ಕೃತಕ ಬುದ್ಧಿಮತ್ತೆ ಎಫೆಕ್ಟ್ ; ಭವಿಷ್ಯದಲ್ಲಿ ಜನರು ಕೆಲಸವನ್ನೇ ಮಾಡದ ದಿನಗಳು ಬರಲಿವೆ, ಜಗತ್ತಿನ ಸಿರಿವಂತ ಎಲಾನ್ ಮಸ್ಕ್ ಭವಿಷ್ಯ ! 

01-12-25 10:59 pm       Bangalore Correspondent   ಕರ್ನಾಟಕ

ಕೃತಕ ಬುದ್ಧಿಮತ್ತೆ (ಎಐ) ಎಲ್ಲಾ ಕ್ಷೇತ್ರಗಳನ್ನೂ ಆವರಿಸಿಕೊಳ್ಳುತ್ತಿದ್ದು, ಇದರ ಪರಿಣಾಮಗಳ ಬಗ್ಗೆ ಸ್ಪೇಸ್‌ ಎಕ್ಸ್‌ ಮಾಲೀಕ ಎಲಾನ್‌ ಮಸ್ಕ್‌ ಅವರು ಮಾತನಾಡಿದ್ದು, "ಭವಿಷ್ಯದಲ್ಲಿ ಜನರು ಕೆಲಸವನ್ನೇ ಮಾಡದ ದಿನಗಳು ಬರಲಿವೆ" ಎಂದು ಹೇಳಿದ್ದಾರೆ. 

ಬೆಂಗಳೂರು, ಡಿ.1 : ಕೃತಕ ಬುದ್ಧಿಮತ್ತೆ (ಎಐ) ಎಲ್ಲಾ ಕ್ಷೇತ್ರಗಳನ್ನೂ ಆವರಿಸಿಕೊಳ್ಳುತ್ತಿದ್ದು, ಇದರ ಪರಿಣಾಮಗಳ ಬಗ್ಗೆ ಸ್ಪೇಸ್‌ ಎಕ್ಸ್‌ ಮಾಲೀಕ ಎಲಾನ್‌ ಮಸ್ಕ್‌ ಅವರು ಮಾತನಾಡಿದ್ದು, "ಭವಿಷ್ಯದಲ್ಲಿ ಜನರು ಕೆಲಸವನ್ನೇ ಮಾಡದ ದಿನಗಳು ಬರಲಿವೆ" ಎಂದು ಹೇಳಿದ್ದಾರೆ. 

ಜೆರೋಧಾ ಸಹ ಸಂಸ್ಥಾಪಕ ನಿಖಿಲ್ ಕಾಮತ್ ಅವರ "ಪೀಪಲ್ ಬೈ ಡಬ್ಲೂಟಿಎಫ್‌" ಪಾಡ್‌ ಕ್ಯಾಸ್ಟ್‌ನಲ್ಲಿ ಮಾತನಾಡಿದ ಎಲಾನ್‌ ಮಸ್ಕ್‌, "ಮುಂದಿನ 20 ವರ್ಷಗಳಲ್ಲಿ ಜನರಿಗೆ ಕೆಲಸವು ಕೇವಲ ಆಯ್ಕೆಯಾಗಿ ಉಳಿಯಲಿದೆ. ಜನರು ಏಳು ದಿನಗಳ ತೀವ್ರ ನಿದ್ರೆ- ಎಚ್ಚರ-ಕೆಲಸ ಪುನರಾವರ್ತನೆ ವೇಳಾಪಟ್ಟಿಯನ್ನು ಅನುಸರಿಸಲಿದ್ದಾರೆ ಎಂದು ಹೇಳಿದ್ದಾರೆ. 

ಕೃತಕ ಬುದ್ಧಿಮತ್ತೆ ಮತ್ತು ರೊಬೋಟಿಕ್ಸ್ ತಂತ್ರಜ್ಞಾನವು ಭಾರೀ ಬದಲಾವಣೆಗಳನ್ನು ತರಲಿದ್ದು, ಮುಂದಿನ 20 ವರ್ಷಗಳಲ್ಲಿ ಮನುಷ್ಯನ ಕೆಲಸದ ಪರಿಕಲ್ಪನೆ ಸಂಪೂರ್ಣ ಬದಲಾಗಲಿದೆ. ಕೆಲಸ ಮಾಡುವುದು ಸಂಪೂರ್ಣವಾಗಿ ಐಚ್ಛಿಕವಾಗಿರಲಿದ್ದು, ಒಂದು ಹವ್ಯಾಸವಾಗಿ ಪರಿವರ್ತನೆಗೊಳ್ಳಲಿದೆ" ಎಂದು ಎಲಾನ್‌ ಮಸ್ಕ್‌ ಭವಿಷ್ಯ ನುಡಿದಿದ್ದಾರೆ. ಮಸ್ಕ್‌ ಅವರು ಕೃತಕ ಬುದ್ಧಿಮತ್ತೆ ಎನ್ನುವುದು ಸರ್ವವ್ಯಾಪಿ ಎಂದು ಹೇಳಿದ್ದಾರೆ. 

ಎಐ ಮತ್ತು ರೊಬೋಟಿಕ್ಸ್‌ ತಂತ್ರಜ್ಞಾನದಲ್ಲಿ ಕಂಡುಬರುವ ಪ್ರಗತಿಗಳು, ನಮ್ಮನ್ನು ಕೆಲಸ ಮಾಡುವುದು ಐಚ್ಛಿಕ ಎಂಬ ಹಂತಕ್ಕೆ ತರುತ್ತದೆ. ಈ ಹಂತದಲ್ಲಿ ನೀವು ನಿಮ್ಮ ತೋಟದಲ್ಲಿ ನಿಮ್ಮ ಸ್ವಂತ ತರಕಾರಿಗಳನ್ನು ಬೆಳೆಸಬಹುದು ಅಥವಾ ನೀವು ಅಂಗಡಿಗೆ ಹೋಗಿ ತರಕಾರಿಗಳನ್ನು ಖರೀದಿಸಬಹುದು" ಎಂದು ಬಿಲಿಯನೇರ್‌ ಉದ್ಯಮಿ ಹಾಸ್ಯ ಮಾಡಿದ್ದಾರೆ.

In a recent conversation on Nikhil Kamath’s “People by WTF” podcast, Elon Musk predicted that rapid advancements in artificial intelligence and robotics will dramatically reshape human life. Musk stated that within the next 20 years, work will become optional rather than a necessity, turning into more of a hobby.