HTC U23 ಪ್ರೊ ಸ್ಮಾರ್ಟ್‌ಫೋನ್ ಅನಾವರಣ: ಬೆಲೆ ಎಷ್ಟು?, ಫೀಚರ್ಸ್ ಏನಿದೆ?

18-05-23 08:21 pm       Source: Gizbot   ಡಿಜಿಟಲ್ ಟೆಕ್

ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಇತ್ತೀಚೆಗೆ HTC ಫೋನ್‌ಗಳು ಸಹ ಭಾರೀ ಸದ್ದು ಮಾಡುತ್ತಿದ್ದು, ಇವು ವಿವಿಧ ಸುಧಾರಿತ ಫೀಚರ್ಸ್‌ನೊಂದಿಗೆ ಆಕರ್ಷಕ ನೋಟವನ್ನು ಪಡೆದುಕೊಂಡಿವೆ.

ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಇತ್ತೀಚೆಗೆ HTC ಫೋನ್‌ಗಳು ಸಹ ಭಾರೀ ಸದ್ದು ಮಾಡುತ್ತಿದ್ದು, ಇವು ವಿವಿಧ ಸುಧಾರಿತ ಫೀಚರ್ಸ್‌ನೊಂದಿಗೆ ಆಕರ್ಷಕ ನೋಟವನ್ನು ಪಡೆದುಕೊಂಡಿವೆ. ಇದರ ನಡುವೆ HTC ಯು ಹೊಸ ಸ್ಮಾರ್ಟ್‌ಫೋನ್‌ ಅನ್ನು ಅನಾವರಣ ಮಾಡಿದ್ದು, ಈ ಫೋನ್ 108MP ಮುಖ್ಯ ಕ್ಯಾಮೆರಾ ಆಯ್ಕೆಯೊಂದಿಗೆ ವಿಶೇಷ ಎನಿಸಿದೆ.

ಹೌದು, HTC ಇದೀಗ HTC U23 ಪ್ರೊ ಸ್ಮಾರ್ಟ್‌ಫೋನ್‌ ಅನ್ನು ಅನಾವರಣ ಮಾಡಿದ್ದು, ಈ ಫೋನ್ ಸ್ನಾಪ್‌ಡ್ರಾಗನ್ 7 ಜನ್ 1 SoC ಪ್ರೊಸೆಸರ್‌ ಬಲ ಪಡೆದುಕೊಂಡಿದ್ದು, 12GB RAM ಆಯ್ಕೆ ಹೊಂದಿದೆ. ಜೊತೆಗೆ 30W ವೇಗದ ಚಾರ್ಜಿಂಗ್ ಹಾಗೂ 15W ವಾಯರ್‌ಲೆಸ್‌ ಚಾರ್ಜಿಂಗ್ ಮತ್ತು ರಿವರ್ಸ್ ವಾಯರ್‌ಲೆಸ್‌ ಚಾರ್ಜಿಂಗ್‌ ಬೆಂಬಲ ಸಹ ಇದೆ. ಹಾಗಿದ್ರೆ ಈ ಫೋನ್‌ನ ಪ್ರಮುಖ ಫೀಚರ್ಸ್‌ ಹಾಗೂ ಬೆಲೆ ವಿವರ ತಿಳಿದುಕೊಳ್ಳಿ.

HTC U23 Pro with Snapdragon 7 Gen 1 launched: All the details

HTC U23 ಪ್ರೊ ಸ್ಮಾರ್ಟ್‌ಫೋನ್‌ ಡಿಸ್‌ಪ್ಲೇ ವಿವರ: ಈ ಫೋನ್ 6.7 ಇಂಚಿನ ಫುಲ್‌ಹೆಚ್‌ಡಿ+ OLED ಡಿಸ್‌ಪ್ಲೇ ಹೊಂದಿದ್ದು, 2400 x 1080 ಪಿಕ್ಸೆಲ್‌ ರೆಸಲ್ಯೂಶನ್‌ ಸಾಮರ್ಥ್ಯ ಹೊಂದಿದೆ. ಜೊತೆಗೆ 20:9 ಆಕಾರ ಅನುಪಾತದೊಂದಿಗೆ 120Hz ರಿಫ್ರೆಶ್ ರೇಟ್‌ ಸೌಲಭ್ಯ ಇದರಲ್ಲಿದ್ದು, ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ ಮೂಲಕ ರಕ್ಷಣೆ ಪಡೆದುಕೊಂಡಿದೆ.

HTC U23 ಪ್ರೊ ಪ್ರೊಸೆಸರ್‌ ಮಾಹಿತಿ: ಇದರ ಪ್ರಸೆಸರ್‌ ವಿಚಾರಕ್ಕೆ ಬರುವುದಾದರೆ ಈ ಫೋನ್ ಕ್ವಾಲ್ಕಾಮ್ ಸ್ನ್ಯಾಪ್ ಡ್ರ್ಯಾಗನ್ 7 ಜನ್ 1 ಪ್ರೊಸೆಸರ್‌ ಮೂಲಕ ಕಾರ್ಯನಿರ್ವಹಿಸಲಿದ್ದು, ಅಡ್ರಿನೊ 644GPU ಬಲ ಪಡೆದುಕೊಂಡಿದೆ. ಜೊತೆಗೆ 8GB/12GB RAM ಹಾಗೂ 256GB ಇಂಟರ್‌ ಸ್ಟೋರೇಜ್ ಆಯ್ಕೆ ನೀಡಲಾಗಿದ್ದು, ಬಳಕೆದಾರರು ಇನ್ನೂ ಹೆಚ್ಚಿನ ಸ್ಟೋರೇಜ್ ಬೇಕು ಎಂದರೆ ಎಸ್‌ಡಿ ಕಾರ್ಡ್‌ ಬಳಕೆ ಮಾಡಿಕೊಳ್ಳಲು ಅನುಕೂಲ ಕಲ್ಪಿಸಿಕೊಡಲಾಗಿದೆ.

HTC U23, HTC U23 Pro With Qualcomm Snapdragon 7 Gen 1​ SoC Launched: Price,  Specifications | Technology News

HTC U23 ಪ್ರೊ ಕ್ಯಾಮೆರಾ ರಚನೆ: ಈ ಫೋನ್ ಕ್ವಾಡ್ ರಿಯರ್‌ ಕ್ಯಾಮೆರಾ ರಚನೆ ಹೊಂದಿದ್ದು, ಅದರಲ್ಲಿ 108 ಮೆಗಾಪಿಕ್ಸೆಲ್‌ನ ಪ್ರಮುಖ ಕ್ಯಾಮೆರಾ, 8ಮೆಗಾಪಿಕ್ಸೆಲ್‌ನ ಅಲ್ಟ್ರಾ-ವೈಡ್ ಆಂಗಲ್ ಲೆನ್ಸ್ ಹಾಗೂ 2ಮೆಗಾಪಿಕ್ಸೆಲ್‌ನ ಡೆಪ್ತ್ ಸೆನ್ಸರ್‌ ಮತ್ತು 5 ಮೆಗಾಪಿಕ್ಸೆಲ್‌ನ ಮ್ಯಾಕ್ರೋ ಕ್ಯಾಮರಾ ಆಯ್ಕೆ ಇದ್ದು, ಈ ಕ್ಯಾಮೆರಾ ಮೂಲಕ 4K ವಿಡಿಯೋ ರೆಕಾರ್ಡಿಂಗ್ ಮಾಡಬಹುದು ಜೊತೆಗೆ LEDಫ್ಲಾಶ್ ಲೈಟ್‌ ಆಯ್ಕೆ ಸಹ ಇದೆ. ಇನ್ನು ಸೆಲ್ಫಿ ಉದ್ದೇಶಕ್ಕೆ 32ಮೆಗಾಪಿಕ್ಸೆಲ್ ಸೆನ್ಸರ್‌ ನೀಡಲಾಗಿದೆ.

HTC U23 ಪ್ರೊ ಬ್ಯಾಟರಿ ಸಾಮರ್ಥ್ಯ ಹಾಗೂ ಇತರೆ: ಈ ಸ್ಮಾರ್ಟ್‌ಫೋನ್ 4600mAh ಸಾಮರ್ಥ್ಯದ ಬ್ಯಾಟರಿಯಿಂದ ಪ್ಯಾಕ್‌ ಆಗಿದ್ದು, ಇದು 30W ವೈರ್ಡ್ ಫಾಸ್ಟ್ ಚಾರ್ಜಿಂಗ್, 15W ವಾಯರ್‌ಲೆಸ್‌ ಚಾರ್ಜಿಂಗ್ ಹಾಗೂ ರಿವರ್ಸ್ ವಾಯರ್‌ಲೆಸ್ ಚಾರ್ಜಿಂಗ್ ಸೌಲಭ್ಯ ಪಡೆದಿದೆ. ಇನ್ನುಳಿದಂತೆ ಈ ಫೋನ್ 5G, ವೈ-ಫೈ 6 802.11 ax, ಬ್ಲೂಟೂತ್ ಆವೃತ್ತಿ 5.2, ಇಪಿಎಸ್‌, ಯುಎಸ್‌ಬಿ ಟೈಪ್-ಸಿ ಕನೆಕ್ಟಿವಿಟಿ ಸೌಲಭ್ಯ ಪಡೆದುಕೊಂಡಿದೆ. ಜೊತೆಗೆ IP67 ರೇಟಿಂಗ್‌ ಪಡೆದುಕೊಂಡಿರುವುದು ವಿಶೇಷ.

HTC U23 Pro Compatible With Viverse VR Confirmed to Launch on May 18: All  Details | Technology News

HTC U23 ಪ್ರೊ ಬೆಲೆ ಹಾಗೂ ಲಭ್ಯತೆ: ಈ ಫೋನ್‌ನ 8GB+256GB ವೇರಿಯಂಟ್‌ಗೆ TW$ 16,990ಬೆಲೆ ಇದೆ. ಅಂದರೆ ಭಾರತದಲ್ಲಿ ಇದಕ್ಕೆ ಸರಿಸುಮಾರು 45,535 ರೂ.ಗಳ ಬೆಲೆ ಇರಲಿದೆ. ಹಾಗೆಯೇ 12GB+256GB ವೇರಿಯಂಟ್‌ಗೆ ಸರಿಸುಮಾರು 48,215ರೂ.ಗಳ ಬೆಲೆ ಇರಲಿದೆ. ಈ ಫೋನ್ ಕಪ್ಪು ಮತ್ತು ಮುಕ್ಸರ್ ಬಿಳಿ ಬಣ್ಣಗಳಲ್ಲಿ ಕಂಡುಬರುತ್ತದೆ. ಈಗಾಗಲೇ ಈ ಫೋನ್ ತೈವಾನ್‌ನಲ್ಲಿ ಮಾರಾಟಕ್ಕೆ ಲಭ್ಯ ಇದ್ದು, ಇತರೆ ದೇಶಗಳಲ್ಲಿ ಎಂದಿನಿಂದ ಈ ಫೋನ್‌ ಲಭ್ಯ ಎಂಬುದನ್ನು ಕಾದುನೋಡಬೇಕು.

htc u23 pro with snapdragon 7 gen 1 launched.