ಬ್ರೇಕಿಂಗ್ ನ್ಯೂಸ್
07-12-22 05:35 pm HK News Desk ಕರ್ನಾಟಕ
ಚಿಕ್ಕಮಗಳೂರು, ಡಿ.7: ಬಿಜೆಪಿ ನಾಯಕರ ಸ್ವಭಾವ ಹಾಗೆ ಇದ್ದರೆ ಕಾಂಗ್ರೆಸ್ ನವರು ಖಂಡಿತ ಕರೆಯಲಿ. ನನ್ನ ಸ್ವಭಾವ ಕುಂಕುಮ ಕಂಡರೆ ಆಗದಿದ್ರೆ, ಕೇಸರಿ ನೋಡಿದ್ರೆ ಆಗದಿದ್ರೆ, ಮುಲ್ಲಾಗಳ ಮೇಲೆ ಪ್ರೀತಿ ಜಾಸ್ತಿ ಇದ್ರೆ ಖಂಡಿತ ಕರೆಯಬಹುದು ಎಂದು ಬಿಜೆಪಿ ನಾಯಕರ ಹೆಸರಿಗೆ ಮುಸ್ಲಿಂ ಹೆಸರನ್ನು ಹಾಕಿ ಟ್ವೀಟ್ ಮಾಡುತ್ತಿರುವ ವಿಚಾರಕ್ಕೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ವ್ಯಂಗ್ಯವಾಡಿದರು.
ಮುಲ್ಲಾ ಎನ್ನುವ ಹೆಸರು ಯಾರಿಗೆ ಕನೆಕ್ಟ್ ಆಗುತ್ತದೆ ಅಂದರೆ, ಶಾದಿ ಭಾಗ್ಯ, ದೇ ಆರ್ ಆಲ್ ಮೈ ಬ್ರದರ್ಸ್ ಎನ್ನುವವರಿಗೆ ಕನೆಕ್ಟ್ ಆಗುತ್ತದೆ. ಬೆಂಕಿ ಹಾಕಿದ್ದರೂ ಕೂಡ ಅಮಾಯಕರು ಎನ್ನುವವರಿಗೆ ಕನೆಕ್ಟ್ ಆಗುತ್ತದೆ. ಕೇಸರಿ, ಕುಂಕುಮವನ್ನು ದೂಡಿ ಟೋಪಿಯನ್ನು ಪ್ರೀತಿಯಿಂದ ಹಾಕಿಕೊಳ್ಳುವವರಿಗೆ ಕನೆಕ್ಟ್ ಆಗುತ್ತದೆ ವಾಗ್ದಾಳಿ ನಡೆಸಿದರು.
ಹೆಸರೇಳದೆ ಸಿದ್ದರಾಮಗೆ ಸಿ.ಟಿ. ರವಿ ಟಾಂಗ್ ;
ಪರ್ಷಿಯನ್ ಭಾಷೆಯನ್ನು ಆಡಳಿತ ಭಾಷೆ ಮಾಡಿದವರನ್ನು ಕನ್ನಡಪ್ರೇಮಿ ಎಂದು ಕರೆಯಲು ಆಗುತ್ತಾ? ಎಂದು ಪ್ರಶ್ನಿಸಿದ ಅವರು, ಮುಲ್ಲಾ ಅನ್ನುವ ಹೆಸರು ಯಾರಿಗೆ ಕನೆಕ್ಟ್ ಆಗುತ್ತದೆ ಅಂದರೆ, ಶಾದಿ ಭಾಗ್ಯ, ದೇ ಆರ್ ಆಲ್ ಮೈ ಬ್ರದರ್ಸ್ ಅನ್ನೋರಿಗೆ ಕನೆಕ್ಟ್ ಆಗುತ್ತೆ. ಬೆಂಕಿ ಹಾಕಿದರೂ ಕೂಡ ಅಮಾಯಕರು ಅನ್ನೋರಿಗೆ ಕನೆಕ್ಟ್ ಆಗುತ್ತದೆ. ಕೇಸರಿ, ಕುಂಕುಮವನ್ನ ದೂಡಿ ಟೋಪಿಯನ್ನ ಪ್ರೀತಿಯಿಂದ ಹಾಕಿಕೊಳ್ಳುವವರಿಗೆ ಕನೆಕ್ಟ್ ಆಗುತ್ತೆ ಎಂದು ಸಿದ್ದರಾಮಯ್ಯ ಹೆಸರೇಳದೆ ಟೀಕಿಸಿದರು.
ಇನ್ನು ಮಹಾರಾಷ್ಟ್ರ ಮತ್ತು ಕರ್ನಾಟಕ ಗಡಿವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನಾವು ಸೌಹಾರ್ದತೆಯನ್ನು ಕಾಪಾಡಿಕೊಳ್ಳಬೇಕು. ಕರ್ನಾಟಕ ವಾಹನ ಅಥವಾ ಮಹಾರಾಷ್ಟ್ರ ವಾಹನಕ್ಕೆ ಮಸಿ ಬಳಿಯಬಾರದು. ಪ್ರಚೋದನೆ ಮಾಡುವ ಕೆಲಸ ಮಾಡಬಾರದು. ಆಯಾ ರಾಜ್ಯಗಳು ಇಂತಹ ಕೃತ್ಯಗಳಿಗೆ ಅವಕಾಶ ನೀಡಬಾರದು ಎಂದರು.
ಈಗಾಗಲೇ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ದೇವೇಂದ್ರ ಫಡ್ನವಿಸ್ ಇಬ್ಬರೂ ಮಾತುಕತೆ ನಡೆಸಿದ್ದಾರೆ. ಗಡಿವಿಚಾರವನ್ನು ಕಾನೂನಾತ್ಮಕವಾಗಿ ನ್ಯಾಯಾಲಯದ ಮೂಲಕ ಬಗೆಹರಿಸಿಕೊಳ್ಳಬೇಕು. ಗಡಿ ಗೋಡೆಯನ್ನು ಎತ್ತಿ ಸಂಬಂಧ ಹಾಳು ಮಾಡಿಕೊಳ್ಳುವ ಕೆಲಸ ಯಾರು ಮಾಡಬಾರದು ಎಂದರು. ಅಲ್ಲದೇ ಕರ್ನಾಟಕ ನೆಲ ಜಲದ ರಕ್ಷಣೆ ವಿಷಯದಲ್ಲಿ ಯಾವತ್ತೂ ರಾಜೀ ಮಾಡಿಕೊಂಡಿಲ್ಲ. ಈ ವಿಷಯದಲ್ಲಿ ರಾಜಕೀಯ ಪಕ್ಷಗಳು ಒಂದಾಗಿ ನಮ್ಮ ನಿಲುವನ್ನು ವ್ಯಕ್ತಪಡಿಸಬೇಕು. ಸೌಹಾರ್ದಯುತವಾಗಿ ಸಮಸ್ಯೆ ಬಗೆಹರಿಸುವ ದಾರಿ ಹುಡುಕಬೇಕೇ ಹೊರತು ಸಂಘರ್ಷವೇ ದಾರಿಯಲ್ಲ ಎಂದರು.
In Chikmagalur, BJP National General Secretary CT Ravi responded to the issue of Congress tweeting by putting Muslim names in the names of BJP Leaders. If the nature of BJP leaders is like that, Congress should definitely call them. My nature is if I see saffron, if I see saffron, if I see it, if I love mullahs, I can definitely call. Don’t call me Mullah, you should call me Hindu Tiger.
10-05-25 12:40 pm
Bangalore Correspondent
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
U T Khader, Dinesh Gundurao, Suhas Shetty Mur...
08-05-25 07:50 pm
Karwar high alert: ಕಾರವಾರದಲ್ಲಿ ಹೈ ಎಲರ್ಟ್ ; ಸಮ...
08-05-25 12:23 pm
10-05-25 09:24 pm
HK News Desk
India and Pakistan, Ceasefire: ಮೂರೇ ದಿನದಲ್ಲಿ...
10-05-25 08:28 pm
India-Pakistan war: ಭಾರತ - ಪಾಕಿಸ್ತಾನ ತಕ್ಷಣದಿಂ...
10-05-25 07:25 pm
Indian Military, Pakistan : ತನ್ನ ಮೂರು ವಾಯುನೆಲ...
10-05-25 01:58 pm
ಯುದ್ಧ ಸಮಸ್ಯೆಗೆ ಪರಿಹಾರ ಅಲ್ಲ, ಮಾತುಕತೆಯಿಂದ ಬಗೆಹರ...
09-05-25 06:49 pm
10-05-25 07:10 pm
Mangalore Correspondent
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
Suhas Shetty Murder Case, Speaker UT Khader,...
09-05-25 01:32 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm