ಬ್ರೇಕಿಂಗ್ ನ್ಯೂಸ್
22-11-22 03:22 pm Bangalore Correspondent ಕರ್ನಾಟಕ
ಬೆಂಗಳೂರು, ನ.22: ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಇಟ್ಟು ಸಿಕ್ಕಿಬಿದ್ದಿರುವ ಉಗ್ರ ಮೊಹಮ್ಮದ್ ಶಾರೀಕ್ ಸುಸೈಡ್ ಬಾಂಬರ್ ಆಗಿದ್ದನೇ ಅನ್ನುವ ಗಂಭೀರ ಪ್ರಶ್ನೆ ಪೊಲೀಸರಿಗೆ ಎದುರಾಗಿದೆ. ಇಂಥ ಅನುಮಾನಕ್ಕೆ ಕಾರಣವಾಗಿರುವುದು ಪೊಲೀಸರಿಗೆ ಲಭಿಸಿದ ಆ ಒಂದು ಚಿತ್ರ. ಶಾರೀಕ್ ಮಂಗಳೂರಿಗೆ ಹೊರಡುವುದಕ್ಕೂ ಮುನ್ನ ಕುಕ್ಕರ್ ಬಾಂಬ್ ರೆಡಿಯಾಗಿಟ್ಟು ತಾನು ಮಂಗಳೂರಿಗೆ ಹೊರಡುತ್ತಿದ್ದೇನೆ ಎಂದು ಸೂಚಿಸುವ ಫೋಟೋ ತೆಗಿಸಿಕೊಂಡಿದ್ದನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಇದಲ್ಲದೆ, ಈ ಫೋಟೋ ಮಾಧ್ಯಮಕ್ಕೆ ಲೀಕ್ ಆಗಿರುವುದು, ಒಂದೆಡೆ ಆತನಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೈಲೇಜ್ ಸಿಕ್ಕಂತಾಗಿದ್ದರೆ, ಆಧುನಿಕ ಭಾರತದ ಇಮೇಜಿಗೆ ಧಕ್ಕೆ ಬರುವಂತಾಗಿದೆ ಎನ್ನುವ ಮಾತು ಕೇಳಿಬಂದಿದೆ.
ಈ ಫೋಟೋದಲ್ಲಿ ಶಾರೀಕ್ ತಲೆಗೆ ರುಮಾಲು ಸುತ್ತಿಕೊಂಡಿದ್ದು, ಐಸಿಸ್ ಉಗ್ರರ ರೀತಿ ಕಂಡಿದ್ದಾನೆ. ಐಸಿಸ್ ಉಗ್ರರ ರೀತಿಯಲ್ಲೇ ತಲೆಗೆ ಕಪ್ಪು ಬಿಳಿ ಮಿಶ್ರಿತ ರುಮಾಲು ಸುತ್ತಿಕೊಂಡಿದ್ದು, ಅಫ್ಘಾನಿಸ್ತಾನದ ಐಸಿಸ್- ತಾಲಿಬಾನ್ ಉಗ್ರರು ಸುತ್ತಿಕೊಳ್ಳುವ ಬಟ್ಟೆಯಂತೆಯೇ ಇದೆ. ಆ ಬಟ್ಟೆಯನ್ನು ತಲೆಗೆ ಸುತ್ತಿಕೊಂಡಿದ್ದಲ್ಲದೆ, ಕುಕ್ಕರ್ ಗೆ ವೈಯರ್ ಸಿಕ್ಕಿಸಿ ರೆಡಿಯಾಗಿರುವ ಬಾಂಬನ್ನು ಹಿಡಿದುಕೊಂಡಿರುವುದು ಸ್ಪಷ್ಟವಾಗಿದೆ. ತಾನು ಬಾಂಬ್ ಹಿಡಿದು ಸಿದ್ಧವಾಗಿದ್ದೇನೆ ಮತ್ತು ಸುಸೈಡ್ ಬಾಂಬರ್ ಆಗುವುದಕ್ಕೂ ತಯಾರಿ ಇದ್ದೇನೆ ಎನ್ನುವುದನ್ನು ಸೂಚಿಸುವ ಈ ಚಿತ್ರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಂಚಲನ ಮೂಡಿಸಿದೆ. ಕೇಂದ್ರ ಮಟ್ಟದ ತನಿಖಾ ಏಜನ್ಸಿಗಳಿಗೆ ಈ ಚಿತ್ರ ತೀವ್ರ ಮೈನಸ್ ಆಗಿದ್ದು, ಐಸಿಸ್ ಉಗ್ರನೊಬ್ಬ ಭಾರತದ ಅದರಲ್ಲೂ ಬಿಜೆಪಿ ಆಡಳಿತ ಇರುವ ಕರ್ನಾಟಕದಲ್ಲಿ ಇದ್ದಾನೆ ಎನ್ನುವುದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉಗ್ರವಾದ ಪರ ಇರುವ ದೇಶಗಳ ಗಮನ ಸೆಳೆದಿದೆ.
ಮೂಲದ ಪ್ರಕಾರ, ಮೊಹಮ್ಮದ್ ಶಾರೀಕ್ ಸಿರಿಯಾದ ಐಸಿಸ್ ಉಗ್ರರ ನೇರ ಸಂಪರ್ಕದಲ್ಲಿದ್ದ. ಐಸಿಸ್ ಉಗ್ರರ ಸೂಚನೆಯಂತೆ ಬಾಂಬ್ ತಯಾರಿಸಿ ಸುಸೈಡ್ ಬಾಂಬರ್ ಆಗಲು ರೆಡಿಯಾಗಿದ್ದೇನೆ ಅನ್ನುವುದನ್ನು ತೋರಿಸಲು ಫೋಟೋ ತೆಗೆಸಿರಬಹುದು. ಅದಕ್ಕಾಗಿ ಕುಕ್ಕರ್ ಬಾಂಬ್ ರೆಡಿಯಾಗಿಟ್ಟು ಕೈಯಲ್ಲಿ ಹಿಡಿದುಕೊಂಡೇ ಫೋಟೋ ತೆಗೆಸಿ ಅದನ್ನು ಐಸಿಸ್ ಉಗ್ರರಿಗೆ ಕಳಿಸಿರಬಹುದು ಅನ್ನುವ ಅನುಮಾನ ಪೊಲೀಸರಲ್ಲಿದೆ. ಆದರೆ ಆತ ಉಪಯೋಗಿಸುತ್ತಿದ್ದ ಲ್ಯಾಪ್ ಟಾಪ್ ಆಗಲೀ, ಕಂಪ್ಯೂಟರ್ ಆಗಲೀ ಪೊಲೀಸರಿಗೆ ಲಭಿಸಿಲ್ಲ. ಒಂದಷ್ಟು ಬಾಂಬ್ ತಯಾರಿ ಸಾಮಗ್ರಿಗಳು ಮಾತ್ರ ಮೈಸೂರಿನ ಮನೆಯಲ್ಲಿ ಪತ್ತೆಯಾಗಿವೆ. ಈ ಫೋಟೋವನ್ನು ಆತನ ಮೊಬೈಲಿನಲ್ಲಿ ಡಿಲೀಟ್ ಆಗಿರುವುದನ್ನು ರಿಟ್ರೀವ್ ಮಾಡಿ ಪೊಲೀಸರು ಪತ್ತೆ ಮಾಡಿದ್ದಾರೆ ಎನ್ನಲಾಗುತ್ತಿದೆ.
ಕುಕ್ಕರ್ ಬಾಂಬ್ ಸಿದ್ಧವಾಗಿಟ್ಟುಕೊಂಡು ಮಂಗಳೂರಿಗೆ ಬಂದಿದ್ದ ಬಾಂಬರ್ ಅದನ್ನು ಜನನಿಬಿಡ ಸ್ಥಳದಲ್ಲಿ ಸಂಜೆ ಹೊತ್ತಿಗೆ ಇಡುವುದಕ್ಕಾಗಿ ತಂದಿರಬಹುದು ಅನ್ನುವ ಅನುಮಾನಗಳಿವೆ. ಆದರೆ ಆಟೋದಲ್ಲಿ ತೆರಳುತ್ತಿದ್ದಾಗ ಪಶ್ಚಾತ್ ಕಂಪನದಿಂದ ಅದು ಬ್ಲಾಸ್ಟ್ ಆಗಬೇಕಾದ ಟೈಮಿಂಗ್ ಒಳಗಡೆಯೇ ಬ್ಲಾಸ್ಟ್ ಆಗಿತ್ತು. ಹೀಗಾಗಿ ದೊಡ್ಡ ದುರಂತ ತಪ್ಪಿದೆ ಎಂದು ಪೊಲೀಸರು ಹೇಳುತ್ತಿದ್ದಾರೆ. ಇಷ್ಟಕ್ಕೂ ಇಂಥಹದ್ದೊಂದು ಐಸಿಸ್ ಬಾಂಬರ್ ಆಗಿ ರೆಡಿಯಾಗಿದ್ದ ಚಿತ್ರ ಭಾರತದಲ್ಲಿ ಯಾವುದೇ ಭಯೋತ್ಪಾದಕ ಕೃತ್ಯ ಆಗಿಲ್ಲ, ಅಂಥಹದ್ದಕ್ಕೆ ಅವಕಾಶ ನೀಡಿಲ್ಲ ಎನ್ನುವ ಆಡಳಿತಕ್ಕೆ ಕಪ್ಪು ಚುಕ್ಕೆಯಾಗಿ ಪರಿಣಮಿಸಿದೆ.
ಕೇಂದ್ರ ತನಿಖಾ ತಂಡಗಳ ಗರಂ
ಐಸಿಸ್ ಸುಸೈಡ್ ಬಾಂಬರ್ ರೀತಿ ಕಾಣಿಸಿಕೊಂಡಿರುವ ಈ ಚಿತ್ರ ಮಾಧ್ಯಮಕ್ಕೆ ಲೀಕ್ ಆಗಿರುವುದಕ್ಕೆ ಕೇಂದ್ರೀಯ ಭದ್ರತಾ ಏಜನ್ಸಿಗಳು ರಾಜ್ಯ ಪೊಲೀಸರ ಬಗ್ಗೆ ಗರಂ ಆಗಿದ್ದಾರೆ ಎನ್ನುವ ಮಾಹಿತಿಗಳಿವೆ. ಮೊಹಮ್ಮದ್ ಶಾರೀಕ್ ಈಗ ಕೇವಲ ತೀರ್ಥಹಳ್ಳಿ ಅಥವಾ ಮಂಗಳೂರಿನ ನಿವಾಸಿ ಮಾತ್ರ ಆಗಿಲ್ಲ. ತಾನೊಬ್ಬ ಐಸಿಸ್ ಬಾಂಬರ್, ಭಾರತದಲ್ಲಿಯೇ ಇದ್ದೇನೆ ಅನ್ನುವುದನ್ನು ಇಡೀ ಜಗತ್ತಿಗೆ ಈ ಚಿತ್ರದ ಮೂಲಕ ಮೊಹಮ್ಮದ್ ಶಾರೀಕ್ ತೋರಿಸಿಕೊಟ್ಟಿದ್ದಾನೆ. ಮಾಧ್ಯಮಗಳಲ್ಲಿ ಬಂದಿರುವ ಸುಸೈಡ್ ಬಾಂಬರ್ ರೀತಿಯ ಶಾರೀಕ್ ಫೋಟೋ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯುವಂತೆ ಮಾಡಿದ್ದು, ಆಧುನಿಕ ಭಾರತಕ್ಕೆ ಒಂದು ರೀತಿಯಲ್ಲಿ ಕಪ್ಪು ಚುಕ್ಕೆ ಇಟ್ಟಿದೆ. ಇಂಥ ಚಿತ್ರ ತನಿಖಾ ತಂಡಕ್ಕೆ ಸಿಕ್ಕರೂ, ಅದನ್ನು ಮಾಧ್ಯಮಕ್ಕೆ ಲೀಕ್ ಮಾಡದೇ ಇರುತ್ತಿದ್ದರೆ ಈ ಚಿತ್ರದಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆತನಿಗೆ ಸಿಕ್ಕಿರುವ ಮೈಲೇಜನ್ನು ತಡೆಯಬಹುದಿತ್ತು. ಈ ಚಿತ್ರದಿಂದಾಗಿ ಶಾರೀಕ್ ಗೆ ಉಗ್ರವಾದಿ ನೆಟ್ವರ್ಕ್ ಒಳಗೆ ಇಂಡಿಯನ್ ಮುಜಾಹಿದೀನ್ ಮುಖ್ಯಸ್ಥ ಮಸೂದ್ ಅಜರ್ ರೀತಿಯ ಮೈಲೇಜ್ ಸಿಕ್ಕಂತಾಗಿದೆ.
ಅಫ್ಘನ್ ರೀತಿ ಸುಸೈಡ್ ಬಾಂಬರ್ !
ಸುಸೈಡ್ ಬಾಂಬರ್ ಆಗುವುದಕ್ಕೆ ಸಾಕಷ್ಟು ಬ್ರೇನ್ ವಾಷ್ ಮಾಡಬೇಕಾಗುತ್ತದೆ. ಅಫ್ಘಾನಿಸ್ತಾನ, ಸಿರಿಯಾದಲ್ಲಿ ಈಗಲೂ ಹೆಚ್ಚಿನ ಬಾಂಬ್ ಸ್ಫೋಟ ಕೃತ್ಯಗಳಲ್ಲಿ ಸುಸೈಡ್ ಬಾಂಬರ್ ಗಳೇ ಹೆಚ್ಚು ಬಳಕೆಯಾಗುತ್ತಾರೆ. ಆತ್ಮಾಹುತಿ ದಾಳಿ ನಡೆಸಿದರೆ ನೇರವಾಗಿ ಸ್ವರ್ಗ ಲಭಿಸುತ್ತದೆ ಎನ್ನುವ ರೀತಿ ಯುವಕ-ಯುವತಿಯರನ್ನು ಬ್ರೇನ್ ವಾಷ್ ಮಾಡಿ, ಸಾಯುವುದಕ್ಕೆ ಮಾನಸಿಕವಾಗಿ ಸಿದ್ಧರಾಗುವಂತೆ ಮಾಡುತ್ತಾರೆ. ಶಾರೀಕ್ ಕೂಡ ಸುಸೈಡ್ ಬಾಂಬರ್ ಆಗುವುದಕ್ಕೆ ರೆಡಿಯಾಗಿದ್ದ ಎನ್ನುವುದಕ್ಕೆ ಪುಷ್ಟಿ ನೀಡುವಂತೆ ಆತನ ತೀರ್ಥಹಳ್ಳಿಯ ಕುಟುಂಬಸ್ಥರಿಗೆ ಲಕ್ಷಾಂತರ ರೂಪಾಯಿ ಹಣದ ರವಾನೆಯಾಗಿರುವುದು ದೃಢಪಟ್ಟಿದೆ. ಆತನ ಸೋದರಿ, ಮಲತಾಯಿ ಕುಟುಂಬಸ್ಥರ ಬ್ಯಾಂಕ್ ಖಾತೆಗಳಿಗೆ ಇತ್ತೀಚಿನ ದಿನಗಳಲ್ಲಿ ಅನಧಿಕೃತ ಮೂಲದಿಂದ ಹಣದ ರವಾನೆಯಾಗಿತ್ತು. ಇದು ತಾನು ಸತ್ತರೆ ತನ್ನ ಕುಟುಂಬಕ್ಕೆ ದೊಡ್ಡ ಮೊತ್ತದ ನಿಧಿ ದೊರಕಸಬೇಕು ಎನ್ನುವ ಷರತ್ತಿನೊಂದಿಗೆ ಸಾಯಲು ರೆಡಿಯಾಗಿದ್ದನೇ ಎನ್ನುವ ಸಂಶಯ ಮೂಡುವಂತಾಗಿದೆ.
ಮತ್ತೊಂದು ಗಮನ ಸೆಳೆಯುವ ವಿಚಾರ, ಸುಸೈಡ್ ಬಾಂಬರ್ ಆಗುವವರು ಮೈಯಲ್ಲಿನ ರೋಮವನ್ನು ತೆಗೆಸಿರುತ್ತಾರೆ. ಕಳೆದ ಬಾರಿ ತಮಿಳುನಾಡಿನ ಕೊಯಮತ್ತೂರಿನಲ್ಲಿ ಬಾಂಬ್ ಸ್ಫೋಟದಲ್ಲಿ ಮಡಿದಿದ್ದ ಜಯೇಶ್ ಮುಬಿನ್ ಕೂಡ ತನ್ನ ಮೈಯ ರೋಮವನ್ನು ತೆಗೆಸಿದ್ದ. ಜಮ್ಮು ಕಾಶ್ಮೀರದಲ್ಲಿ ಬಾಂಬ್ ಸ್ಫೋಟದಲ್ಲಿ ಸಾಯುವ ಉಗ್ರರು ಮೈಯ ರೋಮವನ್ನು ತೆಗೆಸಿದ್ದನ್ನು ತನಿಖಾ ತಂಡಗಳು ಪತ್ತೆ ಮಾಡಿವೆ. ಮಂಗಳೂರಿನಲ್ಲಿ ಸಿಕ್ಕಿಬಿದ್ದ ಶಾರೀಕ್ ಕೂಡ ಮೈಯ ರೋಮವನ್ನು ಸಪಾಟಾಗಿ ತೆಗೆಸಿದ್ದ ಅನ್ನುವ ಮಾಹಿತಿಗಳು ಇವೆ. ಇದು ಯಾಕಂದ್ರೆ, ಮುಸ್ಲಿಮರಲ್ಲಿ ದಫನಕ್ಕೂ ಮುನ್ನ ಮೈಯ ರೋಮವನ್ನು ತೆಗೆಸುವುದು ಕ್ರಮ. ಆತ್ಮಾಹುತಿ ದಾಳಿಯಲ್ಲಿ ದೇಹ ಪೀಸ್ ಪೀಸ್ ಆದಲ್ಲಿ ಮುಸ್ಲಿಂ ಸಂಪ್ರದಾಯ ಪಾಲನೆಗೆ ತೊಂದರೆಯಾಗುತ್ತದೆ ಎನ್ನುವ ಕಾರಣಕ್ಕೆ ಸುಸೈಡ್ ಬಾಂಬರ್ ಗಳು ಮೊದಲೇ ದೇಹವನ್ನು ಅದಕ್ಕೆ ರೆಡಿ ಮಾಡಿಕೊಂಡಿರುತ್ತಾರೆ ಎನ್ನಲಾಗುತ್ತಿದೆ.
Mangaluru auto blast accused Mohammad Shariq in an ISIS pose photo viral, was in touch with ISIS handlers says police. "A messaging services app came handy for Shariq to establish a link with the Syria-based Islamic State (IS) militants from whom they got a PDF to learn how to make a bomb," a police officer from Shivamogga who investigated the case told PTI.
01-12-23 10:57 pm
HK News Desk
BJP Mla Munirathna, Bomb Email to schools in...
01-12-23 10:28 pm
Chikmagaluru news lawyer, Police: ಹೆಲ್ಮೆಟ್ ಹಾ...
01-12-23 06:08 pm
Bangalore School Bomb Mail: ಬಾಂಬ್ ಮೇಲ್ ; ಟೈಪ್...
01-12-23 05:49 pm
Bengaluru, schools get bomb threat on email:...
01-12-23 03:29 pm
01-12-23 08:02 pm
HK News Desk
ದೇವರ ದರ್ಶನಕ್ಕೆ ಹೊರಟವರು ಮಸಣಕ್ಕೆ ; ಚಾಲಕ ನಿದ್ದೆಗ...
01-12-23 05:19 pm
EXIT POLL- ಪಂಚ ರಾಜ್ಯಗಳ ಮತದಾನೋತ್ತರ ಸಮೀಕ್ಷೆ ; ಮ...
30-11-23 09:40 pm
ಯುಪಿಐ ಪಾವತಿ ವ್ಯವಸ್ಥೆಗೆ ಕಡಿವಾಣ ಹಾಕಲು ಚಿಂತನೆ ;...
30-11-23 09:02 pm
ರಾಷ್ಟ್ರಗೀತೆಗೆ ಅವಮಾನ ; 12 ಬಿಜೆಪಿ ಶಾಸಕರ ವಿರುದ್ಧ...
30-11-23 07:29 pm
02-12-23 03:36 pm
Mangalore Correspondent
Mangalore, Dinesh Gundu Rao fishing harbour:...
02-12-23 03:32 pm
Dinesh Gundu Rao, Eshwarappa, Jagadish Shetta...
02-12-23 01:57 pm
Dinesh Gundu Rao, Mangalore: ಭ್ರೂಣ ಹತ್ಯೆ ಪ್ರಕ...
02-12-23 01:50 pm
Kantara Movie, Beatravel buddy, Bhoota Kola,...
02-12-23 10:48 am
02-12-23 08:19 pm
Bangalore Correspondent
Bangalore sex determination racket case: ಭ್ರೂ...
02-12-23 05:59 pm
ED Official Arrested, Bribery Case, Tamil Nad...
02-12-23 04:25 pm
Fake courier scam Bangalore: ಕೊರಿಯರ್ ಪಾರ್ಸೆಲ್...
01-12-23 10:41 pm
Fraud Case, Mangalore: ಅಪಾರ್ಟ್ಮೆಂಟ್ ನಲ್ಲಿ ಫ್ಲ...
01-12-23 04:39 pm