ಕಾರವಾರ: ಸಮುದ್ರದಲ್ಲಿ ಪತನಗೊಂಡ ಪ್ಯಾರಾ ಗ್ಲೈಡರ್ ; ಕ್ಯಾಪ್ಟನ್ ಸಾವು

02-10-20 09:02 pm       Karwar Correspondent   ಕರ್ನಾಟಕ

ಕಡಲ ಕಿನಾರೆಯಲ್ಲಿ ಆಕಾಶದಲ್ಲಿ ಹಾರಾಡುತ್ತಿರುವ ಪ್ಯಾರಾ ಮೊಟಾರ್ ಪತನಹೊಂಡು ಸಮುದ್ರಕ್ಕೆ ಬಿದ್ದ ಘಟನೆ ಕಾರವಾರದ ರವಿಂದ್ರನಾಥ್ ಟ್ಯಾಗೋರ್ ಕಡಲ ಕಿನಾರೆಯಲ್ಲಿ ನಡೆದಿದೆ.

ಕಾರವಾರ ಅಕ್ಟೋಬರ್ 02: ಕಡಲ ಕಿನಾರೆಯಲ್ಲಿ ಆಕಾಶದಲ್ಲಿ ಹಾರಾಡುತ್ತಿರುವ ಪ್ಯಾರಾ ಮೊಟಾರ್ ಪತನಹೊಂಡು ಸಮುದ್ರಕ್ಕೆ ಬಿದ್ದ ಘಟನೆ ಕಾರವಾರದ ರವಿಂದ್ರನಾಥ್ ಟ್ಯಾಗೋರ್ ಕಡಲ ಕಿನಾರೆಯಲ್ಲಿ ನಡೆದಿದೆ. ಈ ದುರಂತದಲ್ಲಿ ನೌಕಾನೆಲೆಯ ಕ್ಯಾಪ್ಟನ್ ಒಬ್ಬರು ಸಾವನ್ನಪ್ಪಿದ್ದಾರೆ. ಮೃತ ಪಟ್ಟವರನ್ನು ಆಂದ್ರ ಪ್ರದೇಶ ಮೂಲದ ಕ್ಯಾಪ್ಟನ್ ಮಧುಸೂಧನ್ ರೆಡ್ಡಿ ಎಂದು ಗುರುತಿಸಲಾಗಿದೆ.

ಪ್ಯಾರಾ ಮೂಟರ್ ಆಕಾಶದಲ್ಲಿ ಹಾರುತ್ತಿರುವ ವೇಳೆ ಗೈಡರ್ ನ ಮೇಲ್ಭಾಗದ ಪ್ಯಾರಾಚುಟ್ ದಾರ ಹರಿದಿದೆ.ಈ ವೇಳೆ ಗಾಳಿ ಹೆಚ್ಚಿದ್ದರಿಂದ ಇಂಜಿನ್ ಗೆ ಹಾಗು ಪೈಲೆಟ್ ದೇಹಕ್ಕೆ ಈ ನೈಲನ್ ದಾರಗಳು ಸುತ್ತಿದ್ದು ಗ್ಲಡರ್ ನೊಂದಿಗೆ ಮೇಲಿಂದ ಇಬ್ಬರೂ ಕಡಲಿಗೆ  ಬಿದ್ದಿದ್ದಾರೆ. ಈ ವೇಳೆ ಇನ್ಸ್ಟ್ರಕ್ಟರ್ ಕ್ಯಾಪ್ಟನ್ ವಿದ್ಯಾದರ್ ವೈದ್ಯ ಅಪಾಯದಿಂದ ಪಾರಾಗಿದ್ದು, ಪ್ರವಾಸಿಗ ಆಂದ್ರ ಮೂಲದ ನೌಕಾನಲೆಯ ಕ್ಯಾಪ್ಟನ್ ಮಧುಸೂದನ್ ರೆಡ್ಡಿ ಗಂಭೀರವಾಗಿ ಗಾಯಗೊಂಡಿದ್ದರು

ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದಾರೆ. ಘಟನೆ ಸಂಬಂಧ ಕಾರವಾರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.