ಸೇಡಂನಲ್ಲಿ ಆರೆಸ್ಸೆಸ್ ಪಥಸಂಚಲನ ; ನೂರಾರು ಕಾರ್ಯಕರ್ತರನ್ನು ವಶಕ್ಕೆ ಪಡೆದ ಪೊಲೀಸರು, ಪ್ರಿಯಾಂಕ ಖರ್ಗೆ ವಿರುದ್ಧ ತಿರುಗಿದ ಆಕ್ರೋಶ, ಚಿತ್ತಾಪುರದಲ್ಲಿ ರ್ಯಾಲಿ ಮುಂದೂಡಿಕೆ 

19-10-25 07:00 pm       HK News Desk   ಕರ್ನಾಟಕ

ಕಲಬುರಗಿ ಜಿಲ್ಲೆಯ ಸೇಡಂನಲ್ಲಿ ತಹಸೀಲ್ದಾರ್ ಅನುಮತಿ ಹೊರತಾಗಿಯೂ ಪಥಸಂಚಲನ ನಡೆಸಿದ ನೂರಾರು ಆರೆಸ್ಸೆಸ್ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ. 

ಕಲಬುರಗಿ, ಅ.19: ಕಲಬುರಗಿ ಜಿಲ್ಲೆಯ ಸೇಡಂನಲ್ಲಿ ತಹಸೀಲ್ದಾರ್ ಅನುಮತಿ ಹೊರತಾಗಿಯೂ ಪಥಸಂಚಲನ ನಡೆಸಿದ ನೂರಾರು ಆರೆಸ್ಸೆಸ್ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ. 

ಆರೆಸ್ಸೆಸ್ ನೂರು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಪಥಸಂಚಲನ ನಡೆಸಲು ಸೇಡಂ ತಾಲೂಕಿನ ತಹಸೀಲ್ದಾರ್ ಗೆ ಅನುಮತಿ ಕೇಳಲಾಗಿತ್ತು. ತಹಸೀಲ್ದಾರ್ ಅನುಮತಿ ನೀಡದಿದ್ದರೂ ಸಂಜೆ 4 ಗಂಟೆ ವೇಳೆಗೆ ಆರೆಸ್ಸೆಸ್ ಕಾರ್ಯಕರ್ತರು ಸೇರಿದ್ದು ಪಟ್ಟಣದ ಮಾತೃಛಾಯ ಶಾಲೆಯಿಂದ ಬಸವೇಶ್ವರ ವೃತ್ತದ ವರೆಗೆ ಪಥಸಂಚಲನ ಆರಂಭಿಸಿದ್ದಾರೆ. ‌ಮುಂಜಾಗ್ರತಾ ಕ್ರಮವಾಗಿ ಸೇಡಂ ಪಟ್ಟಣದಲ್ಲಿ ವ್ಯಾಪಕ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ‌ಅನುಮತಿ ಇಲ್ಲದೆ ರ್ಯಾಲಿ ಆರಂಭಿಸಿದ್ದರಿಂದ ಪೊಲೀಸರು ನೂರಾರು ಆರ್‌ಎಸ್‌ಎಸ್ ಕಾರ್ಯಕರ್ತರನ್ನ ಬಂಧಿಸಿದ್ದು ಬಸ್‌ನಲ್ಲಿ ಕರೆದ್ಯೊಯ್ದಿದ್ದಾರೆ. ಪೊಲೀಸರು ತಡೆ ಹಾಕಿದ್ದಕ್ಕೆ ಜಿಲ್ಲಾಡಳಿತ, ಸರ್ಕಾರದ ವಿರುದ್ಧ ಆರ್‌ಎಸ್‌ಎಸ್ ಮತ್ತು ಬಿಜೆಪಿ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಚಿತ್ತಾಪುರದಲ್ಲಿ ನ.2ರಂದು ಪಥಸಂಚಲನ ನಿಗದಿ 

ಇದೇ ವೇಳೆ, ಚಿತ್ತಾಪುರ ಪಟ್ಟಣದಲ್ಲಿ ಆರ್‌ಎಸ್‌ಎಸ್ ಪಥಸಂಚಲನಕ್ಕೆ ಅನುಮತಿ ನೀಡದೇ ಇರುವುದನ್ನು ಪ್ರಶ್ನಿಸಿ ಕಲಬುರಗಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಕೆಯಾಗಿದೆ. ವಿಚಾರಣೆ ವೇಳೆ ನ.2ಕ್ಕೆ ಮುಂದಿನ ದಿನಾಂಕದ ಬಗ್ಗೆ ಆರೆಸ್ಸೆಸ್ ಪರ ವಕೀಲರು ಕೇಳಿಕೊಂಡಿದ್ದು ಮುಂದಿನ ವಿಚಾರಣೆಯನ್ನು ಅಕ್ಟೋಬರ್ 24ಕ್ಕೆ ಮುಂದೂಡಲಾಗಿದೆ. ನವೆಂಬರ್ 2 ರಂದು ಪಥಸಂಚಲನ ನಡೆಸಲು ಅನುಮತಿ ಕೇಳಿದ ಆರ್‌ಎಸ್‌ಎಸ್ ಮನವಿಗೆ ಹೈಕೋರ್ಟ್ ಒಪ್ಪಿಗೆ ನೀಡಿದ್ದು ಹೊಸ ಅರ್ಜಿ ಸಲ್ಲಿಸಲು ಸೂಚಿಸಿದೆ. 

ಅ.19ರಂದು ಚಿತ್ತಾಪುರ ಪಟ್ಟಣದಲ್ಲಿ ಆರೆಸ್ಸೆಸ್ ಪಥಸಂಚಲನಕ್ಕೆ ಅನುಮತಿ ಕೇಳಲಾಗಿತ್ತು. ಆದರೆ ಜಿಲ್ಲಾಡಳಿತ ಅವಕಾಶ ನಿರಾಕರಿಸಿತ್ತು. ಈ ಬಗ್ಗೆ ಆರ್‌ಎಸ್‌ಎಸ್ ಪರ ವಕೀಲರಾದ ಸತ್ಯಾನಾರಾಯಣ ಆಚಾರ್ಯ ಹಾಗೂ ವಾದಿರಾಜ ಕಾಡ್ಲೂರ ಹೇಳಿಕೆ ನೀಡಿದ್ದು ಇವತ್ತು ಒಂದೇ ದಿನ ಎರಡು ಸಂಘಟನೆಗಳು ಪಥಸಂಚಲನಕ್ಕೆ ಅವಕಾಶ ಕೇಳಿದ ಕಾರಣ ನಮಗೆ ಅವಕಾಶ ನಿರಾಕರಿಸಲಾಗಿದೆ ಎಂದು ಸರ್ಕಾರಿ ವಕೀಲರು ವಾದಿಸಿದ್ದರು. ಆದರೆ RSS ಕಡೆಯಿಂದ ಅ.13ರಂದೇ ಅರ್ಜಿ ಸಲ್ಲಿಸಲಾಗಿತ್ತು.‌ ಇನ್ನೊಂದು ಸಂಘಟನೆಯವರು ನಿನ್ನೆ ಅರ್ಜಿ ಸಲ್ಲಿಸಿದ್ದಾರೆ. ತಾಲೂಕು ಆಡಳಿತ ಇದೇ ಕಾರಣ ಮುಂದೊಡ್ಡಿ ನಮಗೆ ಅನುಮತಿ ನಿರಾಕರಿಸಿತ್ತು. ಬೇರೊಂದು ದಿನ ನಿಗದಿ ಮಾಡಬಹುದಾ ಎಂದು ಹೈಕೋರ್ಟ್ ಕೇಳಿತ್ತು. ನಾವು ಧಾರಾಳವಾಗಿ ಆಗಬಹುದು ಅಂತ ಹೇಳಿ ನ.2ರಂದು ಮಾಡುತ್ತೇವೆ ಎಂದೆವು. ಅದಕ್ಕೆ ಹೈಕೋರ್ಟ ವಿಚಾರಣೆಯನ್ನು ಅ.24 ಕ್ಕೆ ಮುಂದೂಡಿದೆ ಎಂದು ತಿಳಿಸಿದರು.

In Sedam, Kalaburagi district, police detained hundreds of RSS activists who conducted a route march without official permission from the Tahsildar. Despite being denied approval, the activists began their march from Matru Chhaya School to Basaveshwara Circle, prompting heavy police deployment.