ಬ್ರೇಕಿಂಗ್ ನ್ಯೂಸ್
25-05-26 01:08 pm HK News Staffer ಕರಾವಳಿ
ಮಂಗಳೂರು, ಮೇ 25: ಅಮೆರಿಕದಲ್ಲಿ ಚರ್ಚ್ ಧರ್ಮಗುರುವಾಗಿ ಹುಟ್ಟೂರು ಮಂಗಳೂರಿನ ಬಗ್ಗೆ ನಿಕಟ ಪ್ರೀತಿ ಇರಿಸಿಕೊಂಡಿದ್ದ, ಹಲವಾರು ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದ ಫಾ. ಮೊನ್ಸಿಜೆರ್ ಲೆಸ್ಲಿ ಶೆಣಯ್ (79) ಭಾನುವಾರ ಮೇ 24ರಂದು ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ನಿಧನರಾದರು.
ಮಂಗಳೂರಿನ ಉರ್ವಾ ಮೂಲದ ಶೆಣಯ್, 1976ರ ಮೇ 14ರಂದು ಧರ್ಮಗುರುಗಳಾಗಿ ದೀಕ್ಷೆ ಪಡೆದು, 1979ರಿಂದ ಅಮೆರಿಕದ ಫ್ರೆಸ್ನೋ ಧರ್ಮಪ್ರಾಂತ್ಯದಲ್ಲಿ ಸೇವೆ ಸಲ್ಲಿಸಿದ್ದರು. 1985ರಲ್ಲಿ ಅಮೆರಿಕದ ಪೌರತ್ವ ಪಡೆದಿದ್ದರೂ, ಹುಟ್ಟೂರಿನೊಂದಿಗೆ ನಿಕಟ ಸಂಪರ್ಕವನ್ನು ಉಳಿಸಿಕೊಂಡು, ಹಲವು ಮಾನವೀಯ ಹಾಗೂ ಶೈಕ್ಷಣಿಕ ಕಾರ್ಯಗಳಿಗೆ ಬೆಂಬಲ ನೀಡುತ್ತ ಬಂದಿದ್ದರು.
ಇವರ ಪ್ರಮುಖ ಕೊಡುಗೆಗಳಲ್ಲಿ “ಮೊ ಲೆಸ್ಲಿ ಎಫ್. ಶೆಣಯ್ ವಿದ್ಯಾರ್ಥಿವೇತನ” ಯೋಜನೆ ಪ್ರಮುಖವಾಗಿದ್ದು, ಕ್ಯಾಥೋಲಿಕ್ ಬೋರ್ಡ್ ಆಫ್ ಎಜುಕೇಷನ್ ಮೂಲಕ ಅರ್ಹ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಪಡೆಯಲು ಸಹಾಯ ಮಾಡಿದ್ದರು. ಅಲ್ಲದೆ, ಸೆಮಿನರಿ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡುವುದರ ಜೊತೆಗೆ, ಬಡ ಕುಟುಂಬಗಳಿಗೆ ಜೀವನೋಪಾಯಕ್ಕಾಗಿ ವಾಹನಗಳನ್ನು ದಾನ ಮಾಡಿದ್ದರು. 2025ರಲ್ಲಿ, ತಮ್ಮ ನಿವೃತ್ತಿ ಸಂಗ್ರಹದಿಂದ ಪುತ್ತೂರಿನಲ್ಲಿ ಹಿರಿಯ ನಾಗರಿಕರ ವಸತಿಗೃಹವನ್ನು ನಿರ್ಮಿಸಿ ದಾನವಾಗಿ ನೀಡಿದ್ದು, ವೃದ್ಧರಿಗೆ ಆಶ್ರಯ ಮತ್ತು ಆರೈಕೆ ಒದಗಿಸಿದ್ದರು. ಅವರ ಒಡನಾಟ ಇದ್ದವರು ಸರಳ, ಸ್ನೇಹಪರ ವ್ಯಕ್ತಿತ್ವ ಎಂದು ಸ್ಮರಿಸುತ್ತಿದ್ದಾರೆ.
ಮೃತರ ಸಾರ್ವಜನಿಕ ಅಂತಿಮ ದರ್ಶನವು ಮೇ 27ರ ಬುಧವಾರ ಮಧ್ಯಾಹ್ನ 2.30ರಿಂದ ನಡೆಯಲಿದ್ದು, ಮಧ್ಯಾಹ್ನ 3 ಗಂಟೆಗೆ ಉರ್ವಾ ಇಮ್ಯಾಕ್ಯುಲೇಟ್ ಕನ್ಸೆಪ್ಷನ್ ಚರ್ಚ್ನಲ್ಲಿ ಅಂತ್ಯಕ್ರಿಯೆ ನೆರವೇರಲಿದೆ. ಪ್ರಮುಖ ಗಣ್ಯರು ಅಗಲಿದ ಧರ್ಮಗುರುಗಳಿಗೆ ಶೋಕ ವ್ಯಕ್ತ ಪಡಿಸಿದ್ದಾರೆ.
25-08-26 03:39 pm
HK News Staffer
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
ಕರ್ನಾಟಕದಲ್ಲಿ ‘ಅನಲಾಗ್ ಪನ್ನೀರ್’ಗೆ ಒಂದು ವರ್ಷ ನಿಷ...
22-08-26 10:15 pm
ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ; ಏ...
22-08-26 03:01 pm
500 ಕೆಪಿಎಸ್ ಶಾಲೆಗಳ ಸಮಗ್ರ ಅಭಿವೃದ್ಧಿಗೆ ₹2500 ಕೋ...
22-08-26 11:10 am
24-08-26 04:55 pm
HK News Staffer
ಪಾಲ್ಘಾಟ್ ರೈಲ್ವೇ ವಿಭಾಗದಿಂದ ಮಂಗಳೂರು ಹೊರಕ್ಕೆ ; ವ...
22-08-26 08:37 pm
ದೇಹದಲ್ಲಿಡೀ ಉರಿ ಉರಿ! ಕೆರೆಯಲ್ಲೇ ವಾಸ, ಅಲ್ಲೇ ಆಹಾ...
20-08-26 10:55 am
ತಮಿಳುನಾಡು ಮಹಿಳಾ ಸರ್ಕಾರಿ ನೌಕರರಿಗೆ ಸರ್ಕಾರದ ಬಂಪರ...
19-08-26 02:13 pm
ಲಷ್ಕರ್ ಸ್ಥಾಪಕ ಹಫೀಜ್ ಸಯೀದ್ 10,000 ಯುವಕರನ್ನು ಕಾ...
19-08-26 01:06 pm
25-08-26 09:37 pm
HK News Staffer
'ಕಿಂಗ್ಸ್ ಬಜಾರ್' ಹೆಸರಲ್ಲಿ ದುಪ್ಪಟ್ಟು ಲಾಭದ ಹೂಡಿಕ...
25-08-26 09:00 pm
ಪುತ್ತೂರು ಪೇಟೆಯಲ್ಲಿ ಸ್ವಯಂಪ್ರೇರಿತ ಬಂದ್ ; ವಾಹನ ಸ...
25-08-26 02:55 pm
ಕೆಎಸ್ ಹೆಗ್ಡೆ ಮೆಡಿಕಲ್ ಕಾಲೇಜಿನ ಪ್ರೊಫೆಸರ್, ಮಂಗಳೂ...
24-08-26 06:25 pm
ಈದ್ ಮಿಲಾದ್ ; ಬೆಳಗ್ಗೆ ಕೋಟೆಪುರದಿಂದ ಉಳ್ಳಾಲ ದರ್ಗಾ...
24-08-26 04:14 pm
25-08-26 10:39 pm
HK News Staffer
ಉಡುಪಿಯ ದೇವಸ್ಥಾನದ ಕೆರೆಯಲ್ಲಿ ಮುಳುಗಿ 15 ವರ್ಷದ ವಿ...
25-08-26 07:27 pm
ವಿಟ್ಲ ; ಈಜಲು ತೆರಳಿದ್ದ ಎಸ್ಸಿಡಿಸಿಸಿ ಬ್ಯಾಂಕ್...
25-08-26 12:46 pm
ಮಲ್ಪೆ ಬಂದರಿನಲ್ಲಿ ಮೀನುಗಾರರಿಬ್ಬರ ಗಲಾಟೆ ಕೊಲೆಯಲ್ಲ...
25-08-26 12:45 pm
ಡೇವಿಡ್ ಡಿಸೋಜ ಹತ್ಯೆ ಪ್ರಕರಣದಲ್ಲಿ ಮಹತ್ತರ ತಿರುವು...
25-08-26 11:38 am