ಬ್ರೇಕಿಂಗ್ ನ್ಯೂಸ್
05-10-20 10:49 pm Headline Karnataka News Network ಕರ್ನಾಟಕ
ತುಮಕೂರು, ಅಕ್ಟೋಬರ್ 5: ಶಿರಾ ಉಪ ಚುನಾವಣೆ ಬಿಸಿ ಏರತೊಡಗಿದ್ದು ರಾಜಕೀಯ ಪಕ್ಷಗಳ ನಾಯಕರಿಂದ ಕೆಸರೆರಚಾಟ ಆರಂಭಗೊಂಡಿದೆ. ಇನ್ಯಾರದ್ದೋ ಹೆಗಲು ಹಿಡಿದು ಅಧಿಕಾರಕ್ಕೇರುವ ಜೆಡಿಎಸ್ ಒಂದು ಪಕ್ಷವೇ ಅಲ್ಲ ಎಂದು ಮೂದಲಿಸಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಎಚ್.ಡಿ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.
ಶಿರಾ ಜನ್ರು ಎಂದೂ ಹಣಕ್ಕೆ ಮತ ಕೊಟ್ಟವರಲ್ಲಾ.. ದುಡಿಮೆಗೆ ಗೌರವ ಕೊಟ್ಟಿರೋ ಜನ್ರು.. ಮೊನ್ನೆಯ ಸಭೆಯಲ್ಲಿ ಹಾಲನ್ನಾದ್ರೂ ಕೊಡಿ, ವಿಷವಾದ್ರೂ ಕೊಡಿ ಅಂತಾ ಹೇಳಿದ್ದೆ.. ಆವತ್ತು ನಾನು ಕಣ್ಣಲ್ಲಿ ನೀರು ಹಾಕಿಲ್ಲಾ.. ನಾವೆಲ್ಲಾ ಹಳ್ಳಿಯಿಂದ ಬಂದವ್ರು, ಹಳ್ಳಿ ಭಾಷೆಯ ವಾಡಿಕೆಯಂತೆ ಹೇಳಿದ್ದೆ. ಪೇಪರ್ ಟೈಗರ್ ಮೈಸೂರಿಗೆ ಏನು ಕೊಡುಗೆ ಕೊಟ್ಟಿದ್ದಾರೆ ಗೊತ್ತಿಲ್ಲಾ. ಆ ಮಹಾನುಭಾವ ಕುಮಾರಸ್ವಾಮಿಗೆ ಕಷಾಯ ಕೊಡಿ ಎಂದಿದ್ದಾರೆ.. ರಾಜ್ಯದಲ್ಲಿ ಬಿಜೆಪಿಯವ್ರು, ಕಶಾಯನು ಕುಡ್ದೇ ಇರೋ ಪರಿಸ್ಥಿತಿ ತಂದಿಟ್ಟಿದ್ದಾರೆ.. ಸಿದ್ದರಾಮಯ್ಯನವ್ರು,ಜೆಡಿಎಸ್ ಪಕ್ಷವೇ ಇಲ್ಲಾ ಅಂತಾ ಅಂದಿದ್ದಾರೆ.. ಸಿದ್ದರಾಮಯ್ಯನವ್ರಿಗೆ ತಾಯಿ ಸಮಾನವಾದ ಪಕ್ಷ ಇದು.. ಸಿದ್ದರಾಮಯ್ಯನವ್ರು ಇದ್ದಾರೆ ಅಂತಾ ಗೋತ್ತಾಗಿದ್ದೆ ಜೆಡಿಎಸ್ ಪಕ್ಷದಿಂದ.. ಅದನ್ನು ಸಿದ್ದರಾಮಯ್ಯ ನೆನಪಿನಲ್ಲಿ ಇಡಬೇಕು ಎಂದರು.

ಜೆಡಿಎಸ್ ಪಕ್ಷ ಇನ್ನೊಬ್ಬರ ಹೆಗಲ ಮೇಲೆ ರಾಜಕಾರಣ ಮಾಡಬೇಕು ಅಂದಿದ್ದಾರೆ.. ನಾವೇನಾದ್ರೂ ನಿಮ್ಮ ಹೆಗಲು ಕೇಳಿಕೊಂಡು ನಿಮ್ಮ ಮನೆಗೆ ಬಂದಿದ್ವಾ.. ನಮ್ಮ ಮನೆಗೆ ಅಡ್ಡಪಲ್ಲಕ್ಕಿ ತಂದೋರು ನೀವು.. ದೇವೇಗೌಡರು ನಿಮ್ಮನ್ನ ನಂಬಿದ್ರು, ನಾನಂತೂ ನಿಮ್ಮನ್ನ ನಂಬಿರಲಿಲ್ಲಾ.. ಅಡ್ಡಪಲ್ಲಕ್ಕಿಲೀ ಕೂರಿಸಿಕೊಂಡು ಅರ್ಧ ದಾರಿಯಲ್ಲಿ ಕೈಬಿಟ್ರಿ.. ಬಡವರ, ನೋವಿನಲ್ಲಿರೋರ ಕಷ್ಟಗಳನ್ನ ಕಂಡು ಕಣ್ಣೀರು ಹಾಕಿದ್ದೇನೆ.. ರಾಜಕೀಯ ಸ್ಥಾನ ಹೋದರೇ ಕಣ್ಣೀರು ಹಾಕಲ್ಲಾ.. ನರೇಂದ್ರ ಮೋದಿ ಅವ್ರು ಸಿದ್ದಾರಾಮಯ್ಯನವ್ರದ್ದು 10 % ಸರ್ಕಾರ ಅಂದ್ರು.. ಸಿದ್ದರಾಮಯ್ಯನವ್ರು ಬಿಜೆಪಿ ಸರ್ಕಾರದವ್ರನ್ನ ಪರ್ಸೆಂಟೆಜ್ ಸರ್ಕಾರ ಅಂದ್ರು.. ಆದರೆ ನನ್ನ ಅವಧಿಯಲ್ಲಿ ಯಾವತ್ತೂ ಪರ್ಸೆಂಟೇಜ್ ಸರ್ಕಾರ ಅನ್ನೋ ಮಾತು ಬಂದಿಲ್ಲಾ.. ಈ ಚುನಾವಣೆಯಲ್ಲಿ ಜೆಡಿಎಸ್ ಒಳ ಒಪ್ಪಂದ ಅಂದಿದ್ದಾರೆ.. ಒಳವೊಪ್ಪಂದ ಆಗಿರೋದು ಸಿದ್ದರಾಮಯ್ಯನವ್ರಿಗು ಬಿಜೆಪಿಗೂ, ನಮ್ಮ ಜೊತೆಗಲ್ಲ ಎಂದು ಕುಟುಕಿದರು ಕುಮಾರಸ್ವಾಮಿ.

ಇನ್ನು ಬಿಜೆಪಿ ಸೇರಿದ ರಾಜೇಶ್ ಗೌಡ ಅವ್ರೇ ಶಿರಾದಲ್ಲಿ ಬಿಜೆಪಿ ಅಭ್ಯರ್ಥಿ ಅಂತಾ ಮಾಧ್ಯಮಗಳಲ್ಲಿ ನೋಡ್ತಿದ್ದೇನೆ.. ರಾಜೇಶ್ ಗೌಡ ಹಾಗೂ ಸಿದ್ದರಾಮಯ್ಯ ಪುತ್ರ ಯತೀಂದ್ರ ಅವ್ರಿಬ್ಬರ ಸಂಬಂಧ ಏನು..? ಯತೀಂದ್ರ ಹಾಗೂ ರಾಜೇಶ್ ಗೌಡ ಬಿಜಿನೆಸ್ ಪಾರ್ಟನರ್ ಗಳು.. ರಾಜೇಶ್ ಗೌಡ ತಂದೆ ಮೂಡಲಗಿರಿಯಪ್ಪ ಕಾಂಗ್ರೆಸ್ ನಿಂದ ಸಂಸದರಾಗಿದ್ದೋರು.. ಬಿಜೆಪಿಗೆ ನೀವು ಕಳಿಸಿದ್ರೋ, ಯಾರು ಕಳಿಸಿದ್ರು ನೀವೇ ಹೇಳಬೇಕು.. ನಮ್ಮ ಪಕ್ಷ, ಬಿಜೆಪಿ ಬಿ-ಟೀಂ ಆಗಿದ್ದರೇ 5 ವರ್ಷ ನಾನೇ ಸಿಎಂ ಆಗ್ತಿದ್ದೆ.. ಯಾರೂ ನನ್ನನ್ನ ಟಚ್ ಮಾಡೋಕೆ ಆಗ್ತಿರಲ್ಲಿಲ್ಲಾ ಎಂದರು ಎಚ್ಡಿಕೆ.
ಆರ್.ಎಸ್.ಎಸ್ ಕಾರ್ಯಕರ್ತರು ದುಡ್ಡು ಹಿಡಿದುಕೊಂಡು ಬರ್ತಾರೆ.. ಅದು ಲೂಟಿ ಹೊಡೆದ ಹಣ,ಆ ಹಣದ ಆಮಿಷಕ್ಕೆ ಬಲಿಯಾಗಬೇಡಿ.. ನಾಳೆ ನಾಡಿದ್ದು ಅಭ್ಯರ್ಥಿ ಕುರಿತು ಒಂದು ಅಂತಿಮ ತೀರ್ಮಾನಕ್ಕೆ ಬರಲಾಗುವುದು ಎಂದು ಶಿರಾ ತಾಲ್ಲೂಕಿನ ಕಳ್ಳಂಬೆಳ್ಳದಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಹೆಚ್ಡಿಕೆ ಹೇಳಿದ್ದಾರೆ.
07-11-25 09:59 pm
HK News Desk
ಖಾಸಗಿ ಸಂಸ್ಥೆಗೆ ಸಾರ್ವಜನಿಕ ಸ್ಥಳದಲ್ಲಿ ನಿರ್ಬಂಧ ;...
06-11-25 07:34 pm
ಖ್ಯಾತ ಖಳ ನಟರಾಗಿ ಮಿಂಚಿದ್ದ ಹರೀಶ್ ರಾಯ್ ಕ್ಯಾನ್ಸರ್...
06-11-25 03:06 pm
ಕೇಂದ್ರ ಜಿಎಸ್ಟಿ ದರ ಇಳಿಸಿದ ಬೆನ್ನಲ್ಲೇ ನಂದಿನಿ ತುಪ...
05-11-25 06:15 pm
ಮಾಜಿ ಸಚಿವ ಎಚ್.ವೈ ಮೇಟಿ ಬೆಂಗಳೂರಿನ ಆಸ್ಪತ್ರೆಯಲ್ಲಿ...
04-11-25 04:38 pm
07-11-25 05:21 pm
HK News Desk
ಮತಗಳವು ಆರೋಪ ; ರಾಹುಲ್ ವಿರುದ್ಧ ತಿರುಗಿಬಿದ್ದ ಮತದಾ...
07-11-25 11:33 am
'ನವೆಂಬರ್ ಕ್ರಾಂತಿ' ವದಂತಿ ತಳ್ಳಿಹಾಕಿದ ಡಿಸಿಎಂ ; ನ...
06-11-25 10:22 pm
ಐಸಿಸಿ ಮಹಿಳಾ ವಿಶ್ವಕಪ್ ಎತ್ತಿಹಿಡಿದ ಭಾರತದ ವನಿತೆಯರ...
03-11-25 01:13 pm
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
07-11-25 07:23 pm
Mangalore Correspondent
ಗೋಡಂಬಿ ಉದ್ಯಮಕ್ಕೆ ನೂರು ವರ್ಷ ; ನ.14-16ರಂದು ದೇಶದ...
07-11-25 05:25 pm
ನೆಲ್ಯಾಡಿಯಲ್ಲಿ ಹೊಟೇಲ್ ಉದ್ಯಮ ನಡೆಸುತ್ತಿದ್ದ ಅಭಿಷೇ...
07-11-25 02:18 pm
70 ಅನಾಥ ಶವಗಳ ಬಗ್ಗೆ ಪ್ರತ್ಯೇಕ ಎಫ್ಐಆರ್ ದಾಖಲಿಸಿ ತ...
07-11-25 02:08 pm
ತಯಾರಿಕಾ ನ್ಯೂನತೆಯುಳ್ಳ ಇನೋವಾ ಕಾರು ಮಾರಾಟ ; ಬಲ ಬದ...
07-11-25 11:41 am
07-11-25 08:05 pm
HK News Desk
ಕೋಮು ದ್ವೇಷ ; ಸಹಪಾಠಿ ವಿದ್ಯಾರ್ಥಿಗಳ ಮೇಲೆ ಯುವಕರಿಂ...
06-11-25 10:59 pm
ಪ್ರೇಮ ನಿರಾಕರಣೆ ; ಯುವಕನ ಹೆಸರಲ್ಲಿ ಕರ್ನಾಟಕ, ತಮಿಳ...
06-11-25 08:20 pm
ಥಾಯ್ಲೇಂಡ್ ದೇಶದಲ್ಲಿ ಉದ್ಯೋಗಕ್ಕೆ ತೆರಳಿ ಅಲೆದಾಟ ;...
06-11-25 02:08 pm
ಮದುವೆಯಾಗಿಲ್ಲ, ಹುಡುಗ ಸೆಟ್ ಆಗುತ್ತಿಲ್ಲ ಎಂದು ಜ್ಯೋ...
05-11-25 09:39 pm