'ಜಾತಿ ಸಮೀಕ್ಷೆ ಬಗ್ಗೆ ಸಿದ್ದರಾಮಯ್ಯ ಮಾತಾಡೇ ಇಲ್ಲ ; ಈಗ ಸುಳ್ಳು ಹೇಳ್ತಿದಾರೆ'

19-10-20 06:14 pm       Headline Karnataka News Network   ಕರ್ನಾಟಕ

ರಾಜಕೀಯ ತೆವಲಿಗೆ ಏನೋನೊ ಮಾತಾಡುತ್ತಿದ್ದಾರೆ. ಒಂದೂ ದಿನವೂ ಸಮೀಕ್ಷೆ ವಿಚಾರ ಚರ್ಚೆ ಮಾಡಿಲ್ಲ. ಕಾಂಗ್ರೆಸ್ ನ ಮಂತ್ರಿಗಳು ಈ ಬಗ್ಗೆ ಪ್ರಸ್ತಾಪ ಮಾಡಿಲ್ಲ. ಯಾಕೆ ಸುಳ್ಳು ಹೇಳ್ತಾರೆ ಎಂದು ಕುಮಾರಸ್ವಾಮಿ ಗರಂ ಆಗಿದ್ದಾರೆ.

ಬೆಂಗಳೂರು, ಅಕ್ಟೋಬರ್ 19: ಜಾತಿ ಸಮೀಕ್ಷೆ ವರದಿ ವಿಚಾರದಲ್ಲಿ ತನ್ನನ್ನು ಟಾರ್ಗೆಟ್ ಮಾಡಿರುವ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಮಾಜಿ ಮುಖ್ಯಮಂತ್ರಿ ಎಚ್ಡಿ  ಕುಮಾರಸ್ವಾಮಿ ಗರಂ ಆಗಿದ್ದಾರೆ.

ರಾಜಕೀಯ ತೆವಲಿಗೆ ಏನೋನೊ ಮಾತಾಡುತ್ತಿದ್ದಾರೆ. ಸಿದ್ದರಾಮಯ್ಯಗೆ ನಿನ್ನೆ ರಾತ್ರಿ ಏನು ಕನಸು ಬಿದ್ದಿದೆಯಾ? ಜನರನ್ನ ಮರುಳು ಮಾಡೋಕೆ ಬೇರೆ ಯಾವುದೇ ಅಸ್ತ್ರಗಳು ಇಲ್ಲ. ಹಳೆಯದನ್ನ ಮತ್ತೆ ಕೆದಕುತ್ತಿದ್ದಾರೆ. ಸಮ್ಮಿಶ್ರ ಸರ್ಕಾರದಲ್ಲಿ ಸಮನ್ವಯ ಸಮತಿ ಅಧ್ಯಕ್ಷರಾಗಿ ಸಿದ್ದರಾಮಯ್ಯ ಕೂಡ ಇದ್ದರು. ಒಂದೂ ದಿನವೂ ಸಮೀಕ್ಷೆ ವಿಚಾರ ಚರ್ಚೆ ಮಾಡಿಲ್ಲ. ಕಾಂಗ್ರೆಸ್ ನ ಮಂತ್ರಿಗಳು ಈ ಬಗ್ಗೆ ಪ್ರಸ್ತಾಪ ಮಾಡಿಲ್ಲ. ಯಾಕೆ ಸುಳ್ಳು ಹೇಳ್ತಾರೆ. ನನ್ನ ಮೇಲೆ ಆಪಾದನೆ ಮಾಡ್ತಿದ್ದಾರೆ. ಈಗ ಹಿಂದುಳಿದವರ ಬಗ್ಗೆ ಇವರಿಗೆ ಪ್ರೀತಿ ಬಂದಿದೆ. ಪದೇ ಪದೇ ನನ್ನನ್ನ ಕೆಣಕಬೇಡಿ, ಎಚ್ಚರಿಕೆ ಕೊಡ್ತಿದ್ದೇನೆ. ನಿಮ್ಮ ತೆವಲಿಗೆ ಸಮಾಜಗಳನ್ನು ನನ್ನ ವಿರುದ್ದ ಎತ್ತಿ ಕಟ್ಟಿದ್ದೀರಾ ಗೊತ್ತಿದೆ. ಇದು ಬಹಳ ದಿನ ನಡೆಯಲ್ಲ. ಆವತ್ತು ನಿಮಗೆ ಜವಾಬ್ದಾರಿ ಇರಲಿಲ್ಲವಾ? ಆವತ್ತು ನಾನು ವಿರೋಧ ಮಾಡಿದ್ರೆ ಅವತ್ತೇ ಬೆಂಬಲ ವಾಪಸ್ ಪಡೆಯಬೇಕಿತ್ತು. ಈಗ ಈಶ್ವರಪ್ಪನಿಗೆ ನಮೋ ನಮೋ ಅಂತಿದ್ದೀರಾ..? ಎಂದು ಹರಿಹಾಯ್ದರು.

ಸಿದ್ದರಾಮಯ್ಯಗೆ ನನ್ನ ಭಯ ಇದೆ. ನಾನು ಮತ್ತೆ ಮೇಲೆ ಬರುತ್ತೇನೆ ಎನ್ನುವ ಸೂಚನೆ ಅವರಿಗೆ ಇದೆ. ಸಿದ್ದರಾಮಯ್ಯನವರ ಕಣ್ಣಿಗೆ ಬಿಜೆಪಿ ಕಾಣ್ತಿಲ್ಲ. ಜೆಡಿಎಸ್ ಮಾತ್ರ ಕಾಣ್ತಿದೆ. ಅವರಿಗೆ ಜೆಡಿಎಸ್ ಮುಗಿಸಬೇಕು ಅಂತ ಇದೆ/ ಯಾಕಂದ್ರೆ ಅವ್ರನ್ನ ಬೆಳೆಸಿದ್ವಿ ಅಲ್ಲವಾ ಆ ತಪ್ಪಿಗೆ. ಹೀಗಾಗಿ ನನ್ನ ಬಗ್ಗೆ ಸಿದ್ದರಾಮಯ್ಯ ಪದೇ ಪದೇ ಮಾತಾಡೋದು ಎಂದು ಹರಿಹಾಯ್ದರು.