ಬ್ರೇಕಿಂಗ್ ನ್ಯೂಸ್
21-10-21 03:40 pm Headline Karnataka News Network ಡಿಜಿಟಲ್ ಟೆಕ್
ನ್ಯೂಯಾರ್ಕ್, ಅ.21 : ತಮಗೆ ತೋಚಿದ್ದನ್ನು ಗೀಚಿಕೊಂಡು, ಇನ್ನೊಬ್ಬರನ್ನು ಹಂಗಿಸಿ, ಇನ್ನು ಕೆಲವರು ಯಾರನ್ನೋ ಎತ್ತಿಕಟ್ಟುವ ರೀತಿ, ಜನರನ್ನು ಪ್ರಚೋದಿಸುವ ರೀತಿ ವಿಡಿಯೋ ಹರಿಬಿಟ್ಟು, ಒಂದಷ್ಟು ಮಂದಿ ತಮ್ಮದೇ ಗ್ರೂಪ್ ಕಟ್ಟಿಕೊಂಡು ತಮ್ಮದೇ ವಿಡಿಯೋ, ತಮ್ಮದೇ ವಿಚಾರಗಳನ್ನು ಹರಿಯಬಿಟ್ಟು ಮೈಲೇಜ್ ತೆಗೆದುಕೊಳ್ಳುತ್ತಿರುವುದು.. ಹೀಗೆ ನಾನಾ ರೀತಿಯಲ್ಲಿ ಸೋಶಿಯಲ್ ಮೀಡಿಯಾದ ಅತಿದೊಡ್ಡ ವೇದಿಕೆಯಾಗಿ ಮೆರೆಯುತ್ತಿರುವ ಫೇಸ್ ಬುಕ್ ಎಂಬ ವಿಶ್ವವ್ಯಾಪಿಯ ಮಾಯಾಲೋಕ ಇನ್ನು ಕೇವಲ ಸೋಶಿಯಲ್ ಮೀಡಿಯಾ ಅಷ್ಟೇ ಆಗಿ ಉಳಿಯೋದಿಲ್ಲ. ಜಗತ್ತಿನಾದ್ಯಂತ ಕೆಲವು ದೇಶಗಳು ಫೇಸ್ಬುಕ್ ಮೇಲೆ ಕಾನೂನು ಹೆಸರಲ್ಲಿ ಕಡಿವಾಣದ ತೂಗುಗತ್ತಿ ಬೀಸಿದ್ದರಿಂದ ಎಚ್ಚತ್ತಿರುವ ಫೇಸ್ಬುಕ್ ಜನಕ ಮಾರ್ಕ್ ಜುಕರ್ಬರ್ಗ್ ತನ್ನ ಮಾಯಾಲೋಕವನ್ನು ಮತ್ತೊಂದು ಮಜಲಿನತ್ತ ಒಯ್ಯಲು ಸಿದ್ಧಗೊಂಡಿದ್ದಾನೆ.
ಮೆಟವರ್ಸ್ ಅನ್ನುವುದು ಸೋಶಿಯಲ್ ಮೀಡಿಯಾದ ಮುಂದುವರಿದ ಪರಿಕಲ್ಪನೆ. ನಾವು ನೀವು, ಊಹಿಸಲಾಗದ ರೀತಿಯ ಕಲ್ಪನೆಗೆ ನಿಲುಕದ ಮತ್ತೊಂದು ಮಾಯಾಲೋಕ. ಈ ರೀತಿಯ ಹೊಸತನಕ್ಕೆ ಒಗ್ಗಿಕೊಳ್ಳುವುದಕ್ಕಾಗಿ ಫೇಸ್ಬುಕ್ ಹೆಸರಿನ ಕಂಪನಿಯನ್ನು ಹೊಸ ದೃಷ್ಟಿಕೋನಕ್ಕೆ ಒಗ್ಗಿಸಲು ಮಾರ್ಕ್ ಜುಕರ್ ಬರ್ಗ್ ರೆಡಿಯಾಗಿದ್ದಾನೆ. ಇದೇ ಅ.28ರಂದು ವಾರ್ಷಿಕ ಮಹಾಸಭೆ ನಡೆಯಲಿದ್ದು, ಅದರಲ್ಲಿ ಫೇಸ್ಬುಕ್ ಹೆಸರನ್ನು ಭವಿಷ್ಯದ ಡಿಜಿಟಲ್ ಲೋಕ ಮೆಟವರ್ಸ್ ರೂಪಕ್ಕೆ ಬದಲಾಯಿಸಲು ದಿಟ್ಟ ಹೆಜ್ಜೆ ಇಟ್ಟಿದ್ದಾನೆ. ಫೇಸ್ಬುಕ್ ಈಗ ಇರುವ ರೀತಿಯಲ್ಲೇ ಅದರ ಸ್ಪೆಲ್ಲಿಂಗ್ ಬದಲಿಸಿ, ಹೊಸ ಕಂಪನಿಯಾಗಿ ಕಟ್ಟಲು ಮುಂದಡಿ ಇಟ್ಟಿದ್ದಾನೆ.
ಈ ಬಗ್ಗೆ ಅಮೆರಿಕದ ವಾಷಿಂಗ್ಟನ್ ಪೋಸ್ಟ್, ರಾಯ್ಟರ್ಸ್, ದಿ ವರ್ಜ್ ಅನ್ನುವ ಮುಂಚೂಣಿ ಮಾಧ್ಯಮಗಳು ವರದಿ ಮಾಡಿವೆ. ಆದರೆ ಈ ಬಗ್ಗೆ ಮಾರ್ಕ್ ಜುಕರ್ಬರ್ಗ್ ಆಗಲೀ, ಫೇಸ್ಬುಕ್ ಕಂಪನಿಯಾಗಲೀ ಅಧಿಕೃತವಾಗಿ ಯಾವುದೇ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ. ಫೇಸ್ಬುಕ್ ಜಾಲತಾಣ ಹೊಸತನಕ್ಕೆ ತೆರೆದುಕೊಂಡಲ್ಲಿ ಯುರೋಪ್ ದೇಶಗಳಲ್ಲೇ ಹತ್ತು ಸಾವಿರ ಹೊಸ ಉದ್ಯೋಗ ಸೃಷ್ಟಿಯಾಗಲಿದೆ ಎಂದು ದಿ ವರ್ಜ್ ಹೇಳಿಕೊಂಡಿದೆ. 2015ರಲ್ಲಿ ಗೂಗಲ್ ಕೂಡ ಇದೇ ರೀತಿ ತನ್ನ ಬ್ರಾಂಡ್ ಹೆಸರಲ್ಲಿ ಹೊಸತನ್ನು ಕಟ್ಟಲು ಹೊರಟಿತ್ತು. ಗೂಗಲ್ ಬ್ರಾಂಡಿನಲ್ಲಿ ಹಾರ್ಡ್ ವೇರ್ ವಸ್ತುಗಳು, ಚಾಲಕನಿಲ್ಲದ ಕಾರುಗಳು, ಆರೋಗ್ಯ ಕ್ಷೇತ್ರಕ್ಕೂ ಕಾಲಿಟ್ಟಿತ್ತು. 2016ರಲ್ಲಿ ಸ್ನಾಪ್ ಚಾಟ್ ಕಂಪನಿ ಸ್ನಾಪ್ ಇಂಕ್ ರೂಪಕ್ಕೆ ಬದಲಾಗಿ ತನ್ನ ವ್ಯಾಪ್ತಿಯನ್ನು ಡಿಜಿಟಲ್ ಕ್ಯಾಮರಾ, ಕನ್ನಡಕ ಮಾದರಿಯ ಕ್ಯಾಮರಾಗಳನ್ನು ಜಗತ್ತಿಗೆ ಪರಿಚಯಿಸಿತ್ತು.
ಆದರೆ, ಫೇಸ್ಬುಕ್ ಮೆಟವರ್ಸ್ ಆಗಿ ಬದಲಾಗುತ್ತಿರುವುದು ಹೊಸ ರೀತಿಯ ಡಿಜಿಟಲ್ ಲೋಕವನ್ನು ಸೃಷ್ಟಿಸಲಿದೆ. ಅದರಂತೆ, ಫೇಸ್ಬುಕ್ ಕೇವಲ ವನ್ ಟು ವನ್ ಸಂಭಾಷಣೆಯ ಅಥವಾ ವೀಕ್ಷಣೆಗೆ ಮಾತ್ರ ಸೀಮಿತವಾಗಿರಲ್ಲ. ಅಮೆಝಾನ್, ನೆಟ್ ಫ್ಲಿಕ್ಸ್ ರೀತಿ ತಮ್ಮದೇ ಪ್ಲಾಟ್ ಫಾರಂ ಸೃಷ್ಟಿಸಿಕೊಂಡು ಅನಿಯಮಿತವಾಗಿ ಮಾರುಕಟ್ಟೆ ಸೃಷ್ಟಿಸುವ ಕಲ್ಪನೆ ಇಟ್ಟುಕೊಂಡಿದೆ. ಎಲ್ಲವೂ ಡಿಜಿಟಲ್ ಆಗುತ್ತಿರುವ ಹಿನ್ನೆಲೆಯಲ್ಲಿ ತನ್ನದೇ ಡಿಜಿಟಲ್ ಕರೆನ್ಸಿ, ವಿಡಿಯೋ ಗೇಮ್ ಪ್ಲಾಟ್ ಫಾರಂ, ಪ್ರೋಗ್ರಾಮ್ ಪ್ರಾಜೆಕ್ಟ್ ಹೀಗೆ ವಿಭಿನ್ನ ರೀತಿಯ ಡಿಜಿಟಲ್ ವೇದಿಕೆಗಳಲ್ಲಿ ತೊಡಗಿಸಿಕೊಳ್ಳಲಿದೆ. ಫೇಸ್ಬುಕ್ ಸದಸ್ಯರಿಗೂ ವರ್ಚುವಲ್ ಆಗಿ ಇದರಲ್ಲಿ ತೊಡಗಿಸಿಕೊಳ್ಳಲು ಅವಕಾಶ ಇರಲಿದ್ದು, ಅದಕ್ಕಾಗಿ ಪೇಮೆಂಟ್ ಮಾಡಬೇಕಾಗಿರುತ್ತದೆ. ಇದರ ಒಟ್ಟು ಪರಿಕಲ್ಪನೆ ಹೇಗಿರಲಿದೆ, ಏನೆಲ್ಲಾ ಮನರಂಜನೆ ಇರಲಿದೆ ಎನ್ನುವುದು ಅದು ಚಾಲ್ತಿಗೆ ಬಂದ ನಂತರವೇ ಗೊತ್ತಾಗಲಿದೆ.
ಆದರೆ, ಸದ್ಯಕ್ಕೆ ಇವೆಲ್ಲ ಪರಿಕಲ್ಪನೆಗಳನ್ನು ಸಾಕಾರಗೊಳಿಸಲು ಫೇಸ್ಬುಕ್ ಕಂಪನಿಯ ಹೆಸರು ಜಸ್ಟ್ ಚೇಂಜ್ ಆಗಲಿದೆ. ಅದರಲ್ಲಿ ಸ್ಪೆಲ್ಲಿಂಗ್ ಚೇಂಜ್ ಕೂಡ ಇರಬಹುದು. ಗೊತ್ತೂ ಆಗದ ರೀತಿಯ ಬದಲಾವಣೆಯಷ್ಟೇ ಇರಲೂಬಹುದು. ಜಗತ್ತಿನಲ್ಲಿ ಅತಿ ಹೆಚ್ಚು ಬಳಕೆದಾರರನ್ನು ಹೊಂದಿರುವ ಫೇಸ್ಬುಕ್ ಅದನ್ನೇ ಮುಂದುವರಿಸಿಕೊಂಡು ಹೋಗಲು ಜಾಲತಾಣಕ್ಕೆ ಹೊಸ ಬಣ್ಣ ನೀಡಲಿದೆ ಅಷ್ಟೇ.
Facebook is planning to rename the company, The Verge reported citing a source with direct knowledge of the matter. The report comes amid sustained regulatory scrutiny over its business practices.Facebook CEO Mark Zuckerberg plans to unveil the new name at the company’s annual connect conference on October 28, the report added.
21-10-25 03:40 pm
HK News Desk
DK Shivakumar, R. Manjunath, Chief Minister S...
20-10-25 06:58 pm
Hassan Accident, Two Killed: ಹಾಸನಾಂಬ ದರ್ಶನ ಪಡ...
20-10-25 04:00 pm
ಕಲಬುರಗಿಯಲ್ಲಿ ಭೂಕಂಪನ ; ಮನೆಯಿಂದ ಹೊರಬಂದ ಜನರು, ನಿ...
20-10-25 02:56 pm
ಸೇಡಂನಲ್ಲಿ ಆರೆಸ್ಸೆಸ್ ಪಥಸಂಚಲನ ; ನೂರಾರು ಕಾರ್ಯಕರ್...
19-10-25 07:00 pm
21-10-25 03:11 pm
HK News Desk
INS Vikrant in Goa, PM Narendra Modi: ಗೋವಾದಲ್...
20-10-25 08:34 pm
300 Naxals, PM Narendra Modi: 75 ಗಂಟೆಯಲ್ಲಿ 30...
18-10-25 07:34 pm
ಗುಜರಾತ್ ನಲ್ಲಿ 25 ಸಚಿವರ ಹೊಸ ಸಂಪುಟ ಅಸ್ತಿತ್ವಕ್ಕೆ...
17-10-25 05:25 pm
ಗುಜರಾತ್ ನಲ್ಲಿ ದಿಢೀರ್ ಸಂಪುಟ ಸರ್ಜರಿ ! ಸಿಎಂ ಭೂಪೇ...
16-10-25 10:52 pm
21-10-25 07:32 pm
Mangalore Correspondent
ನಮ್ಮ ಸರ್ಕಾರ ಆರ್ಎಸ್ಎಸ್ ನಿಷೇಧ ಮಾಡಿಲ್ಲ, ಬಿಜೆಪಿ...
21-10-25 03:07 pm
ದಕ್ಷ ಅಧಿಕಾರಿಗಳಿಂದಾಗಿ ಕೊಲೆ, ಸುಲಿಗೆ ನಿಂತಿದೆ, ಕರ...
20-10-25 10:28 pm
Ashoka Janamana in Puttur, CM Siddaramaiah: ಪ...
20-10-25 07:25 pm
ಉಳ್ಳಾಲ ಟೀಮ್ ಹನುಮಾನ್ ತಂಡದಿಂದ ನವರಾತ್ರಿ ಯಕ್ಷವೇಷ...
19-10-25 10:32 pm
21-10-25 08:24 pm
Mangalore Correspondent
ಮನೆಮಂದಿ ಮಲಗಿದ್ದಾಗಲೇ ಅಪಾರ್ಟ್ಮೆಂಟಿನ ಮೂರು ಮನೆಗಳಿ...
21-10-25 05:12 pm
MSME Fraud, Mangalore Bank, SBI Mallikatte: ಸ...
20-10-25 10:51 pm
Rape Ullal, Mangalore Crime: ಅಪ್ರಾಪ್ತ ಬಾಲಕಿ ಮ...
20-10-25 12:25 pm
ಚಿನ್ನದಂಗಡಿಗೆ ತೆರಳಿ ಬಣ್ಣನೆಯ ಮಾತುಗಳಿಂದ ಮರುಳು ;...
19-10-25 11:09 pm