ಭಾರತದಲ್ಲಿ Vivo Y16 ಬಿಡುಗಡೆ: 12,499 ರೂ. ಬೆಲೆಯ ಫೋನ್ ಫೀಚರ್ಸ್ ಹೇಗಿವೆ ನೋಡಿ!

23-09-22 07:24 pm       Source: Vijayakarnataka   ಡಿಜಿಟಲ್ ಟೆಕ್

ಬಜೆಟ್ ಬೆಲೆಯ ನೂತನ Vivo Y16 ಸ್ಮಾರ್ಟ್‌ಫೋನಿನಲ್ಲಿ 6.51 ಇಂಚಿನ IPS LCD HD+ ಡಿಸ್‌ಪ್ಲೇಯನ್ನು ಅಳವಡಿಸಲಾಗಿದೆ. 20:9 ರಚನೆಯ ಅನುಪಾತದಲ್ಲಿರುವ ಈ ಡಿಸ್‌ಪ್ಲೇಯು HD...

ಜನಪ್ರಿಯ ಮೊಬೈಲ್ ಬ್ರ್ಯಾಂಡ್ Vivo ಭಾರತದಲ್ಲಿ ಸದ್ದಿಲ್ಲದಂತೆ Vivo Y16 ಎಂಬ ಹೊಸ ಸ್ಮಾರ್ಟ್‌ಫೋನ್ ಒಂದನ್ನು ಪರಿಚಯಿಸಿದೆ. ಬಜೆಟ್ ಸ್ಮಾರ್ಟ್‌ಫೋನ್ ಒಂದನ್ನು ಹುಡುಕುತ್ತಿರುವ ಗ್ರಾಹಕರಿಗಾಗಿ ಕೇವಲ 12,499 ರೂ. ಬೆಲೆಯಲ್ಲಿ ಈ ಸ್ಮಾರ್ಟ್‌ಫೋನನ್ನು ಬಿಡುಗಡೆ ಮಾಡಲಾಗಿದ್ದು, ಈ ಸಾಧನವು 6.51-ಇಂಚಿನ IPS LCD ಡಿಸ್‌ಪ್ಲೇ, 13-ಮೆಗಾಪಿಕ್ಸೆಲ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಮತ್ತು 5,000mAh ಬ್ಯಾಟರಿಯಂತಹ ಪ್ರಮುಖ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಹಾಗಾದರೆ, ನೂತನ Vivo Y16 ಸ್ಮಾರ್ಟ್‌ಫೋನ್ ಹೇಗಿದೆ ಮತ್ತು ವಿಶೇಷತೆಗಳು ಯಾವುವು ಎಂಬುದನ್ನು ನೋಡೋಣ ಬನ್ನಿ.

Vivo Y16 ಸ್ಮಾರ್ಟ್‌ಫೋನಿನ ವೈಶಿಷ್ಟ್ಯಗಳು
ಬಜೆಟ್ ಬೆಲೆಯ ನೂತನ Vivo Y16 ಸ್ಮಾರ್ಟ್‌ಫೋನಿನಲ್ಲಿ 6.51 ಇಂಚಿನ IPS LCD HD+ ಡಿಸ್‌ಪ್ಲೇಯನ್ನು ಅಳವಡಿಸಲಾಗಿದೆ. 20:9 ರಚನೆಯ ಅನುಪಾತದಲ್ಲಿರುವ ಈ ಡಿಸ್‌ಪ್ಲೇಯು HD+ (720x1,600 ಪಿಕ್ಸೆಲ್‌ಗಳು) ರೆಸಲ್ಯೂಶನ್‌ ಹೊಂದಿದೆ ಎಂದು ಕಂಪೆನಿ ತಿಳಿಸಿದೆ. ಹುಡ್ ಅಡಿಯಲ್ಲಿ, ವಿವೋ Y16 ಸ್ಮಾರ್ಟ್‌ಫೋನಿನಲ್ಲಿ ಮೀಡಿಯಾಟೆಕ್ ಹೆಲಿಯೋ P35 SoC ಪ್ರೊಸೆಸರ್ ತರಲಾಗಿದ್ದು, 4GB RAM ಮತ್ತು 128GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯದೊಂದಿಗೆ ಆಂಡ್ರಾಯ್ಡ್ 12 ಆಧಾರಿತ Funtouch OS 12 ನಲ್ಲಿ ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಜೊತೆಗೆ ಈ ಸ್ಮಾರ್ಟ್‌ಫೋನಿನ ಮೆಮೊರಿಯನ್ನು ವಿಸ್ತರಿಸಲು ಮೀಸಲಾದ ಎಸ್‌ಡಿ ಕಾರ್ಡ್ ಸ್ಲಾಟ್ ಸಹ ನೀಡಲಾಗಿದೆ ಎಂದು ಕಂಪೆನಿ ಮಾಹಿತಿ ನೀಡಿದೆ.

vivo y16 launched in india check price specifications sale offer |  91mobiles Hindi

ಕ್ಯಾಮೆರಾ ವಿಬಾಗದಲ್ಲಿ, Vivo Y16 ಸ್ಮಾರ್ಟ್‌ಫೋನ್ 13-ಮೆಗಾಪಿಕ್ಸೆಲ್ ಪ್ರಾಥಮಿಕ ಸಂವೇದಕ ಮತ್ತು 2-ಮೆಗಾಪಿಕ್ಸೆಲ್ ಸೆಕೆಂಡರಿ ಕ್ಯಾಮೆರಾಗಳಿರುವ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಸೆಲ್ಫಿಗಳು ಮತ್ತು ವೀಡಿಯೊ ಕರೆಗಳಿಗಾಗಿ 5-ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ನೀಡಲಾಗಿದೆ. ಈ ಫೋನಿನ ಹಿಂಭಾಗದ ಕ್ಯಾಮೆರಾವು ಪನೋರಮಾ, ಫೇಸ್ ಬ್ಯೂಟಿ, ಲೈವ್ ಫೋಟೋ, ಟೈಮ್-ಲ್ಯಾಪ್ಸ್ ಮತ್ತು ಹೆಚ್ಚಿನ ವೈಶಿಷ್ಟ್ಯಗಳನ್ನು ಒಳಗೊಂಡಿದೆ ಎಂದು ಕಂಪೆನಿ ತಿಳಿಸಿದೆ. ಕೇವಲ 4G ಮಾದರಿಯಲ್ಲಿ ಮಾತ್ರ ಬಿಡುಗಡೆಯಾಗಿರುವ ಈ ಸ್ಮಾರ್ಟ್‌ಫೋನಿನಲ್ಲಿ 10W ವೈರ್ಡ್ ಚಾರ್ಜಿಂಗ್ ಬೆಂಬಲವಿರುವ 5,000mAh ಬ್ಯಾಟರಿ ನೀಡಲಾಗಿದ್ದು, 18 ಗಂಟೆಗಳವರೆಗೆ ವೀಡಿಯೊ ಸ್ಟ್ರೀಮಿಂಗ್ ಬೆಂಬಲಿಸುತ್ತದೆ ಎಂದು ಹೇಳಲಾಗಿದೆ.

vivo y16 budget segment smartphone launched in india know price specs and  features related details sbh | 13 मेगापिक्सल ड्यूल कैमरा और 5000mAh की  बैटरी के साथ Vivo Y16 हुआ लॉन्च, जानें

Vivo Y16 ಸ್ಮಾರ್ಟ್‌ಫೋನಿನ ಬೆಲೆ ಮತ್ತು ಲಭ್ಯತೆ
ಮೊದಲೇ ತಿಳಿಸಿದಂತೆ, ಭಾರತದಲ್ಲಿ Vivo Y16 ಸ್ಮಾರ್ಟ್‌ಫೋನ್‌ ಭಾರತದಲ್ಲಿ 12,499 ರೂ.ಗಳ ಆರಂಭಿಕ ಬೆಲೆಯನ್ನು ಹೊಂದಿದ್ದು, ಇದು ಡ್ರಿಜ್ಲಿಂಗ್ ಗೋಲ್ಡ್ ಮತ್ತು ಸ್ಟೆಲ್ಲರ್ ಬ್ಲ್ಯಾಕ್ ಬಣ್ಣದ ಆಯ್ಕೆಗಳಲ್ಲಿ ಬಿಡುಗಡೆಯಾಗಿದೆ. Vivo Y16 ಸ್ಮಾರ್ಟ್‌ಫೋನ್‌ ಕುರಿತು ಇಷ್ಟೆಲ್ಲಾ ಮಾಹಿತಿಯನ್ನು ಪ್ರಕಟಿಸಿರುವ Vivo ಕಂಪೆನಿ Vivo Y16 ಸ್ಮಾರ್ಟ್‌ಫೋನಿನ ಲಭ್ಯತೆ ಬಗ್ಗೆ ಮಾಹಿತಿಯನ್ನು ನೀಡಿಲ್ಲ. ಆದರೆ, ಇನ್ನೆರಡು ದಿನಗಳ ಒಳಗಾಗಿ ಈ ಸ್ಮಾರ್ಟ್‌ಫೋನ್ ಮಾರಾಟಕ್ಕೆ ಬರಲಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿದೆ.

Vivo Y16 Launched In India Check Price And Specifications.