ವಾಟ್ಸಾಪ್‌ನಿಂದ ಡಿಸ್‌ಅಪಿಯರಿಂಗ್‌ ಫೋಟೋಸ್‌ ಫೀಚರ್ಸ್‌ ಬಿಡುಗಡೆ!

30-06-21 03:13 pm       GIZBOT Mutthuraju H M   ಡಿಜಿಟಲ್ ಟೆಕ್

ಬಳಕೆದಾರರ ಅನುಕೂಲಕ್ಕಾಗಿ ವಾಟ್ಸಾಪ್‌ ಈಗಾಗಲೇ ಹಲವು ಫೀಚರ್ಸ್‌ಗಳನ್ನು ಪರಿಚಯಿಸಿದೆ. ಇದೀಗ ಬೀಟಾ ಬಳಕೆದಾರರಿಗಾಗಿ ಡಿಸ್‌ಅಪಿಯರಿಂಗ್‌ ಫೋಟೋಸ್‌ ಫೀಚರ್ಸ್‌ ಅನ್ನು ಪರಿಚಯಿಸಿದೆ.

ವಾಟ್ಸಾಪ್‌ ಬಳಕೆದಾರರ ನೆಚ್ಚಿನ ಮೆಸೇಜಿಂಗ್‌ ಅಪ್ಲಿಕೇಶನ್‌ ಆಗಿ ಗುರುತಿಸಿಕೊಂಡಿದೆ. ಬಳಕೆದಾರರ ಅನುಕೂಲಕ್ಕಾಗಿ ವಾಟ್ಸಾಪ್‌ ಈಗಾಗಲೇ ಹಲವು ಫೀಚರ್ಸ್‌ಗಳನ್ನು ಪರಿಚಯಿಸಿದೆ. ಇದೀಗ ಬೀಟಾ ಬಳಕೆದಾರರಿಗಾಗಿ ಡಿಸ್‌ಅಪಿಯರಿಂಗ್‌ ಫೋಟೋಸ್‌ ಫೀಚರ್ಸ್‌ ಅನ್ನು ಪರಿಚಯಿಸಿದೆ. ಇದನ್ನು 'ವ್ಯೂ ಒನ್ಸ್‌' ಎಂದು ಹೆಸರಿಸಿದೆ. ಇದು ಇನ್‌ಸ್ಟಾಗ್ರಾಮ್‌ನ ಎಕ್ಸಫೈರಿಂಗ್‌ ಮೀಡಿಯಾ ಫೀಚರ್ಸ್‌ ಮಾದರಿಯಲ್ಲಿ ಕಾರ್ಯನಿರ್ವಹಿಸಲಿದೆ.

ಹೌದು, ವಾಟ್ಸಾಪ್‌ ಡಿಸ್‌ಅಪಿಯರಿಂಗ್‌ ಫೋಟೋಸ್‌ ಫೀಚರ್ಸ್‌ ಅನ್ನು ಪರಿಚಯಿಸಿದೆ. ಇದು ಸದ್ಯ ಬೀಟಾ ಬಳಕೆದಾರರಿಗೆ ಮಾತ್ರ ಲಭ್ಯವಿದೆ. ಈ ಫೀಚರ್ಸ್‌ ವಿಶೇಷತೆ ಅಂದರೆ ನೀವು ಕಳುಹಿಸಿದ ಫೋಟೋ ಸಂದೇಶವನ್ನು ರಿಸೀವರ್ ತೆರೆದ ನಂತರ ಮತ್ತು ಚಾಟ್‌ನಿಂದ ಹೊರಬಂದ ನಂತರ ಫೋಟೋ ಕಣ್ಮರೆಯಾಗುತ್ತದೆ. ಈ ಫೀಚರ್ಸ್‌ ಪ್ರಸ್ತುತ ಆಂಡ್ರಾಯ್ಡ್ ವಾಟ್ಸಾಪ್ ಬಳಕೆದಾರರಿಗೆ ಮಾತ್ರ ಲಭ್ಯವಿದೆ. ಹಾಗಾದ್ರೆ ವಾಟ್ಸಾಪ್‌ನ ಈ ಹೊಸ ಫೀಚರ್ಸ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.



ಈ ಹೊಸ ಫೀಚರ್ಸ್‌ನಿಂದಾಗಿ ವಾಟ್ಸಪ್‌ನಲ್ಲಿ ಕಳುಹಿಸಿದ ಫೋಟೋಗಳನ್ನು ರಿಸಿವರ್‌ ತೆರೆದ ನಂತರ ಮತ್ತು ಚಾಟ್‌ನಿಂದ ಹೊರಬಂದ ನಂತರ ಫೋಟೋ ಮರೆಯಾಗುವಂತೆ ಮಾಡಲಿದೆ. ಈ ಫೀಚರ್ಸ್‌ ಅನ್ನು ನೀವು ವಾಟ್ಸಾಪ್‌ ಗ್ರೂಪ್‌ನಲ್ಲಿಯೂ ಕೂಡ ಬಳಸಬಹುದು. ನೀವು ರೀಡಿಂಗ್‌ ರೆಸಿಪ್ಟ್‌ಗಳನ್ನು ನಿಷ್ಕ್ರೀಯಗೊಳಿಸಿದರೂ ಡಿಸ್‌ಅಪಿಯರಿಂಗ್‌ ಫೋಟೋಗಳನ್ನು ತೆರೆಯಬಹುದಾಗಿದೆ. ಇನ್ನು ನೀವು ಯಾವುದೇ ಮೀಡಿಯಾ ಫೊಟೋವನ್ನು ಶೇರ್‌ ಮಾಡುವಾಗ ವ್ಯೂ ಒನ್ಸ್ ಬಟನ್ ನಿಮಗೆ ಗೋಚರಿಸದಿದ್ದರೆ, ನೀವು ಈ ಫೀಚರ್ಸ್‌ ಅನ್ನು ಸ್ವೀಕರಿಸಿಲ್ಲ ಎಂದರ್ಥ. ಈ ವೈಶಿಷ್ಟ್ಯವನ್ನು ವಾಟ್ಸಾಪ್‌ನ 2.21.14.3 ಆಂಡ್ರಾಯ್ಡ್ ಆವೃತ್ತಿಯಲ್ಲಿ ಕಾಣಬಹುದು.



ವಾಟ್ಸಾಪ್‌ನಲ್ಲಿ ಇದರ ಕಾರ್ಯನಿರ್ವಹಣೆ ಹೇಗೆ?

ಗ್ಯಾಲರಿಯಿಂದ ಫೋಟೋಗಳನ್ನು ಆರಿಸುವ ಮೂಲಕ ಬಳಕೆದಾರರು ಡಿಸ್‌ಅಪಿಯರಿಂಗ್‌ ಫೋಟೋಗಳನ್ನು ಕಳುಹಿಸಲು ಸಾಧ್ಯವಾಗುತ್ತದೆ ಎಂದು ಹೇಳಲಾಗಿದೆ. ನೀವು ಆಯ್ಕೆ ಮಾಡಿದ ನಂತರ, ನೀವು "ಶೀರ್ಷಿಕೆ ಸೇರಿಸಿ" ಬಾರ್ ಬಳಿ ಅಪ್ಲಿಕೇಶನ್ ಪ್ರದರ್ಶಿಸುವ ಗಡಿಯಾರದಂತಹ ಐಕಾನ್ ಅನ್ನು ಟ್ಯಾಪ್ ಮಾಡಬೇಕಾಗುತ್ತದೆ. ನಂತರ ನೀವು ಡಿಸ್‌ಅಪಿಯರಿಂಗ್‌ ‌ ಫೋಟೋಗಳನ್ನು ನಿಮ್ಮ ಸ್ನೇಹಿತರು ಮತ್ತು ಕುಟುಂಬ ಸದಸ್ಯರಿಗೆ ಕಳುಹಿಸಬಹುದು. ವೀಡಿಯೊಗಳು, ಫೋಟೋಗಳು ಮತ್ತು ಜಿಐಎಫ್‌ಗಳಿಗಾಗಿ ಈ ಫೀಚರ್ಸ್‌ ಕಾರ್ಯನಿರ್ವಹಿಸುತ್ತದೆ. ಇದಲ್ಲದೆ ನೀವು ರೀಡಿಂಗ್‌ ರೆಸಿಪ್ಟ್‌ಗಳನ್ನು ನಿಷ್ಕ್ರಿಯಗೊಳಿಸಿದರೆ, ನೀವು ವ್ಯೂ ಒನ್ಸ್ ಫೋಟೋ ಅಥವಾ ವೀಡಿಯೊ ಸೆಟ್ ಅನ್ನು ತೆರೆದಿದ್ದೀರಾ ಎಂದು ಸ್ವೀಕರಿಸುವವರಿಗೆ ಇನ್ನೂ ನೋಡಲು ಸಾಧ್ಯವಾಗುತ್ತದೆ. ಆದರೆ ಸ್ವೀಕರಿಸುವವರು ನಿಮ್ಮ ಚಿತ್ರವನ್ನು ತೆರೆದಾಗ ಪರಿಶೀಲಿಸಲು ನಿಮಗೆ ಸಾಧ್ಯವಾಗುವುದಿಲ್ಲ.



ನೀವು ಗ್ರೂಪ್‌ನಲ್ಲಿ ಡಿಸ್‌ಅಪಿಯರಿಂಗ್‌ ಫೋಟೋ ಹಂಚಿಕೊಳ್ಳುತ್ತಿದ್ದರೆ, ನೀವು ರಿಡಿಂಗ್‌ ರೆಸಿಪ್ಟ್‌ಗಳನ್ನು ನಿಷ್ಕ್ರಿಯಗೊಳಿಸಿದ್ದರೂ ಸಹ ಇತರ ಭಾಗವಹಿಸುವವರು ಅವಧಿ ಮೀರುವ ಫೋಟೋಗಳನ್ನು ತೆರೆಯುತ್ತಿರುವಾಗ ನೀವು ನೋಡಲು ಸಾಧ್ಯವಾಗುತ್ತದೆ. ಸ್ಕ್ರೀನ್‌ಶಾಟ್ ಅಥವಾ ಸ್ಕ್ರೀನ್ ರೆಕಾರ್ಡಿಂಗ್ ಫೀಚರ್ಸ್‌ಗಳನ್ನು ಬಳಸಿಕೊಂಡು ಸ್ವೀಕರಿಸುವವರಿಗೆ ಫೋಟೋ ಅಥವಾ ವೀಡಿಯೊವನ್ನು ಉಳಿಸಲು ಸಾಧ್ಯವಾಗಲಿದೆ. ಇನ್ನು ಗ್ರೂಪ್‌ಗಳಲ್ಲಿ ‘ವ್ಯೂ ಒನ್ಸ್' ಗುಂಡಿಯನ್ನು ಬಳಸಿ ಫೋಟೋಗಳು ಮತ್ತು ವೀಡಿಯೊಗಳನ್ನು ಹಂಚಿಕೊಳ್ಳಲು ನಿಮಗೆ ಅನುಮತಿ ಇದೆ. "ಸಂದೇಶ ಮಾಹಿತಿ" ವಿಭಾಗದಲ್ಲಿ ಅವರೆಲ್ಲರೂ ಯಾರು ತೆರೆದರು ಎಂಬುದನ್ನು ನೀವು ನೋಡಲು ಸಾಧ್ಯವಾಗುತ್ತದೆ.

(Kannada Copy of Gizbot Kannada)