ಭಾರತೀಯ ರೈಲ್ವೆ ನೇಮಕಾತಿ 2023: 1785 ಹುದ್ದೆಗಳಿಗೆ ಅರ್ಜಿ

03-01-23 04:31 pm       Source: One India   ಉದ್ಯೋಗ

ರೈಲ್ವೇ ನೇಮಕಾತಿ ವಿಭಾಗವು 2022-23ನೇ ಸಾಲಿಗೆ ಆಗ್ನೇಯ ರೈಲ್ವೆಯ ವ್ಯಾಪ್ತಿಯ ಅಡಿಯಲ್ಲಿ 1,758 ಅಪ್ರೆಂಟಿಸ್ ಹುದ್ದೆಗಳಿಗೆ ಆನ್‌ಲೈನ್ ಅರ್ಜಿಗಳನ್ನು ಆಹ್ವಾನಿಸುತ್ತಿದೆ.

ಬೆಂಗಳೂರು, ಜನವರಿ 2: ರೈಲ್ವೇ ನೇಮಕಾತಿ ವಿಭಾಗವು 2022-23ನೇ ಸಾಲಿಗೆ ಆಗ್ನೇಯ ರೈಲ್ವೆಯ ವ್ಯಾಪ್ತಿಯ ಅಡಿಯಲ್ಲಿ 1,758 ಅಪ್ರೆಂಟಿಸ್ ಹುದ್ದೆಗಳಿಗೆ ಆನ್‌ಲೈನ್ ಅರ್ಜಿಗಳನ್ನು ಆಹ್ವಾನಿಸುತ್ತಿದೆ.

ಆಸಕ್ತ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ rrcser.co.in ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಫೆಬ್ರವರಿ 2 ಆಗಿರುತ್ತದೆ. ಈ ನೇಮಕಾತಿ ಅಡಿಯಲ್ಲಿ ಅಭ್ಯರ್ಥಿಯ ಅರ್ಹತೆಯು ಮಾನ್ಯತೆ ಪಡೆದ ಮಂಡಳಿಯಿಂದ ಕನಿಷ್ಠ 50% ಅಂಕಗಳೊಂದಿಗೆ (ಹೆಚ್ಚುವರಿ ವಿಷಯಗಳನ್ನು ಹೊರತುಪಡಿಸಿ) ಮತ್ತು ಐಟಿಐ ಪಾಸ್ ಪ್ರಮಾಣಪತ್ರ (ಅಪ್ರೆಂಟಿಸ್‌ಶಿಪ್ ಮಾಡಬೇಕಾದ ಟ್ರೇಡ್‌ನಲ್ಲಿ) ಪಡೆದಿರಬೇಕು ಎಂದು ತಿಳಿಸಿದೆ.

Indian Railway Recruitment 2021latest news in hindi: कोंकण रेलवे कॉर्पोरेशन  लिमिटेड को जम्मू और कश्मीर (UT) में संचालित होने वाली USBRL प्रोजेक्ट के  लिए कुछ टेक्निकल ...

ಆಯಾ ವಿಭಾಗಗಳಲ್ಲಿ ಅಧಿಸೂಚನೆಯಂತೆ ಅರ್ಜಿ ಸಲ್ಲಿಸುವ ಎಲ್ಲಾ ಅಭ್ಯರ್ಥಿಗಳಿಗೆ ಸಂಬಂಧಿಸಿದಂತೆ (ಟ್ರೇಡ್-ವಾರು) ಸಿದ್ಧಪಡಿಸಿದ ಮೆರಿಟ್ ಪಟ್ಟಿಯ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ರೈಲ್ವೆ ನೇಮಕಾತಿ 2023: ಅರ್ಜಿ ಸಲ್ಲಿಸುವುದು ಈ ಮುಂದಿನಂತಿದೆ. ಆಗ್ನೇಯ ರೈಲ್ವೆಯ ಅಧಿಕೃತ ವೆಬ್‌ಸೈಟ್ rrcser.co.in ಗೆ ಭೇಟಿ ನೀಡಿ ಅಲ್ಲಿ ಅರ್ಜಿ ಸಲ್ಲಿಸುವ ಮೊದಲು ಉದ್ಯೋಗ ಸೂಚನೆಯಲ್ಲಿ ನೀಡಲಾದ ಎಲ್ಲಾ ಸೂಚನೆಗಳನ್ನು ಓದಿಕೊಳ್ಳಬೇಕು. ಆನ್‌ಲೈನ್ ಅರ್ಜಿ ನಮೂನೆಯನ್ನು ಎಚ್ಚರಿಕೆಯಿಂದ ಭರ್ತಿ ಮಾಡಬೇಕು. ಅಭ್ಯರ್ಥಿಗಳು ತಮ್ಮ ಸ್ಕ್ಯಾನ್ ಮಾಡಿದ ಭಾವಚಿತ್ರ ಮತ್ತು ಸಹಿಯನ್ನು ಅಪ್‌ಲೋಡ್ ಮಾಡಬೇಕು.

ಇದಲ್ಲದೆ ಕೇಂದ್ರ ರೈಲ್ವೇ 2422 ಅಪ್ರೆಂಟಿಸ್ ಹುದ್ದೆಗಳಿಗೆ ಶೀಘ್ರವೇ ನೇಮಕಾತಿ ಪ್ರಕ್ರಿಯೆಯನ್ನು ಶೀಘ್ರವೇ ಮುಕ್ತಾಯಗೊಳಿಸಲಿದೆ. ಆಸಕ್ತ ಅಭ್ಯರ್ಥಿಗಳು RRC CR ನ ಅಧಿಕೃತ ವೆಬ್‌ಸೈಟ್ rrccr.com ಮೂಲಕ ಅರ್ಜಿ ಸಲ್ಲಿಸಬಹುದು. ನೋಂದಣಿ ಪ್ರಕ್ರಿಯೆಯು ಡಿಸೆಂಬರ್ 15, 2022 ರಂದು ಪ್ರಾರಂಭವಾಗಿದ್ದು, ಮತ್ತು ಜನವರಿ 15, 2023 ರಂದು ಕೊನೆಗೊಳ್ಳುತ್ತದೆ. ಈ ನೇಮಕಾತಿ ಅಡಿಯಲ್ಲಿ ಭಾರತೀಯ ರೈಲ್ವೆಯು 2,422 ಹುದ್ದೆಗಳನ್ನು ಭರ್ತಿ ಮಾಡುತ್ತದೆ.

Indian railways recruitment 2023 application invitation for 1785 posts.