ಬ್ರೇಕಿಂಗ್ ನ್ಯೂಸ್
13-08-22 07:41 pm Source: Vijayakarnataka ಡಿಜಿಟಲ್ ಟೆಕ್
ಮೊಬೈಲ್ ಮಾರುಕಟ್ಟೆಯಲ್ಲಿ ವೈವಿಧ್ಯಮಯ ಸ್ಮಾರ್ಟ್‌ಫೋನ್‌ಗಳ ಮೂಲಕ ಟ್ರೆಂಡ್ ಸೃಷ್ಟಿಸುತ್ತಿರುವ ಜನಪ್ರಿಯ ಸ್ಮಾರ್ಟ್‌ಫೋನ್ ಬ್ರ್ಯಾಂಡ್ Motorola ತನ್ನ ಮೊಟ್ಟ ಮೊದಲ 200 MP ಕ್ಯಾಮೆರಾ ಸ್ಮಾರ್ಟ್‌ಫೋನನ್ನು ಬಿಡುಗಡೆ ಮಾಡಿದೆ. ಜಾಗತಿಕ ಫ್ಲಾಗ್‌ಶಿಪ್ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಗಮನಸೆಳಯುವಂತಹ 144Hz ರಿಫ್ರೆಶ್ ರೇಟ್ ಬೆಂಬಲಿಸುವ FHD+ poOLED ಡಿಸ್‌ಪ್ಲೇ, Snapdragon 8+ Gen 1 SoC ಪ್ರೊಸೆಸರ್, 200 MP ಪ್ರಾಥಮಿಕ Samsung ISOCELL HP1 ಕ್ಯಾಮೆರಾ ಮತ್ತು 60 MP Omnivision ಸೆಲ್ಫಿ ಕ್ಯಾಮೆರಾದಂತಹ ವೈಶಿಷ್ಟ್ಯಗನ್ನು ಹೊತ್ತು Moto X30 Pro ಪ್ರೀಮಿಯಂ ಫ್ಲಾಗ್‌ಶಿಪ್ ಸ್ಮಾರ್ಟ್‌ಟಫೋನ್ ಮಾರುಕಟ್ಟೆಗೆ ಎಂಟ್ರಿ ನೀಡಿದೆ. ಹಾಗಾದರೆ, ನೂತನ Moto X30 Pro ಸ್ಮಾರ್ಟ್‌ಫೋನ್ ಬೆಲೆಗಳು ಎಷ್ಟು ಎಂಬುದನ್ನು ನೋಡೋಣ ಬನ್ನಿ.
Moto X30 Pro ಸ್ಮಾರ್ಟ್‌ಫೋನಿನ ವೈಶಿಷ್ಟ್ಯಗಳು ನೂತನ Moto X30 Pro ಸ್ಮಾರ್ಟ್‌ಫೋನ್ ಸ್ಕ್ರೀನ್ ಎಲ್ಲಾ ಕಡೆಗಳಲ್ಲಿ ಕನಿಷ್ಠ ಬೆಜೆಲ್‌ಗಳಿಂದ ಆವೃತವಾಗಿರುವ 6.73 ಇಂಚಿನ ಫುಲ್ HD+ pOLED ಡಿಸ್‌ಪ್ಲೇಯನ್ನು ಹೊಂದಿದೆ. 20:9 ರಚನೆಯ ಅನುಪಾತದಲ್ಲಿರುವ ಈ ಡಿಸ್‌ಪ್ಲೇ 144Hz ರಿಫ್ರೆಶ್ ರೇಟ್, 1080 x 2400 ಪಿಕ್ಸೆಲ್ಸ್, 1,200 ನಿಟ್ಸ್ ಬ್ರೈಟ್‌ನೆಸ್, HDR10+ ಬೆಂಬಲ ಮತ್ತು ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ನಂತಹ ವೈಶಿಷ್ಟ್ಯಗಳನ್ನು ಹೊಂದಿದೆ. ಹುಡ್ ಅಡಿಯಲ್ಲಿ, Snapdragon 8+ Gen 1 SoC ಪ್ರೊಸೆಸರ್ ಅನ್ನು ಹೊಂದಿರುವ Moto X30 Pro ಸ್ಮಾರ್ಟ್‌ಫೋನ್ ಅನ್ನು 8GB RAM + 128GB, 12GB RAM + 256GB ಹಾಗೂ 12GB RAM ಮತ್ತು 512GB ಇಂಟರ್ ಸ್ಟೋರೇಜ್ ಸಾಮರ್ಥ್ಯದ ವೇರಿಯೆಂಟ್ ಆಯ್ಕೆಗಳಲ್ಲಿ ಪರಿಚಯಿಸಲಾಗಿದ್ದು, ಇದು ಆಂಡ್ರಾಯ್ಡ್ 12 ಓಎಸ್ ನಲ್ಲಿ ಕಾರ್ಯನಿರ್ವಹಿಸಲಿದೆ ಎಂದು ಕಂಪೆನಿ ತಿಳಿಸಿದೆ.
ಇನ್ನು ಮೊದಲೇ ಹೇಳಿದಂತೆ, ನೂತನ Moto X30 Pro ಸ್ಮಾರ್ಟ್‌ಫೋನಿನಲ್ಲಿ 200 MP ಪ್ರಾಥಮಿಕ Samsung ISOCELL HP1 ಪ್ರಾಥಮಿಕ ಕ್ಯಾಮೆರಾವಿರುವ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು ನೀಡಲಾಗಿದೆ. ಈ ಕ್ಯಾಮೆರಾವು ಡೀಫಾಲ್ಟ್ ಆಗಿ 12.5 MP ರೆಸಲ್ಯೂಶನ್‌ನಲ್ಲಿ ಫೋಟೋಗಳನ್ನು ಸೆರೆಹಿಡಿಯಲಿದ್ದರೆ,2x ಆಪ್ಟಿಕಲ್ ಜೂಮ್‌ನೊಂದಿಗೆ 12 MP ಟೆಲಿಫೋಟೋ ಘಟಕದೊಂದಿಗೆ ಜೋಡಿಸಲಾಗಿರುವ 50 MP ಅಲ್ಟ್ರಾವೈಡ್ ಶೂಟರ್ ಜೊತೆಗೆ 200 MP ರೆಸಲ್ಯೂಶನ್‌ನಲ್ಲಿ ಫೋಟೋಗಳನ್ನು ಚಿತ್ರಿಸಬಹುದು ಎಂದು ಮೊಟೊರೊಲಾ ಕಂಪೆನಿ ತಿಳಿಸಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ 60 MP ಸಾಮರ್ಥ್ಯದ Omnivision ನ OV60a ಕ್ಯಾಮೆರಾವನ್ನು ಅಳವಡಿಸಲಾಗಿದ್ದು, ಇಷ್ಟು ಕ್ಯಾಮೆರಾ ಸಾಮರ್ಥ್ಯಗಳನ್ನು ಹೊಂದಿರುವ ವಿಶ್ವ ಮೊದಲ ಸ್ಮಾರ್ಟ್‌ಫೋನ್ ಇದಾಗಿದೆ.
Moto X30 Pro ಸ್ಮಾರ್ಟ್‌ಫೋನಿನ ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, Wi-Fi, ಬ್ಲೂಟೂತ್, GPS ಮತ್ತು ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ರೀಡರ್ ನಂತಹ ವೈಶಿಷ್ಟ್ಯಗಳಿವೆ. ಬ್ಯಾಟರಿ ವಿಭಾಗದಲ್ಲಿ, Moto X30 Pro ಸ್ಮಾರ್ಟ್‌ಫೋನ್ 125W ವೇಗದ ಚಾರ್ಜಿಂಗ್ ಬೆಂಬಲಿಸುವ 4,500mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಈ ಬ್ಯಾಟಿರಿಯು ಕೇವಲ 7 ನಿಮಿಷಗಳಲ್ಲಿ ಬ್ಯಾಟರಿಯನ್ನು 50% ಚಾರ್ಜ್ ಆಗಲಿದೆ ಮತ್ತು 100% ಚಾರ್ಜ್ ಆಗಲು ಕೇವಲ 19 ನಿಮಿಷಗಳನ್ನು ತೆಗೆದುಕೊಳ್ಳಲಿದೆ ಎಂದು ಮೊಟೊರೊಲಾ ಕಂಪೆನಿ ತಿಳಿಸಿದೆ. ಇಷ್ಟೇ ಅಲ್ಲದೇ, ಈ Moto X30 Pro ಸ್ಮಾರ್ಟ್‌ಫೋನ್ ವೈರ್‌ಲೆಸ್ ಚಾರ್ಜಿಂಗ್ ವೈಶಿಷ್ಟ್ಯವನ್ನು ಸಹ ಹೊಂದಿದ್ದು, 50W ಸಾಮರ್ಥ್ಯದ ವೈರ್‌ಲೆಸ್ ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ ಎಂದು ಮೊಟೊರೊಲಾ ಕಂಪೆನಿ ಹೇಳಿಕೊಂಡಿದೆ.
Moto X30 Pro ಸ್ಮಾರ್ಟ್‌ಫೋನಿನ ಬೆಲೆಗಳು
ಇಷ್ಟೆಲ್ಲಾ ಪ್ರಮುಖ ವೈಶಿಷ್ಟ್ಯಗಳನ್ನು ಹೊಂದಿರುವ ನೂತನ Moto X30 Pro ಸ್ಮಾರ್ಟ್‌ಫೋನ್ ಅನ್ನು ಕೇವಲ CNY 3,699 (ಸುಮಾರು 43,600 ರೂ.) ಗಳ ಆರಂಭಿಕ ಬೆಲೆಯಲ್ಲಿ ಇದೀಗ ಚೀನಾದಲ್ಲಿ ಮಾತ್ರ ಬಿಡುಗಡೆ ಮಾಡಲಾಗಿದೆ. 8GB RAM + 128GB ಸ್ಟೋರೇಜ್ ಮಾದರಿಯ Moto X30 Pro ಸ್ಮಾರ್ಟ್‌ಫೋನ್ ಬೇಸ್ ಮಾಡೆಲ್ ಬೆಲೆ CNY 3,699 (ಸುಮಾರು 43,600 ರೂ) ಗಳಾಗಿದ್ದರೆ, ಇದರ 12GB RAM + 256GB ಸ್ಟೋರೇಜ್ ಮಾಡೆಲ್ CNY 4,199 (ಸುಮಾರು 49,500 ರೂ) ಗಳಿಗೆ. ಹಾಗೂ ಹೈ- ಎಂಡ್ ಮಾಡೆಲ್ 12GB + 512GB ಸ್ಟೋರೇಜ್ ಮಾದರಿಯು CNY 4,499 (ಅಂದಾಜು 53,000 ರೂ) ಬೆಲೆಯನ್ನು ಹೊಂದಿವೆ. ಇನ್ನು ಚೀನಾದಲ್ಲಿ ಈ ಸ್ಮಾರ್ಟ್‌ಫೋನ್ ಯಾವಾಗ ಮಾರುಕಟ್ಟೆಗೆ ಬರುತ್ತದೆ ಎಂಬ ಮಾಹಿತಿ ಲಭ್ಯವಾಗಿಲ್ಲ. ಅದೇ ರೀತಿ ಭಾರತದಲ್ಲಿ Moto X30 Pro ಸ್ಮಾರ್ಟ್‌ಫೋನ್ ಬಿಡುಗಡೆ ಮಾಡುವ ಬಗ್ಗೆ ಈ ವರೆಗೂ ಯಾವುದೇ ಸುದ್ದಿಯೂ ದೊರೆತಿಲ್ಲ.
Motorola X30 Pro Launched With 200 Mp Triple Cameras.
26-09-23 08:57 pm
HK News Desk
Bengaluru Bandh, Cauvery water: ಕಾವೇರಿ ಹೋರಾಟ...
26-09-23 05:41 pm
Tumkur Car Accident: ತುಮಕೂರು ; ರಥೋತ್ಸವ ಕಾರ್ಯಕ...
26-09-23 12:37 pm
Hd Kumaraswamy, Bengaluru Bandh Cauvery: ಇದೇನ...
26-09-23 12:28 pm
Bengaluru, City police commissioner, Cauvery...
25-09-23 07:09 pm
27-09-23 05:08 pm
HK News Desk
Anand Mahindra, Case Against: ಸ್ಕಾರ್ಪಿಯೋ ಅಪಘಾ...
26-09-23 07:44 pm
Goa Deltin Royale Casino GST Notice, 17 thous...
26-09-23 06:32 pm
Kasaragod accident, five dead: ಬದಿಯಡ್ಕ ಬಳಿ ಭೀ...
25-09-23 11:06 pm
Delhi,AIADMK-BJP alliance: ತಮಿಳುನಾಡು ಬಿಜೆಪಿಗೆ...
25-09-23 09:32 pm
27-09-23 10:42 pm
Mangalore Correspondent
Indian Coast Guard Mangalore: ಸಮುದ್ರ ಮಧ್ಯೆ ಮೀ...
27-09-23 10:01 pm
Mangalore Bus Protest, Assult: ಪ್ರಯಾಣಿಕ - ಬಸ್...
27-09-23 12:57 pm
Mangalore, Tempo driver suicide: ಬಾವಿಗೆ ಹಾರಿ...
27-09-23 12:31 pm
Indiana Hospital, arrest: ಇಂಡಿಯಾನ ಆಸ್ಪತ್ರೆಯಲ್...
26-09-23 02:24 pm
27-09-23 11:09 pm
HK News Desk
Mangalore Police, Kadri: ಗಂಡ - ಹೆಂಡ್ತಿ ಜಗಳ ;...
27-09-23 11:26 am
Mangalore OTP Fraud, Sub Registrar office Bio...
26-09-23 10:44 pm
Kerala, drug dealer trains dogs: ನಾಯಿ ಸಾಕಣೆ ಕ...
26-09-23 07:20 pm
Udupi, OTP Fraud, Kapu: ಬ್ಯಾಂಕ್ ಅಧಿಕಾರಿ ಎಂದು...
24-09-23 10:27 pm