ಬ್ರೇಕಿಂಗ್ ನ್ಯೂಸ್
30-11-22 05:24 pm HK News Desk ಕರ್ನಾಟಕ
ಚಿಕ್ಕಮಗಳೂರು, ನ.30: ಚಿಕ್ಕಮಗಳೂರು ಜಿಲ್ಲೆಯ ಬಾಬಾ ಬುಡನ್ ಗಿರಿಯಲ್ಲಿ ದತ್ತ ಜಯಂತಿ ಆಚರಣೆಗೆ ಹೈಕೋರ್ಟ್ ಗ್ರೀನ್ ಸಿಗ್ನಲ್ ನೀಡಿದೆ.
ಈ ಹಿಂದೆ ಬಾಬಾ ಬುಡನ್ ಗಿರಿಯ ದತ್ತಪೀಠದಲ್ಲಿ ಪೂಜೆ ಸಲ್ಲಿಸಲು ಹಿಂದು ಮತ್ತು ಮುಸ್ಲಿಮರಿಗೆ ಅವಕಾಶ ಕಲ್ಪಿಸುವ ಮೂಲಕ 50 ವರ್ಷಗಳ ವಿವಾದಕ್ಕೆ 'ಸೌಹಾರ್ದಯುತ ಪರಿಹಾರ' ಮಾರ್ಗವನ್ನು ಕಂಡುಕೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚಿಸಿತ್ತು. ಅಲ್ಲದೆ, ಈ ಬಗ್ಗೆ ರಾಜ್ಯ ಸರ್ಕಾರವೇ ಸೌಹಾರ್ದ ಪರಿಹಾರ ಮಾಡಿಕೊಳ್ಳಲು ಇತ್ತೀಚೆಗೆ ಜಂಟಿ ಕಮಿಟಿಯನ್ನು ನೇಮಕ ಮಾಡಿತ್ತು.
![]()
ಆದರೆ ಹೈಕೋರ್ಟ್ ಸೂಚನೆ ನೀಡಿದ್ದರೂ ರಾಜ್ಯ ಸರಕಾರ ದತ್ತಪೀಠಕ್ಕೆ ಹಿಂದು ಅರ್ಚಕರ ನೇಮಕ ಮಾಡದೇ ಇರುವುದನ್ನು ಶ್ರೀರಾಮ ಸೇನೆ ನಾಯಕರು ಖಂಡಿಸಿ ಆಕ್ರೋಶ ವ್ಯಕ್ತಪಡಿಸಿದ್ದರು. ಶ್ರೀರಾಮ ಸೇನೆ ರಾಜ್ಯ ರಾಜ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ, ರಾಜ್ಯದಲ್ಲಿ ಮುಂದಿನ ಬಾರಿಯೂ ಅಧಿಕಾರಕ್ಕೆ ಬರಬೇಕೆಂಬ ಆಸೆ ನಿಮಗಿದ್ದರೆ ಕೂಡಲೇ ದತ್ತಪೀಠವನ್ನು ಹಿಂದುಗಳಿಗೆ ಒಪ್ಪಿಸಿ, ಅರ್ಚಕರನ್ನು ನೇಮಿಸಿ ಎಂದು ಹೇಳಿದ್ದರು.

ಈಗ ಡಿಸೆಂಬರ್ 6, 7, 8 ರಂದು ದತ್ತ ಜಯಂತಿ ಆಚರಿಸಲು ಕರ್ನಾಟಕ ಹೈಕೋರ್ಟ್ ವಿಭಾಗೀಯ ಪೀಠದಿಂದ ಅನುಮತಿ ಸಿಕ್ಕಿದೆ. ಇದರಿಂದ ಸಾವಿರಾರು ದತ್ತಪೀಠದ ಭಕ್ತರು ಖುಷಿಯಾಗಿದ್ದಾರೆ.
Karnataka High Court has given a green signal for datta jayanti celebrations at Baba Budangiri in Chikkamagaluru district. The high court had earlier asked the state government to find an "amicable solution" to the 50-year-old dispute by allowing Hindus and Muslims to offer prayers at the Dattapeeth in Baba Budangiri. Also, the state government itself had recently appointed a joint committee to find an amicable solution in this regard.
12-03-26 02:48 pm
HK News Staffer
13 ವರ್ಷಗಳಿಂದ ಜೀವನ್ಮರಣ ಹೋರಾಟ ; ಕೋಮಾದಲ್ಲಿದ್ದ ಯು...
11-03-26 07:16 pm
ಪರಿಷತ್ ಚುನಾವಣೆಗೆ ಸಿಗದ ಟಿಕೆಟ್ ; ಬಿಜೆಪಿ ರಾಜ್ಯ ಶ...
11-03-26 06:14 pm
ಲಕ್ಕುಂಡಿಯಲ್ಲಿ ಸಿಕ್ಕ ನಿಧಿ 500 ರಿಂದ 600 ವರ್ಷ ಹಳ...
11-03-26 12:57 pm
ಶಿಕ್ಷಕರಿಗೆ ಬೀದಿ ನಾಯಿ ನಿಯಂತ್ರಣ ಜವಾಬ್ದಾರಿ ಕೊಟ್ಟ...
11-03-26 11:48 am
12-03-26 09:03 pm
HK News Staffer
ನಷ್ಟ ಪರಿಹಾರ ಕೇಳಿದ ಇರಾನ್ ; ಯುದ್ಧ ನಿಲ್ಲಿಸಲು ಮೂರ...
12-03-26 09:01 pm
ಗಲ್ಫ್ ಯುದ್ಧ ; ವಿಷಯುಕ್ತ ಬಿಳಿ ರಂಜಕ ಬಾಂಬ್ ಬಳಕೆ,...
10-03-26 09:46 pm
ಹರ್ಮುಜ್ ಜಲಸಂಧಿಯಲ್ಲಿ ತೈಲ ಹಡಗು ಬಂಧಿ ; ಜಗತ್ತಿಗೆ...
10-03-26 04:30 pm
ಕಚ್ಚಾ ತೈಲ ದರ ಏರಿಕೆ ; ಪಾಕಿಸ್ತಾನದಲ್ಲಿ ಅಲ್ಲೋಲಕಲ್...
10-03-26 01:31 pm
12-03-26 10:47 pm
mangalore
ಸೈಬರ್ ಜಾಲದ ಮ್ಯೂಲ್ ಅಕೌಂಟ್ ವಂಚನೆ ; ಚೀನಾ ಲಿಂಕ್ ಹ...
12-03-26 02:44 pm
Cyber Fraud Awareness, Mangalore: ಸೈಬರ್ ವಂಚನೆ...
12-03-26 08:33 am
Gas News, Mangalore: ಗಲ್ಫ್ ಯುದ್ಧಕ್ಕೆ ಗ್ಯಾಸ್ ಟ...
11-03-26 09:15 pm
ಬಾಡಿಗೆ ಮನೆಯಲ್ಲಿ ಡ್ರಗ್ಸ್ ಮಾರಾಟ ; ಬಂಟ್ವಾಳದ ನೇರಳ...
11-03-26 07:22 pm
12-03-26 11:20 pm
mangalore
ಸುರತ್ಕಲ್ ಗ್ಯಾರೇಜ್ ನಿಂದ ವಾಹನಗಳ ಬಿಡಿಭಾಗ ಕಳವು ;...
12-03-26 10:53 pm
ಬೆಂಗಳೂರು ; ಕಾಲೇಜು ಮುಗಿಸಿ ವಾಪಸ್ಸಾಗುತ್ತಿದ್ದಾಗ ಅ...
12-03-26 12:12 pm
ನಾಪತ್ತೆಯಾಗಿದ್ದ ಕೊಣಾಜೆಯ ಯುವಕ ಸೋಮೇಶ್ವರದ ಕೆರೆಯಲ್...
11-03-26 10:58 am
ಕೇರಳ ಚುನಾವಣೆ ಹಿನ್ನೆಲೆ ; ರೈಲಿನಲ್ಲಿ ತಪಾಸಣೆ ಬಿಗಿ...
10-03-26 08:32 pm