ಡಿಸೆಂಬರ್ ಮೊದಲ ವಾರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ; ಸಿದ್ದರಾಮಯ್ಯ 

15-11-22 03:40 pm       HK News Desk   ಕರ್ನಾಟಕ

ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ರಾಜಕೀಯ ಪಕ್ಷಗಳು ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸಲು ಸಿದ್ಧತೆ ನಡೆಸಿವೆ. ಕಾಂಗ್ರೆಸ್ ಪ್ರಚಾರ ಯಾತ್ರೆಗೂ ಮೊದಲು ಪಕ್ಷದ ಉಮೇದುವಾರರ ಪಟ್ಟಿ ಬಿಡುಗಡೆ ಮಾಡಲಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ. 

ಮೈಸೂರು, ನ.15 : ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ರಾಜಕೀಯ ಪಕ್ಷಗಳು ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸಲು ಸಿದ್ಧತೆ ನಡೆಸಿವೆ. ಕಾಂಗ್ರೆಸ್ ಪ್ರಚಾರ ಯಾತ್ರೆಗೂ ಮೊದಲು ಪಕ್ಷದ ಉಮೇದುವಾರರ ಪಟ್ಟಿ ಬಿಡುಗಡೆ ಮಾಡಲಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ. 

ಮೈಸೂರಿನಲ್ಲಿ ಮಾತನಾಡಿದ ಸಿದ್ದರಾಮಯ್ಯ, ಬಸ್ ಯಾತ್ರೆಗೆ ಇನ್ನೂ ದಿನಾಂಕ ನಿಗದಿಯಾಗಿಲ್ಲ. ಮೊದಲು ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದು ಹೇಳಿದ್ದಾರೆ.

ನವೆಂಬರ್ ಕೊನೆಯ ವಾರ ಅಥವಾ ಡಿಸೆಂಬರ್ ಮೊದಲ ವಾರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಲಿದೆ ಎಂದರು. ಇನ್ನು ಬಸ್ ಯಾತ್ರೆಗಾಗಿ ಬಸ್ ಸಿದ್ಧವಾಗುತ್ತಿದೆ. ನಾನು ಹಾಗೂ ಡಿ.ಕೆ.ಶಿವಕುಮಾರ್ ಎರಡು ಪ್ರತ್ಯೇಕ ತಂಡಗಳಲ್ಲಿ ಪ್ರಚಾರ ನಡೆಸಲಿದ್ದೇವೆ. ಕೋಲಾರದಲ್ಲಿ ಈಗಾಗಲೇ ಒಮ್ಮೆ ಪ್ರಾಯೋಗಿಕವಾಗಿ ಬಸ್ ಓಡಿಸಲಾಗಿದೆ. ನಾವು ಬಸ್ ಯಾತ್ರೆಗಾಗಿ ದಿನಾಂಕ ನಿಗದಿ ಮಾಡಲು ಜ್ಯೋತಿಷ್ಯ ನೋಡಲ್ಲ. ನಮಗೆ ಎಲ್ಲಾ ಕಾಲವೂ ಶುಭವೇ. ಎಲ್ಲವೂ ಒಳ್ಳೆಯ ದಿನಗಳೇ. ಹಾಗಾಗಿ ಟೈಂ ನೋಡಿ ಬಸ್ ಯಾತ್ರೆ ಫಿಕ್ಸ್ ಮಾಡಲ್ಲ ಎಂದು ಹೇಳಿದರು.

Final list of Congress candidates by december first week says Siddaramaiah.