆಗಾಗಿ ಇಟ್ಟುಕೊಂಡಿದ್ದ ಪಿಸ್ತೂಲನ್ನು ಕಾರ್ಮಿಕರನ್ನು ಬೆದರಿಸಲು ಬಳಸಿದ್ದು ತನ್ನ ಕಾಲ ಬುಡಕ್ಕೇ ಕೊಡಲಿ ಏಟು ನೀಡಿದೆ.
Morgans gate shootout case son dies in hospital after misfire by father. 16-year-old Sudheendra was critically injured when a bullet fired by his father hit him in the left eye was lodged in the head. Sudheendra’s father Rajesh Prabhu in a fit of rage had shot at two of his staff when they had asked for their salary, but missed and hit his son Sudheendra in the left eye and got lodged in the head.
27-12-24 04:07 pm
HK News Desk
Manmohan Singh, Mangalore beach festival: ಮನಮ...
27-12-24 11:24 am
ಹೊಸ ವರ್ಷಕ್ಕೆ ಮತ್ತೆ ಜನರಿಗೆ ಗ್ಯಾರಂಟಿ ಶಾಕ್ ? ಲೀಟ...
26-12-24 11:39 pm
Bidar Contractor Suicide, Priyank Kharge: ಪ್ರ...
26-12-24 08:03 pm
ಹೆಚ್ಚು ಮೊಬೈಲ್ ನೋಡ್ಬೇಡ ಎಂದು ಬುದ್ಧಿ ಹೇಳಿದ್ದ ತಾಯ...
26-12-24 05:11 pm
27-12-24 10:38 am
Yatish Kumar, Headline Karnataka
Manmohan Singh Death; ಆರ್ಥಿಕ ಕ್ರಾಂತಿಯ ಹರಿಕಾರ...
27-12-24 10:15 am
Dr Manmohan Singh, passes away: ಮಾಜಿ ಪ್ರಧಾನಿ,...
26-12-24 11:15 pm
Ajay Bhalla, Arif Khan: ಗಲಭೆ ಪೀಡಿತ ಮಣಿಪುರಕ್ಕೆ...
25-12-24 04:21 pm
Mohan Bhagwat: ಮೋಹನ್ ಭಾಗವತ್ ಸಂಘವನ್ನು ನಡೆಸುತ್ತ...
24-12-24 09:17 pm
27-12-24 11:02 pm
Mangalore Correspondent
Mangalore, MCC Bank, Anil Lobo arrest, Police...
27-12-24 09:26 pm
Harish Poonja, Mangalore, kabaddi association...
27-12-24 08:41 pm
Mangalore DJ Sajanka party canceled, Beach fe...
27-12-24 06:55 pm
Mangalore Gas cylinder blast, Manjanady: ಮಂಜ...
26-12-24 11:18 pm
26-12-24 07:41 pm
Bangalore Correspondent
Fake Gold Loan, Mangalore Samaja seva sahakar...
25-12-24 02:41 pm
ಸೈಬರ್ ವಂಚಕರ ನಕಲಿ ಷೇರು ಮಾರುಕಟ್ಟೆ ಜಾಲ ; ಕೇರಳದಲ್...
24-12-24 11:05 pm
Bangalore cyber fraud, Crime: ಬೆಂಗಳೂರಿನ ಸಾಫ್ಟ...
22-12-24 07:23 pm
Mangalore Police, Cyber Fraud: ಕಮಿಷನ್ ಆಸೆಗೆ ಬ...
22-12-24 04:44 pm