ದೇಶದಲ್ಲಿ ಹೊಸ Fire-Boltt Rocket ಸ್ಮಾರ್ಟ್‌ವಾಚ್ ಬಿಡುಗಡೆ!..ಬೆಲೆ ಎಷ್ಟು ಗೊತ್ತಾ?

02-01-23 08:27 pm       Source: Vijayakarnataka   ಡಿಜಿಟಲ್ ಟೆಕ್

ಈ ಹೊಸ Fire-Boltt Rocket ಸ್ಮಾರ್ಟ್‌ವಾಚ್ ಸಾಧನದಲ್ಲಿ ಇನ್‌ಬಿಲ್ಟ್‌ ಸ್ಪೀಕರ್ ಮತ್ತು ಮೈಕ್ರೊಫೋನ್‌ಗಳನ್ನು ನೀಡಲಾಗಿದೆ. ಇದರಲ್ಲಿರುವ ಬ್ಲೂಟೂತ್‌ ಕಾಲಿಂಗ್ ಫೀಚರ್ ಸಹಾಯದಿಂದ ಫೋನ್ ಕರೆಗಳನ್ನು ಮಾಡಬಹುದು ಮತ್ತು ಸ್ವೀಕರಿಸಬಹುದು ಎಂದು ಕಂಪೆನಿ ತಿಳಿಸಿದೆ.

ಇತ್ತೀಚಿಗಷ್ಟೇ 'ಆಪಲ್ ವಾಚ್ ಅಲ್ಟ್ರಾ' ಸಾಧನದ ರೀತಿಯದ್ದೇ ಗ್ಲಾಡಿಯೇಟರ್ ಹೆಸರಿನ ಸ್ಮಾರ್ಟ್‌ವಾಚ್ ಒಂದನ್ನು ಪರಿಚಯಿಸಿ ಗಮನಸೆಳೆದಿದ್ದ ಜನಪ್ರಿಯ ವೆರಿಯಬಲ್ ಟೆಕ್ ಬ್ರ್ಯಾಂಡ್ 'ಫೈರ್-ಬೋಲ್ಟ್' ಭಾರತದಲ್ಲಿ ರಾಕೆಟ್ (Fire-Boltt Rocket) ಎಂಬ ಮತ್ತೊಂದು ಕೈಗೆಟುಕುವ ಸ್ಮಾರ್ಟ್‌ವಾಚ್ ಸಾಧನವನ್ನು ಇಂದು ಪರಿಚಯಿಸಿದೆ. ಹೊಸ ವರ್ಷದಲ್ಲಿ ಹೆಚ್ಚೆಚ್ಚು ಗ್ರಾಹಕರನ್ನು ಸೆಳೆಯುವ ಸಲುವಾಗಿ, ಹೃದಯ ಬಡಿತ ಮಾನಿಟರ್‌, SpO2 ಸೆನ್ಸಾರ್, ಸ್ಲಿಪ್ ಟ್ರ್ಯಾಕರ್‌ ನಂತಹ ಪ್ರಮುಖ ವೈಶಿಷ್ಟ್ಯಗಳನ್ನು ಹೊಂದಿರುವ ಈ ಹೊಸ Fire-Boltt Rocket ಸ್ಮಾರ್ಟ್‌ ಸಾಧನವನ್ನು ದೇಶದಲ್ಲಿ ಅತ್ಯುತ್ತಮ ಬೆಲೆಯಲ್ಲಿ ಬಿಡುಗಡೆಗೊಳಿಸಲಾಗಿದೆ. ಹಾಗಾದರೆ, ಹೊಸ Fire-Boltt Rocket ಸ್ಮಾರ್ಟ್‌ವಾಚ್ ಹೇಗಿದೆ ಮತ್ತು ಬೆಲೆ ಎಷ್ಟು ನೋಡೋಣ ಬನ್ನಿ.

Fire-Boltt Rocket ಸ್ಮಾರ್ಟ್‌ವಾಚ್ ವೈಶಿಷ್ಟ್ಯಗಳು.
ನೂತನ Fire-Boltt Rocket ಸ್ಮಾರ್ಟ್‌ವಾಚ್ ಸಾಧನವು 240×240 ಪಿಕ್ಸೆಲ್‌ಗಳ ಸ್ಕ್ರೀನ್ ರೆಸಲ್ಯೂಶನ್‌ನೊಂದಿಗೆ 1.3-ಇಂಚಿನ ವೃತ್ತಾಕಾರದ ಡಿಸ್‌ಪ್ಲೇಯನ್ನು ಹೊಂದಿದೆ ಮತ್ತು ಇದು ಹಲವು ಮಾದರಿಯ ವಾಚ್ ಫೇಸ್‌ಗಳನ್ನು ಒಳಗೊಂಡಿದೆ. ಆರೋಗ್ಯದ ದೃಷ್ಟಿಯಿಂದ, ಹೃದಯ ಬಡಿತ ಮಾನಿಟರ್, SpO2 ಸೆನ್ಸಾರ್, ಸ್ಲಿಪಿಂಗ್‌ ಟ್ರ್ಯಾಕರ್ ಮತ್ತು ಸ್ತ್ರೀ ಸೈಕಲ್ ಮಾನಿಟರ್ ವೈಶಿಷ್ಟ್ಯಗಳನ್ನು ಹೊಂದಿರುವ ಈ ಹೊಸ ಸ್ಮಾರ್ಟ್‌ವಾಚ್ 100ಕ್ಕೂ ಹೆಚ್ಚು ವಿವಿಧ ಸ್ಪೋರ್ಟ್ಸ್ ಮೋಡ್‌ಗಳನ್ನು ಟ್ರ್ಯಾಕ್ ಮಾಡುವ ಸಾಮರ್ಥ್ಯವನ್ನು ಹೊಂದಿದ್ದು, ಇದರಲ್ಲಿ ಸ್ಟೆಪ್ಸ್, ಡಿಸ್ಟೆನ್ಸ್, ಕ್ಯಾಲೂರಿ ಬರ್ನಿಂಗ್ಸ್ ಅಳೆಯುವುದಕ್ಕೆ ಸಹ ಅವಕಾಶವಿದೆ. ಹಾಗೆಯೇ, ಈ ಸ್ಮಾರ್ಟ್‌ವಾಚ್ IP67-ಪ್ರಮಾಣೀಕೃತ ವಾಟರ್‌ ರೆಸಿಸ್ಟೆನ್ಸಿ ಸಾಮರ್ಥ್ಯವನ್ನು ಹೊಂದಿದೆ.

fire boltt, ದೇಶದಲ್ಲಿ ಹೊಸ Fire-Boltt Rocket ಸ್ಮಾರ್ಟ್‌ವಾಚ್ ಬಿಡುಗಡೆ!..ಬೆಲೆ  ಎಷ್ಟು ಗೊತ್ತಾ? - affordable fire-boltt rocket smartwatch launched in india:  check details - Vijaya Karnataka

ಈ ಹೊಸ Fire-Boltt Rocket ಸ್ಮಾರ್ಟ್‌ವಾಚ್ ಸಾಧನದಲ್ಲಿ ಇನ್‌ಬಿಲ್ಟ್‌ ಸ್ಪೀಕರ್ ಮತ್ತು ಮೈಕ್ರೊಫೋನ್‌ಗಳನ್ನು ನೀಡಲಾಗಿದೆ. ಇದರಲ್ಲಿರುವ ಬ್ಲೂಟೂತ್‌ ಕಾಲಿಂಗ್ ಫೀಚರ್ ಸಹಾಯದಿಂದ ಫೋನ್ ಕರೆಗಳನ್ನು ಮಾಡಬಹುದು ಮತ್ತು ಸ್ವೀಕರಿಸಬಹುದು ಎಂದು ಕಂಪೆನಿ ತಿಳಿಸಿದೆ. ಇನ್ನು ಈ ಸ್ಮಾರ್ಟ್‌ವಾಚ್ ಗೂಗಲ್ ಅಸಿಸ್ಟೆಂಟ್ ಮತ್ತು ಸಿರಿ ವಾಯಿಸ್ ಅಸಿಸ್ಟೆಂಟ್‌ಗಳನ್ನು ಬೆಂಬಲಿಸಲಿದೆ. ಇದರಿಂದ ಬಳಕೆದಾರರು ಸುಲಭವಾಗಿ ನೋಟಿಫಿಕೇಶನ್ ಆಲರ್ಟ್ ಪಡೆಯಬಹುದು ಎಂದು ಹೇಳಲಾಗಿದೆ. ಇಷ್ಟೇಲ್ಲಾ ವೈಶಿಷ್ಟ್ಯಗಳನ್ನು ಹೊಂದಿರುವ ಈ ಸ್ಮಾರ್ಟ್‌ವಾಚ್ ಹೊಂದಿರುವ ಬ್ಯಾಟರಿ ಶಕ್ತಿ ಕುರಿತಂತೆ ಕಂಪೆನಿಯಿಂದ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಆದರೆ, ಇದು 7 ದಿನಗಳ ಬ್ಯಾಟರಿ ಬಾಳಿಕೆ ನೀಡಲಿದೆ ಎಂದು ಹೇಳಲಾಗಿದೆ.

Fire Boltt Rocket With Bluetooth Calling, 100+ Sports Modes Launched In  India - Gizmochina

Fire-Boltt Rocket ಸ್ಮಾರ್ಟ್‌ವಾಚ್ ಬೆಲೆ?
ಭಾರತದಲ್ಲಿ ಇಂದು ಬಿಡುಗಡೆಯಾಗಿರುವ ಹೊಸ Fire-Boltt Rocket ಸ್ಮಾರ್ಟ್‌ವಾಚ್ ಸಾಧನವನ್ನು 2,499 ರೂ.ಗಳ ಅಧಿಕೃತ ಬೆಲೆಯಲ್ಲಿ ಪರಿಚಯಿಸಲಾಗಿದೆ. ಗ್ರಾಹಕರು ಕಪ್ಪು, ಸಿಲ್ವರ್ ಗ್ರೇ, ಷಾಂಪೇನ್ ಗೋಲ್ಡ್ ಮತ್ತು ಗೋಲ್ಡ್ ಪಿಂಕ್ ನಂತಹ ಹಲವು ಬಣ್ಣದ ಆಯ್ಕೆಗಳಲ್ಲಿ ಲಭ್ಯವಿರಲಿರುವ ಈ ಹೊಸ ಸ್ಮಾರ್ಟ್‌ವಾಚ್ ಸಾಧನವನ್ನು ಇದೀಗ ಕಂಪೆನಿಯ ಅಧಿಕೃತ ವೆಬ್‌ಸೈಟ್ ಮೂಲಕ ಮಾರಾಟಕ್ಕೆ ಇಡಲಾಗಿದೆ. ನೀವು ಕೈಗೆಟುಕುವ ಬೆಲೆಯಲ್ಲಿ ಬ್ಲೂಟೂತ್ ಕಾಲಿಂಗ್ ಆಕ್ಟಿವ್ ಸ್ಮಾರ್ಟ್‌ವಾಚ್ ಒಂದನ್ನು ಖರೀದಿಸಲು ಇಚ್ಚಿಸಿದರೆ, ಪೆಬಲ್ ಫ್ರಾಸ್ಟ್ ಮತ್ತು ನಾಯ್ಸ್ ಐಕಾನ್ 2 ಸ್ಮಾರ್ಟ್‌ವಾಚ್ ಸಾಧನಗಳ ಜೊತೆ ಸ್ಪರ್ಧಿಸಲು ಬಂದಿರುವ ಈ ಹೊಸ Fire-Boltt Rocket ಸ್ಮಾರ್ಟ್‌ವಾಚ್ ಸಾಧನವು ನಿಮ್ಮ ಮೊದಲ ಆಯ್ಕೆಯಾಗಬಹುದು.

Affordable Fire-Boltt Rocket Smartwatch Launched In India.