ಬಾಬ್ರಿ ಮಸೀದಿ ಪ್ರಕರಣದ ತೀರ್ಪು ಸ್ವಾಗತಿಸಿದ ಮುಖ್ಯಮಂತ್ರಿ ಬಿಎಸ್ ವೈ

30-09-20 06:21 pm       Bangalore Correspondent   ಕರ್ನಾಟಕ

ಕೋರ್ಟ್​ ಐತಿಹಾಸಿಕ ತೀರ್ಪು ನೀಡಿದೆ. ಆರೋಪಿಗಳೆಲ್ಲಾ ನಿರ್ದೋಷಿ ಎಂದು ಲಖನೌದ ಸಿಬಿಐ ಕೋರ್ಟ್​ ತೀರ್ಪು ಕೊಟ್ಟಿದೆ. ಈ ಹೋರಾಟದಲ್ಲಿ ನಾನು ಕೂಡ ಭಾಗವಹಿಸಿದ್ದೆ. ಇಂದಿನ ತೀರ್ಪು ಸಂತೋಷವಾಗಿದೆ ಎಂದರು

ಬೆಂಗಳೂರು,ಸೆ.30: ಬಾಬ್ರಿ ಮಸೀದಿ ಪ್ರಕರಣದ ತೀರ್ಪನ್ನ ನಾನು ಸ್ವಾಗತ ಮಾಡುತ್ತೇನೆ ಅಂತಾ ಸಿಎಂ ಬಿ.ಎಸ್​ ಯಡಿಯೂರಪ್ಪ ಹೇಳಿದ್ದಾರೆ.

ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ. ಕೋರ್ಟ್​ ಐತಿಹಾಸಿಕ ತೀರ್ಪು ನೀಡಿದೆ. ಆರೋಪಿಗಳೆಲ್ಲಾ ನಿರ್ದೋಷಿ ಎಂದು ಲಖನೌದ ಸಿಬಿಐ ಕೋರ್ಟ್​ ತೀರ್ಪು ಕೊಟ್ಟಿದೆ. ಈ ಹೋರಾಟದಲ್ಲಿ ನಾನು ಕೂಡ ಭಾಗವಹಿಸಿದ್ದೆ. ಇಂದಿನ ತೀರ್ಪಿನ ಬಗ್ಗೆ ಕೇಳಿ ನನಗೆ ಸಂತೋಷವಾಗಿದೆ ಎಂದರು.

ಹೋರಾಟಗಾರರಿಗೆ ಯಾವತ್ತೂ ಯಶಸ್ಸು ಸಿಗುತ್ತೆ ಅನ್ನೋದಕ್ಕೆ ಇದೊಂದು ತಾಜಾ ಉದಾಹರಣೆ. ಬಹುಶಃ ಆ ಸಂದರ್ಭದಲ್ಲಿ ಲಾಲ್ ಕೃಷ್ಣ ಅಡ್ವಾಣಿ ಅವರ ಐತಿಹಾಸಿಕ ಭಾಷಣವನ್ನ ಯಾರೂ ಮರೆಯಲು ಸಾಧ್ಯವಿಲ್ಲ. ಅಂತಹ ಮಹಾನ್ ವ್ಯಕ್ತಿಯ ಹೋರಾಟದ ಪರಿಣಾಮ ಇಂದು ಮಹತ್ವದ ತೀರ್ಪು ಬಂದಿದೆ. ಅದರಂತೆ ಇಂದು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಶುರುವಾಗಿದೆ.

ಈ ಒಂದು ಯಶಸ್ಸಿಗೆ ಕಾರಣ ಲಾಲ್ ಕೃಷ್ಣ ಅಡ್ವಾಣಿ ಹಾಗೂ ಮುರಳಿ ಮನೋಹರ್ ಜೋಶಿ. ಈ ತೀರ್ಪನ್ನ ಸ್ವಾಗತ ಮಾಡ್ತೇನೆ ಅಂತಾ ಅವರು ಹೇಳಿದರು.