ಕೊಡಗಿನಲ್ಲಿ ರಾಬಿನ್ ಹಕ್ಕಿಯ ನೀಲಿ ಮೊಟ್ಟೆ ಪತ್ತೆ!!

15-10-20 10:51 am       Headline Karnataka News Network   ಕರ್ನಾಟಕ

ಮಡಿಕೇರಿ ತಾಲ್ಲೂಕಿನ ಬೆಟ್ಟತ್ತೂರು ಗ್ರಾಮದಲ್ಲಿ ಇಂಡಿಯನ್ ರಾಬಿನ್ ಹಕ್ಕಿಯ ಆರು ನೀಲಿ ಮೂಟ್ಟೆಗಳು ಪತ್ತೆಯಾಗಿವೆ.

ಕೊಡಗು, ಅಕ್ಟೋಬರ್ 15: ಮಡಿಕೇರಿ ತಾಲ್ಲೂಕಿನ ಬೆಟ್ಟತ್ತೂರು ಗ್ರಾಮದ ಪುಷ್ಪ ಅವರ ಕಾಫಿ ತೋಟದಲ್ಲಿ ಇಂಡಿಯನ್ ರಾಬಿನ್ ಹಕ್ಕಿಯ ಆರು ನೀಲಿ ಮೂಟ್ಟೆಗಳು ಪತ್ತೆಯಾಗಿವೆ.

ದಟ್ಟ ಹುಲ್ಲಿನಿಂದ ಕೂಡಿದ್ದ ತೋಟದಲ್ಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದ ವೇಳೆ ಮಳೆಯಿಂದ ರಕ್ಷಿಸಲು ಸುರಕ್ಷಿತವಾಗಿ ಕಟ್ಟಲ್ಪಟ್ಟ ಹಕ್ಕಿಯ ಗೂಡು ಪತ್ತೆಯಾಗಿದ್ದು ಆ ಗೂಡಿನಲ್ಲಿ ಅಪರೂಪದ ನೀಲಿ ಮೊಟ್ಟೆಗಳನ್ನು ನೋಡಿದ ಪ್ರತಿಯೊಬ್ಬರಿಗೂ ಅಚ್ಚರಿಯಾಗಿತ್ತು . ಈ ಸಂದರ್ಭ ತಾಯಿ ರಾಬಿನ್ ಹಕ್ಕಿ ಅಕ್ಕಪಕ್ಕದಲ್ಲೇ ಸುಳಿದಾಡುತ್ತಿತ್ತು. ಹೀಗಾಗಿ ಕಾಫಿ ತೋಟದ ಕಾರ್ಮಿಕರು ಗೂಡಿಗೆ ಯಾವುದೇ ಹಾನಿ ಮಾಡದೆ ಹಾಗೆಯೇ ಬಿಟ್ಟಿದ್ದಾರೆ.

ಈ ಮೂಟ್ಟೆಯ ವಿಶೇಷತೆಯೆಂದರೆ  ಚಿಪ್ಪು ಸಾಕಷ್ಟು ಗಟ್ಟಿಯಿದ್ದು, ಬಿಸಿಲಿನ ಶಾಖವನ್ನು ತಡೆಗಟ್ಟಲು ರಾಬಿನ್​ ಪಕ್ಷಿಗಳು ನೀಲಿ ಮೊಟ್ಟೆಗಳನ್ನ ಹಾಕುತ್ತವೆ. ಅತೀ ಬಿಸಿಲಿನ ಶಾಖ ಮೊಟ್ಟೆಗಳಿಗೆ ತಾಗಿದರೆ ಮರಿಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿರುವುದರಿಂದ ರಾಬಿನ್​ ಪಕ್ಷಿಗಳು ನೀಲಿ ಮೊಟ್ಟೆ ಹಾಕುತ್ತವೆ ಎಂದು ಪಕ್ಷಿ ಅಧ್ಯಯನಕಾರರು ತಿಳಿಸಿದ್ದಾರೆ.

ಪಕ್ಷಿ ಪ್ರಿಯರು ಹಾಗೂ ಪಕ್ಷಿಗಳ ಬಗ್ಗೆ ಅಧ್ಯಯನ ಮಾಡುವವರ ಪಾಲಿಗೆ ಇಂಡಿಯನ್ ರಾಬಿನ್ ಪಕ್ಷಿಯ ಮೊಟ್ಟೆಗಳು ಪತ್ತೆಯಾಗಿರೋದು ಕುತೂಹಲವನ್ನು ಹೆಚ್ಚಿಸಿದೆ.