ಗುಂಬಜ್ ವಿವಾದ ; ಮೈಸೂರಿನಲ್ಲಿ ಕೇಸರಿ ಪಾಳಯದಲ್ಲೇ ಜಟಾಪಟಿ, ಶಾಸಕ- ಸಂಸದರ ತಿಕ್ಕಾಟ ಮುಖ್ಯಮಂತ್ರಿ ಅಂಗಳಕ್ಕೆ ! 

16-11-22 08:00 pm       HK News Desk   ಕರ್ನಾಟಕ

ಗುಂಬಜ್ ಮಾದರಿ ಬಸ್ ನಿಲ್ದಾಣ ಹೆಸರಲ್ಲಿ ಬಿಜೆಪಿ ಶಾಸಕ ರಾಮದಾಸ್ ಹಾಗೂ ಸಂಸದ ಪ್ರತಾಪ್ ಸಿಂಹ ನಡುವೆ ನೇರ ತಿಕ್ಕಾಟ ಏರ್ಪಟ್ಟಿದೆ. ಮುಸ್ಲಿಂ ಮಸೀದಿ ಶೈಲಿಯ ಬಸ್ ನಿಲ್ದಾಣದ ಗುಂಬಜ್‌ ಅನ್ನ ಜೆಸಿಬಿಗಳಿಂದ ಒಡೆದು ಹಾಕುತ್ತೇನೆಂಬ ಪ್ರತಾಪ್ ಸಿಂಹ ಹೇಳಿಕೆಗೆ ಶಾಸಕ ರಾಮದಾಸ್ ಅವನ್ನು ಟಚ್ ಮಾಡದಂತೆ ಠಕ್ಕರ್ ಇಟ್ಟಿದ್ದಾರೆ.

ಮೈಸೂರು, ನ.16: ಗುಂಬಜ್ ಮಾದರಿ ಬಸ್ ನಿಲ್ದಾಣ ಹೆಸರಲ್ಲಿ ಬಿಜೆಪಿ ಶಾಸಕ ರಾಮದಾಸ್ ಹಾಗೂ ಸಂಸದ ಪ್ರತಾಪ್ ಸಿಂಹ ನಡುವೆ ನೇರ ತಿಕ್ಕಾಟ ಏರ್ಪಟ್ಟಿದೆ. ಮುಸ್ಲಿಂ ಮಸೀದಿ ಶೈಲಿಯ ಬಸ್ ನಿಲ್ದಾಣದ ಗುಂಬಜ್‌ ಅನ್ನ ಜೆಸಿಬಿಗಳಿಂದ ಒಡೆದು ಹಾಕುತ್ತೇನೆಂಬ ಪ್ರತಾಪ್ ಸಿಂಹ ಹೇಳಿಕೆಗೆ ಶಾಸಕ ರಾಮದಾಸ್ ಅವನ್ನು ಟಚ್ ಮಾಡದಂತೆ ಠಕ್ಕರ್ ಇಟ್ಟಿದ್ದಾರೆ. ಪ್ರತಿಯಾಗಿ ಪ್ರತಾಪ್ ಸಿಂಹ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳನ್ನು ಕಳುಹಿಸಿ ಬಸ್ ನಿಲ್ದಾಣದ ಕಾಮಗಾರಿಗೆ ಬ್ರೇಕ್ ಹಾಕಿಸಿದ್ದಾರೆ. 

ಮೈಸೂರಿನ ನಂಜನಗೂಡು-ಊಟಿ ರಸ್ತೆಯ ಬಸ್ ನಿಲ್ದಾಣ ಮುಸ್ಲಿಂ ಶೈಲಿಯ ಗುಂಬಜ್ ಮಾದರಿಯಲ್ಲಿ ನಿರ್ಮಿಸಲಾಗಿದ್ದು, ಅವುಗಳನ್ನು ಜೆಸಿಬಿ ಮೂಲಕ ಒಡೆದು ಹಾಕುವುದಾಗಿ ಪ್ರತಾಪ್ ಸಿಂಹ ಎಚ್ಚರಿಕೆ ನೀಡಿದ್ದರು. ಆದರೆ ಈ ಹೇಳಿಕೆಗೆ ಮೈಸೂರು ನಗರದ ಬಿಜೆಪಿ ಶಾಸಕರೇ ವಿರೋಧ ವ್ಯಕ್ತಪಡಿಸಿದ್ದಾರೆ. ಮೈಸೂರಿನ ಪಾರಂಪರಿಕ ಮಹತ್ವ ಸಾರಲು ಮೈಸೂರು ಅರಮನೆಯ ಮಾದರಿಯಲ್ಲಿ ಬಸ್ ನಿಲ್ದಾಣ ನಿರ್ಮಾಣ ನಿರ್ಮಾಣ ಮಾಡಲಾಗಿದ್ದು, ಗುಂಬಜ್ ಶೈಲಿಯಲ್ಲಿ ಇಲ್ಲ ಎಂದು ರಾಮದಾಸ್ ಸ್ಪಷ್ಟಪಡಿಸಿದ್ದಾರೆ. ಇದೇ ವೇಳೆ ಬಸ್ ನಿಲ್ದಾಣಕ್ಕೆ ಜೆಎಸ್ಎಸ್ ಕಾಲೇಜು ಎಂದು ನಾಮಕರಣ ಮಾಡಿರುವ ರಾಮದಾಸ್, ಪ್ರದಾನಿ ನರೇಂದ್ರ ಮೋದಿ, ಸಿಎಂ ಬಸವರಾಜ ಬೊಮ್ಮಾಯಿ, ಸುತ್ತೂರು ಶ್ರೀ ಫೋಟೋ ಅಳವಡಿಸಿದ್ದಾರೆ.ಆಮೂಲಕ ಸಂಸದ ಪ್ರತಾಪ್ ಸಿಂಹಗೆ ತಿರುಗೇಟು ನೀಡಿದ್ದಾರೆ.

ಇಬ್ಬರು ಕೂಡ ಗುಂಬಜ್ ವಿಚಾರವನ್ನು ಪ್ರತಿಷ್ಠೆಯಾಗಿ ಪರಿಗಣಿಸಿದ್ದು ರಾಮದಾಸ್ ಏಟಿಗೆ ತಿರುಗೇಟು ಕೊಟ್ಟಿರುವ ಪ್ರತಾಪ್ ಸಿಂಹ, ಕೇಂದ್ರ ಸರ್ಕಾರದ ಅಧೀನದಲ್ಲಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳನ್ನು ಸ್ಥಳಕ್ಕೆ ಕಳುಹಿಸಿ ಬಸ್ ನಿಲ್ದಾಣದ ಕಾಮಗಾರಿ ನಿಲ್ಲಿಸಿದ್ದಾರೆ. ಇದೇ ವೇಳೆ, ಬಸ್ ನಿಲ್ದಾಣ ತೆರವು ಮಾಡುವಂತೆ ನ್ಯಾಷನಲ್ ಹೈವೇ ಅಥಾರಿಟಿ ಆಫ್ ಇಂಡಿಯಾ ಇದೇ ವಿಚಾರಕ್ಕೆ ಸಂಬಂಧಿಸಿ ಮೈಸೂರು ಮಹಾನಗರ ಪಾಲಿಕೆಗೆ ನೋಟಿಸ್ ನೀಡಿದೆ. ಇಷ್ಟಾಗುತ್ತಿದ್ದಂತೆ ಇಬ್ಬರ ನಡುವಿನ ಸಮರ ಸಿಎಂ ಬಸವರಾಜ ಬೊಮ್ಮಾಯಿ ಅಂಗಳ ತಲುಪಿದೆ. ಬೆಂಗಳೂರಿನ ಆರ್.ಟಿ.ನಗರದ ಸಿಎಂ ಮನೆಗೆ ಬುಧವಾರ ಭೇಟಿ ನೀಡಿದ ರಾಮದಾಸ್, ಸಂಸದ ಪ್ರತಾಪ್ ಸಿಂಹ ವಿರುದ್ಧ ದೂರು ನೀಡಿದ್ದಾರೆ.

Days after BJP Mysuru MP Pratap Simha ordered officials to demolish the bus stop with 3 domes opposite JSS college in the city, Krishnaraja constituency MLA SA Ramdas in a statement has opposed the demolition. BJP MLA Ramdas in a press release claimed that the domes were built on the bus stop to resemble the Mysuru Palace.