ಭಯೋತ್ಪಾದಕ ಕೃತ್ಯ ; ಸ್ಫೋಟಕ್ಕೆ ಐಇಡಿ ಮಾದರಿ ಸಲಕರಣೆ ಬಳಕೆ - ಸಿಎಂ ಬೊಮ್ಮಾಯಿ 

20-11-22 09:54 pm       HK News Desk   ಕರ್ನಾಟಕ

ಮಂಗಳೂರಿನಲ್ಲಿ ನಡೆದ ಸ್ಫೋಟ ಘಟನೆ ಭಯೋತ್ಪಾದಕ ಕೃತ್ಯ ಇರಬಹುದು ಎಂದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಈ ಜಾಲವನ್ನು ಸರ್ಕಾರ ಬೇಧಿಸಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. 

ಬಳ್ಳಾರಿ, ನ.20 : ಮಂಗಳೂರಿನಲ್ಲಿ ನಡೆದ ಸ್ಫೋಟ ಘಟನೆ ಭಯೋತ್ಪಾದಕ ಕೃತ್ಯ ಇರಬಹುದು ಎಂದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಈ ಜಾಲವನ್ನು ಸರ್ಕಾರ ಬೇಧಿಸಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. 

ಬಳ್ಳಾರಿಯಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನಿನ್ನೆ ಸಂಜೆ ಮಂಗಳೂರಿನಲ್ಲಿ ಆಟೋದಲ್ಲಿ ಪ್ರೆಶರ್ ಕುಕ್ಕರ್ ನಲ್ಲಿ ಬಾಂಬ್ ಸ್ಪೋಟವಾಗಿದೆ. ಈ ಸಂದರ್ಭದಲ್ಲಿ ಆಟೋದ ಚಾಲಕ ಹಾಗೂ ಒಬ್ಬ ಪ್ರಾಯಾಣಿಕ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪ್ರಕರಣವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿ ತನಿಖೆಯನ್ನು ನಡೆಸುತ್ತಿದ್ದಾರೆ. ಘಟನೆಗೆ ಎಲ್ ಇ ಡಿ ಮಾದರಿ ವಸ್ತು ಬಳಕೆಯಾಗಿದ್ದು, ವ್ಯಕ್ತಿಯ ಪರಿಶೋಧನೆ ವೇಳೆ, ಆತನ ಬಳಿಯಿದ್ದ ಆಧಾರ್ ಕಾರ್ಡ್ ನಕಲಿ ಎಂದು ತಿಳಿಯುತ್ತದೆ. ಆತನ ಕೆಲವು ನೈಜ ವಿವರಗಳು ಲಭಿಸಿರುವುದರಿಂದ ಇದೊಂದು ಭಯೋತ್ಪಾದನಾ ಘಟನೆ ಎಂದು ಪ್ರಾಥಮಿಕ ಮಾಹಿತಿಯಿಂದ ತಿಳಿದು ಬಂದಿದೆ ಎಂದರು. 

ಈಗಾಗಲೇ ರಾಷ್ಟ್ರೀಯ ತನಿಖಾ ದಳ ಹಾಗೂ ತನಿಖಾ ದಳ ಸ್ಥಳಕ್ಕೆ ತೆರಳಿದ್ದು, ಕರ್ನಾಟಕ ಪೊಲೀಸರೂ ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ವ್ಯಕ್ತಿ ಆಸ್ಪತ್ರೆಯಲ್ಲಿದ್ದು, ನಂತರ ಆತನಿಂದ ಮಾಹಿತಿ ಪಡೆಯಲಾಗುವುದು. ಆ ವ್ಯಕ್ತಿ ಕೊಯಂಬತ್ತೂರು ಸೇರಿದಂತೆ ಹತ್ತು ಹಲವಾರು ಸ್ಥಳಗಳಲ್ಲಿ ಓಡಾಡಿದ್ದು, ವ್ಯಕ್ತಿಗೆ ಭಯೋತ್ಪಾದನೆಯ ಸಂಪರ್ಕವಿದೆ ಎಂದರು.

Karnataka Chief Minister Basavaraj Bommai on Sunday said the suspect who allegedly carried out a bomb explosion in Mangaluru had terror links as he had travelled to various places, including Coimbatore in neighbouring Tamil Nadu. According to the preliminary information, it was an LED-linked instrument, the Chief Minister told reporters here.