ಪೊಲೀಸ್ ಇಲಾಖೆಯಲ್ಲಿ ಲಂಚ ಸಾಮಾನ್ಯ, ಯಾವ ಇನ್ಸ್ ಪೆಕ್ಟರ್ ಪುಕ್ಕಟೆ ಬಂದಿದ್ದಾನೆ ? ದುಡ್ಡು ಕೊಟ್ಟು ಬಂದು ಇಲ್ಲಿ ಮೀಟರ್ ಓಡಿಸ್ತಾರೆ ! 

10-11-22 07:37 pm       HK News Desk   ಕರ್ನಾಟಕ

ಪೊಲೀಸ್ ಇಲಾಖೆ ಒಳಗೆ ಲಂಚ ಸರ್ವೆ ಸಾಮಾನ್ಯ. ಹಾಸನದೊಳಗೆ ಇಲ್ವಾ, ಯಾವ ಇನ್ಸ್‌ಪೆಕ್ಟರ್ ಎಕ್ಸಿಕ್ಯುಟಿವ್‌ಗೆ ಪುಕ್ಕಟೆಯಾಗಿ ಬಂದಿದ್ದಾನೆ, ಡಿಜಿಪಿ‌ ಸಾಹೇಬ್ರು ಆದೇಶದ ಮೇಲೆ ಬಂದಿದ್ದಾನೆಯೇ ಕೇಳಿ ನೋಡಿ..

ಹಾಸನ, ನ.10: ಪೊಲೀಸ್ ಇಲಾಖೆ ಒಳಗೆ ಲಂಚ ಸರ್ವೆ ಸಾಮಾನ್ಯ. ಹಾಸನದೊಳಗೆ ಇಲ್ವಾ, ಯಾವ ಇನ್ಸ್‌ಪೆಕ್ಟರ್ ಎಕ್ಸಿಕ್ಯುಟಿವ್‌ಗೆ ಪುಕ್ಕಟೆಯಾಗಿ ಬಂದಿದ್ದಾನೆ, ಡಿಜಿಪಿ‌ ಸಾಹೇಬ್ರು ಆದೇಶದ ಮೇಲೆ ಬಂದಿದ್ದಾನೆಯೇ ಕೇಳಿ ನೋಡಿ.. ಜಿಲ್ಲಾ ಎಸ್ಪಿ ಹೊರತುಪಡಿಸಿದ್ರೆ ಬೇರೆ ಇನ್ಸ್‌ಪೆಕ್ಟರ್ ಯಾರು ಇಲ್ಲಿಗೆ ಪುಕ್ಸಟ್ಟೆ ಬರ್ತಾರೆ ಎಂದು ಆಮ್ ಆದ್ಮಿ ಪಕ್ಷದ ಮುಖಂಡ, ಮಾಜಿ ಐಪಿಎಸ್ ಅಧಿಕಾರಿ ಭಾಸ್ಕರ್‌ ರಾವ್ ಮಾರ್ಮಿಕ ಪ್ರಶ್ನೆ ಇಟ್ಟಿದ್ದಾರೆ. 

ಇನ್ಸ್ ಪೆಕ್ಟರ್ ನಂದೀಶ್ ಸಾವಿನ ಹಿನ್ನೆಲೆಯಲ್ಲಿ ಮಾತನಾಡಿದ ಅವರು, ದುಡ್ಡು ಕೊಟ್ಟು ಕೆಲಸಕ್ಕೆ ಬಂದ ನಂತರ ಒಂದು ವರ್ಷ ಮೀಟರ್ ಓಡಲು ಶುರುವಾಗುತ್ತೆ. ಜನಸಾಮಾನ್ಯರ ಹತ್ತಿರ ದುಡ್ಡು ಕಿತ್ಕೋಬೇಕು, ಎಫ್‌ಐಆರ್ ಮಾಡಲು, ಹೆಣ ತೆಗೆಯಲು ದುಡ್ಡು ಕಿತ್ಕೊಬೇಕು, ಪ್ರತಿಯೊಂದಕ್ಕು ದುಡ್ಡು ಕಿತ್ಕೊಬೇಕು. ಅಧಿಕಾರಿಗಳನ್ನು ಬ್ಲೇಮ್ ಮಾಡಲು ಆಗಲ್ಲ.‌ ಅತ್ಯಂತ ದುರ್ಬಲವಾದ ರಾಜ್ಯ ಸರ್ಕಾರ ಇದ್ದಾಗ ಮಾತ್ರ ಇದೆಲ್ಲಾ ಆಗುತ್ತೆ. 

Arvind Kejriwal vs Yogi Adityanath On Who Managed Pandemic Better

Now no AC, sofa, pomp and show at UP CM Yogi Adityanath's field visits |  Mint

ಇದೇ ಮೋದಿ, ಯೋಗಿ ಆದಿತ್ಯನಾಥ್, ಅರವಿಂದ ಕೇಜ್ರಿವಾಲ್ ಗಟ್ಟಿ ಮುಖ್ಯಮಂತ್ರಿ ಇದ್ದರು. ಗಟ್ಟಿ ಮುಖ್ಯಮಂತ್ರಿ ಇದ್ದರೆ ಯಾರೂ ಏನು ಕೆಳಗಡೆ ಬಾಲ ಅಲ್ಲಾಡಿಸಲು ಆಗಲ್ಲ.‌ ಮುಖ್ಯಮಂತ್ರಿ ಗಟ್ಟಿ ಇಲ್ಲ ಅಂದರೆ ಯಾರು ಏನು ಬೇಕಾದರೂ ಅಲ್ಲಾಡಿಸಬಹುದು. ಮುಖ್ಯಮಂತ್ರಿಯನ್ನು ಮಂತ್ರಿಗಳು, ಶಾಸಕರು ಅಲ್ಲಾಡಿಸಬಹುದು. ಇವತ್ತು ಜಿ.ಪಂ. ಸದಸ್ಯನು ಕೂಡ ಮುಖ್ಯಮಂತ್ರಿಯನ್ನು ಅಲ್ಲಾಡಿಸುತ್ತಾನೆ.‌ 

PM Modi chairs Covid review meeting amid surge in Omicron cases | Mint

ಮೋದಿಯವರು ಮಜಬೂತ್ ಮುಖ್ಯಮಂತ್ರಿ ಅಂತ ಹೇಳ್ತಿದ್ದರಲ್ಲಾ, ಈಗ ಯಾವ ಮಜಬೂತ್ ಮುಖ್ಯಮಂತ್ರಿ ಇದ್ದಾರೆ ಇಲ್ಲಿ. ನಂದೀಶ್ ಬಹಳ ಒಳ್ಳೆಯವರು, ನನಗೂ ಬಹಳ ಪರಿಚಿತರು. ದುಡ್ಡು ಕೊಡೋದು ಆಶ್ಚರ್ಯ ಅಂತ ಹೇಳ್ತಿಲ್ಲ. ದುಡ್ಡು ಕೊಟ್ಟ ನಂತರ ಏಕಾಏಕಿ ಡಿಮಾಂಡ್‌ಗಳು ಜಾಸ್ತಿಯಾಗುತ್ತವೆ. ಮಾಡಿಲ್ಲ ಅಂದರೆ ಅವರನ್ನು ಸಸ್ಪೆಂಡ್ ಮಾಡ್ತಾರೆ. ಎಲ್ಲೆಲ್ಲೂ ಸಾಲ ಮಾಡ್ಕಂಡು, ಜಮೀನು ಮಾರ್ಕಂಡು ಬಂದಿರುತ್ತಾರೆ. 

ಎಲ್ಲರೂ ದುಷ್ಟರಲ್ಲ, ಇಲಾಖೆಯಲ್ಲಿ 95% ಮಂದಿ ಒಳ್ಳೆಯವರಿರುತ್ತಾರೆ. ಅಧಿಕಾರದಲ್ಲಿ ಹಣ ಮಾಡೋಣ. ಯೂನಿಫಾರಂ ಹಾಕೊಂಡಿದೀನಿ, ಸ್ಟೇಷನ್ ಇಂಚಾರ್ಜ್ ಇರೋಣ ಅನ್ಕೊಂಡಿರುತ್ತಾರೆ. ಇದೊಂತರ ರಿಸ್ಕಿ ಗೇಮ್, ನಂದೀಶ್ ರಿಸ್ಕಿ ಗೇಮ್‌ಗೆ ಬಲಿಯಾದ್ರು. ಒಳ್ಳೆಯ ‌ಹುಡುಗ, ನಾನು ಬೆಂಗಳೂರು ಸಿಟಿ ಪೊಲೀಸ್ ಕಮಿಷನರ್ ಆಗಿದ್ದಾಗ ಪರಪ್ಪನ ಅಗ್ರಹಾರದಲ್ಲಿ ಇನ್ಸ್‌ಪೆಕ್ಟರ್ ಆಗಿ ಒಳ್ಳೆಯ ಕೆಲಸ ಮಾಡಿದ್ದರು‌. 

ಕೇವಲ‌ ಚುನಾವಣೆ ವೇಳೆಯಲ್ಲಿ ಮಾತ್ರ ಎಕ್ಸಿಕ್ಯುಟಿವ್ ಅಧಿಕಾರಿಗಳಿಗೆ ಇಲೆಕ್ಷನ್ ಕಮಿಷನ್ ವರ್ಗಾವಣೆ ಮಾಡಿ ಅಂತ ಹೇಳುತ್ತೆ. ಬೇರೆ ಸಮಯದಲ್ಲಿ ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರ ಅನುಮತಿ ಇಲ್ಲದೆ ಯಾವ ಇನ್ಸ್‌ಪೆಕ್ಟರ್ ವರ್ಗಾವಣೆ ಆಗಲ್ಲ. ಪಾಪ, ಡಿಜಿಪಿಗೆ ಸುಮ್ನೆ ನಡವಳಿಕೆ ಸೈನ್ ಮಾಡಿ ಫೈಲ್ ಕೊಟ್ಟು ಕಳಿಸೋದು ಅಷ್ಟೇ ಅವರ ಕೆಲಸ ಎಂದು ಪೊಲೀಸ್ ಇಲಾಖೆಯೊಳಗಿನ ಹುಳುಕನ್ನು ಎತ್ತಿ ಹೀಯಾಳಿಸಿದರು.

Fomrer IPS officer,‌ AAP Bhaskar Rao says corruption is common in police department, candidates bribe officers to get Inspector post and then loot form general public.