ಪಶ್ಚಿಮ ವಲಯ ಐಜಿಪಿ ಆಗಿ ಡಾ.ಚಂದ್ರಗುಪ್ತಾ ; ರವಿ ಚೆನ್ನಣ್ಣವರ್ ಕಿಯೋನಿಕ್ಸ್ ನಿರ್ದೇಶಕ ಹುದ್ದೆಗೆ 

14-11-22 10:30 pm       Bangalore Correspondent   ಕರ್ನಾಟಕ

ರಾಜ್ಯ ಸರ್ಕಾರ 11 ಮಂದಿ ಐಪಿಎಸ್​ ಅಧಿಕಾರಿಗಳನ್ನು ವರ್ಗಾವಣೆ ಮಾಡಿದೆ. ಇತ್ತೀಚೆಗೆ ಭ್ರಷ್ಟಾಚಾರದ ಆರೋಪಕ್ಕೆ ತುತ್ತಾಗಿದ್ದ ಅಧಿಕಾರಿ ರವಿ ಡಿ ಚೆನ್ನಣ್ಣನವರ್​ ಅವರನ್ನು ಕಿಯೋನಿಕ್ಸ್​ ಸಂಸ್ಥೆಯ ನಿರ್ದೇಶಕನಾಗಿ ವರ್ಗಾವಣೆ ಮಾಡಲಾಗಿದೆ.

ಬೆಂಗಳೂರು, ನ.14 : ರಾಜ್ಯ ಸರ್ಕಾರ 11 ಮಂದಿ ಐಪಿಎಸ್​ ಅಧಿಕಾರಿಗಳನ್ನು ವರ್ಗಾವಣೆ ಮಾಡಿದೆ. ಇತ್ತೀಚೆಗೆ ಭ್ರಷ್ಟಾಚಾರದ ಆರೋಪಕ್ಕೆ ತುತ್ತಾಗಿದ್ದ ಅಧಿಕಾರಿ ರವಿ ಡಿ ಚೆನ್ನಣ್ಣನವರ್​ ಅವರನ್ನು ಕಿಯೋನಿಕ್ಸ್​ ಸಂಸ್ಥೆಯ ನಿರ್ದೇಶಕನಾಗಿ ವರ್ಗಾವಣೆ ಮಾಡಲಾಗಿದೆ.

ಇದೇ ಮೊದಲ ಬಾರಿಗೆ ಬೆಂಗಳೂರಿಗೆ ಸ್ಪೆಷಲ್​ ಟ್ರಾಫಿಕ್​ ಕಮಿಷನರ್​ ಅನ್ನು ನೇಮಕ ಮಾಡಲಾಗಿದ್ದು ಐಪಿಎಸ್​ ಅಧಿಕಾರಿ ಅಬ್ದುಲ್​ ಸಲೀಂಗೆ ಈ ಸ್ಥಾನವನ್ನು ನೀಡಲಾಗಿದೆ. ಅಲ್ಲದೆ, ಈ ಬಾರಿ Additional Director General and Special Commissioner (Traffic) ಪದವಿಯನ್ನು ADGP ದರ್ಜೆಗೆ ಸಮಾನವೆಂದು ಸರ್ಕಾರ ಆದೇಶ ಹೊರಡಿಸಿದೆ. 

ಪಶ್ಚಿಮ ವಲಯ ಐಜಿಪಿ ಆಗಿ ಡಾ.ಚಂದ್ರಗುಪ್ತ ಅವರನ್ನು ನೇಮಕ ಮಾಡಲಾಗಿದೆ. ಅವರು ಈ ಹಿಂದೆ ಮೈಸೂರು ವಿಭಾಗದ ಐಜಿಪಿ ಆಗಿದ್ದರು. ಉಮೇಶ್ ಕುಮಾರ್, ಆಡಳಿತ ವಿಭಾಗದ ಎಡಿಜಿಪಿ ಹುದ್ದೆಗೆ ವರ್ಗಾವಣೆಗೊಂಡಿದ್ದಾರೆ. 

ಪಶ್ಚಿಮ ವಲಯ(ಮಂಗಳೂರು) ಐಜಿಪಿ ಆಗಿದ್ದ ದೇವಜ್ಯೋತಿ ರೇ ಮಾನವ ಹಕ್ಕಗಳ ಆಯೋಗಕ್ಕೆ, ರವಿಕಾಂತೇಗೌಡ ಸಿಐಡಿ ವಿಭಾಗದ ಐಜಿಪಿ, ಲೋಕೇಶ್ ಕುಮಾರ್ ಬಳ್ಳಾರಿ ಐಜಿಯಾಗಿ ವರ್ಗ ಆಗಿದ್ದಾರೆ. ರಮಣ್ ಗುಪ್ತಾ ಬೆಂಗಳೂರು ಇಂಟಲಿಜೆನ್ಸ್ ವಿಭಾಗದ ಐಜಿಯಾಗಿದ್ದಾರೆ. ಡಾ.ಶರಣಪ್ಪ ಅವರು ಬೆಂಗಳೂರು ಸಿಸಿಬಿ ವಿಭಾಗದ ಜಂಟಿ ಪೊಲೀಸ್ ಆಯುಕ್ತರಾಗಿ ನೇಮಕಗೊಂಡಿದ್ದಾರೆ. 

ಅನುಚೇತ್, ಬೆಂಗಳೂರು ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತರಾಗಿ ನೇಮಕ ಆಗಿದ್ದಾರೆ. ಸಿಐಡಿ ಎಸ್ಪಿ ಆಗಿದ್ದ ಬಿ. ರಮೇಶ್ ಮೈಸೂರು ನಗರ ಕಮಿಷನರ್ ಆಗಿ ವರ್ಗ ಆಗಿದ್ದಾರೆ.

IGP, Western Range, Devajyothi Ray has been transferred with immediate effect. Dr Chandra Gupta has been appointed as the new IGP, Western Range.Dr Chandra Gupta, an IPS officer of 2006 batch was commissioner of Police, Mysuru city prior to this posting.Devajyothi Ray has been transferred as IGP,  grievances and human rights.