ಪಾಕಿಸ್ಥಾನಕ್ಕೆ ರಹಸ್ಯ ಮಾಹಿತಿ ಸೋರಿಕೆ ; ನಕಲಿ ನೋಟು ಜಾಲ, ಭಯೋತ್ಪಾದಕರಿಗೆ ಹಣಕಾಸು ನೆರವು, ಕಾಶ್ಮೀರದಲ್ಲಿ ತನಿಖಾಧಿಕಾರಿ ಆಗಿದ್ದ ಎನ್ಐಎ ಎಸ್ಪಿ ಬಂಧನ 

19-02-22 01:28 pm       HK Desk news   ಕ್ರೈಂ

ಪಾಕಿಸ್ಥಾನದ ಗುಪ್ತಚರ ಸಂಸ್ಥೆ ಐಎಸ್ಐ ಅಣತಿಯಂತೆ ಉಗ್ರಗಾಮಿ ಸಂಘಟನೆ ಲಷ್ಕರ್​ ಇ- ತೊಯ್ಬಾ ಉಗ್ರ ಸಂಘಟನೆಗೆ ಭಾರತದ ರಹಸ್ಯ ಮಾಹಿತಿಗಳನ್ನು ಸೋರಿಕೆ ಮಾಡಿದ ಆರೋಪದಲ್ಲಿ ಎನ್ಐಎ ತಂಡದಲ್ಲಿ ಅಧಿಕಾರಿಯಾಗಿದ್ದ ಮಾಜಿ ಐಪಿಎಸ್​ ಅಧಿಕಾರಿ ಒಬ್ಬರನ್ನು ಎನ್ಐಎ ತನಿಖಾ ತಂಡ ಬಂಧಿಸಿದೆ. 

ನವದೆಹಲಿ, ಫೆ.19 : ಪಾಕಿಸ್ಥಾನದ ಗುಪ್ತಚರ ಸಂಸ್ಥೆ ಐಎಸ್ಐ ಅಣತಿಯಂತೆ ಉಗ್ರಗಾಮಿ ಸಂಘಟನೆ ಲಷ್ಕರ್​ ಇ- ತೊಯ್ಬಾ ಉಗ್ರ ಸಂಘಟನೆಗೆ ಭಾರತದ ರಹಸ್ಯ ಮಾಹಿತಿಗಳನ್ನು ಸೋರಿಕೆ ಮಾಡಿದ ಆರೋಪದಲ್ಲಿ ಎನ್ಐಎ ತಂಡದಲ್ಲಿ ಅಧಿಕಾರಿಯಾಗಿದ್ದ ಮಾಜಿ ಐಪಿಎಸ್​ ಅಧಿಕಾರಿ ಒಬ್ಬರನ್ನು ಎನ್ಐಎ ತನಿಖಾ ತಂಡ ಬಂಧಿಸಿದೆ. 

ಹಿಮಾಚಲ ಪ್ರದೇಶ ಮೂಲದ ಅರವಿಂದ್ ದಿಗ್ವಿಜಯ್​ ನೇಗಿ ಬಂಧಿತ ವ್ಯಕ್ತಿ. 2011ರಲ್ಲಿ ಐಪಿಎಸ್ ಬ್ಯಾಚ್‌ಗೆ ಬಡ್ತಿ ಪಡೆದಿದ್ದ ಪೊಲೀಸ್ ಅಧಿಕಾರಿ ನೇಗಿ ಎರಡು ವರ್ಷಗಳ ಹಿಂದೆ ಕಾಶ್ಮೀರದಲ್ಲಿ ಎನ್ಐಎ ಎಸ್ಪಿಯಾಗಿದ್ದ ವೇಳೆ ತನಿಖಾ ತಂಡದ ಕಾರ್ಯಾಚರಣೆ ಕುರಿತ ಮಾಹಿತಿಗಳಿದ್ದ ದಾಖಲೆಯನ್ನು ಪಾಕಿಸ್ತಾನಕ್ಕೆ ನೀಡಿದ್ದರು. ಇದಕ್ಕಾಗಿ ದೊಡ್ಡ ಮೊತ್ತದ ಹಣವನ್ನು ಪಡೆದಿದ್ದರು. 

NIA arrests IPS officer for 'leaking' secret documents to LeT terror group  - The Economic Times

ಈ ಬಗ್ಗೆ ಸಂಶಯ ಹೊಂದಿದ್ದ ರಾಷ್ಟ್ರೀಯ ತನಿಖಾ ದಳವು ಕಳೆದ ನವೆಂಬರ್ 6 ರಂದು ಪ್ರಕರಣ ದಾಖಲಿಸಿತ್ತು. ಭಾರತದಲ್ಲಿ ಭಯೋತ್ಪಾದಕ ಚಟುವಟಿಕೆಗಳ ಯೋಜನೆ ಮತ್ತು ಕಾರ್ಯಗತಗೊಳಿಸಲು ಬೆಂಬಲವನ್ನು ನೀಡುವುದಕ್ಕಾಗಿ ನಿಷೇಧಿತ ಲಷ್ಕರ್-ಇ-ತೊಯ್ಬಾ ಸಂಘಟನೆಗೆ ರಹಸ್ಯ ಮಾಹಿತಿ ಸೋರಿಕೆ ಮಾಡಿದ ಆರೋಪ ಎದುರಿಸುತ್ತಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಎನ್‌ಐಎ ಈ ಹಿಂದೆ ಆರು ಮಂದಿಯನ್ನು ಬಂಧಿಸಿತ್ತು. 

ಈ ಬಗ್ಗೆ ಎನ್ಐಎ ಅಧಿಕಾರಿಗಳು ಹಿಮಾಚಲ ಪ್ರದೇಶದ ಕಿನಾನೂರಿನಲ್ಲಿರುವ ನೇಗಿ ಮನೆ ಸೇರಿದಂತೆ ಹಲವು ಕಡೆ ದಾಳಿ ನಡೆಸಿದ್ದರು. ನೇಗಿ ಐಪಿಎಸ್ ಅಧಿಕಾರಿಯಾಗಿ ಭಡ್ತಿ ಪಡೆದ ಬಳಿಕ 11 ವರ್ಷಗಳ ಕಾಲ ಎನ್ಐಎ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಜಮ್ಮು ಕಾಶ್ಮೀರದಲ್ಲಿ ನಕಲಿ ನೋಟುಗಳ ಚಲಾವಣೆ, ಐಸಿಸ್ ಉಗ್ರವಾದಿ ಸಂಘಟನೆಗೆ ಯುವಕರ ಸೇರ್ಪಡೆ, ಉಗ್ರವಾದಿ ಸಂಘಟನೆಗಳಿಗೆ ಹಣಕಾಸು ನೆರವು ನೀಡುತ್ತಿದ್ದ ಪ್ರಕರಣದ ಬಗ್ಗೆ ಎನ್ಐಎ ಎಸ್ಪಿಯಾಗಿದ್ದ ಅರವಿಂದ್ ನೇಗಿ ತನಿಖೆ ನಡೆಸುತ್ತಿದ್ದರು.

New Delhi, Feb 18 (PTI) Cracking down on its own officers, the National Investigation Agency (NIA) on Friday arrested IPS officer Arvind Digvijay Negi, who was earlier posted as a Superintendent of Police (SP) in the agency, for allegedly leaking secret documents to an over ground worker of the banned Lashkar-e-Taiba terror group, according to officials.