ಬ್ರೇಕಿಂಗ್ ನ್ಯೂಸ್
03-12-22 02:28 pm Bangalore Correspondent ಕರ್ನಾಟಕ
ಬೆಂಗಳೂರು, ಡಿ.3: ಕೇಡರ್ ಬೇಸ್ ಪಾರ್ಟಿ ಆಗಿದ್ದ ಬಿಜೆಪಿ ಮಾಸ್ ಪಾರ್ಟಿ ಆಗಿ ಬದಲಾಗಿದೆ. ಈ ವೇಳೆ ಪ್ರವಾಹದ ಜತೆಗೆ ಕಸ-ಕಡ್ಡಿಗಳ ರೀತಿ ಅನೇಕರು ಹರಿದು ಬಂದಿರಬಹುದು. ಆದರೆ ಪಕ್ಷದ ನೀತಿ- ನಿಯತ್ತು ಬದಲಾಗಲ್ಲ. ಯಾರು ಬಂದರೂ, ಪಕ್ಷದ ನೀತಿ ಎಲ್ಲವನ್ನು ಫಿಲ್ಟರ್ ಮಾಡುತ್ತದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ರೌಡಿಗಳ ಸೇರ್ಪಡೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಪಕ್ಷದ ರಾಜ್ಯ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಪರಾಧ ಹಿನ್ನೆಲೆ ಉಳ್ಳವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂದು ಪಕ್ಷದ ರಾಜ್ಯಾಧ್ಯಕ್ಷರು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಅದನ್ನೇ ಪುನರುಚ್ಚರಿಸುತ್ತೇನೆ ಎಂದರು.



ರಾಜಕೀಯ ಕಾರಣಕ್ಕಾಗಿ 1990ರ ದಶಕದಲ್ಲಿ ನನ್ನ ಹೆಸರನ್ನು ಸಮಾಜಘಾತುಕರ ಪಟ್ಟಿಗೆ ಸೇರಿಸಿ ಪೊಲೀಸ್ ಠಾಣೆಯಲ್ಲಿ ಫೋಟೋ ಅಂಟಿಸಿದ್ದರು. ರೌಡಿಶೀಟರ್ ಹೆಸರಿದ್ದವರೆಲ್ಲ ರೌಡಿಗಳು ಎನ್ನಲಾಗದು. ಸೈಲೆಂಟ್ ಸುನಿಲ್, ಬೆತ್ತನಗೆರೆ ಶಂಕರ್, ವಿಲ್ಸನ್ ಗಾರ್ಡನ್ ನಾಗಾ, ರವಿ ಹೆಸರುಗಳು ಗೊತ್ತಿಲ್ಲ, ಆ ಬಗ್ಗೆ ಮಾಹಿತಿಯೂ ಇಲ್ಲ. ಪಕ್ಷದ ತಂತ್ರಗಾರಿಕೆ ಬದಲಾಗುತ್ತದೆಯೇ ಹೊರತು ನೀತಿ- ನಿಯತ್ತು ಬದಲಾಗದು. ರೌಡಿಗಳ ಸೇರ್ಪಡೆಗೆ ಅವಕಾಶವಿಲ್ಲ ಎಂಬ ಪಕ್ಷದ ರಾಜ್ಯಾಧ್ಯಕ್ಷರ ಹೇಳಿಕೆಯನ್ನೇ ಪುನರುಚ್ಚರಿಸುತ್ತೇನೆ ಎಂದು ಸಿ.ಟಿ.ರವಿ ಹೇಳಿದರು.

ದತ್ತಪೀಠ ಭೂ ಅಕ್ರಮ ತನಿಖೆಯಾಗಲಿ
ದತ್ತ ಪೀಠ ವಿಚಾರವಾಗಿ ನಮ್ಮ ಸರ್ಕಾರ ಹಾಗೂ ಪಕ್ಷ ಕೊಟ್ಟ ಮಾತಿನಂತೆ ನಡೆದುಕೊಂಡಿದೆ. ನ್ಯಾಯಾಲಯದ ಆದೇಶದ ಅನುಗುಣವಾಗಿ ಸಂಪುಟ ಉಪಸಮಿತಿ ತೆಗೆದುಕೊಂಡ ನಿರ್ಣಯದ ಶಿಫಾರಸು ಅಂಗೀಕರಿಸಿ ಆಡಳಿತ ಮಂಡಳಿಯನ್ನು ನೇಮಕ ಮಾಡಿದೆ. ಅರ್ಚಕರ ನೇಮಕಕ್ಕೆ ಆಡಳಿತ ಮಂಡಳಿ ಕ್ರಮ ಕೈಗೊಂಡಿದೆ. ನಾಲ್ಕು ದಶಕಗಳ ಹೋರಾಟದ ಈಡೇರಿಕೆಯ ಹಿನ್ನೆಲೆಯಲ್ಲಿ ದತ್ತ ಜಯಂತಿಯನ್ನು ಈ ಬಾರಿ ವೈಭವದಿಂದ ಆಚರಣೆ ಮಾಡುತ್ತೇವೆ ಎಂದು ತಿಳಿಸಿದರು.
ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ದತ್ತಾತ್ರೇಯ ದೇವರ ಹೆಸರಿನಲ್ಲಿದ್ದ 1860 ಎಕರೆ ಜಮೀನನ್ನು ಅರ್ಜಿ ಹಾಕದೆ ಇದ್ದವರಿಗೂ ಅವತ್ತಿನ ಕಾಲದ ಮಂತ್ರಿಗಳ ಕುಟುಂಬಸ್ಥರ ಹೆಸರಿಗೆ ಅಕ್ರಮವಾಗಿ ಮಂಜೂರು ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಸಮಗ್ರ ತನಿಖೆ ನಡೆಸಬೇಕು ಹಾಗೂ ಅಕ್ರಮ ಮಂಜೂರಾತಿ ರದ್ದು ಮಾಡಬೇಕು ಎಂದು ಆಗ್ರಹಿಸಿದರು.
The BJP, which was a cadre base party, has turned into a mass party. During this time, many people may have flowed in like garbage along with the floods. But the policy of the party will not change. Bjp national general secretary CT Ravi defended the induction of rowdies, saying that whoever comes, the party's policy will filter everything out.
12-03-26 02:48 pm
HK News Staffer
13 ವರ್ಷಗಳಿಂದ ಜೀವನ್ಮರಣ ಹೋರಾಟ ; ಕೋಮಾದಲ್ಲಿದ್ದ ಯು...
11-03-26 07:16 pm
ಪರಿಷತ್ ಚುನಾವಣೆಗೆ ಸಿಗದ ಟಿಕೆಟ್ ; ಬಿಜೆಪಿ ರಾಜ್ಯ ಶ...
11-03-26 06:14 pm
ಲಕ್ಕುಂಡಿಯಲ್ಲಿ ಸಿಕ್ಕ ನಿಧಿ 500 ರಿಂದ 600 ವರ್ಷ ಹಳ...
11-03-26 12:57 pm
ಶಿಕ್ಷಕರಿಗೆ ಬೀದಿ ನಾಯಿ ನಿಯಂತ್ರಣ ಜವಾಬ್ದಾರಿ ಕೊಟ್ಟ...
11-03-26 11:48 am
12-03-26 09:03 pm
HK News Staffer
ನಷ್ಟ ಪರಿಹಾರ ಕೇಳಿದ ಇರಾನ್ ; ಯುದ್ಧ ನಿಲ್ಲಿಸಲು ಮೂರ...
12-03-26 09:01 pm
ಗಲ್ಫ್ ಯುದ್ಧ ; ವಿಷಯುಕ್ತ ಬಿಳಿ ರಂಜಕ ಬಾಂಬ್ ಬಳಕೆ,...
10-03-26 09:46 pm
ಹರ್ಮುಜ್ ಜಲಸಂಧಿಯಲ್ಲಿ ತೈಲ ಹಡಗು ಬಂಧಿ ; ಜಗತ್ತಿಗೆ...
10-03-26 04:30 pm
ಕಚ್ಚಾ ತೈಲ ದರ ಏರಿಕೆ ; ಪಾಕಿಸ್ತಾನದಲ್ಲಿ ಅಲ್ಲೋಲಕಲ್...
10-03-26 01:31 pm
12-03-26 10:47 pm
mangalore
ಸೈಬರ್ ಜಾಲದ ಮ್ಯೂಲ್ ಅಕೌಂಟ್ ವಂಚನೆ ; ಚೀನಾ ಲಿಂಕ್ ಹ...
12-03-26 02:44 pm
Cyber Fraud Awareness, Mangalore: ಸೈಬರ್ ವಂಚನೆ...
12-03-26 08:33 am
Gas News, Mangalore: ಗಲ್ಫ್ ಯುದ್ಧಕ್ಕೆ ಗ್ಯಾಸ್ ಟ...
11-03-26 09:15 pm
ಬಾಡಿಗೆ ಮನೆಯಲ್ಲಿ ಡ್ರಗ್ಸ್ ಮಾರಾಟ ; ಬಂಟ್ವಾಳದ ನೇರಳ...
11-03-26 07:22 pm
12-03-26 11:20 pm
mangalore
ಸುರತ್ಕಲ್ ಗ್ಯಾರೇಜ್ ನಿಂದ ವಾಹನಗಳ ಬಿಡಿಭಾಗ ಕಳವು ;...
12-03-26 10:53 pm
ಬೆಂಗಳೂರು ; ಕಾಲೇಜು ಮುಗಿಸಿ ವಾಪಸ್ಸಾಗುತ್ತಿದ್ದಾಗ ಅ...
12-03-26 12:12 pm
ನಾಪತ್ತೆಯಾಗಿದ್ದ ಕೊಣಾಜೆಯ ಯುವಕ ಸೋಮೇಶ್ವರದ ಕೆರೆಯಲ್...
11-03-26 10:58 am
ಕೇರಳ ಚುನಾವಣೆ ಹಿನ್ನೆಲೆ ; ರೈಲಿನಲ್ಲಿ ತಪಾಸಣೆ ಬಿಗಿ...
10-03-26 08:32 pm