ಬ್ರೇಕಿಂಗ್ ನ್ಯೂಸ್
08-12-22 06:28 pm HK News Desk ಕರ್ನಾಟಕ
ಕಲಬುರ್ಗಿ, ಡಿಸೆಂಬರ್ 8: ಗುಜರಾತ್ ಚುನಾವಣಾ ಫಲಿತಾಂಶ ಕರ್ನಾಟಕ ರಾಜ್ಯದ ಮೇಲೆ ಪ್ರಭಾವ ಬೀರುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಈ ಕುರಿತು ಗುರುವಾರ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಗುಜರಾತ್‌ನಲ್ಲಿ ವಿರೋಧ ಪಕ್ಷಗಳು ಎನ್ನುವಂಥದ್ದು ಕಳೆದ ಐದು ವರ್ಷಗಳಿಂದ ಇರಲಿಲ್ಲ. ಆದ್ದರಿಂದ ಗುಜರಾತ್ ಫಲಿತಾಂಶ ಏನಾಗಲಿದೆ ಎಂಬುದು ಮೊದಲೇ ಎಲ್ಲರಿಗೊ ಗೊತ್ತಿರುವ ವಿಷಯವಾಗಿತ್ತು. ರಾಜ್ಯದ ಮುಖ್ಯಮಂತ್ರಿಗಳು ಗುಜರಾತ್ ಫಲಿತಾಂಶ ರಾಜ್ಯಕ್ಕೂ ತಟ್ಟುತ್ತದೆ ಅಂದಿದ್ದಾರೆ. ಆದರೆ ಗುಜರಾತ್ನಲ್ಲಿರುವ ವಾತವಾರಣವೇ ಬೇರೆ, ರಾಜ್ಯದ ವಾತಾವರಣವೇ ಬೇರೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.
ನಮ್ಮ ರಾಜ್ಯ ಸರ್ಕಾರದ ಕರ್ಮಕಾಂಡಗಳು ತಿಳಿದಿದೆಯಲ್ಲವೇ? ಇದರಿಂದ ರಾಜ್ಯದ ಜನ ಬೇಸತ್ತು ಹೋಗಿದ್ದಾರೆ. ಹಾಗಾಗಿ ಗುಜರಾತ್ನ ಫಲಿತಾಂಶ ರಾಜ್ಯದಲ್ಲಿ ಕನಸು ಕಂಡರೆ ಕನ್ನಡಿಗರು ಅದಕ್ಕೆ ಮಾರು ಹೋಗೋವವರಲ್ಲ ಎಂದು ಎಚ್.ಡಿ ಕುಮಾರಸ್ವಾಮಿ ಟೀಕಿಸಿದರು.
ಗುಜರಾತಿನ ಫಲಿತಾಂಶ ಅಚ್ಚರಿ ಮೂಡಿಸುವ ಫಲಿತಾಂಶ ಅಲ್ಲ.ಚುನಾವಣೆ ಪೂರ್ವದಲ್ಲೆ ಅಲ್ಲಿ ವಿಪಕ್ಷಗಳ ಸ್ಟ್ರೆಂತ್ ಕುಂಠಿತವಾಗಿದೆ. ಗುಜರಾತ್‌ನಲ್ಲಿ ವಿಪಕ್ಷಗಳು ಇಲ್ಲದ ಕಾರಣ ಜನತೆ ತೀರ್ಮಾನ ಕೈಗೊಂಡಿದ್ದಾರೆ. ಗುಜರಾತ್ ಫಲಿತಾಂಶ ಇಟ್ಕೊಂಡು ಇವರು ಓಟ್ ಹೇಗೆ ಕೇಳ್ತಾರೆ, ಇವರು ರಾಜ್ಯದಲ್ಲಿ ಏನ್ ಕೆಲಸ ಮಾಡಿದಾರೆ ಅಂತಾ ಗುಜರಾತ್ ಹೆಸರು ಹೇಳಿ ಓಟ್ ಕೇಳ್ತಾರೆ? ಎಂದು ಪ್ರಶ್ನಿಸಿದ್ದಾರೆ.
ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಗೆದ್ದು ಬಿಜೆಪಿ ಮಕಾಡೆ ಮಲಗಿದೆ, ಮಕಾಡೆ ಮಲಗೋದು ಎದ್ದೇಳೋದು ಆ ಪಕ್ಷಗಳ ಸಂಘಟನೆ ಮೇಲೆ ಹೋಗುತ್ತೆ. ಗುಜರಾತ್ ಚುನಾವಣೆ ಫಲಿತಾಂಶದಿಂದ ಯಾವುದೇ ಪರಿಣಾಮ ಬಿರಲ್ಲ. ಗುಜರಾತ್ ಫಲಿತಾಂಶ ಬೀರುತ್ತೆ ಅಂತಾ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ ಸರಿಯಲ್ಲ ಅಖಾಡಕ್ಕೆ ಇಳಿದಾಗ ಯಾರೆನು ಅನ್ನೊದು ತಿಳಿಯಲಿದೆ ಎಂದರು.

ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರವಾಗಿ ಮಾತನಾಡಿ, ಸಿಎಂ ಬದಲಾವಣೆ ಆಗ್ತಾರೋ ಅವರೆ ಮುಂದುವರಿತಾರೋ ನನಗೆಕೆ ಬೇಕಾ? ಅದು ಅವರ ಪಕ್ಷದ ಆಂತರಿಕ ವಿಚಾರ. ಜೆಡಿಎಸ್ ಬಗ್ಗೆ ಮಾತಾನಾಡೋಕೆ ಕಾಂಗ್ರೆಸ್, ಬಿಜೆಪಿಗೆ ನೈತಿಕ ಹಕ್ಕಿಲ್ಲ ಎಂದರು.
Former Chief Minister HDK has commented on Gujarat and Himachal Pradesh election results. Speaking to the media where Devanahalli Venugopalaswamy had darshan, he said that he did not know about the result of Gujarat in advance, he said that there is no need to make a special interpretation regarding the election there.There was no such thing as opposition parties in Gujarat for the last five years. So what will happen in Gujarat is a matter that is already known to everyone.
28-05-26 03:24 pm
HK News Staffer
'ಮಹಾನಾಯಕ' ಸಿದ್ದರಾಮಯ್ಯ ಯುಗಾಂತ್ಯ.? ಇಂದೇ ಸಿಎಂ ಸ್...
28-05-26 10:56 am
ನಾಳೆ ರಾಜೀನಾಮೆ ಕೊಡ್ತೀನಿ ಎಂದೇ ಬಂದಿದ್ದಾರೆ..! ಸಿದ...
27-05-26 06:26 pm
ನಾಗಲಕ್ಷ್ಮಿಗೆ ಸುತ್ತಿಕೊಂಡ ಮತ್ತೊಂದು ವಿವಾದ ; ಉಡುಪ...
27-05-26 04:58 pm
ಡಿಕೆಗೆ ಪಟ್ಟ ; ಬಹುತೇಕ ಸಚಿವರಿಗೆ ಕೊಕ್- ಹೊಸಬರಿಗೆ...
27-05-26 01:41 pm
27-05-26 09:17 pm
HK News Desk
ಕೇರಳ ರಾಜಕಾರಣದಲ್ಲಿ ಭಾರೀ ಸಂಚಲನ..! ಮಾಜಿ ಸಿಎಂ ಪಿಣ...
27-05-26 08:36 pm
ಜೂನ್, ಜುಲೈನಲ್ಲಿ 12 ಪರಿಷತ್ ಸ್ಥಾನಗಳಿಗೆ ಚುನಾವಣೆ...
26-05-26 12:54 pm
ಗೃಹಲಕ್ಷ್ಮಿ ಪಡೆಯಲು ಬಯೋಮೆಟ್ರಿಕ್ ಕಡ್ಡಾಯ ; ಕೂಡಲೇ...
26-05-26 12:50 pm
ಎಐಎಡಿಎಂಕೆ ಪಕ್ಷದ ಮೂವರು ಶಾಸಕರು ಸ್ಥಾನಕ್ಕೆ ರಾಜಿನಾ...
25-05-26 08:18 pm
28-05-26 02:45 pm
HK News Staffer
ಡಿಸಿಎಂ ಆಗಬೇಕೆಂಬ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಹಾ...
28-05-26 02:28 pm
ಕುದುರೆಮುಖ ಅದಿರು ಕಂಪನಿ ಕಾರ್ಮಿಕರ ಬೇಡಿಕೆ ಈಡೇರಿಸಿ...
27-05-26 12:29 pm
ಕಟೀಲು ಶಿಬರೂರಿನಲ್ಲಿ ಮರಳು ದರೋಡೆ ರಾಜಾರೋಷ ; ಇಲ್ಲಿ...
26-05-26 09:02 pm
ನೌಕಾಪಡೆ ಸಬ್ ಲೆಫ್ಟಿನೆಂಟ್ ಆಗಿ ನೇಮಕಗೊಂಡ ನಿಶೆಲ್ ಡ...
26-05-26 07:52 pm
28-05-26 10:43 am
HK News Staffer
ನಿಲ್ಲಿಸಿದ್ದ ಬೈಕ್ ಕದ್ದು ಪರಾರಿಯಾಗಿದ್ದ ಇಬ್ಬರು ನಟ...
27-05-26 08:34 pm
ಉರ್ವ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿ ಕೇರಳಕ್ಕೆ...
27-05-26 07:56 pm
ಬೈಜುಸ್ ಸಂಸ್ಥಾಪಕ ರವೀಂದ್ರನ್ಗೆ ಭಾರೀ ಆಘಾತ ; ಜೈಲ...
27-05-26 01:30 pm
ಪ್ರಿಯಕರನ ಕಿರುಕುಳ ; ಮುಂಬೈನಲ್ಲಿ ರೇಡಿಯೋ ಜಾಕಿಯಾಗಿ...
27-05-26 12:42 pm