ಮುತಾಲಿಕ್ ಚಾಟಿಗೆ ಎಚ್ಚೆತ್ತ ಬಿಜೆಪಿ ಸರ್ಕಾರ, ಮೂರು ದಶಕದ ದತ್ತಪೀಠ ವಿವಾದಕ್ಕೆ ಅಂತ್ಯ ಸಾಧ್ಯತೆ ; ಆಡಳಿತ ಮಂಡಳಿ ರಚಿಸಿ ಆದೇಶ 

18-11-22 10:44 pm       HK News Desk   ಕರ್ನಾಟಕ

ಮೂರು ದಶಕಗಳಿಂದ ವಿವಾದಕ್ಕೆ ತುತ್ತಾಗಿರುವ ಇನಾಂ ದತ್ತಾತ್ರೇಯ ಬಾಬಾ ಬುಡನ್ ಗಿರಿ ದರ್ಗಾಕ್ಕೆ ರಾಜ್ಯ ಸರ್ಕಾರ ಆಡಳಿತ ಮಂಡಳಿ ರಚಿಸಿ ಆದೇಶ ಹೊರಡಿಸಿದೆ. 

ಚಿಕ್ಕಮಗಳೂರು, ನ.18 : ಮೂರು ದಶಕಗಳಿಂದ ವಿವಾದಕ್ಕೆ ತುತ್ತಾಗಿರುವ ಇನಾಂ ದತ್ತಾತ್ರೇಯ ಬಾಬಾ ಬುಡನ್ ಗಿರಿ ದರ್ಗಾಕ್ಕೆ ರಾಜ್ಯ ಸರ್ಕಾರ ಆಡಳಿತ ಮಂಡಳಿ ರಚಿಸಿ ಆದೇಶ ಹೊರಡಿಸಿದೆ. 

ಬಾಬಾ ಬುಡನ್ ಗಿರಿಯ ವಿವಾದ ಬಗೆಹರಿಸಲು ರಾಜ್ಯ ಸರ್ಕಾರದಿಂದ ಮುಂದಡಿ ಇಟ್ಟಿದೆ ಎನ್ನಲಾಗುತ್ತಿದ್ದು ಅದರ ಪ್ರಯುಕ್ತ ಆಡಳಿತ ಮಂಡಳಿ ರಚಿಸಿ ಆದೇಶ ಹೊರಡಿಸಲಾಗಿದೆ. ಒಬ್ಬರು ಮುಸ್ಲಿಂ ಸದಸ್ಯ ಸೇರಿ ಎಂಟು ಜನರ ಆಡಳಿತ ಮಂಡಳಿಯನ್ನು ರಚನೆ ಮಾಡಲಾಗಿದೆ. ಅರ್ಚಕರ ನೇಮಕಾತಿ ಬಗ್ಗೆ ನಿರ್ಧರಿಸುವ ಅಧಿಕಾರವನ್ನು ಆಡಳಿತ ಮಂಡಳಿಗೆ ನೀಡಲಾಗಿದೆ. 

High Court Of Karnataka Stock Photo - Download Image Now - Courthouse,  India, Courtroom - iStock

ಆಡಳಿತ ಮಂಡಳಿ ರಚಿಸಿ ಅರ್ಚಕರ ನೇಮಕ ಮಾಡುವಂತೆ ಹೈಕೋರ್ಟ್ ಈ ಕುರಿತ ಅರ್ಜಿ ವಿಚಾರಣೆ ವೇಳೆ ಹೇಳಿತ್ತು. ಆದರೆ ಅದನ್ನು ರಾಜ್ಯ ಸರ್ಕಾರ ಪಾಲನೆ ಮಾಡಿರಲಿಲ್ಲ. ಇತ್ತೀಚೆಗೆ ಶ್ರೀರಾಮ ಸೇನೆಯ ಪ್ರಮೋದ್ ಮುತಾಲಿಕ್ ಬಾಬಾ ಬುಡನ್ ಗಿರಿಗೆ ದತ್ತಮಾಲಾ ಅಭಿಯಾನ ನಡೆಸಿದ ವೇಳೆ, ರಾಜ್ಯದ ಬಿಜೆಪಿ ಸರ್ಕಾರದ ವಿರುದ್ಧ ಕಿಡಿಕಾರಿದ್ದರು. ಸ್ಥಳೀಯ ಶಾಸಕ ಸಿಟಿ ರವಿ ವಿರುದ್ಧವೂ ಆಕ್ರೋಶ ತೋರಿದ್ದು ರಾಮ ಮಂದಿರ ವಿವಾದವನ್ನು 500 ವರ್ಷ ಒಯ್ದಿದ್ದಾಯಿತು. ಬಾಬಾ ಬುಡನ್ ಗಿರಿಯನ್ನೂ 500 ವರ್ಷ ಉದ್ದಕ್ಕೆ ಒಯ್ಯುತ್ತೀರಾ.. ನಿಮಗೆ ಕೋರ್ಟ್ ಆದೇಶ ಪಾಲನೆ ಮಾಡೋಕ್ಕೆ ಆಗಿಲ್ಲವೇ.. ನಾಚಿಕೆ ಮಾನ ಮರ್ಯಾದೆ ಇದೆಯಾ.. ಮುಸ್ಲಿಮರು ತಡೆ ತರುತ್ತಾರೆಂದು ಹೇಳುತ್ತೀರಲ್ಲಾ.. ನಿಮಗೆ ಇಚ್ಛಾಶಕ್ತಿ ಇದ್ದರೆ ಹಿಂದು ಅರ್ಚಕರನ್ನು ನೇಮಕ ಮಾಡಬಹುದಿತ್ತು ಎಂದು ಗುಡುಗಿದ್ದರು. 

ಅಲ್ಲದೆ, ಇದೇ ವಿಚಾರವನ್ನು ಮುಂದಿಟ್ಟು ಚಿಕ್ಕಮಗಳೂರಿನಲ್ಲಿ ಚುನಾವಣೆ ಸ್ಪರ್ಧೆ ಮಾಡುವುದಾಗಿ ಹೇಳಿದ್ದರು.‌ ಇದರಿಂದ ಎಚ್ಚೆತ್ತ ರಾಜ್ಯ ಸರ್ಕಾರ ಇದೀಗ ಆಡಳಿತ ಮಂಡಳಿ ರಚಿಸಿ ಆದೇಶ ಮಾಡಿದೆ.

C T Ravi's 'Sarvajna' remark on SC judges triggers row | Deccan Herald

ಹಿಂದುಗಳ 5 ದಶಕದ ಹೋರಾಟಕ್ಕೆ ಜಯ ; ಸಿಟಿ ರವಿ ಟ್ವೀಟ್ 

ಈ ಬಗ್ಗೆ ಟ್ವೀಟ್ ಮಾಡಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ, ದತ್ತಪೀಠಕ್ಕೆ ವ್ಯವಸ್ಥಾಪನಾ ಸಮಿತಿ ನೇಮಕ ಹಿಂದೂಗಳ 5 ದಶಕಗಳ ಹೋರಾಟಕ್ಕೆ ಸಂದ ಐತಿಹಾಸಿಕ ಜಯ. ಹಿಂದೂಗಳ ಪವಿತ್ರ ಕ್ಷೇತ್ರ ದತ್ತಪೀಠಕ್ಕೆ ಆಡಳಿತ ಮಂಡಳಿ ನೇಮಕ ಮಾಡಲಾಗಿದೆ. ಮುಖ್ಯಮಂತ್ರಿ ಬೊಮ್ಮಾಯಿ ಹಾಗೂ ಬಿಜೆಪಿ ಸರ್ಕಾರಕ್ಕೆ ಧನ್ಯವಾದಗಳು ಎಂದು ಟ್ವೀಟ್ ಮಾಡಿದ್ದಾರೆ.

BJP government awakens after Pramod muthalik Slams party on Datta peta issue.