ಬ್ರೇಕಿಂಗ್ ನ್ಯೂಸ್
14-02-22 10:41 pm Mangalore Correspondent ಕ್ರೈಂ
Photo credits : Headline Karnataka
ಉಳ್ಳಾಲ, ಫೆ.14 : ಸೋಮೇಶ್ವರ, ಉಚ್ಚಿಲ, ಬಟ್ಟಂಪಾಡಿಯಲ್ಲಿ ನಾಯಿ ಕೊಡೆಗಳಂತೆ ತಲೆಯೆತ್ತಿರುವ ಅಕ್ರಮ ಗೆಸ್ಟ್ ಹೌಸ್ ಗಳ ಮೇಲೆ ಕ್ರಮ ಕೈಗೊಳ್ಳಲು ಆಗದ ಸೋಮೇಶ್ವರ ಪುರಸಭೆ ಅಧಿಕಾರಿಗಳು ಸ್ಥಳೀಯ ಮೀನುಗಾರರೊಬ್ಬರು ತನ್ನ ಮನೆಯ ಬಳಿ ಕಟ್ಟಿದ್ದ ದೋಣಿ ಶೆಡ್ಡನ್ನ ನೆಲಸಮ ಮಾಡಿದ್ದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಬೋವಿ ಸಮಾಜದ ಸುಖೇಶ್ ಉಚ್ಚಿಲ್ ಎಂಬವರು ನಾಡ ದೋಣಿ ಮೀನುಗಾರಿಕೆ ನಡೆಸುತ್ತಿದ್ದು ಉಚ್ಚಿಲ, ಬಟ್ಟಂಪಾಡಿಯ ಸಮುದ್ರ ತೀರದಲ್ಲಿ ತಮಗೆ ಸೇರಿದ ಡೋರ್ ನಂಬರ್ ಇರುವ ಕುಮ್ಕಿ ಜಾಗದಲ್ಲಿ ದೋಣಿಗಳನ್ನ ನಿಲುಗಡೆ ಮಾಡಲು ಶೆಡ್ ನಿರ್ಮಿಸಲಿಕ್ಕಾಗಿ ಆವರಣ ಗೋಡೆ ನಡೆಸುತ್ತಿದ್ದರು. ಈ ಬಗ್ಗೆ ಸುಖೇಶ್ ಅವರಿಗೆ ಯಾವುದೇ ನೋಟೀಸು ನೀಡದೆ ಇಂದು ದಾಳಿ ನಡೆಸಿರುವ ಸೋಮೇಶ್ವರ ಪುರಸಭೆ ಪೌರಾಯುಕ್ತೆ ವಾಣಿ ಆಳ್ವ ಮತ್ತು ವ್ಯವಸ್ಥಾಪಕ ಕೃಷ್ಣ ಮತ್ತು ಪಟಾಲಂ ಜಿಲ್ಲಾಧಿಕಾರಿಗಳ ಆದೇಶದ ನೆಪದಲ್ಲಿ ಪೊಲೀಸರ ರಕ್ಷಣೆಯೊಂದಿಗೆ ಜೆಸಿಬಿ ಮೂಲಕ ಗೋಡೆಯನ್ನು ಕೆಡವಿ ಹಾಕಿದೆ.
ವಿಶೇಷವೆಂದರೆ, ಸುಖೇಶ್ ಅವರ ದೋಣಿ ಶೆಡ್ಡಿನ ಪಕ್ಕದಲ್ಲೇ ಇರುವ ಅಕ್ರಮ ರೆಸಾರ್ಟ್ ಮಾಲೀಕರು ಸಿಆರ್ ಝೆಡ್ ಕಾಯ್ದೆ ಉಲ್ಲಂಘಿಸಿ ಸಮುದ್ರದ ತೀರದಲ್ಲಿ ಕಾಂಕ್ರೀಟ್ ಆವರಣ ಗೋಡೆ ನಿರ್ಮಿಸುತ್ತಿದ್ದು ಅದು ಮಾತ್ರ ವಾಣಿ ಆಳ್ವ ಕಣ್ಣಿಗೆ ಕಂಡಿಲ್ಲ. ಇಲ್ಲಿನ ಬಹುತೇಕ ಗೆಸ್ಟ್ ಹೌಸ್ ಗಳದ್ದು ಇದೇ ಕಥೆಯಾಗಿದ್ದು ಎಲ್ಲವೂ ಸಿಆರ್ ಝಡ್ ಪ್ರದೇಶದಲ್ಲಿ ಅಕ್ರಮವಾಗಿ ಕಾರ್ಯಾಚರಿಸುತ್ತಿವೆ ಎನ್ನುವ ಮಾಹಿತಿಗಳಿವೆ. ಈ ಬಗ್ಗೆಯೂ ತನಿಖೆ ನಡೆಸಿ ಎಂದು ಹೇಳಿದ ಸುಖೇಶ್ ಅವರಿಗೆ, ಅದನ್ನೆಲ್ಲ ನೀನು ಹೇಳ ಬೇಡ ಎಂದು ವಾಣಿ ಗದರಿಸಿದ್ದಾರಂತೆ.
ಸಿಆರ್ ಝಡ್ ವ್ಯಾಪ್ತಿಯಲ್ಲಿ ಅಲ್ಲಿನ ಮೂಲ ನಿವಾಸಿಗಳಿಗೆ ವಾಸಿಸಲು ಕಾನೂನಿನಡಿಯಲ್ಲಿ ಹಕ್ಕಿದೆ. ಅದರಂತೆಯೇ ನಾನು ಇಲ್ಲಿನ ಮೂಲ ನಿವಾಸಿ. ಯಾವುದೇ ಮುನ್ಸೂಚನೆ, ನೋಟೀಸು ನೀಡದೆ ನನ್ನ ದೋಣಿ ಶೆಡ್ ನ ಆವರಣ ಗೋಡೆಯನ್ನ ಕೆಡವಿದ ಪರಿಣಾಮ ಸುಮಾರು 75,000 ರೂಪಾಯಿ ನಷ್ಟ ಸಂಭವಿಸಿದೆ. ಇದಕ್ಕೆ ಕಾರಣರಾದ ಜಿಲ್ಲಾಧಿಕಾರಿ ರಾಜೇಂದ್ರ, ಪೌರಾಯುಕ್ತೆ ವಾಣಿ ಆಳ್ವ, ಅಧಿಕಾರಿ ಕೃಷ್ಣ ಮತ್ತಿತರರ ವಿರುದ್ದ ಹೈಕೋರ್ಟ್ ನಲ್ಲಿ ದಾವೆ ಹೂಡುವುದಾಗಿ ಮೀನುಗಾರ ಸುಖೇಶ್ ಉಚ್ಚಿಲ್ ಹೇಳಿದ್ದಾರೆ.
ವಾಣಿ ಆಳ್ವ ಮತ್ತು ಕೃಷ್ಣ ಎಂಬ ಅಧಿಕಾರಿಗಳು ಈ ಹಿಂದೆ ಉಳ್ಳಾಲ ನಗರಸಭೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ವಾಣಿ ಉಳ್ಳಾಲ ಪೌರಾಯುಕ್ತೆ ಆಗಿದ್ದ ಸಂದರ್ಭದಲ್ಲಿ ಸಾರ್ವಜನಿಕರು ಅವರ ವಿರುದ್ಧ ಲೋಕಾಯುಕ್ತಕ್ಕೆ ದೂರುಗಳ ಸರಮಾಲೆಯನ್ನೇ ನೀಡಿದ್ದರು. ಇನ್ನು ಕೃಷ್ಣ ಎಂಬ ಅಧಿಕಾರಿ ಒಂದು ವರ್ಷದ ಹಿಂದಷ್ಟೆ ಹೊಸ ಕಾರು ಖರೀದಿಸಿದ ಮೂಡಲ್ಲಿ ಎಣ್ಣೆ ಹೊಡೆದು ಕಾರು ಚಲಾಯಿಸಿದ್ದು ನೇತ್ರಾವತಿ ಸೇತುವೆಯಲ್ಲಿ ಐದು ದಿವಸದ ಅಂತರದಲ್ಲಿ ಹಸೆಮಣೆ ಏರಲಿಕ್ಕಿದ್ದ ಉಳ್ಳಾಲದ ಸ್ಕೂಟರ್ ಸವಾರ ಯುವಕನನ್ನ ಬಲಿ ತೆಗೆದಿದ್ದ ಪ್ರಕರಣದ ಆರೋಪಿ. ಉಳ್ಳಾಲದ ಶಾಸಕ ಖಾದರ್ ಮತ್ತು ಸ್ಥಳೀಯ ಬಿಜೆಪಿಯ ಬಿಲ್ಲವ ಮುಖಂಡನ ಕೃಪೆ ಇವರ ಮೇಲಿದೆ ಎನ್ನುವ ಮಾತು ಕೇಳಿಬರುತ್ತಿದೆ.
ಉಚ್ಚಿಲ ಬಟ್ಟಂಪಾಡಿ ಕಡಲ ತೀರದಲ್ಲಿ ಮಾಜಿ ಭ್ರಷ್ಟ ಪೊಲೀಸ್ ಅಧಿಕಾರಿಗಳು, ಶಾಸಕರು, ಕಾಳಧಂದೆ ಹಣ ಉಳ್ಳವರು ಕೇವಲ ಡೋರ್ ನಂಬರ್ ನಲ್ಲೇ ಪರವಾನಿಗೆ ಇಲ್ಲದೆ 20 ರಷ್ಟು ಅಕ್ರಮ ಗೆಸ್ಟ್ ಹೌಸ್ ಗಳನ್ನ ನಡೆಸುತ್ತಿದ್ದಾರೆ. ಗೆಸ್ಟ್ ಹೌಸ್‌ಗಳಲ್ಲಿ ಸ್ಥಳೀಯ ಪೊಲೀಸರ ಕೃಪೆಯಲ್ಲಿ ಅಹೋರಾತ್ರಿ ನಂಗಾನಾಚ್, ಡಿಜೆ ಪಾರ್ಟಿಗಳು ನಡೆಯುತ್ತದೆ. ಕರ್ಕಶ ಡಿಜೆ ಸದ್ದಿನ ಬಗ್ಗೆ ಸ್ಥಳೀಯರು ಮೇಲಧಿಕಾರಿಗಳಿಗೆ ದೂರಿತ್ತರೂ ಡಿಜೆ ಸೌಂಡ್ ವ್ಯಾಟ್ಸ್ ಎಷ್ಟೆಂದು ಕೇಳುತ್ತಾರೆ ಎನ್ನುವ ಮಾತನ್ನು ಅಲ್ಲಿನವರು ಹೇಳುತ್ತಾರೆ. ಇಷ್ಟೆಲ್ಲ ಎಡವಟ್ಟು, ಅಕ್ರಮ ರಾಜಾರೋಷ ಇದ್ದರೂ ಬಡ ಮೀನುಗಾರ ಶೆಡ್ ಹಾಕಿದ್ದಾನೆ ಎಂಬ ಕಾರಣಕ್ಕೆ ಅದನ್ನು ಏಕಾಏಕಿ ಕೆಡವಿ ಹಾಕಿದ್ದು ಅಧಿಕಾರಿಗಳ ಹಿಂಬಾಗಿಲ ಕಾರುಬಾರಿಗೆ ಕನ್ನಡಿ ಹಿಡಿಯುವಂತಿದೆ.
Mangalore Illegal guest house built in ullal, officials involved keep quite. It is also alleged that more than 20 guests houses are running illegally without any door no or permission. The Panchyath itself is being involved.
30-07-25 06:28 pm
Bangalore Correspondent
Dharmasthala Burial Site, Atm, Pan Card Found...
30-07-25 05:42 pm
Al Qaeda Arrest, Bangalore: ಕರ್ನಾಟಕ ರಾಜಧಾನಿಗೂ...
30-07-25 11:40 am
Durgaamba Bus Accident, Shivamogga: ಮಂಗಳೂರಿನಿ...
30-07-25 10:33 am
Kerala Nurse Nimisha Priya: ಕೇರಳ ನರ್ಸ್ ನಿಮಿಷ...
29-07-25 01:31 pm
30-07-25 09:06 am
HK News Desk
ಜಾರ್ಖಂಡ್ ನಲ್ಲಿ ಭೀಕರ ರಸ್ತೆ ಅಪಘಾತ ; ಸಿಲಿಂಡರ್...
29-07-25 11:58 am
ಕಾಶ್ಮೀರದಲ್ಲಿ ಭಾರತೀಯ ಸೇನೆಯಿಂದ ಆಪರೇಶನ್ ಮಹಾದೇವ್,...
28-07-25 11:07 pm
ಮತಾಂತರ ಇಲ್ಲದೆ ಅಂತರ್ ಧರ್ಮೀಯ ವಿವಾಹ ಕಾನೂನು ಬಾಹಿರ...
28-07-25 12:28 pm
Israel, Arabic Language: ಇಸ್ರೇಲ್ ಸೈನಿಕರಿಗೆ ಇಸ...
26-07-25 03:31 pm
30-07-25 11:05 pm
Mangalore Correspondent
Dharmasthala Second Day of Exhumation, SIT: ಶ...
30-07-25 03:00 pm
Shirur Landslide, Malayalam Film: ಶಿರೂರು ಗುಡ್...
30-07-25 09:04 am
No Evidence, Dharmasthala Burial, SIT: ಹೆಣ ಹೂ...
29-07-25 09:56 pm
Dharmasthala case, SIT Begins Excavation, Upd...
29-07-25 02:20 pm
30-07-25 10:42 pm
Bangalore Correspondent
Mangalore Crime, Arrest: ಉದ್ಯಮಿಗಳಿಗೆ ನಕಲಿ ಆಸ್...
30-07-25 08:48 pm
Mysuru Drugs, Crime, Mumbai Police: ಮೈಸೂರಿನಲ್...
30-07-25 11:37 am
ಮಕ್ಕಳಾಗಿಲ್ಲ ಅಂತ ಗಂಡನ ಮೇಲೆ ಸಿಟ್ಟು ; ಪ್ರಿಯಕರನಿಂ...
29-07-25 08:54 pm
Honor Killing in Chitradurga: ತಮ್ಮನಿಗೆ ಎಚ್ಐವ...
29-07-25 07:17 pm