ಬ್ರೇಕಿಂಗ್ ನ್ಯೂಸ್
27-11-22 04:47 pm HK News Desk ಕರ್ನಾಟಕ
ಮೈಸೂರು, ನ.27: ವಿವಾದಕ್ಕೊಳಗಾಗಿದ್ದ ಬಸ್ ತಂಗುದಾಣದ ಗುಂಬಜ್ ಮಾದರಿಯನ್ನು ರಾತ್ರೋರಾತ್ರಿ ತೆರವು ಮಾಡಲಾಗಿದೆ. ಮೈಸೂರು ಊಟಿ ರಸ್ತೆಯಲ್ಲಿ ನಿರ್ಮಾಣವಾಗಿದ್ದ ಗುಂಬಜ್ ಮಾದರಿ ಬಸ್ ತಂಗುದಾಣದ ವಿರುದ್ಧ ಸಂಸದ ಪ್ರತಾಪಸಿಂಹ ಆಕ್ರೋಶ ವ್ಯಕ್ತಪಡಿಸಿದ್ದರು.
ಬಸ್ ತಂಗುದಾಣ ಮೇಲಿದ್ದ ಎರಡು ಚಿಕ್ಕ ಗೋಪುರಗಳನ್ನು ಶನಿವಾರ ರಾತ್ರಿ ತೆರವು ಮಾಡಲಾಗಿದೆ. ಶಾಸಕ ರಾಮದಾಸ್ ಅಣತಿ ಮೇರೆಗೆ ಚಿಕ್ಕ ಗೋಪುರಗಳ ತೆರವುಗೊಳಿಸಲಾಗಿದೆ. ಮಧ್ಯೆ ಇದ್ದ ದೊಡ್ಡ ಗೋಪುರಗಳನ್ನು ಮಾತ್ರ ಉಳಿಸಿ ಚಿಕ್ಕ ಗೋಪುರವನ್ನು ಒಡೆದು ಹಾಕಲಾಗಿದೆ.
ಬಸ್ ತಂಗುದಾಣ ಗುಂಬಜ್ ಮಾದರಿ ಇದೆ ಎಂದು ಸಂಸದ ಪ್ರತಾಪಸಿಂಹ ಆಕ್ಷೇಪವೆತ್ತಿದ್ದರು. ಆದರೆ ಶಾಸಕ ರಾಮದಾಸ್ ಬಸ್ ತಂಗುದಾಣ ಅರಮನೆ ಮಾದರಿಯಲ್ಲಿದೆ ಎಂದು ಸಮರ್ಥಿಸಿಕೊಂಡಿದ್ದರು. ಇದೇ ವಿಚಾರ ಸಂಸದ ಹಾಗೂ ಶಾಸಕರ ನಡುವೆ ಆರೋಪ ಪ್ರತ್ಯಾರೋಪಕ್ಕೆ ಕಾರಣವಾಗಿತ್ತು. ಈಗ ಗೋಪುರ ತೆರವುಗೊಳಿಸಿ ವಿವಾದಕ್ಕೆ ಇತಿಶ್ರೀ ಹಾಕಲು ಯತ್ನಿಸಲಾಗಿದೆ.
ಈ ಬಗ್ಗೆ ಶಾಸಕ ರಾಮದಾಸ್ ಸ್ಪಷ್ಟನೆ ನೀಡಿದ್ದು ಗುಂಬಜ್ ಮಾದರಿಯಿದ್ದ ಬಸ್ ನಿಲ್ದಾಣದ ಗೋಪುರ ತೆರವಾಗಿದೆ. ವಿವಾದಿತ ಕೇಂದ್ರವಾಗಬಾರದು ಅನ್ನೋ ಕಾರಣಕ್ಕೆ ತೆರವುಗೊಳಿಸಲಾಗಿದೆ. 12 ಬಸ್ ನಿಲ್ದಾಣದ ಶೆಲ್ಟರ್ ಇದೇ ಮಾದರಿಯಲ್ಲಿ ನಿರ್ಮಿಸಲಾಗುವುದು. ಅರಮನೆ ಮಾದರಿ ನಿರ್ಮಾಣ ನನ್ನ ಉದ್ದೇಶವಾಗಿತ್ತು. ಅನವಶ್ಯಕವಾಗಿ ಧರ್ಮದ ಲೇಪನ ನೀಡಿದ್ದು ನನಗೆ ನೋವಾಗಿದೆ. ಹಿರಿಯರ ಸಲಹೆಯಂತೆ ನಿರ್ಧಾರ ಮಾಡಿದ್ದೇನೆ. ದೊಡ್ಡ ಡೂಮ್ ಉಳಿಸಿಕೊಂಡು ಎರಡು ಚಿಕ್ಕ ಡೂಮ್ ಗಳನ್ನು ತೆರವು ಮಾಡಲಾಗಿದೆ. ಯಾರೂ ಅನ್ಯಥಾ ಭಾವಿಸಬಾರದು ಎಂದು ಪತ್ರಿಕಾ ಪ್ರಕಟಣೆಯಲ್ಲಿ ಶಾಸಕ ಎಸ್.ಎ. ರಾಮದಾಸ್ ಮನವಿ ಮಾಡಿದ್ದಾರೆ.
Two of the three controversial domes atop a bus stop in Mysuru, which had turned into a friction point between BJP leaders of the district, were removed late on Saturday. The domes atop the bus stop near JSS College, Ooty Road, which according to local MLA S A Ramdas was modelled along the lines of Mysuru Palace, had attracted the wrath of Mysuru-Kodagu MP Prathap Simha who had threatened to demolish them.
08-02-23 09:09 pm
HK News Desk
ರಾವಣ ರಾಕ್ಷಸ, ಬ್ರಾಹ್ಮಣ ಅಂತೀವಾ ? ಸಮುದಾಯ ಬಗ್ಗೆ ಹ...
08-02-23 06:22 pm
ನ್ಯಾಯಾಧೀಶರ ಬಗ್ಗೆ ಆರೋಪ ; ನ್ಯಾಯಾಂಗ ನಿಂದನೆಗೈದ ವಕ...
08-02-23 06:07 pm
ನಕಲಿ ಸೈಟ್ ತೋರಿಸಿ ಗ್ರಾಹಕರಿಗೆ ಮೋಸ ; ವಂಚಕ ಜಯಕುಮಾ...
07-02-23 09:53 pm
ಬಳ್ಳಾರಿಯಲ್ಲಿ ಬೀದಿನಾಯಿಗಳ ದಾಳಿಗೆ 30ಕ್ಕೂ ಹೆಚ್ಚು...
07-02-23 05:10 pm
08-02-23 11:06 pm
HK News Desk
ಟರ್ಕಿ, ಸಿರಿಯದಲ್ಲಿ ಭೂ ಪ್ರಳಯ ; ಮೃತರ ಸಂಖ್ಯೆ 11 ಸ...
08-02-23 09:18 pm
ಪಾಕಿಸ್ತಾನದಲ್ಲಿ ಭೀಕರ ರಸ್ತೆ ಅಪಘಾತ, ಬಸ್ – ಕಾರು...
08-02-23 08:09 pm
ಕರಗುತ್ತಿದೆ ಸಾವಿರಕ್ಕೂ ಹೆಚ್ಚು ಹಿಮ ಸರೋವರ ; ಭಾರತ,...
08-02-23 06:12 pm
ಮತ್ತೆ ಆರ್ಬಿಐ ರೆಪೋ ದರ ಹೆಚ್ಚಳ ; ಜನಸಾಮಾನ್ಯರ ಜೇಬಿ...
08-02-23 01:13 pm
08-02-23 10:43 pm
Mangalore Correspondent
ಒಂದೇ ಫ್ಯಾನಿಗೆ ನೇಣು ಬಿಗಿದು ಸಾವಿಗೆ ಶರಣಾದ ಕೇರಳದ...
08-02-23 03:23 pm
ವಿಷಾಹಾರ ಪ್ರಕರಣ ; ಸಿಟಿ ನರ್ಸಿಂಗ್ ಕಾಲೇಜಿಗೆ ರಜೆ ಘ...
08-02-23 02:55 pm
ನೇಣು ಬಿಗಿದು ಸಾವಿಗೆ ಶರಣಾದ ಅತಿಥಿ ಉಪನ್ಯಾಸಕಿ ; ಕಾ...
08-02-23 01:04 pm
ಅಮಿತ್ ಷಾ ಪುತ್ತೂರಿಗೆ ಬಂದು ಕ್ಯಾಂಪ್ಕೋ ಖರೀದಿಸುತ್ತ...
07-02-23 10:44 pm
08-02-23 11:37 pm
Mangaluru Correspondent
ಮೊಮ್ಮಗಳ ಮೇಲೆ ನಿರಂತರ ಲೈಂಗಿಕ ದೌರ್ಜನ್ಯ, ಅಶ್ಲೀಲ ವ...
08-02-23 08:33 pm
ಪಾಂಗಾಳ ಶರತ್ ಶೆಟ್ಟಿ ಕೊಲೆ ಪ್ರಕರಣ ; ಸುರತ್ಕಲ್ ಪರಿ...
07-02-23 08:46 pm
ಜುವೆಲ್ಲರಿ ಉದ್ಯೋಗಿಯ ಕತ್ತು ಸೀಳಿ ಹತ್ಯೆ ; ಹರಿತ ಆಯ...
06-02-23 03:20 pm
ರಿಯಲ್ ಎಸ್ಟೇಟ್ ನಡೆಸುತ್ತಿದ್ದ ವ್ಯಕ್ತಿಯ ಬರ್ಬರ ಹತ್...
05-02-23 09:05 pm