ಬ್ರೇಕಿಂಗ್ ನ್ಯೂಸ್
02-01-22 10:21 pm HK Desk news ಕ್ರೈಂ
ನವದೆಹಲಿ, ಜ.2 : ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವ ಮುಸ್ಲಿಂ ಮಹಿಳೆಯರ ಫೋಟೋಗಳನ್ನು ತೆಗೆದು ನಕಲಿ ಏಪ್ ಸೃಷ್ಟಿಸಿ ಹರಾಜಿಗಿಟ್ಟ ಪ್ರಕರಣ ದೆಹಲಿ ಮಟ್ಟದಲ್ಲಿ ವಿವಾದದ ಕಿಡಿ ಎಬ್ಬಿಸಿದೆ. ಈ ಬಗ್ಗೆ ದೆಹಲಿ ಮತ್ತು ಮುಂಬೈ ಪೊಲೀಸರು ಪ್ರಕರಣ ದಾಖಲಿಸಿ, ತನಿಖೆ ಆರಂಭಿಸಿದ್ದಾರೆ.
GitHub ಎನ್ನುವ ಸೋಶಿಯಲ್ ಮೀಡಿಯಾ ಪ್ಲಾಟ್ ಫಾರಂನಲ್ಲಿ ಬುಲ್ಲಿ ಬಾಯಿ ಎಂಬ ಹೆಸರಿನಲ್ಲಿ ಏಪ್ ಸೃಷ್ಟಿಸಲಾಗಿದ್ದು, ಅದರಲ್ಲಿ ನೂರಕ್ಕೂ ಹೆಚ್ಚು ಪ್ರಭಾವಿ ಮುಸ್ಲಿಮ್ ಮಹಿಳೆಯರ ಫೋಟೋಗಳನ್ನು ಹಾಕಿ, ಹರಾಜಿಗಿಡಲಾಗಿದೆ ಎಂದು ಸಾರ್ವಜನಿಕರಿಗೆ ಸೂಚನೆ ನೀಡಲಾಗಿತ್ತು. ಇದರಲ್ಲಿ ದೆಹಲಿಯ ಪತ್ರಕರ್ತೆಯೊಬ್ಬರ ಫೋಟೋ ಕೂಡ ಇತ್ತು. ಇದನ್ನು ಗಮನಿಸಿದ ಮಹಿಳೆ ಅದರ ಸ್ಕ್ರೀನ್ ಶಾಟನ್ನು ಟ್ವಿಟರ್ ನಲ್ಲಿ ಹಾಕ್ಕೊಂಡಿದ್ದು, ಕೇಂದ್ರ ಐಟಿ ತಂತ್ರಜ್ಞಾನ ಸಚಿವಾಲಯಕ್ಕೆ ದೂರು ನೀಡಿದ್ದರು.

ಇಷ್ಟಾಗುತ್ತಲೇ ವಿವಾದದ ಕಿಡಿ ಹೊತ್ತಿಕೊಂಡಿದ್ದು, ಏಪ್ ಸೃಷ್ಟಿಸಿದವರು ಯಾರು ಎಂಬ ಬಗ್ಗೆ ಪ್ರಶ್ನೆಗಳು ಕೇಳಿಬಂದಿವೆ. ಗಿಟ್ ಹಬ್ ಕಂಪನಿ ತನ್ನ ಪ್ಲಾಟ್ ಫಾರಂನಲ್ಲಿ ಬುಲ್ಲಿ ಬಾಯಿ ಏಪ್ ಅನ್ನು ಭಾನುವಾರ ಬೆಳಗ್ಗೆ ಡಿಲೀಟ್ ಮಾಡಿದ್ದಾಗಿ ಹೇಳಿಕೊಂಡಿದೆ. ಹಲವಾರು ಮಂದಿ ದೆಹಲಿ ಮತ್ತು ಮುಂಬೈನಲ್ಲಿ ಈ ಬಗ್ಗೆ ನೇರವಾಗಿ ಪೊಲೀಸ್ ಇಲಾಖೆಗೆ ಟ್ಯಾಗ್ ಮಾಡಿ, ತನಿಖೆಗೆ ಆಗ್ರಹ ಮಾಡಿದ್ದಾರೆ. ಪತ್ರಕರ್ತೆಯೊಬ್ಬರ ದೂರನ್ನು ಪರಿಗಣಿಸಿ, ದೆಹಲಿ ಸೈಬರ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಕೇಂದ್ರ ಮಹಿಳಾ ಆಯೋಗವೂ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದು, ದೆಹಲಿ ಪೊಲೀಸರಲ್ಲಿ ವರದಿ ಕೇಳಿದೆ. ಇದೇ ವೇಳೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಶಿವಸೇನೆ ನಾಯಕಿ ಪ್ರಿಯಾಂಕ ಚತುರ್ವೇದಿ ಸೇರಿದಂತೆ ಪ್ರಮುಖ ನಾಯಕರು ಈ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಪ್ರಿಯಾಂಕಾ ಅವರು, ಈ ಬಗ್ಗೆ ಆರು ತಿಂಗಳ ಹಿಂದೆಯೇ ಸುಳ್ಳಿ ಡೀಲ್ಸ್ ಬಗ್ಗೆ ಕೇಂದ್ರ ಐಟಿ ಸಚಿವರಿಗೆ ದೂರು ನೀಡಿದ್ದ ಪ್ರತಿಯನ್ನು ಟ್ವೀಟ್ ಮಾಡಿದ್ದಾರೆ.

ಆರು ತಿಂಗಳ ಹಿಂದೆ ಸುಳ್ಳಿ ಡೀಲ್ಸ್ ಬಂದಿತ್ತು !
ಆರು ತಿಂಗಳ ಹಿಂದೆಯೂ ಇದೇ ರೀತಿ ಸುಳ್ಳಿ ಡೀಲ್ಸ್ ಹೆಸರಿನಲ್ಲಿ ಏಪ್ ಸೃಷ್ಟಿಯಾಗಿತ್ತು. ಪ್ರಮುಖ ಮುಸ್ಲಿಮ್ ಮಹಿಳೆಯರ ಫೋಟೋಗಳನ್ನು ಸೋಶಿಯಲ್ ಮೀಡಿಯಾದಿಂದ ಕದ್ದು ಅವರನ್ನು ಹರಾಜಿಗಿಡಲಾಗಿದೆ ಎಂದು ಏಪ್ ನಲ್ಲಿ ಪೋಸ್ಟ್ ಮಾಡಲಾಗಿತ್ತು. ಕಳೆದ ಜುಲೈ 4ರಂದು ಈ ಬಗ್ಗೆ ಹಲವಾರು ಮಂದಿ ಸುಳ್ಳಿ ಡೀಲ್ಸ್ ಏಪ್ ಸ್ಕ್ರೀನ್ ಶಾಟ್ ತೆಗೆದು ಟ್ವಿಟರ್ ನಲ್ಲಿ ಪೋಸ್ಟ್ ಮಾಡಿದ್ದರು. ಕ್ರಮ ಕೈಗೊಳ್ಳಲು ಆಗ್ರಹ ಮಾಡಿದ್ದರು. ಗಿಟ್ ಹಬ್ ಎನ್ನುವ ಸೋಶಿಯಲ್ ಮೀಡಿಯಾ ತಾಣದಲ್ಲಿ ಸುಳ್ಳಿ ಡೀಲ್ಸ್ ಎನ್ನುವ ಗ್ರೂಪ್ ರಚಿಸಿ, sulli deals of the day ಎಂದು ಟ್ಯಾಗ್ ಲೈನ್ ಬರೆಯಲಾಗಿತ್ತು.
ಸುಳ್ಳಿ ಎನ್ನುವುದು ಮಹಿಳೆಯರನ್ನು ಅವಹೇಳನಕಾರಿಯಾಗಿ ಸಂಬೋಧಿಸುವ ಪದ. ಮುಸ್ಲಿಂ ಮಹಿಳೆಯರ ಫೋಟೋಗಳನ್ನೇ ಟಾರ್ಗೆಟ್ ಮಾಡಿ, ಅವಹೇಳಕಾರಿಯಾಗಿ ಚಿತ್ರಿಸಿ ಪೋಸ್ಟ್ ಮಾಡಿದ್ದು ವಿವಾದಕ್ಕೆ ಕಾರಣವಾಗಿತ್ತು. ಸುಳ್ಳಿ ಡೀಲ್ಸ್ ಬಗ್ಗೆ ದೆಹಲಿ ಮತ್ತು ಉತ್ತರ ಪ್ರದೇಶಗಳಲ್ಲಿ ಎಫ್ಐಆರ್ ದಾಖಲಾಗಿತ್ತು. ಆದರೆ, ಆ ಬಗ್ಗೆ ಯಾವುದೇ ರೀತಿಯ ಕ್ರಮವಾಗಲೀ, ಗಿಟ್ ಹಬ್ ವಿರುದ್ಧ ನೋಟೀಸ್ ನೀಡುವುದಾಗಲೀ ನಡೆದಿರಲಿಲ್ಲ. ಈಗ ಅದೇ ಮಾದರಿಯಲ್ಲಿ ಮತ್ತೆ ಬುಲ್ಲಿ ಬಾಯಿ ಎನ್ನುವ ಹೆಸರಲ್ಲಿ ಏಪ್ ಸೃಷ್ಟಿಸಿ ಮುಸ್ಲಿಂ ಮಹಿಳೆಯರ ಫೋಟೋಗಳನ್ನು ಕದ್ದು ಪೋಸ್ಟ್ ಮಾಡಿದ್ದು, ದೆಹಲಿಯಲ್ಲಿ ಆಕ್ರೋಶದ ಅಲೆ ಎಬ್ಬಿಸಿದೆ.
ಇದೀಗ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಐಟಿ ಸಚಿವ ಅಶ್ವಿನ್ ವೈಷ್ಣವ್, ಪೊಲೀಸರಿಗೆ ತನಿಖೆಗೆ ಆದೇಶ ಮಾಡಿದ್ದಾರೆ. ದೆಹಲಿ ಸೈಬರ್ ಪೊಲೀಸರು ಎರಡು ಧರ್ಮಗಳ ನಡುವೆ ಕಿಡಿ ಹಬ್ಬಿಸುವ ಉದ್ದೇಶ ಇದರ ಹಿಂದಿರುವುದರಿಂದ ದೇಶದ್ರೋಹದ ಪ್ರಕರಣ ದಾಖಲಿಸಿದ್ದಾರೆ. 153 ಎ, 153 ಬಿ, 354 ಎ ಮತ್ತು 509 ಅಡಿ ಮಹಿಳೆಯರಿಗೆ ಲೈಂಗಿಕ ಕಿರುಕುಳ ಪ್ರಕರಣವನ್ನೂ ದಾಖಲು ಮಾಡಿದ್ದು ಸೈಬರ್ ತಜ್ಞರ ಮೂಲಕ ಇದರ ಹಿಂದಿರುವ ಜಾಲದ ಬಗ್ಗೆ ತನಿಖೆ ಆರಂಭಿಸಿದ್ದಾರೆ.
Once again, Muslim women were targeted and harassed by an unidentified group on the internet by uploading their photos and auctioning them online. The photos were uploaded on an app called GitHub by the name of 'Bulli Bai' on Saturday (January 1, 2022).
22-11-25 08:03 pm
HK News Desk
DK Shivakumar: ಸಿಎಂ ಅವರೇ ಐದು ವರ್ಷ ಇರೋದಾಗಿ ಹೇಳ...
22-11-25 02:25 pm
ಸಿಎಂ ಬದಲಾವಣೆ ಬಗ್ಗೆ ಹೈಕಮಾಂಡ್ ಹೇಳಿದ್ಯಾ? ಮತ್ಯಾಕೆ...
21-11-25 05:25 pm
ವಾಹನ ಸವಾರರಿಗೆ ಗುಡ್ ನ್ಯೂಸ್ ; ಮತ್ತೆ 50% ದಂಡ ವ...
21-11-25 10:19 am
CM. Siddaramaiah, CM SEAT: ಯಾವ ಕ್ರಾಂತಿಯೂ ಇಲ್ಲ...
20-11-25 03:30 pm
23-11-25 09:21 pm
HK News Desk
ದುಬೈ ಏರ್ ಶೋನಲ್ಲಿ ಭಾರತೀಯ ತೇಜಸ್ ಯುದ್ಧ ವಿಮಾನ ಪತನ...
21-11-25 06:10 pm
ಶಬರಿಮಲೆ ಚಿನ್ನ ಲೂಟಿ ಪ್ರಕರಣ ; ಕೊನ್ನಿ ಕ್ಷೇತ್ರದ ಸ...
21-11-25 02:26 pm
ಶ್ರೀಲಂಕಾದಲ್ಲಿ ನ್ಯೂಜಿಲೆಂಡ್ ಮಹಿಳೆಯ ಜೊತೆ ಯುವಕನ ಅ...
19-11-25 06:47 pm
ಕೆಂಪು ಕೋಟೆ ಬ್ಲಾಸ್ಟ್ ಕೇಸ್ ; ಅಲ್ ಫಲಾಹ್ ವಿವಿಗೆ ಸ...
19-11-25 11:10 am
23-11-25 03:25 pm
Udupi Correspondent
Mangalore Rain, Puttur: ಮಂಗಳೂರು, ಪುತ್ತೂರಿನಲ್ಲ...
22-11-25 10:44 pm
ಡಿ.3ರಂದು ಸಿದ್ದರಾಮಯ್ಯ ಸಿಎಂ ಆಗಿಯೇ ಕೋಣಾಜೆಗೆ ಬರಲಿ...
22-11-25 05:46 pm
Drem Deal Group Fraud, Mangalore: IMPACT: ಕೆಎ...
22-11-25 03:49 pm
ಈ ಬಾರಿ ಕಂಬಳದಲ್ಲಿ ಸಬ್ ಜೂನಿಯರ್ ಓಟ ಇರಲ್ಲ ; 24 ಗಂ...
21-11-25 10:39 pm
23-11-25 07:17 pm
Bangalore Correspondent
Bangalore Atm Van Robbery, Arrest: ಮೆಗಾ ದರೋಡೆ...
22-11-25 07:55 pm
Bangalore Robbery, Police Arrested: ಮಹಾನ್ ದರೋ...
21-11-25 11:07 pm
ಮಲ್ಪೆ ಶಿಪ್ ಯಾರ್ಡ್ ನಿಂದ ಪಾಕಿಸ್ತಾನಕ್ಕೆ ಮಾಹಿತಿ ಸ...
21-11-25 05:11 pm
ಬೆಂಗಳೂರು ಎಟಿಎಂ ಹಣ ದರೋಡೆ ಪ್ರಕರಣ ; ತಿರುಪತಿಯಲ್ಲಿ...
20-11-25 10:53 pm