ತನ್ನ ಸೇವೆಯನ್ನು ಸ್ಥಗಿತಗೊಳಿಸಿದ ಗೂಗಲ್ ಪ್ಲೇ ಮ್ಯೂಸಿಕ್!!!

24-10-20 02:25 pm       Headline Karnataka News Network   ಡಿಜಿಟಲ್ ಟೆಕ್

ಸರ್ಚ್‌ ಇಂಜಿನ್‌ ಗೂಗಲ್ ತನ್ನ‌ ಮ್ಯೂಸಿಕ್‌ ಪ್ರಿಯರಿಗಾಗಿ ಪರಿಚಯಿಸಿದ್ದ ಗೂಗಲ್‌ ಮ್ಯೂಸಿಕ್‌ ಸೇವೆಯನ್ನು ಸ್ಥಗಿತಗೊಳಿಸಿದೆ.

ಅಮೇರಿಕಾ, ಅಕ್ಟೋಬರ್ .24 : ಗೂಗಲ್‌ ತನ್ನ ಮ್ಯೂಸಿಕ್‌ ಸ್ಟ್ರೀಮಿಂಗ್‌ ಸೇವೆ ಗೂಗಲ್‌ ಪ್ಲೇ ಮ್ಯೂಸಿಕ್‌ ಅನ್ನು ವಿಶ್ವದಾದ್ಯಂತ ಸ್ಥಗಿತಗೊಳಿಸಿದೆ.

ಮ್ಯೂಸಿಕ್‌ ಸ್ಟ್ರಿಮಿಂಗ್‌ ಸೇವೆ ನೀಡುತ್ತಿದ್ದ ಗೂಗಲ್‌ ಮ್ಯೂಸಿಕ್‌ ಆಂಡ್ರಾಯ್ಡ್, ಐಒಎಸ್ ಮತ್ತು ವೆಬ್‌ನಲ್ಲಿ ಕೆಲಸ ಮಾಡುವುದನ್ನು ನಿಲ್ಲಿಸಿದ್ದು ಬಳಕೆದಾರರು ಗೂಗಲ್‌ ಮ್ಯೂಸಿಕ್‌ ಅಪ್ಲಿಕೇಶನ್‌ ತೆರೆದ ನಂತರ, ಸ್ಪ್ಲಾಶ್ ಪುಟವು ಗೂಗಲ್ ಪ್ಲೇ  ಮ್ಯೂಸಿಕ್‌ ಇನ್ನು ಮುಂದೆ ಲಭ್ಯವಿಲ್ಲ ಎಂಬ ಸೂಚನೆ ನೀಡುತ್ತಿದೆ. ಅಲ್ಲದೆ ನಿಮ್ಮ ಡೇಟಾವನ್ನು ನಿರ್ವಹಿಸಿ ಅಥವಾ ಯುಟ್ಯೂಬ್  ಮ್ಯೂಸಿಕ್‌ಗೆ ವರ್ಗಾಯಿಸಲು ಬಳಕೆದಾರರಿಗೆ ಆಯ್ಕೆಗಳನ್ನು ನೀಡಿದೆ.

ಗೂಗಲ್ ಪ್ಲೇ ಮ್ಯೂಸಿಕ್ ಅನ್ನು ಸ್ಥಗಿತಗೊಳಿಸುವ  ಮೂಲಕ ಯುಟ್ಯೂಬ್‌ ಮ್ಯೂಸಿಕ್‌ ಅನ್ನು ಇನ್ನಷ್ಟು ಜನಪ್ರಿಯತೆಗೊಳಿಸುವ ಕಾರ್ಯಕ್ಕೆ ಗೂಗಲ್‌ ಮುಂದಾಗಿದೆ .ಸದ್ಯ ಈ ತಿಂಗಳ ಇತರ ಜಾಗತಿಕ ಮಾರುಕಟ್ಟೆಗಳಲ್ಲಿ ಸೇವೆಯನ್ನು ಸ್ಥಗಿತಗೊಳಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದು, ಈ ವರ್ಷದ ಡಿಸೆಂಬರ್ ವೇಳೆಗೆ ಗೂಗಲ್ ಪ್ಲೇ ಮ್ಯೂಸಿಕ್‌ ತನ್ನ  ಎಲ್ಲ ಬೆಂಬಲವನ್ನು ಕೊನೆಗೊಳಿಸಲಿದೆ.