ಬ್ರೇಕಿಂಗ್ ನ್ಯೂಸ್
11-12-21 12:57 pm HK Desk news ಕ್ರೈಂ
Photo credits : Headline Karnataka
ಮಂಗಳೂರು, ಡಿ.11 : ಒಂದೇ ಕುಟುಂಬದ ನಾಲ್ವರ ಆತ್ಮಹತ್ಯೆ ಪ್ರಕರಣದಲ್ಲಿ ಮತಾಂತರ ಯತ್ನವೇ ಘಟನೆಗೆ ಕಾರಣವಾಗಿತ್ತು ಅನ್ನೋ ಅಂಶ ಪೊಲೀಸರ ತನಿಖೆಯಲ್ಲಿ ಕಂಡುಬಂದಿದೆ.
ಘಟನೆ ಹಿನ್ನೆಲೆಯಲ್ಲಿ ವಶಕ್ಕೆ ಪಡೆದಿದ್ದ ಮಹಿಳೆ ನೂರ್ ಜಹಾನ್, ಮೃತ ವಿಜಯಲಕ್ಷ್ಮಿಯನ್ನ ಇಸ್ಲಾಂಗೆ ಮತಾಂತರಕ್ಕೆ ಯತ್ನಿಸಿದ್ದಳು ಎನ್ನುವುದನ್ನು ತನಿಖೆಯಲ್ಲಿ ಪತ್ತೆ ಮಾಡಲಾಗಿದೆ.
ಮದುವೆ ಬ್ರೋಕರ್ ಕೂಡ ಆಗಿದ್ದ ಬಿಜೈ ನಿವಾಸಿ ನೂರ್ ಜಹಾನ್ ಮನೆಯಲ್ಲಿ ವಿಜಯಲಕ್ಷ್ಮಿ ಮನೆ ಕೆಲಸಕ್ಕೆ ಬರುತ್ತಿದ್ದಳು. ಗಂಡ- ಹೆಂಡತಿ ನಡುವಿನ ಜಗಳವನ್ನ ಎನ್ ಕ್ಯಾಶ್ ಮಾಡಿಕೊಂಡಿದ್ದ ನೂರ್ ಜಹಾನ್, ಆಕೆಯನ್ನು ಮತಾಂತರಿಸಿ ಬೇರೊಬ್ಬ ಮುಸ್ಲಿಂ ಯುವಕನಿಗೆ ಮದುವೆ ಮಾಡಿಸಲು ಯತ್ನಿಸಿದ್ದಳು.
ಆತ್ಮಹತ್ಯೆ ಮಾಡಿಕೊಂಡ ನಾಗೇಶ್ ಮತ್ತು ಪತ್ನಿ ವಿಜಯಲಕ್ಷ್ಮಿ ಮಧ್ಯೆ ಜಗಳ ನಡೆಯುತ್ತಿತ್ತು. ಮನೆಯಲ್ಲಿ ಪ್ರತಿನಿತ್ಯ ಕುಡಿದು ಬಂದು ಜಗಳ ಮಾಡುತ್ತಿದ್ದ ಪತಿ ನಾಗೇಶ್ ಬಗ್ಗೆ ಸಿಟ್ಟು ಮಾಡಿಕೊಂಡಿದ್ದ ವಿಜಯಲಕ್ಷ್ಮಿ, ಆ ಬಗ್ಗೆ ನೂರ್ ಜಹಾನ್ ಬಳಿ ಹೇಳಿಕೊಂಡಿದ್ದಳು. ಇದನ್ನೇ ನೆಪವಾಗಿಸಿದ ನೂರ್ ಜಹಾನ್, ವಿಜಯಲಕ್ಷ್ಮಿಯನ್ನು ಪತಿ ನಾಗೇಶ್ ಗೆ ಡೈವೋರ್ಸ್ ಕೊಡುವಂತೆ ಹೇಳಿದ್ದಳು.
ಡೈವೋರ್ಸ್ ನೀಡಿದ ಬಳಿಕ ಮುಸ್ಲಿಂ ಯುವಕನಿಗೆ ಮದುವೆ ಮಾಡಿಸಿಕೊಡುವುದಾಗಿ ಹೇಳಿದ್ದ ನೂರ್ ಜಹಾನ್, ಅದಕ್ಕಾಗಿ ಆಕೆಯ ಫೋಟೊ ಪಡೆದು ಹುಡುಗನಿಗಾಗಿ ಹುಡುಕಾಟ ನಡೆಸಿದ್ದಳು. ಆದರೆ ಬೇರೆ ಮದುವೆಯಾಗೋಕು ಮುನ್ನ ಇಸ್ಲಾಂಗೆ ಮತಾಂತರ ಆಗಬೇಕೆಂದು ಷರತ್ತು ವಿಧಿಸಿದ್ದಳು.
ವಿಜಯಲಕ್ಷ್ಮಿ ಡೈವೋರ್ಸ್ ಕೇಳುತ್ತಿರುವುದು ಮತ್ತು ಆಕೆ ನೂರ್ ಜಹಾನ್ ಪಿತೂರಿಗೆ ಒಳಗಾಗಿ ಮುಸ್ಲಿಂ ಆಗಿ ಮತಾಂತರ ಆಗಿದ್ದಾಳೆ ಎಂಬ ವಿಚಾರದಲ್ಲಿ ಪತಿ - ಪತ್ನಿಯ ಮಧ್ಯೆ ಜಗಳ ಆಗುತ್ತಿತ್ತು. ಇವರ ಮಧ್ಯೆ ಇದೇ ವಿಚಾರದಲ್ಲಿ ಗಲಾಟೆ ನಡೆದಿದ್ದು ಡಿ.7 ರಂದು ರಾತ್ರಿ ಮಕ್ಕಳು ಮತ್ತು ಪತ್ನಿಗೆ ವಿಷ ಕೊಟ್ಟು ಕೊಂದು ಪತಿ ನಾಗೇಶ್, ನೇಣಿಗೆ ಶರಣಾಗಿದ್ದ.
ಅಲ್ಲದೆ, ನೂರ್ ಜಹಾನ್ ಮತಾಂತರಕ್ಕೆ ಯತ್ನಿಸಿದ್ದೇ ಸಾವಿಗೆ ಕಾರಣ ಎಂದು ನಾಗೇಶ್ ಡೆತ್ ನೋಟ್ ಬರೆದಿಟ್ಟಿದ್ದ. ಪೊಲೀಸರು ಇದೇ ಆಧಾರದಲ್ಲಿ ನೂರ್ ಜಹಾನ್ ಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಸದ್ಯ ಐಪಿಸಿ 306 ಅಡಿಯಲ್ಲಿ ಪ್ರಕರಣ ದಾಖಲಿಸಿ ಆರೋಪಿ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.
ಬಾಗಲಕೋಟೆ ಮೂಲದ ನಾಗೇಶ್ ಶೇರಿಗುಪ್ಪಿ(30) ಮಂಗಳೂರಿನಲ್ಲಿ ಟ್ರಕ್ ಚಾಲಕನಾಗಿ ಕೆಲಸ ಮಾಡುತ್ತಿದ್ದು ಪತ್ನಿ ವಿಜಯಲಕ್ಷ್ಮಿ(26), ಮಕ್ಕಳಾದ ಸಪ್ನಾ(8) ಮತ್ತು ಸಮರ್ಥ್(4) ಜೊತೆಗೆ ಮೋರ್ಗನ್ ಗೇಟ್ ಬಳಿ ಬಾಡಿಗೆ ಮನೆಯಲ್ಲಿ ವಾಸವಿದ್ದ. ಮತಾಂತರ ವಿಚಾರದಿಂದ ಬೇಸತ್ತು ಸಾವಿಗೆ ಶರಣಾಗಿದ್ದಾನೆ ಎನ್ನುವುದು ತನಿಖೆಯಲ್ಲಿ ದೃಢಪಟ್ಟಿದೆ ಎಂದು ಪೊಲೀಸ್ ಕಮಿಷನರ್ ಶಶಿಕುಮಾರ್ ತಿಳಿಸಿದ್ದಾರೆ.
ಪತ್ನಿ ಮಕ್ಕಳಿಗೆ ವಿಷವುಣಿಸಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ; ಬಾಗಲಕೋಟೆ ಮೂಲದ ಕುಟುಂಬದ ದುರಂತ ಅಂತ್ಯ !
ನಾಲ್ವರ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ; ಮುಸ್ಲಿಂ ಮತಾಂತರದ ಬಗ್ಗೆ ಶಂಕೆ, ಆರೋಪಿ ಮಹಿಳೆ ಪೊಲೀಸ್ ವಶಕ್ಕೆ !!
Four members of family suicide in Mangalore case, Muslim woman tried to convert wife to Islam says Police Commisioner. Four members of a family were found dead in a house near Jeppu Market in Mangaluru on December 8. The police gave their names as Nagesh Shiraguppi, 30, his wife Vijayalakshmi, 26, and their children Sapna, 8, and Samarth, 4. The family hails from Sunag village in Bilagi taluk of Bagalkot district.
06-01-25 09:41 pm
Bengaluru Correspondent
Chamarajanagar, Heart Attack School Student:...
06-01-25 06:53 pm
Bangalore Suicide, Software engineer family:...
06-01-25 02:03 pm
HMPV virus Karnataka, Guidelines: ಹೆಚ್ಎಂಪಿವ...
06-01-25 01:39 pm
ಬೆಂಗಳೂರಿನಲ್ಲಿ ಎರಡು ಶಿಶುಗಳಲ್ಲಿ ಎಚ್ಎಂಪಿವಿ ವೈರಸ್...
06-01-25 01:04 pm
05-01-25 09:41 pm
HK News Desk
Chhattisgarh Journalist Murder: ಛತ್ತೀಸ್ಗಢದಲ್ಲ...
04-01-25 06:01 pm
ಉತ್ತರ ಚೀನಾದಲ್ಲಿ ಮತ್ತೊಂದು ವೈರಸ್ ದಾಳಿ ; ಕೋವಿಡ್...
03-01-25 06:22 pm
ಅಮೆರಿಕದಲ್ಲಿ ಟ್ರಕ್ ನುಗ್ಗಿಸಿ ಭಯೋತ್ಪಾದಕ ಘಟನೆ ; ಐ...
03-01-25 11:57 am
ಸ್ವಿಜರ್ಲ್ಯಾಂಡಿನಲ್ಲಿ ಜನವರಿ 1ರಿಂದಲೇ ಬುರ್ಖಾ ನಿಷೇ...
02-01-25 06:20 pm
06-01-25 08:29 pm
Mangalore Correspondent
Beary community, convention, Mangalore: ಬ್ಯಾ...
06-01-25 08:04 pm
Naxal Surrender, Vikram Gowda, Mangalore: ವಿಕ...
06-01-25 03:59 pm
Mangalore, Kotekar Samaja Seva Sahakari Sangh...
05-01-25 10:51 pm
Dr Na DSouza passes, Death, Mangalore: ಖ್ಯಾತ...
05-01-25 10:16 pm
06-01-25 05:37 pm
HK News Desk
Mangalore Robbery, Singari Beedi owner, Crime...
04-01-25 11:31 am
Madhugiri DySP Ramachandrappa Arrest, Video:...
03-01-25 11:02 pm
Sri Bhagavathi Co Operative Bank fraud, Manga...
03-01-25 09:26 pm
Belagavi Murder, Crime; ಕುಡಿಯಲು ಹಣಕ್ಕಾಗಿ ಪೀಡಿ...
02-01-25 11:00 pm