"1.5 ಕೋಟಿ ಕೊಟ್ಟು ಬಂದಿದ್ದ ತಹಸೀಲ್ದಾರ್ ನೂರು ಕೋಟಿ ಆಸ್ತಿ ಹೊಡೆದಿದ್ದಾನೆ.. ಯಾರಪ್ಪನ ಆಸ್ತಿರೀ ಇದು.."

01-10-20 11:14 am       Headline Karnataka News Network   ಕರ್ನಾಟಕ

ಯಲಹಂಕ ತಹಸೀಲ್ದಾರ್ ರಘುಮೂರ್ತಿ ಎಷ್ಟು ಕೋಟಿ ಕೊಟ್ಟು ಯಲಹಂಕಕ್ಕೆ ಬಂದಿದ್ದ ಎನ್ನೋದು ಗೊತ್ತಾ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಕಿಡಿ ಕಾರಿದ್ದಾರೆ.

ತುಮಕೂರು, ಅಕ್ಟೋಬರ್ 1: ಯಲಹಂಕ ತಹಸೀಲ್ದಾರ್ ರಘುಮೂರ್ತಿಯನ್ನು ಸಸ್ಪೆಂಡ್ ಮಾಡುವಂತೆ ಜಿಲ್ಲಾಧಿಕಾರಿ ಆದೇಶ ಮಾಡಿದ್ದಾರೆ. 17 ಎಕ್ರೆ 35 ಗುಂಟೆ ಸರಕಾರಿ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿ ಸಿಕ್ಕಿಬಿದ್ದಿದ್ದಾನೆ.. ಈ ರಘುಮೂರ್ತಿ ಎಷ್ಟು ಕೋಟಿ ಕೊಟ್ಟು ಯಲಹಂಕಕ್ಕೆ ಬಂದಿದ್ದ ಎನ್ನೋದು ಗೊತ್ತಾ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ. 

ತುಮಕೂರಿನಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಅವರು, ನನ್ನ ಸರಕಾರ ಇದ್ದಾಗ ಯಲಹಂಕದಲ್ಲಿ ಇದೇ ಗಿರಾಕಿ ತನ್ನ ಪೋಸ್ಟಿಂಗ್ ಮಾಡುವಂತೆ ಯಾರೋ ಕಾರ್ಯಕರ್ತರ ಜೊತೆ ಬಂದಿದ್ದ. ಒಂದು ಪೋಸ್ಟಿಂಗ್ ಮಾಡಿದರೆ ಒಂದು ಕೋಟಿ ರೂ. ಕೊಡುತ್ತಾರೆ ಎಂದಿದ್ರು ಕಾರ್ಯಕರ್ತರು. ಆದರೆ, ಅಂದು ನಾನು ಒಪ್ಪಿಕೊಂಡಿರಲಿಲ್ಲ. ಹೀಗೆ ಕೋಟಿ ಕೊಟ್ಟು ಬರುವವರು ತಿರುಗಿ ಹಣ ಮಾಡಬೇಕಿದ್ದರೆ ಜನರನ್ನೇ ಸುಲಿಯಬೇಕಲ್ಲ.. ಸರಕಾರಿ ಆಸ್ತಿಯನ್ನ ಉಳಿಸ್ತಾನಾ ಅಂತ ಕೇಳಿ, ವಾಪಸ್ ಕಳಿಸಿದ್ದೆ. ನಮ್ಮ ಕಾರ್ಯಕರ್ತರಿಗೆ ಹಾಗೆ ಮಾಡಲು ಬಿಡಲಿಲ್ಲ.. ನಮ್ಮ ಸರಕಾರ ಹೋದ ಮೇಲೆ ಬಿಜೆಪಿಯವರು ಬಂದ್ರು. ಬಿಜೆಪಿಯವ್ರು ಈ ಭ್ರಷ್ಟನನ್ನು 24 ಗಂಟೆಯಲ್ಲಿ ಪೋಸ್ಟಿಂಗ್ ಮಾಡಿದ್ರು. ಒಂದೂವರೆ ಕೋಟಿ ಪೇಮೆಂಟ್ ಕೊಟ್ಟು ಪೋಸ್ಟಿಂಗ್ ಮಾಡ್ಕೊಂಡಿದ್ದಾನೆ. ಅದರಲ್ಲಿ ಅಲ್ಲಿಯ ಶಾಸಕರಿಗೆ 50 ಲಕ್ಷ ರೂ. ಹಣ ಹೋಗಿತ್ತು. ಎಲ್ಲವೂ ಗೊತ್ತಿದೆ ಎಂದು ಆರೋಪಿಸಿದರು. 

ಒಂದೂವರೆ ಕೋಟಿ ತಗಂಡು ಈ ಪೋಸ್ಟಿಂಗ್ ಮಾಡಿದ್ದಕ್ಕೆ ಈಗ ನೂರು ಕೋಟಿ ಬೆಲೆಬಾಳುವ ಆಸ್ತಿಯನ್ನು ನುಂಗಿ ಹಾಕಿದ್ದಾನೆ. ಇದು ಯಾರ ಅಪ್ಪನ ಮನೇದ್ದು.. ಇದು ಸರಕಾರ... ಈಗ ಇವನನ್ನು ಸಸ್ಪೆಂಡ್ ಮಾಡಲು ಶಿಫಾರಸ್ಸು ಮಾಡಿದ್ದಾರೆ ಕುಮಾರಸ್ವಾಮಿ ಹೇಳಿದರು.

video