ಬ್ರೇಕಿಂಗ್ ನ್ಯೂಸ್
05-07-22 04:45 pm HK News Desk ಕರ್ನಾಟಕ
ಹುಬ್ಬಳ್ಳಿ, ಜುಲೈ 5: ಸರಳ ವಾಸ್ತು ಖ್ಯಾತಿಯ ಚಂದ್ರಶೇಖರ್ ಗುರೂಜಿ ಹಂತಕರನ್ನು ಪೊಲೀಸರು ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಬಂಧಿಸಿದ್ದಾರೆ. ಮಧ್ಯಾಹ್ನ ಹತ್ಯೆಯಾದ ಬೆನ್ನಲ್ಲೇ ಆರೋಪಿಗಳ ಪತ್ತೆಗೆ ಪೊಲೀಸರ ಐದು ತಂಡವನ್ನು ರಚಿಸಲಾಗಿತ್ತು.
ಮಹಾಂತೇಶ್ ಶಿರೂರು ಮತ್ತು ಮಂಜುನಾಥ್ ಮರೆವಾಡ ಬಂಧಿತರು. ಇವರಿಬ್ಬರೂ ಈ ಹಿಂದೆ ಗುರೂಜಿ ಜೊತೆಗೇ ಕೆಲಸ ಮಾಡುತ್ತಿದ್ದರು. ಮಹಾಂತೇಶ್ 2016ರಲ್ಲಿ ಗುರೂಜಿ ಜೊತೆಗಿನ ಕೆಲಸ ಬಿಟ್ಟು ಹೊರ ನಡೆದಿದ್ದ. ಆನಂತರ, 2019ರಲ್ಲಿ ಮಂಜುನಾಥ್ ಕೂಡ ಗುರೂಜಿ ಸಖ್ಯ ಬಿಟ್ಟು ಹೊರಬಂದಿದ್ದ.
ಪ್ರಾಥಮಿಕ ಮಾಹಿತಿ ಪ್ರಕಾರ, ಚಂದ್ರಶೇಖರ್ ಗುರೂಜಿಯವರು ತಮ್ಮ ನೌಕರರ ಹೆಸರಲ್ಲಿ ಕೋಟ್ಯಂತರ ಬೇನಾಮಿ ಆಸ್ತಿ ಮಾಡಿಕೊಂಡಿದ್ದರು. ಸರಕಾರಿ ಲೆಕ್ಕಕ್ಕೆ ತಿಳಿಯಬಾರದು ಎಂದು ಗುರೂಜಿ ಈ ಎರಡು ನೌಕರರ ಹೆಸರಲ್ಲೂ ದೊಡ್ಡ ಆಸ್ತಿ ಮಾಡಿದ್ದರು. ಇಬ್ಬರಲ್ಲೂ ಆಸ್ತಿಯನ್ನು ಮರಳಿ ಕೊಡುವಂತೆ ಗುರೂಜಿ ಹೇಳಿದ್ದರು ಎನ್ನಲಾಗಿದ್ದು, ಅದೇ ವಿಚಾರದಲ್ಲಿ ಮಾತನಾಡುವುದಕ್ಕೆ ಹುಬ್ಬಳ್ಳಿ ಹೊಟೇಲ್ ಗೆ ತೆರಳಿದ್ದರು. ಇಂದು ಮಧ್ಯಾಹ್ನ ಆರೋಪಿಗಳು ತಾವು ಬಂದಿರುವ ವಿಷಯ ಹೇಳಿ, ಹೊಟೇಲ್ ರಿಸೆಪ್ಶನ್ ಬರುವಂತೆ ತಿಳಿಸಿದ್ದರು. ಇಬ್ಬರು ಕೂಡ ಮೊದಲೇ ನಿಶ್ಚಯ ಮಾಡಿಕೊಂಡು ಅಲ್ಲಿ ತೆರಳಿದ್ದು, ಚೂರಿಯಿಂದ ಯದ್ವಾತದ್ವಾ ಇರಿದು ಕೆಲಸ ಮುಗಿಸಿದ್ದಾರೆ. ಒಬ್ಬಾತ ಕಾಲಿಗೆ ಬೀಳುವ ನಾಟಕ ಮಾಡುತ್ತಲೇ ಇನ್ನೊಬ್ಬಾತ ಚೂರಿ ತೆಗೆದು ತಿವಿದಿದ್ದಾನೆ.
ಗುರೂಜಿಯನ್ನು ಕೊಲೆ ಮಾಡಿ ಮುಗಿಸಿದರೆ ಈ ಆಸ್ತಿ ಎಲ್ಲ ತಮ್ಮದೇ ಹೆಸರಲ್ಲಿ ಶಾಶ್ವತವಾಗಿ ಇರುತ್ತೆ ಅನ್ನುವ ದೂರಗಾಮಿ ಯೋಚನೆಯಲ್ಲಿ ಚೂರಿಯಿಂದ ತಿವಿದು ಕೊಂದಿದ್ದಾರೆ. 40 ಸೆಕೆಂಡಿನ ವಿಡಿಯೋ ಸಿಸಿಟಿವಿಯಲ್ಲಿ ದಾಖಲಾಗಿದ್ದು, 60ಕ್ಕೂ ಹೆಚ್ಚು ಬಾರಿ ಭೀಕರವಾಗಿ ಹತ್ಯೆ ಮಾಡಿದ್ದಾರೆ. ಹತ್ಯೆ ಬೆನ್ನಲ್ಲೇ ಪೊಲೀಸರು ತಂಡ ರಚಿಸಿಕೊಂಡು ಹಂತಕರ ಬೆನ್ನು ಬಿದ್ದಿದ್ದರು. ಮಹಾಂತೇಶ್ ಪತ್ನಿ ವನಜಾಕ್ಷಿಯನ್ನು ವಶಕ್ಕೆ ಪಡೆದಿದ್ದರು. ಅಲ್ಲದೆ, ಹುಬ್ಬಳ್ಳಿ ಬಿಟ್ಟು ಹೊರಕ್ಕೆ ತೆರಳದಂತೆ ಪೊಲೀಸ್ ಕಾವಲು ಹಾಕಿದ್ದರು. ಸಂಜೆ ನಾಲ್ಕು ಗಂಟೆ ಹೊತ್ತಿಗೆ ಹಂತಕರನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.
ಸರಳ ವಾಸ್ತು ಚಂದ್ರಶೇಖರ್ ಗುರೂಜಿ ಭೀಕರ ಹತ್ಯೆ, ಗ್ರಾಹಕರ ಸೋಗಿನಲ್ಲಿ ಬಂದು ಹೊಟೇಲಿನಲ್ಲೇ ಕೃತ್ಯ
Chandrashekhar Guruji brutal murder in Hubbali, Accused have been arrested just in 4 hours by police, Guruji had written unaccountable property in the of Vanjakyshi and when Guruji asked to give to back the three planned to Murder him. The arrested have been identified as Mahantesh and Manjunath.
27-08-25 06:21 pm
Bangalore Correspondent
Congress, MP Yaduveer, DK Shivakumar: ಕಾಂಗ್ರೆ...
27-08-25 06:17 pm
ದಸರಾ ಉದ್ಘಾಟಕರ ಆಯ್ಕೆ ವಿವಾದ ; ನೀವು ನಂಬಿರುವ ನಿಮ್...
27-08-25 03:17 pm
Kannada Anchor Anushree, Marriage, Mangalore:...
27-08-25 02:51 pm
ಚಾಮುಂಡಿ ಬೆಟ್ಟ ಪಕ್ಕಾ ಹಿಂದೂಗಳ ಸ್ವತ್ತು, ಮುಸ್ಲಿಮರ...
27-08-25 12:33 pm
26-08-25 09:02 pm
HK News Desk
ಜಮ್ಮು ಭಾರಿ ಮಳೆಗೆ ಒಂಬತ್ತು ಮಂದಿ ಬಲಿ ; ಹಲವೆಡೆ ಭೂ...
26-08-25 07:39 pm
Trump Immigrant Population: ಟ್ರಂಪ್ ಸಾಮ್ರಾಜ್ಯದ...
24-08-25 01:47 pm
Actor Vijay, Thalapathy; ಟಿವಿಕೆ ಮುಖ್ಯಸ್ಥ, ನಟ...
23-08-25 04:58 pm
Mp Brijesh Chowta, Mangalore: ಆನ್ಲೈನ್ ಗೇಮಿಂಗ್...
22-08-25 10:00 pm
27-08-25 11:02 pm
Mangalore Correspondent
FIR, Chinnayya, Dharmasthala, Mahesh Thimarod...
27-08-25 09:19 pm
Praveen Nettaru, NIA, Mangalore: ಪ್ರವೀಣ್ ನೆಟ್...
27-08-25 08:46 pm
Pastor John Shamine, BJP, Fake Human Rights:...
26-08-25 10:57 pm
Vasanth Giliyar Hate speech, Case: ಬೆಳ್ತಂಗಡಿ...
26-08-25 10:18 pm
27-08-25 10:23 pm
HK News Desk
Karkala Murder, Arrest, Crime: ಹೆಂಡ್ತಿ ಮಕ್ಕಳನ...
26-08-25 10:39 pm
ಟೆಕ್ನಾಲಜಿಯಲ್ಲಿ ಮುಂದಿರುವ ಅಮೆರಿಕದ ಪ್ರಜೆಗಳನ್ನೇ ಯ...
26-08-25 05:24 pm
ದುಬೈನಲ್ಲಿ ಗಂಡ, ಮೈಸೂರಿನಲ್ಲಿ ಪತ್ನಿಯ ಲವ್ವಿ ಡವ್ವಿ...
25-08-25 08:29 pm
ಶಿಕ್ಷಣ ಸಚಿವ ಮಧು ಬಂಗಾರಪ್ಪ ಪಿಎ ಹೆಸರಲ್ಲಿ ವಸೂಲಿ ;...
25-08-25 07:42 pm