ಬ್ರೇಕಿಂಗ್ ನ್ಯೂಸ್
02-09-21 03:49 pm Gizbot, Mutthuraju H M ಡಿಜಿಟಲ್ ಟೆಕ್
ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್ ಎನಿಸಿಕೊಂಡಿರುವ ವಾಟ್ಸಾಪ್ ತನ್ನ ಎರಡನೇ ಮಾಸಿಕ ವರದಿಯನ್ನು ಪ್ರಕಟಿಸಿದೆ. ಭಾರತ ಸರ್ಕಾರದ ಹೊಸ ಐಟಿ ನಿಯಮದ ಅನ್ವಯ ಸಿದ್ದವಾದ ಬಳಕೆದಾರರ ಸುರಕ್ಷತೆ ವರದಿ ಇದಾಗಿದೆ. ಇನ್ನು ಈ ವರದಿ ಪ್ರಕಾರ ಭಾರತದಲ್ಲಿ ಜೂನ್ 16 ರಿಂದ ಜುಲೈ 31 ರವರೆಗೆ ಕೇವಲ 46 ದಿನಗಳ ಅವಧಿಯಲ್ಲಿ 3,027,000 ಖಾತೆಗಳನ್ನು ನಿಷೇಧಿಸಿರುವುದಾಗಿ ಹೇಳಿದೆ. ಅದರೆ ಅರ್ಥಾತ್ ಮೂರು ಮಿಲಿಯನ್‌ಗೂ ಅಧಿಕ ಮಂದಿಯ ವಾಟ್ಸಾಪ್ ಖಾತೆ ಭಾರತದಲ್ಲಿ ಬ್ಯಾನ್ ಮಾಡಲಾಗಿದೆ.
ಹೌದು, ವಾಟ್ಸಾಪ್ ಭಾರತದಲ್ಲಿ ಕಳೆದ ಎರಡು ತಿಂಗಳ ಅವಧಿಯಲ್ಲಿ ಮೂರು ಮಿಲಿಯನ್ ವಾಟ್ಸಾಪ್ ಖಾತೆಯನ್ನು ತೆಗೆದು ಹಾಕಿದೆ. ವಾಟ್ಸಾಪ್‌ನ ನಿಯಮ ಪಾಲನೆ ಮಾಡುವಲ್ಲಿ ವಿಫಲರಾದ ವಾಟ್ಸಾಪ್ ಖಾತೆಗಳು ಇದರಲ್ಲಿ ಸೇರಿವೆ. ಸರ್ಕಾರದ ಹೊಸ ಐಟಿ ರೂಲ್ಸ್ ಪ್ರಕಾರ ದುರುದ್ದೇಶಪೂರಿತ ಹಾಗೂ ಆನೂನು ಬಾಹಿರ ಚಟುವಟಿಕೆ ನಡೆಸುವ ಖಾತೆಗಳ ವಿರುದ್ದ ವಾಟ್ಸಾಪ್ ಕ್ರಮ ಕೈಗೊಳ್ಳಲೇಬೇಕಾಗಿದೆ. ಹಾಗಾದ್ರೆ ಮೂರು ಮಿಲಿಯನ್ ವಾಟ್ಸಾಪ್ ಖಾತೆ ಬ್ಯಾನ್ ಆಗಲು ಕಾರಣ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.
ವಾಟ್ಸಾಪ್ ಭಾರತ ಸರ್ಕಾರದ ಹೊಸ ಐಟಿ ನಿಯಮಗಳ ಪ್ರಕಾರ ಈ ಕ್ರಮ ಕೈಗೊಂಡಿದೆ. ಅಲ್ಲದೆ ನಾವು ನಮ್ಮ ಬಳಕೆದಾರರನ್ನು ನಮ್ಮ ವೇದಿಕೆಯಲ್ಲಿ ಸುರಕ್ಷಿತವಾಗಿರಿಸಲು ನಾವು ಪ್ರಯತ್ನಿಸುತ್ತಲೇ ಇದ್ದೇವೆ. ಆದರೆ ನಿಯಮ ಪಾಲನೆ ಮಾಡದ, ದುರುದ್ದೇಶಪೂರಿತ ಕಾತೆಗಳ ವಿರುದ್ದ ಕ್ರಮ ಕೈಗೊಂಡಿದ್ದೇವೆ ಅನ್ನೊದನ್ನ ಸ್ಪಷ್ಟ ಪಡಿಸಿದೆ. ಅಲ್ಲದೆ ಐಟಿ ನಿಯಮಗಳು 2021 ರ ಪ್ರಕಾರ, 16 ಜೂನ್ ನಿಂದ 31 ಜುಲೈವರೆಗಿನ 46 ದಿನಗಳ ಎರಡನೇ ಮಾಸಿಕ ವರದಿ ಪ್ರಕಟಿಸಿರುವುದಾಗಿ ವಾಟ್ಸಾಪ್ ಹೇಳಿಕೊಂಡಿದೆ.
ಇನ್ನು ಈ ವರದಿಯಲ್ಲಿ ಬಳಕೆದಾರರ ದೂರುಗಳ ವಿವರಗಳನ್ನು ಮತ್ತು ವಾಟ್ಸಾಪ್ ತೆಗೆದುಕೊಂಡ ಕ್ರಮಗಳ ಬಗ್ಗೆ ಉಲ್ಲೇಖಿಸಲಾಗಿದೆ. ಇನ್ನು ವಾಟ್ಸಾಪ್ ಭಾರತದಲ್ಲಿ ಎರಡು ರೀತಿಯಲ್ಲಿ ಬಳಕೆದಾರರಿಂದ ಕುಂದುಕೊರತೆಗಳನ್ನು ಸ್ವೀಕರಿಸಿದೆ. ಮೊದಲನೇಯದಾಗಿ ವಾಟ್ಸಾಪ್ ಕುಂದುಕೊರತೆ ಅಧಿಕಾರಿಗೆ ಕಳುಹಿಸಲಾದ ಇ-ಮೇಲ್‌ಗಳ ಮೂಲಕ ಮತ್ತು ಎರಡನೆಯದಾಗಿ ಅಂಚೆ ಮೂಲಕ ಕಳುಹಿಸಿದ ಮೇಲ್‌ಗಳ ಮೂಲಕ ಕ್ರಮ ಕೈಗೊಂಡಿದೆ. ಅಲ್ಲದೆ ವಾಟ್ಸಾಪ್‌ಗೆ ಸಂಬಂಧಿಸಿದ 137 ವಿನಂತಿಗಳನ್ನು ಸ್ವೀಕರಿಸಲಾಗಿದೆ ಎಂದು ವಾಟ್ಸಾಪ್ ಕಂಪನಿಯು ಹೇಳಿದೆ. ಜೊತೆಗೆ ಇದೇ ಅವಧಿಯಲ್ಲಿ ಭಾರತದಲ್ಲಿ 316 ವಾಟ್ಸಾಪ್ ಬ್ಯಾನ್ ಮೇಲ್ಮನವಿಗಳನ್ನು ಸ್ವೀಕರಿಸಿದ್ದು, ಅದರಲ್ಲಿ 73 ಖಾತೆಗಳನ್ನು ಬ್ಯಾನ್ ಮಾಡಲಾಗಿದೆ ಎನ್ನಲಾಗಿದೆ.
ವಾಟ್ಸಾಪ್ ತನ್ನ ಮಾಸಿಕ ಸುರಕ್ಷತಾ ವರದಿಯಲ್ಲಿ 45 ಇತರೆ ಬೆಂಬಲ ಸಂಬಂಧಿತ ವಿನಂತಿಗಳು, 64 ಉತ್ಪನ್ನ ಬೆಂಬಲ ಸಂಬಂಧಿತ ವಿನಂತಿಗಳು ಮತ್ತು 32 ಸುರಕ್ಷತೆ ಸಂಬಂಧಿತ ವಿನಂತಿಗಳನ್ನು ಸ್ವೀಕರಿಸಿದೆ. ಈ ವಿನಂತಿಗಳ ಆಧಾರದಲ್ಲಿ ಯಾವುದೇ ಕ್ರಮ ಕೈಗೊಂಡಿಲ್ಲ ಎಂದಿದೆ. ಇನ್ನು ಈ ಅವಧಿಯಲ್ಲಿ ಅಂದರೆ ಜೂನ್ 16 ಮತ್ತು ಜುಲೈ 31 ರ ನಡುವೆ 594 ದೂರುಗಳನ್ನು ಸ್ವೀಕರಿಸಿದೆ, ಅದರಲ್ಲಿ 74 ರಿಕ್ವೆಸ್ಟ್‌ಗಳನ್ನು ಕಾರ್ಯಗತಗೊಳಿಸಲಾಗಿದೆ.
ಇನ್ನು "ವಾಟ್ಸಾಪ್ ಎಂಡ್-ಟು-ಎಂಡ್ ಎನ್‌ಕ್ರಿಪ್ಟ್ ಮೆಸೇಜಿಂಗ್ ಸೇವೆ ಹೊಂದಿದ್ದು, ದುರುಪಯೋಗವನ್ನು ತಡೆಗಟ್ಟುವಲ್ಲಿ ಮುಂಚೂಣಿಯಲ್ಲಿದೆ. ಆದರೂ ನಾವು ನಮ್ಮ ಬಳಕೆದಾರರನ್ನು ಸುರಕ್ಷಿತವಾಗಿರಿಸಲು ಹೊಸ ಮಾದರಿಯ ತಂತ್ರಜ್ಞಾನ, ಡೇಟಾ ಸೈಂಟಿಸ್ಟ್ ಮತ್ತು ತಜ್ಞರು ಮತ್ತು ಪ್ರಕ್ರಿಯೆಗಳಲ್ಲಿ ನಿರಂತರವಾಗಿ ಹೊಸ ಪ್ರಯತ್ನ ಮಾಡುತ್ತಲೇ ಇದ್ದೇವೆ ಎಂದು ಹೇಳಿಕೊಡಿದೆ. ಇದಲ್ಲದೆ "+91" ಮೊಬೈಲ್ ನಂಬರ್‌ನಿಂದ ಗುರುತಿಸಲ್ಪಟ್ಟ ಭಾರತೀಯ ವಾಟ್ಸಾಪ್ ಅಕೌಂಟ್‌ಗಳನ್ನು ಪತ್ತೆಹಚ್ಚುವಿಕೆಯ ವಿಧಾನಗಳ ಮೂಲಕ, ಭಾರತದ ಹೊಸ ಐಟಿ ಸೇವಾ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಕ್ರಮ ಕೈಗೊಳ್ಳಲಾಗಿದೆ ಅನ್ನೊದನ್ನ ವಾಟ್ಸಾಪ್ ತನ್ನ ಅನುಸರಣಾ ವರದಿಯಲ್ಲಿ ತಿಳಿಸಿದೆ.
14-05-25 05:16 pm
Bangalore Correspondent
Hassan Kidnap: ಅಪ್ಪನ ಎದುರೇ ಮಗಳ ಅಪಹರಣ ; ಬೇಲೂರಿ...
13-05-25 09:50 pm
Davangere Accident, police constable death: ಲ...
13-05-25 09:37 pm
ಅರ್ಧದಲ್ಲಿ ಕದನ ನಿಲ್ಲಿಸಿದ್ದು ಯಾಕೆ? ಇಷ್ಟಕ್ಕೆ ನಮ್...
13-05-25 01:14 pm
Dr Subbanna Ayyappan Dead, Mandya: ಪದ್ಮಶ್ರೀ ಪ...
11-05-25 01:21 pm
14-05-25 04:45 pm
HK News Desk
ಆದಂಪುರ ವಾಯುನೆಲೆ ಧ್ವಂಸ ಮಾಡಿದ್ದೇವೆಂದ ಪಾಕಿಗಳಿಗೆ...
13-05-25 08:47 pm
ಪಾಕ್ ಅಣ್ವಸ್ತ್ರ ಗೋದಾಮಿನಲ್ಲಿ ವಿಕಿರಣ ಸೋರಿಕೆ ; ಅಮ...
13-05-25 06:46 pm
ಪಂಜಾಬ್ನಲ್ಲಿ ವಿಷಪೂರಿತ ಮದ್ಯ ಸೇವಿಸಿ 17 ಮಂದಿ ಬಲಿ...
13-05-25 04:39 pm
ಪಾಕಿಸ್ತಾನದಲ್ಲಿ ಬೆನ್ನು ಬೆನ್ನಿಗೆ ಭೂಕಂಪನ ; ಪರಮಾಣ...
13-05-25 02:51 pm
14-05-25 01:42 pm
Mangalore Correspondent
Agumbe, Accident, Yakshagana: ಆಗುಂಬೆ ; ಭಾರೀ ಮ...
14-05-25 01:28 pm
ಪ್ರಧಾನಿ ಮೋದಿ ಆದಂಪುರ ವಾಯುನೆಲೆಗೆ ದಿಢೀರ್ ಭೇಟಿ ;...
13-05-25 10:33 pm
ಹೆದ್ದಾರಿ ಬದಿಯಲ್ಲಿ ಕಸ ಎಸೆಯುವವರ ಮೇಲೆ ನಿಗಾ ವಹಿಸಿ...
13-05-25 07:33 pm
ಕರಾವಳಿಗೆ ಮತ್ತೊಂದು ಸುಸಜ್ಜಿತ ವಿಮಾನ ನಿಲ್ದಾಣ ; ಕಾ...
12-05-25 08:22 pm
13-05-25 07:55 pm
HK News Desk
Abdul Rauf Azhar; ಕಂದಹಾರ್ ವಿಮಾನ ಹೈಜಾಕ್ ಮಾಸ್ಟರ...
08-05-25 05:32 pm
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm