ಬೆಸ್ಕಾಂ ಅಪ್ರೆಂಟಿಸ್ ನೇಮಕಾತಿ: 400 ಹುದ್ದೆಗಳಿಗೆ ಅರ್ಜಿ ಹಾಕಿ

17-10-22 01:05 pm       Source: One India   ಉದ್ಯೋಗ

ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ (ಬೆಸ್ಕಾಂ) 2022ನೇ ಸಾಲಿನ ನೇಮಕಾತಿ ಬಗ್ಗೆ ಅಧಿಕೃತ ಪ್ರಕಟಿಸಲಾಗಿದೆ.

ಬೆಂಗಳೂರು, ಜುಲೈ 14: ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ (ಬೆಸ್ಕಾಂ) 2022ನೇ ಸಾಲಿನ ನೇಮಕಾತಿ ಬಗ್ಗೆ ಅಧಿಕೃತ ಪ್ರಕಟಿಸಲಾಗಿದೆ. ಅಪ್ರೆಂಟಿಸ್ ತರಬೇತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಕೆ ಮಾಡಲು ನವೆಂಬರ್ 07,2022 ಕೊನೆಯ ದಿನ.

ಗ್ರಾಜುಯೇಟ್ ಮತ್ತು ಟೆಕ್ನಿಕಲ್ ಅಪ್ರೆಂಟಿಸ್ ತರಬೇತಿಗಾಗಿ ಅರ್ಜಿ ಕರೆಯಲಾಗಿದೆ. ಆಯ್ಕೆಗೊಂಡವರು ಬೆಂಗಳೂರಿನಲ್ಲಿ ಕೆಲಸ ಮಾಡಬೇಕಿದೆ. ತರಬೇತಿ ಅವಧಿಯಲ್ಲಿ 8 ರಿಂದ 9 ಸಾವಿರ ರೂ. ತನಕ ಸ್ಟೈಪೆಂಡ್ ನೀಡಲಾಗುತ್ತದೆ.

ಸಂಸ್ಥೆ ಹೆಸರು: ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ (ಬೆಸ್ಕಾಂ) ಹುದ್ದೆ ಹೆಸರು: ಅಪ್ರೆಂಟಿಸ್ ಒಟ್ಟು ಹುದ್ದೆ: 400 ಉದ್ಯೋಗ ಸ್ಥಳ: ಬೆಂಗಳೂರು, ಕರ್ನಾಟಕ ಸಂಬಳ ವಿವರ: 8,000-9,008 ರು ಪ್ರತಿ ತಿಂಗಳು ಸ್ಟೈಪೆಂಡ್

ಬೆಸ್ಕಾಂ ಹುದ್ದೆಗಳ ವಿವರ:

ಹುದ್ದೆ ಹೆಸರು- ಒಟ್ಟು ಹುದ್ದೆ

  • ಪದವೀಧರ ಅಪ್ರೆಂಟಿಸ್(ಎಲೆಕ್ಟ್ರಿಕಲ್ ಅಂಡ್ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್): 143
  • ಪದವೀಧರ ಅಪ್ರೆಂಟಿಸ್(ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯೂನಿಕೇಷನ್ ಇಂಜಿನಿಯರಿಂಗ್): 116
  • ಪದವೀಧರ ಅಪ್ರೆಂಟಿಸ್(ಕಂಪ್ಯೂಟರ್ ಸೈನ್ಸ್ ಅಂಡ್ ಇಂಜಿನಿಯರಿಂಗ್): 36
  • ಪದವೀಧರ ಅಪ್ರೆಂಟಿಸ್(ಇನ್ಫಾರ್ಮೇಷನ್ ಸೈನ್ಸ್ ಅಂಡ್ ಇಂಜಿನಿಯರಿಂಗ್): 20
  • ಪದವೀಧರ ಅಪ್ರೆಂಟಿಸ್(ಸಿವಿಲ್ ಇಂಜಿನಿಯರಿಂಗ್): 5
  • ಪದವೀಧರ ಅಪ್ರೆಂಟಿಸ್(ಇನ್ಸ್ಟ್ರೂಮೆಂಟೇಷನ್ ಟೆಕ್ನಾಲಜಿ ಇಂಜಿನಿಯರಿಂಗ್): 5
  • ಟೆಕ್ನಿಷಿಯನ್ ಅಪ್ರೆಂಟಿಸ್ (ಎಲೆಕ್ಟ್ರಿಕಲ್ ಅಂಡ್ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್):55
  • ಟೆಕ್ನಿಷಿಯನ್ ಅಪ್ರೆಂಟಿಸ್ (ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯೂನಿಕೇಷನ್ ಇಂಜಿನಿಯರಿಂಗ್): 10
  • ಟೆಕ್ನಿಷಿಯನ್ ಅಪ್ರೆಂಟಿಸ್ (ಕಂಪ್ಯೂಟರ್ ಸೈನ್ಸ್ ಅಂಡ್ ಇಂಜಿನಿಯರಿಂಗ್): 10

ವಿದ್ಯಾರ್ಹತೆ:

ಬೆಸ್ಕಾಂ ಅಧಿಕೃತ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಡಿಪ್ಲೋಮಾ, ಬಿ.ಇ/ಬಿ.ಟೆಕ್ ಪದವೀಧರ ಅಪ್ರೆಂಟಿಸ್: ಬಿ.ಇ / ಬಿ.ಟೆಕ್ ಟೆಕ್ನಿಷಿಯನ್ ಅಪ್ರೆಂಟಿಸ್: ಡಿಪ್ಲೋಮಾ

ವಯೋಮಿತಿ:

ಬೆಸ್ಕಾಂ ನೇಮಕಾತಿ ನಿಯಮಗಳ ಪ್ರಕಾರ ವಯೋಮಿತಿ ನಿಗದಿ ಮಾಡಲಾಗಿದೆ. 18 ವರ್ಷ ಕನಿಷ್ಠ ವಯೋಮಿತಿ ಇದೆ. ನಿಯಮದ ಪ್ರಕಾರ ಅರ್ಹರಿಗೆ ವಯೋಮಿತಿಯಲ್ಲಿ ವಿನಾಯತಿ ಸಿಗಲಿದೆ.

ಶುಲ್ಕ ವಿವರ, ನೇಮಕಾತಿ ಪ್ರಕ್ರಿಯೆ:

ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕವನ್ನು ಪಾವತಿ ಮಾಡಬೇಕಿಲ್ಲ. ನೇಮಕಾತಿ ಪರೀಕ್ಷೆಯ ಅಂಕ, ದಾಖಲಾತಿಗಳ ಪರಿಶೀಲನೆ ಆಧಾರದ ಮೇಲೆ ಅಭ್ಯರ್ಥಿ ಆಯ್ಕೆ ನಡೆಯಲಿದೆ.

ಆಸಕ್ತರು ಬೆಸ್ಕಾಂ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದು. ವೆಬ್‌ಸೈಟ್‌ನಲ್ಲಿ ಮುಂದಿನ ಸಂಪರ್ಕಕ್ಕಾಗಿ ಸರಿಯಾದ ಮೊಬೈಲ್ ನಂಬರ್ ಮತ್ತು ಇ-ಮೇಲ್ ಐಡಿ ನಮೂದು ಮಾಡಿ.

ಬೆಸ್ಕಾಂನ ಎನ್‌ಎಟಿಸ್ ಪೋರ್ಟಲ್‌ನಲ್ಲಿ ನೋಂದಣಿ ಮಾಡಿಕೊಳ್ಳಬೇಕು. ನೋಂದಣಿ ಮಾಡಿಕೊಳ್ಳಲು ಅಧಿಕೃತ ವೆಬ್ ತಾಣ

(https://portal.mhrdnats.gov.in/boat/login/user_login.action) ಅರ್ಜಿಗಳನ್ನು ಸಲ್ಲಿಕೆ ಮಾಡಲು ನವೆಂಬರ್ 7 ಕೊನೆಯ ದಿನವಾಗಿದೆ.

ಶಾರ್ಟ್ ಲಿಸ್ಟ್‌ಗೊಂಡ ಅಭ್ಯರ್ಥಿಗಳ ಹೆಸರು ಪಟ್ಟಿ ನವೆಂಬರ್ 14ರಂದು ಪ್ರಕಟಿಸಲಾಗುತ್ತದೆ. ದಾಖಲಾತಿಗಳ ಪರಿಶೀಲನೆ ನವೆಂಬರ್ 21 ರಿಂದ 23ರ ತನಕ ಕಚೇರಿ ವೇಳೆಯಲ್ಲಿ ಬೆಳಗ್ಗೆ 11 ರಿಂದ 4 ಗಂಟೆಯ ತನಕ ನಡೆಯಲಿದೆ.

ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 044-22542235, 080-22356756.

ವೆಬ್ ಸೈಟ್ ವಿಳಾಸ bescom.org

Bangalore Electricity Supply Company Limited (BESCOM) 2022: Apply for 400 graduate, technician apprentice posts. Candidates can submit applications till November 07, 2022.