ಮುಸ್ಲಿಮರು ಇನ್ನೂ ಎರಡು ಐತಿಹಾಸಿಕ ಸ್ಥಳಗಳನ್ನು ಬಿಟ್ಟು ಕೊಡಬೇಕು, ಭಾರತ ಜಾತ್ಯತೀತ ಆಗಿರಲು ಹಿಂದುಗಳೇ ಕಾರಣ, ಮುಸ್ಲಿಂ ಬಾಹುಳ್ಯ ಇದ್ದರೆ ಜಾತ್ಯತೀತ ಆಗಿರುತ್ತಿರಲಿಲ್ಲ ; ಕೆ.ಕೆ ಮಹಮ್ಮದ್ 

02-12-25 11:19 pm       HK News Desk   ದೇಶ - ವಿದೇಶ

ಅಯೋಧ್ಯೆ ರಾಮಮಂದಿರ ಮಾತ್ರ ಅಲ್ಲ.. ಮುಸ್ಲಿಮರು ಇನ್ನೂ ಎರಡು ಐತಿಹಾಸಿಕ ಸ್ಥಳಗಳನ್ನು ಹಿಂದೂಗಳಿಗೆ ಬಿಟ್ಟುಕೊಡಬೇಕಿದೆ ಎಂದು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ (ಎಎಸ್‌ಐ) ಮಾಜಿ ಪ್ರಾದೇಶಿಕ ನಿರ್ದೇಶಕ ಕೆ.ಕೆ. ಮುಹಮ್ಮದ್ ಹೇಳಿದ್ದಾರೆ.

ಕೋಜಿಕ್ಕೋಡ್, ಡಿ.2 : ಅಯೋಧ್ಯೆ ರಾಮಮಂದಿರ ಮಾತ್ರ ಅಲ್ಲ.. ಮುಸ್ಲಿಮರು ಇನ್ನೂ ಎರಡು ಐತಿಹಾಸಿಕ ಸ್ಥಳಗಳನ್ನು ಹಿಂದೂಗಳಿಗೆ ಬಿಟ್ಟುಕೊಡಬೇಕಿದೆ ಎಂದು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ (ಎಎಸ್‌ಐ) ಮಾಜಿ ಪ್ರಾದೇಶಿಕ ನಿರ್ದೇಶಕ ಕೆ.ಕೆ. ಮುಹಮ್ಮದ್ ಹೇಳಿದ್ದಾರೆ.

ಕೇರಳದ ಕೋಝಿಕ್ಕೋಡ್ ನಲ್ಲಿ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಕೆ.ಕೆ.ಮುಹಮ್ಮದ್, 'ನನ್ನ ಪ್ರಕಾರ ಮುಸ್ಲಿಮರು ಇನ್ನೂ ಎರಡು ಐತಿಹಾಸಿಕ ಸ್ಥಳಗಳನ್ನು ಹಿಂದೂಗಳಿಗೆ ಬಿಟ್ಟುಕೊಡಬೇಕಾದೀತು ಎಂದು ನಾನು ಹಿಂದೆಯೇ ಹೇಳಿದ್ದೆ. ಶ್ರೀಕೃಷ್ಣನ ಜನ್ಮಸ್ಥಳ ಮಥುರಾ ಮತ್ತು ಕಾಶಿ ಶಿವನ ದೇವಸ್ಥಾನಕ್ಕೆ ಸಂಬಂಧ ಹೊಂದಿರುವ ಜ್ಞಾನವಾಪಿಯಲ್ಲಿರುವ ಮಸೀದಿಗಳನ್ನು ಹಿಂದುಗಳಿಗೆ ಬಿಟ್ಟು ಕೊಡಬೇಕು ಎಂದು ಅವರು ಹೇಳಿದ್ದಾರೆ.

ಮುಸ್ಲಿಮರು ಹಿಂದು ಸಮುದಾಯಕ್ಕೆ ಹಸ್ತಾಂತರಿಸಬೇಕಾದ ಎರಡು ಪ್ರಮುಖ ಸ್ಥಳಗಳು ಇವು. ಏಕೆಂದರೆ ಮೆಕ್ಕಾ ಮತ್ತು ಮದೀನಾ ಮುಸ್ಲಿಮರಿಗೆ ಎಷ್ಟು ಮುಖ್ಯವೋ ಅಷ್ಟೇ ಈ ಎರಡು ಪ್ರಮುಖ ಸ್ಥಳಗಳು ಹಿಂದೂಗಳಿಗೂ ಅಷ್ಟೇ ಮುಖ್ಯವಾಗುತ್ತದೆ. ಹಾಗೆಂದು ಎಲ್ಲ ಮಸೀದಿಗಳ ಹಿಂದೆಯೂ ಹಿಂದುಗಳು ಹೋಗುವುದನ್ನು ಬಿಟ್ಟು ಬಿಡಬೇಕು ಎಂದು ಮುಹಮ್ಮದ್ ಹೇಳಿದ್ದಾರೆ.

ಭಾರತ ಜಾತ್ಯಾತೀತವಾಗಿರಲು ಹಿಂದೂಗಳೇ ಕಾರಣ.. 

ಇದೇ ವೇಳೆ ಮುಸ್ಲಿಮರಿಗಾಗಿ ಪ್ರತ್ಯೇಕ ದೇಶ ಪಾಕಿಸ್ತಾನವನ್ನು ನೀಡಿದ ನಂತರವೂ, ಭಾರತ ಇಂದು ಜಾತ್ಯತೀತ ದೇಶವಾಗಿದ್ದರೆ, ಅದು ಹಿಂದೂಗಳ ಉದಾರತೆ ಕಾರಣದಿಂದಾಗಿ ಮಾತ್ರ ಎಂಬುದನ್ನು ಮುಸ್ಲಿಮರು ಒಪ್ಪಬೇಕು. ಮುಸ್ಲಿಂ ಬಾಹುಳ್ಯ ದೇಶವಾಗಿದ್ದರೆ, ಅದು ಎಂದಿಗೂ ಜಾತ್ಯತೀತ ದೇಶವಾಗುತ್ತಿರಲಿಲ್ಲ. ಈ ಸೂಕ್ಷ್ಮ ಸಂಗತಿಯನ್ನು ಮುಸ್ಲಿಮರು ಅರಿತುಕೊಳ್ಳಬೇಕು. ಇದಕ್ಕಾಗಿ ಅವರ ಕಡೆಯಿಂದ ಕೆಲವು ಸನ್ನೆಗಳು ಬರಬೇಕಾಗಿದೆ ಎಂದು ಹೇಳಿದರು. 

ಅಲ್ಲದೆ, ನೀವು ಕಮ್ಯುನಿಸ್ಟ್ ಇತಿಹಾಸಕಾರರೊಂದಿಗೆ ಈ ವಿಷಯಗಳ ಬಗ್ಗೆ ಮಾತನಾಡಬಾರದು. ಏಕೆಂದರೆ ಅವರು ಸಮಸ್ಯೆಯನ್ನು ಸಂಕೀರ್ಣಗೊಳಿಸುತ್ತಾರೆ. ಮುಸ್ಲಿಮರಲ್ಲು ಒಂದು ವಿಭಾಗವು ರಾಮ ಜನ್ಮಭೂಮಿಯನ್ನು ಹಸ್ತಾಂತರಿಸಲು ಸಿದ್ಧವಾಗಿತ್ತು. ರಾಮನ ಜನ್ಮಭೂಮಿ ಎನ್ನುವ ಕಾರಣಕ್ಕಾಗಿ. ಈ ಬಗ್ಗೆ ಅನೇಕರೊಂದಿಗೆ ಮಾತನಾಡಿದ್ದೇನೆ. ಆದರೆ ಕಮ್ಯುನಿಸ್ಟ್ ಇತಿಹಾಸಕಾರರು ಮುಸ್ಲಿಮರ ಮನಸ್ಸನ್ನು ವಿಷಪೂರಿತಗೊಳಿಸುತ್ತಾರೆ ಎಂದಿದ್ದಾರೆ.‌

In an interaction with the media in Kozhikode, former Archaeological Survey of India (ASI) Regional Director K.K. Muhammed stated that along with the Ayodhya Ram Temple issue, two more historical sites—Mathura (believed to be the birthplace of Lord Krishna) and the Gyanvapi site in Varanasi—should ideally be handed over to Hindus through mutual understanding between communities.