ಬ್ರೇಕಿಂಗ್ ನ್ಯೂಸ್
24-11-22 04:06 pm Bangalore Correspondent ಕರ್ನಾಟಕ
ಬೆಂಗಳೂರು, ನ.24: ತುಳುವರ ಆಚರಣೆ, ದೈವಾರಾಧನೆಯ ಎಳೆಯನ್ನು ಮುಂದಿಟ್ಟು ಕನ್ನಡದಲ್ಲಿ ಹೊರತಂದಿದ್ದ ಕಾಂತಾರ ಸಿನಿಮಾ ತುಳು ಭಾಷೆಯಲ್ಲೇ ಬಿಡುಗಡೆಯಾಗಲು ಸಜ್ಜಾಗಿದೆ. ದೇಶ- ವಿದೇಶದಲ್ಲಿ ಸದ್ದು ಮಾಡಿರುವ ಕಾಂತಾರ ಸಿನಿಮಾ ಭಾರತದಲ್ಲಿ ಡಿ.2ರಂದು ತುಳು ಭಾಷೆಯಲ್ಲೇ ಡಬ್ ಆಗಿ ಬಿಡುಗಡೆಗೊಳ್ಳುತ್ತಿದೆ. ಈ ಬಗ್ಗೆ ಚಿತ್ರ ನಿರ್ಮಾಪಕ ಹೊಂಬಾಳೆ ಫಿಲ್ಮ್ಸ್ ತಂಡವು ಟ್ವಿಟರ್ ನಲ್ಲಿ ಪ್ರಕಟಿಸಿದೆ.
ತುಳು ಭಾಷೆಗೆ ಡಬ್ ಆಗಿರುವ ಚಿತ್ರದ ಟ್ರೈಲರ್ ಅನ್ನು ಹೊಂಬಾಳೆ ಫಿಲಂಸ್ ತಂಡ ಟ್ವಿಟರ್ ನಲ್ಲಿ ಹಂಚಿಕೊಂಡಿದೆ. ಅಲ್ಲದೆ, ವಿದೇಶದಲ್ಲಿ ನ.25ರಂದೇ ತುಳು ಭಾಷೆಯಲ್ಲಿ ಫಿಲಂ ಬಿಡುಗಡೆಯಾಗಲಿದ್ದು, ಭಾರತದಲ್ಲಿ ಡಿ.2ರಂದು ಬಿಡುಗಡೆ ಆಗಲಿದೆ ಎಂದು ಹೇಳಿದೆ. ಕರಾವಳಿಯ ದೈವಾರಾಧಾನೆ ಮತ್ತು ತುಳುವರ ಆಚರಣೆ, ಸಂಪ್ರದಾಯಗಳನ್ನು ಎದ್ದು ತೋರಿಸಿರುವ ಕಾಂತಾರ ಸಿನಿಮಾ ತುಳುವಿನಲ್ಲೇ ಬರಬೇಕೆಂದು ಆಗ್ರಹ ಕೇಳಿಬಂದಿತ್ತು. ಸೆ.30ರಂದು ಕನ್ನಡದಲ್ಲಿ ಮಾತ್ರ ಹೊರಬಂದಿದ್ದ ಚಿತ್ರವು ಆನಂತರ, ಹಿಂದಿ, ತೆಲುಗು, ತಮಿಳು, ಮಲಯಾಳಂ ಭಾಷೆಗೂ ಡಬ್ ಆಗಿ ಆಯಾ ಭಾಗದಲ್ಲೂ ಜನರ ಮೆಚ್ಚುಗೆ ಗಳಿಸಿತ್ತು.
ಇದೀಗ ಎರಡು ತಿಂಗಳ ನಂತರ ಕಾಂತಾರ ತುಳುವಿನಲ್ಲಿ ಬಿಡುಗಡೆಯಾಗುತ್ತಿದೆ. ಚಿತ್ರದಲ್ಲಿ ಭೂಮಾಲೀಕನ ಪಾತ್ರ ಮಾಡಿದ್ದ ಅಚ್ಯುತ್ ಕುಮಾರ್ ಪರವಾಗಿ ತುಳುವಿನ ಖ್ಯಾತ ನಟ, ನಿರ್ದೇಶಕ ದೇವದಾಸ್ ಕಾಪಿಕಾಡ್ ಧ್ವನಿ ನೀಡಿದ್ದಾರೆ. ಉಳಿದಂತೆ, ಚಿತ್ರದಲ್ಲಿ ಹೆಚ್ಚಿನ ಮಂದಿ ತುಳುವರೇ ಪಾತ್ರ ನಿರ್ವಹಿಸಿರುವುದರಿಂದ ಆಯಾ ಪಾತ್ರಧಾರಿಗಳೇ ಧ್ವನಿ ನೀಡಿದ್ದಾರೆ. ಕನ್ನಡದಲ್ಲಿ ಕುಂದಾಪ್ರ ಕನ್ನಡ ಮತ್ತು ಮಂಗಳೂರು ಕನ್ನಡದಲ್ಲಿಯೇ ಹೆಚ್ಚು ಡಯಲಾಗ್ ಗಳಿದ್ದವು. ಇದೀಗ ತುಳುವರನ್ನು ಪ್ರತಿನಿಧಿಸುವ ಚಿತ್ರಕ್ಕೆ ತುಳು ಭಾಷೆಯ ಟಚ್ ಸಿಕ್ಕಿದೆ.
ವರಾಹ ರೂಪಂ ಹಾಡಿಗೆ ಕತ್ತರಿ
ಇದೇ ವೇಳೆ, ಕಾಂತಾರ ಕನ್ನಡ ಸಿನಿಮಾ ಅಮೆಜಾನ್ ಪ್ರೈಮ್ ಓಟಿಟಿಯಲ್ಲೂ ಬಿಡುಗಡೆಯಾಗಿದೆ. ಆದರೆ ಚಿತ್ರದಲ್ಲಿ ಜನಾಕರ್ಷಣೆ ಗಳಿಸಿದ್ದ ವರಾಹಂ ರೂಪಂ ಹಾಡಿನಲ್ಲಿ ಕೊಂಚ ಬದಲಾವಣೆ ಮಾಡಲಾಗಿದೆ. ಕೇರಳದ ತೈಕ್ಕುಡಂ ಬ್ರಿಡ್ಜ್ ಎನ್ನುವ ಆಲ್ಬಂ ತಂಡ ವರಾಹ ರೂಪಂ ಹಾಡು ತಮ್ಮದೆಂದು ಹೇಳಿಕೊಂಡು ಕೋರ್ಟ್ ಮೆಟ್ಟಿಲೇರಿತ್ತು. ತಮ್ಮ ನವರಸ ರೂಪಂ ಹಾಡಿನ ಟ್ಯೂನನ್ನು ಬಳಸಲಾಗಿದೆ ಎಂದು ಕೋಯಿಕ್ಕೋಡ್ ಕೋರ್ಟಿನಿಂದ ಹಾಡು ಪ್ರಸಾರಕ್ಕೆ ತಡೆಯಾಜ್ಞೆ ತರಲಾಗಿತ್ತು. ಥಿಯೇಟರ್ ಗಳಲ್ಲಿ ಹಾಡಿಗೆ ನಿಷೇಧ ಹೇರದೇ ಇದ್ದರೂ, ಇದೀಗ ಒಟಿಟಿ ವೇದಿಕೆಯಲ್ಲಿ ಚಿತ್ರ ಬಿಡುಗಡೆಯಾಗುತ್ತಲೇ ಹಾಡಿಗೆ ಕತ್ತರಿ ಹಾಕಲಾಗಿದೆ. ವರಾಹ ರೂಪಂ ಹಳೆಯ ಹಾಡಿನ ಟ್ಯೂನನ್ನು ಬದಲಾಯಿಸಿ ಹೊಸತಾಗಿ ಕೊಟ್ಟಿದ್ದು ಜನರ ನಿರಾಸೆಗೆ ಕಾರಣವಾಗಿದೆ.
Pan-India film 'Kantara', which recently took the theatres by storm, has now made its way to OTT, but with a change. Makers of the film, who were accused of plagiarising the song 'Varaha Roopam', have allegedly made some modifications to it.
25-08-26 03:39 pm
HK News Staffer
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
ಕರ್ನಾಟಕದಲ್ಲಿ ‘ಅನಲಾಗ್ ಪನ್ನೀರ್’ಗೆ ಒಂದು ವರ್ಷ ನಿಷ...
22-08-26 10:15 pm
ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ; ಏ...
22-08-26 03:01 pm
500 ಕೆಪಿಎಸ್ ಶಾಲೆಗಳ ಸಮಗ್ರ ಅಭಿವೃದ್ಧಿಗೆ ₹2500 ಕೋ...
22-08-26 11:10 am
26-08-26 06:41 pm
HK News Staffer
ಹಿಜಾಬ್ ಇಸ್ಲಾಮಿನ ಧಾರ್ಮಿಕ ಆಚರಣೆಯಲ್ಲಿ ಅನಿವಾರ್ಯ ಅ...
26-08-26 02:05 pm
ಮಂಗಳೂರನ್ನು ಪಾಲಕ್ಕಾಡ್ ರೈಲ್ವೇ ವಿಭಾಗದಿಂದ ತೆರವು ಮ...
26-08-26 12:01 pm
ಅಮರಾವತಿ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ದುರಂತ ; ವೆಂಟ...
24-08-26 04:55 pm
ಪಾಲ್ಘಾಟ್ ರೈಲ್ವೇ ವಿಭಾಗದಿಂದ ಮಂಗಳೂರು ಹೊರಕ್ಕೆ ; ವ...
22-08-26 08:37 pm
26-08-26 10:58 pm
HK News Desk
ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹುದ್ದೆಗ...
26-08-26 10:48 pm
ಜಿರಳೆ ಇದೆಯೆಂದು ತೊಕ್ಕೊಟ್ಟಿನ ಹೊಟೇಲಿಗೆ ಆಹಾರ ಇಲಾಖ...
25-08-26 09:37 pm
'ಕಿಂಗ್ಸ್ ಬಜಾರ್' ಹೆಸರಲ್ಲಿ ದುಪ್ಪಟ್ಟು ಲಾಭದ ಹೂಡಿಕ...
25-08-26 09:00 pm
ಪುತ್ತೂರು ಪೇಟೆಯಲ್ಲಿ ಸ್ವಯಂಪ್ರೇರಿತ ಬಂದ್ ; ವಾಹನ ಸ...
25-08-26 02:55 pm
26-08-26 09:36 pm
HK News Staffer
ಸೂರ್ಯಪೇಟೆಯಲ್ಲಿ ಭೀಕರ ಅಪಘಾತ ; ಕಂಟೇನರ್ ಲಾರಿಗೆ ಬ...
26-08-26 11:26 am
ವಿಜಯಪುರದಲ್ಲಿ ಭೀಕರ ದುರಂತ ; ನಾಪತ್ತೆಯಾಗಿದ್ದ ಒಂದೇ...
26-08-26 11:23 am
ಚಿಕ್ಕಮಗಳೂರು ; ಟಿಪ್ಪು ಕಟೌಟ್ ಜೊತೆಗೆ ಮುಜಾಹಿದ್ ಹಾ...
25-08-26 10:39 pm
ಉಡುಪಿಯ ದೇವಸ್ಥಾನದ ಕೆರೆಯಲ್ಲಿ ಮುಳುಗಿ 15 ವರ್ಷದ ವಿ...
25-08-26 07:27 pm