ಬರುತ್ತಿದೆ ಅರೇಕಾ ಶಾಂಪೂ ; ಅಡಿಕೆಗೆ ಬಂತು ಹೊಸ ಬೆಳಕು !

14-10-20 03:28 pm       Headline Karnataka News Network   ಕರ್ನಾಟಕ

ಗುಟ್ಕಾ ನಿಷೇಧ ಭೀತಿ ಎದುರಾಗಿರುವ ಸಂದರ್ಭದಲ್ಲಿ ಈ ಹೊಸ ಶೋಧ ಅಡಿಕೆ ಬೆಳಗಾರರಲ್ಲಿ ಸಂತಸ ಮೂಡಿಸಿದೆ. 

ಶಿವಮೊಗ್ಗ, ಅಕ್ಟೋಬರ್ 14: ಅಡಿಕೆ ಟೀ ತಯಾರಿಸಿ ಕುಡಿದು ಮಾರುಕಟ್ಟೆ ಮಾಡಿಕೊಂಡಿದ್ದು ಗೊತ್ತು. ಟೀ ಪುಡಿ ದೇಶದ ಗಮನ ಸೆಳೆದಿದ್ದ ಅದೇ ಯುವಕನೀಗ, ಅಡಿಕೆಯಿಂದ ಶಾಂಪೂ ಶೋಧನೆ ಮಾಡಿ ಗಮನ ಸೆಳೆದಿದ್ದಾನೆ‌. 

ಶಿವಮೊಗ್ಗ ಜಿಲ್ಲೆಯ ಮಂಡಗದ್ದೆಯ ನಿವೇದನ್ ಈ ಹೊಸ ಮಾದರಿ ಆವಿಷ್ಕರಿಸಿದ ಯುವಕ. ಗುಟ್ಕಾ ನಿಷೇಧ ಭೀತಿ ಎದುರಾಗಿರುವ ಸಂದರ್ಭದಲ್ಲಿ ಈ ಹೊಸ ಶೋಧ ಅಡಿಕೆ ಬೆಳಗಾರರಲ್ಲಿ ಸಂತಸ ಮೂಡಿಸಿದೆ. 

ಚಾಲಿ ಅಡಕೆಯಲ್ಲಿ ಪ್ರೊಲೀನ್‌ ಎಂಬ ರಾಸಾಯನಿಕ ಇದ್ದು ದೇಹದಲ್ಲಿನ ಸುಕ್ಕನ್ನು ಕಡಿಮೆ ಮಾಡುವ ಅಂಶ ಹೊಂದಿದೆ‌.  ಜೊತೆಗೆ ಗ್ಯಾಲಿಕ್‌ ಆ್ಯಸಿಡ್ ಎಂಬ ಆ್ಯಂಟಿ ಫಂಗಲ್‌ ಅಂಶ ಇದ್ದು, ಇದು ಜೆರ್ಮ್ ಗಳನ್ನು ಸಾಯಿಸಬಲ್ಲದು. ಅಡಿಕೆಯಲ್ಲಿರುವ ಈ ರಾಸಾಯನಿಕಗಳನ್ನು ಪ್ರತ್ಯೇಕಿಸಿ ಶಾಂಪೂ ತಯಾರಿಸಲಾಗುತ್ತದೆ ಎಂದು ನಿವೇದನ್‌ ಹೇಳುತ್ತಾರೆ.

ಈಗಾಗಲೇ ಅಡಿಕೆ ಟೀ ಹಾಗೂ ಸ್ಯಾನಿಟೈಸರ್ ಮಾರುಕಟ್ಟೆಯಲ್ಲಿ ಸಿಗುತ್ತಿದ್ದು, ಡಿಸೆಂಬರ್ ವೇಳೆಗೆ ಅರೇಕಾ ಶ್ಯಾಂಪು ಮಾರುಕಟ್ಟೆಗೆ ಬರಲಿದೆ. ಮೊದಲಿಗೆ ಸ್ಯಾಚೆಟ್  ರೂಪದಲ್ಲಿ 2 ರೂ. ಪ್ಯಾಕ್ ಶ್ಯಾಂಪು ಬರಲಿದ್ದು, ನಂತರ ಬಾಟಲ್ ಗಳಲ್ಲಿ ಸಿಗಲಿದೆ ಎಂದು ಯುವ ಸಂಶೋಧಕ ನಿವೇದನ್ ಸೆಂಪೆ ಮಾಹಿತಿ  ನೀಡಿದ್ದಾರೆ.

A Young researcher from Shimoga Nivedan Sempe is now preparing Arecanut Shampoo. Previously he had introduced arecanut tea.