ಬ್ರೇಕಿಂಗ್ ನ್ಯೂಸ್
30-11-22 10:36 pm HK News Desk ಕರ್ನಾಟಕ
ಮಂಡ್ಯ, ನ.30 : ಬಿಜೆಪಿಗೆ ಬಂದ ಮೇಲೆ ನನಗೆ ಬಲ ಬಂದಿದೆ. ಈಗ ನನ್ನ ಪರವಾಗಿ ಹೋರಾಡಲು ಬಿಜೆಪಿಯಲ್ಲಿ ಫೈಟರ್ಸ್ಗಳಿದ್ದಾರೆ ಎಂದು ರೌಡಿ ಶೀಟರ್ ಫೈಟರ್ ರವಿ ಹೇಳಿದರು.
ಮಂಡ್ಯದ ನಾಗಮಂಗಲದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಫೈಟರ್ ರವಿ, ಮಾಧ್ಯಮದವರ ವಿರುದ್ದ ಕಿಡಿ ಕಾರಿದರು. ಮಾಧ್ಯಮದವರ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕಬೇಕು. ನಾನು ಜನರ ಪರ ಹೋರಾಡುವವನು. ಮಾಧ್ಯಮ ಸುದ್ದಿ ಮಾಡುವಾಗ ಸ್ವಲ್ಪ ಸಾಮಾನ್ಯ ಜ್ಞಾನ ಇಟ್ಟುಕೊಳ್ಳಬೇಕು. ನಾನು ರೌಡಿ ಶೀಟರ್ ಅನ್ನೋಕೆ ನಿಮ್ಮ ಬಳಿ ದಾಖಲೆ ಏನಿದೆ? ಎಂದು ಸವಾಲು ಎಸೆದರು.
ರೌಡಿ ಶೀಟರ್ ವಜಾ ಆದ ಬಗ್ಗೆ ನಿಮಗೆ ಗೊತ್ತಿಲ್ವ? ಇದೆಲ್ಲ ನೋಡಿದರೆ ಅಸಹ್ಯ ಅನ್ನಿಸುತ್ತಿದೆ. ನಿಮಗೆ ಆರೋಪ ಮಾಡೋದಷ್ಟೇ ಗೊತ್ತು. ಕೇಸ್ ವಜಾ ಆದ ಬಗ್ಗೆ ನೀವು ಎಂದಿಗೂ ಬರೆಯುವುದಿಲ್ಲ. ನಿಮಗೆ ಬೇರೆ ಏನಾದರೂ ನಿರೀಕ್ಷೆಗಳು ಇದೆಯಾ? ರಾಜಕೀಯ ಸಮಾಜ ಸೇವೆ ಅಲ್ವ? ನಾವು ಸಮಾಜ ಸೇವೆ ಮಾಡ್ಬಾರ್ದಾ? ಎಂದು ಫೈಟರ್ ರವಿ ಪ್ರಶ್ನೆ ಮಾಡಿದರು.
ನನಗೆ 53 ವರ್ಷ. ಇನ್ನು ಐದಾರು ವರ್ಷ ಕಳೆದ್ರೆ ನಾನು ಹಿರಿಯ ನಾಗರೀಕನಾಗುತ್ತೇನೆ. ನಾನೇನು ಚಿಕ್ಕ ಹುಡುಗನಲ್ಲ. ಕೇಸ್ ಮುಗಿದ ಮೇಲೆ ಅದೇ ಅಪವಾದ ಏಕೆ ಮಾಡುತ್ತೀರಿ? ಎಂದು ಕಿಡಿಕಾರಿದರು.
ರಾಜಕಾರಣಿಗಳು ನನ್ನನ್ನು ಟಾರ್ಗೆಟ್ ಮಾಡ್ತಿದ್ದಾರೆ. ಅವರನ್ನ ಎದುರಿಸಲಿಕ್ಕೆ ನಾನು ಬಿಜೆಪಿಗೆ ಬಂದಿದ್ದೇನೆ. ಬಿಜೆಪಿಗೆ ಬಂದ ಮೇಲೆ ನನಗೆ ಬಲ ಬಂದಿದೆ. ನಾನ್ನೊಬ್ಬನೇ ಹೋರಾಡ್ತಿದ್ದೆ. ಈಗ ನನ್ನ ಪರವಾಗಿ ಫೈಟ್ ಮಾಡಲು ಬಿಜೆಪಿಯಲ್ಲಿ ಸಾಕಷ್ಟು ಜನರಿದ್ದಾರೆ ಎಂದು ಹೇಳಿದರು.
After joining the BJP, I have gained strength. Now there are fighters in the BJP to fight on my behalf," said Ravi, a rowdy-sheeter fighter. Speaking to reporters at Nagamangala in Mandya, Fighter Ravi lashed out at the media. A defamation case should be filed against the media. I am a fighter for the people. One should have some general knowledge while making media news. Do you have any record to prove that I am a rowdy sheeter? He was challenged.
16-09-25 11:00 pm
Bangalore Correspondent
Nanjegowda MLA, Malur: ಮಾಲೂರು ಕಾಂಗ್ರೆಸ್ ಶಾಸಕ...
16-09-25 10:54 pm
Bangalore Suicide, Air force: ಸಹೋದರಿ ಜೊತೆ ಜಗಳ...
15-09-25 08:53 pm
Actor Upendra, Wife Priyanka, Cyber Fraud, Ha...
15-09-25 04:45 pm
Pratap Simha, Banu Mushtaq: ಬಾನು ಮುಷ್ತಾಕ್ ದಸರ...
15-09-25 03:39 pm
16-09-25 10:11 pm
HK News Desk
Cloudburst, Dehradun: ಡೆಹ್ರಾಡೂನ್ನಲ್ಲಿ ಭಾರೀ ಮ...
16-09-25 02:46 pm
Waqf, Supreme Court; ವಕ್ಫ್ ತಿದ್ದುಪಡಿ ಕಾಯ್ದೆ...
15-09-25 04:57 pm
ನಾನು ಶಿವಭಕ್ತ ; ನಿಂದನೆಯ ವಿಷವನ್ನು ಕುಡಿದು ಜೀರ್ಣಿ...
14-09-25 10:49 pm
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
16-09-25 07:48 pm
Mangalore Correspondent
Ex IPS Kempaiah, Professor Umeshchandra, Mang...
16-09-25 07:02 pm
Mangalore BJP Protest, UT khader, Red Stone:...
16-09-25 06:51 pm
UT Khader, Mangalore, Ullal: ಉಳ್ಳಾಲ ಕ್ಷೇತ್ರದಲ...
16-09-25 06:06 pm
ಕೆಂಪು ಕಲ್ಲು ನಿಯಮ ಸರಳೀಕರಣಕ್ಕೆ ಸಂಪುಟದಲ್ಲಿ ಒಪ್ಪಿ...
16-09-25 05:12 pm
16-09-25 10:40 pm
HK News Desk
Bidar crime: ಏಳು ವರ್ಷದ ಬಾಲಕಿಯನ್ನ ಮೂರನೇ ಮಹಡಿಯಿ...
16-09-25 07:12 pm
Bangalore Police, Inspector Suspend, Crime, D...
15-09-25 10:47 pm
Udupi, Surat Murder, Arrest: ವೃದ್ಧ ದಂಪತಿಯನ್ನು...
14-09-25 06:01 pm
Mangalore Fake Aadhar, RTC Scam, Police: ಆರೋಪ...
13-09-25 11:36 am