ಸಿದ್ರಾಮುಲ್ಲಾಖಾನ್ ಬೈಗುಳವಲ್ಲ, ಮನಸ್ಥಿತಿಗೆ ಕೊಟ್ಟ ಬಿರುದು ! ಕಾಂಗ್ರೆಸಿಗರಿಗೆ ಉರಿ ಹತ್ತುತ್ತೆ ಅಂದ್ರೆ ಹತ್ತು ವರ್ಷ ಮೊದಲೇ ಹೇಳುತ್ತಿದ್ದೆ ! 

04-12-22 10:25 pm       HK News Desk   ಕರ್ನಾಟಕ

ಸಿದ್ರಾಮುಲ್ಲಾಖಾನ್ ಎಂದೇಳುತ್ತಿದ್ದಂತೆ ಕಾಂಗ್ರೆಸ್ಸಿಗರಿಗೆ ಮೈ ಉರಿ ಹತ್ತಿದೆ. ಹೀಗೆ ಉರಿ ಹತ್ತುತ್ತೆ ಎಂದು ಗೊತ್ತಿದ್ರೆ 10 ವರ್ಷ ಮೊದಲೇ ಹೇಳುತ್ತಿದ್ದೆ. ನೀವು ಪ್ರಧಾನಿಗೆ ಕೊಲೆಗಡುಕ, ನರಹಂತಕ, ರಾವಣ, ಭಸ್ಮಾಸುರ ಎಂದು ಕರೆದ್ರಿ. ಸಿದ್ರಾಮುಲ್ಲಾಖಾನ್ ಅನ್ನೋದು ಬೈಗುಳವಾ...? ಅದು ಬೈಗುಳ ಅಲ್ಲಾ..‌ ನಿಮ್ಮ ಭಾವನೆಗೆ ಕೊಟ್ಟ ಬಿರುದು ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿಟಿ ರವಿ ತನ್ನ ಹೇಳಿಕೆಯನ್ನು ಸಮರ್ಥನೆ ಮಾಡಿಕೊಂಡಿದ್ದಾರೆ. 

ಚಿಕ್ಕಮಗಳೂರು, ಡಿ.4 : ಸಿದ್ರಾಮುಲ್ಲಾಖಾನ್ ಎಂದೇಳುತ್ತಿದ್ದಂತೆ ಕಾಂಗ್ರೆಸ್ಸಿಗರಿಗೆ ಮೈ ಉರಿ ಹತ್ತಿದೆ. ಹೀಗೆ ಉರಿ ಹತ್ತುತ್ತೆ ಎಂದು ಗೊತ್ತಿದ್ರೆ 10 ವರ್ಷ ಮೊದಲೇ ಹೇಳುತ್ತಿದ್ದೆ. ನೀವು ಪ್ರಧಾನಿಗೆ ಕೊಲೆಗಡುಕ, ನರಹಂತಕ, ರಾವಣ, ಭಸ್ಮಾಸುರ ಎಂದು ಕರೆದ್ರಿ. ಸಿದ್ರಾಮುಲ್ಲಾಖಾನ್ ಅನ್ನೋದು ಬೈಗುಳವಾ...? ಅದು ಬೈಗುಳ ಅಲ್ಲಾ..‌ ನಿಮ್ಮ ಭಾವನೆಗೆ ಕೊಟ್ಟ ಬಿರುದು ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿಟಿ ರವಿ ತನ್ನ ಹೇಳಿಕೆಯನ್ನು ಸಮರ್ಥನೆ ಮಾಡಿಕೊಂಡಿದ್ದಾರೆ. 

ಬಿ.ಎಸ್.ವೈನ ರಾಜಾಹುಲಿ ಅಂತಾರೆ, ಸಿದ್ದುನ ಹುಲಿಯಾ ಅಂದ್ರು... ಇದು ಹಾಗೇ ಒಂದು ಬಿರುದು.‌ ನಾನು ಹಿಂದೂಗಳಿಗೆ ಅನ್ಯಾಯ ಮಾಡಿದ್ದೆ, ಟಿಪ್ಪು ಜಯಂತಿ ಪರ ಇದ್ದೆ ಎಂದು ಕೊಟ್ಟ ಬಿರುದು ಎಂದು ಭಾವಿಸ್ತಾರೆ ಎಂದು ತಿಳಿದಿದ್ದೆ. 

Karnataka Congress gets ex-minister MB Patil as Lingayat face in leadership  panel | Cities News,The Indian Express

ಸಿ.ಟಿ.ರವಿ ಇದನ್ನ ಮುಂದುವರಿಸಿದರೆ ಓಡಾಡುವುದು ಕಷ್ಟವಾಗಬಹುದು ಎಂಬ ಕಾಂಗ್ರೆಸ್ ಮುಖಂಡ ಎಂ.ಬಿ ಪಾಟೀಲ್ ಹೇಳಿಕೆಗೆ ಟಾಂಗ್ ನೀಡಿದ ಸಿಟಿ ರವಿ, ಅವರೇನು ಬೆದರಿಕೆ ಹಾಕ್ತಾರಾ, ಪ್ರಜಾಪ್ರಭುತ್ವದಲ್ಲಿ ಈ ಬೆದರಿಕೆ ನಡೆಯೋಲ್ಲ.‌ ಅವರು ಶ್ರೀಮಂತರೇ ಇರಬಹುದು, ಪಾಳೇಗಾರರೇ ಇರಬಹುದು. ನಾನೊಬ್ಬ ಸಾಮಾನ್ಯ ರೈತನ ಮಗ, ಪಾಳೆಗಾರ ಮನೆತನದವನ್ನಲ್ಲ. ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ   ಅಂಬೇಡ್ಕರ್ ಕೊಟ್ಟಿದ್ದು ಒಂದೇ ವೋಟ್. ಈ ಪಾಳೇಗಾರಿಕೆ ಮನಸ್ಥಿತಿಯನ್ನು ಎಂ.ಬಿ.ಪಾಟೀಲರು ಬದಲಾಯಿಸಿಕೊಳ್ಳಬೇಕು. 

ನೀವು ಮನಸ್ಥಿತಿ ಬದಲಾಯಿಸಿಕೊಳ್ಳದಿದ್ದರೆ ಚಾಲೆಂಜ್ ಸ್ವೀಕರಿಸ್ತೀನಿ, ನಿಮ್ಮೂರಿಗೆ ಬರ್ತೀನಿ. ನಾನು ಏನು ಹೇಳಬೇಕು ಅಂದುಕೊಂಡಿದ್ದೇನೆ ಅದನ್ನ ನಿಮ್ಮೂರಿನಲ್ಲೇ ಹೇಳ್ತೇನೆ, ನಿಮ್ಮ‌ ಮುಖದ ಎದುರೇ ಹೇಳ್ತೇನೆ. ನಿಮ್ಮಷ್ಟು ಶ್ರೀಮಂತಿಗೆ ನನ್ನ ಬಳಿ ಇಲ್ಲ ನನಗೆ ಗೊತ್ತು. ಆದರೆ, ನಿಮ್ಮ ಶ್ರೀಮಂತಿಕೆ ದರ್ಪವನ್ನು ಜನರ ಮೇಲೆ ತೋರಿಸಬೇಡಿ.‌ ನಿಮ್ಮ ಶ್ರೀಮಂತಿಕೆ ದರ್ಪ ಇಲ್ಲಿ ನಡೆಯೋಲ್ಲ. ಕರ್ನಾಟಕ ಯಾರ ಅಪ್ಪನ ಸೊತ್ತೂ ಅಲ್ಲ.‌ ಯಾರಾದರೂ ಫಾದರ್ ಮನೆ ಪ್ರಾಪರ್ಟಿ ಅಂತ ಅನ್ಕೊಂಡಿದ್ರೆ, 
ಯಾರ ಫಾದರ್ ಮನೆ ಪ್ರಾಪರ್ಟಿಯೂ ಅಲ್ಲ ಎಂದು ಸಿ.ಟಿ. ರವಿ ತಿರುಗೇಟು ನೀಡಿದ್ದಾರೆ. ‌

PFI ban Highlights: PFI dissolved after Centre bans outfit for 5 years -  India Today

Campus Front of India - Wikipedia

7ನೇ ಶತಮಾನದಿಂದಲೂ ಈ ಮನಸ್ಥಿತಿ ಇದೆ ! 

Join CFI ಗೋಡೆ ಬರಹದ ಬಗ್ಗೆ ಪ್ರತಿಕ್ರಿಯೆ ನೀಡಿದ ರವಿ, ಪಿ.ಎಫ್.ಐ, ಸಿ.ಎಫ್.ಐ ಬ್ಯಾನ್ ಆಗಿದ್ರೂ ಆ ಮನಸ್ಥಿತಿಯ ಜನ ಇದ್ದಾರೆ. ಇದು ಇಂದು- ನಿನ್ನೆಯಿಂದಲ್ಲ, 7ನೇ
ಶತಮಾನದಿಂದಲೂ ಆ ಮನಸ್ಥಿತಿ ಇದೆ.‌ ಇಸ್ಲಾಮಿಕ್ ಸ್ಟೇಟ್ ಹುಟ್ಟು ಹಾಕಬೇಕೆಂದು ಗಜಾವ ಹಿಂದ್ ಹೆಸರಲ್ಲಿ 7ನೇ ಶತಮಾನದಿಂದ ಶುರುವಾದದ್ದು. ಆ‌ ಮನಸ್ಥಿತಿಯ ಜನ ಇದ್ದಾರೆ, ಆ ಮನಸ್ಥಿತಿಯ ಕಾರಣಕ್ಕೆ ಜಿನ್ನಾ ಭಾರತದ ವಿಭಜನೆಗೆ ಕೈಹಾಕಿದ್ದು. ಆ ಮನಸ್ಥಿತಿಯ ಜನ ಇರುವ ವರೆಗೂ ಈ ರೀತಿ ಮಾಡ್ತಾ ಇರ್ತಾರೆ.‌ ವೋಟಿನ ಆಸೆಗೆ ಜೊಲ್ಲು ಸುರಿಸಿಕೊಂಡು ತನ್ನದೇ ಶಾಸಕನ ಮನೆಗೆ ಬೆಂಕಿ ಹಾಕಿದ್ರು.‌ ಆಗ ಅವ್ರು ಅಮಾಯಕರು ಅಂತ ಸರ್ಟಿಫಿಕೇಟ್ ಕೊಡೋರಿಗೆ ಮತ ಹಾಕಿದರೆ ಅವ್ರೂ ಉಳಿಯಲ್ಲ ದೇಶವೂ ಉಳಿಯಲ್ಲ ಎಂದು ಹೇಳಿದರು.

'Sidramulla Khan (Siddaramaiah) is all the rage for the Congress. That word is not an excuse, it can be considered a title given to your feelings,' CT Ravi defended.  Talking to the reporters on Sunday, he said, 'If the Congressmen would have known that they would get so fired up, they would have said this 10 years earlier. Yediyurappa called him 'Rajahuli', Siddaramaiah as 'Hulia'. Also, it could have been thought of as a title', he asserted.